ಕರಾವಳಿ

ಪೊಳಲಿ: ಶ್ರಿ ರಾಜಾರಾಜೇಶ್ವರಿ ಸನ್ನಿಧಿಯಲ್ಲಿ ► ಕೆನರಾ ಇಂಜಿನೀಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ಕರಸೇವೆ

(ನ್ಯೂಸ್ ಕಡಬ) newskadaba.com ಪೊಳಲಿ,ಸೆ.11, ಇಲ್ಲಿನ ಇತಿಹಾಸ ಪ್ರಸಿದ್ದ ಶ್ರಿ ರಾಜಾರಾಜೇಶ್ವರಿ ದೇವಾಲಯದ ಜೀರ್ಣೋದ್ಧಾರ ಕಾರ್ಯಗಳು ಭರದಿಂದ ಸಾಗಿದ್ದು , ಹಲವಾರು ಸಂಘ ಸಂಸ್ಥೆಗಳು ಕರಸೇವೆಯ ಮೂಲಕ ದೇವಾಲಯದ ಕಾರ್ಯಗಳಲ್ಲಿ ಹುಮ್ಮಸ್ಸಿನಿಂದ ಭಾಗವಹಿಸಿರುತ್ತಾರೆ. ಬೆಂಜನಪದವು ಕೆನರಾ ಇಂಜಿನೀಯರಿಂಗ್ ಕಾಲೇಜಿನ ಸುಮಾರು ನೂರು ಮಂದಿ ವಿದ್ಯಾರ್ಥಿಗಳು  ಪೊಳಲಿ ರಾಜಾರಾಜೇಶ್ವರಿ ದೇವಾಲಯದ ಜೀರ್ಣೋದ್ಧಾರ ಕಾರ್ಯದಲ್ಲಿ ಕೈಜೋಡಿಸಿ, ನಾವೂ ಬಿಸಿಲಲ್ಲಿ ದುಡಿಯಬಲ್ಲೆವು ಎಂದು ತೋರಿಸಿಕೊಟ್ಟಿದ್ದಾರೆ. ಲವಲವಿಕೆಯಿಂದ ಕೆಲಸಗಾರರೊಂದಿಗೆ ಕೂಡಿ ಎಲ್ಲಾ ಕೆಲಸಗಳನ್ನು ಮಾಡುತ್ತಾ ನುರಿತ ಕೆಲಸಗಾರರಿಗೂ ನಿಬ್ಬೆರಗಾಗುವಂತೆ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವಂತೆ ಅವರ […]

ಪೊಳಲಿ: ಶ್ರಿ ರಾಜಾರಾಜೇಶ್ವರಿ ಸನ್ನಿಧಿಯಲ್ಲಿ ► ಕೆನರಾ ಇಂಜಿನೀಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ಕರಸೇವೆ Read More »

ಕರಾವಳಿ

ಕಲ್ಲುಗುಡ್ಡೆ: ತೀವ್ರ ವಿರೋಧದ ನಡುವೆಯೂ ಆರಂಭವಾದ ಮದ್ಯದಂಗಡಿ ► ಕಡಬ ತಹಶೀಲ್ದಾರ್ ಕಛೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಸೆ.11. ಸುಪ್ರೀಂ ಕೋರ್ಟ್ ಆದೇಶದನ್ವಯ ನೆಲ್ಯಾಡಿ ಹೆದ್ದಾರಿ ಬದಿಯಲ್ಲಿನ ಬಾರನ್ನು ಇಲ್ಲಿನ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಎಂಬಲ್ಲಿಗೆ ಸ್ಥಳಾಂತರಿಸುವುದನ್ನು ವಿರೋಧಿಸಿ ಸ್ಥಳೀಯರು ಕಡಬ ತಹಶಿಲ್ದಾರ್ ಕಛೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಘಟನೆ ಸೋಮವಾರದಂದು ನಡೆದಿದೆ. ಕಲ್ಲುಗುಡ್ಡೆಯಲ್ಲಿ ಸ್ಥಳೀಯರ ವಿರೋಧದ ನಡುವೆಯೂ ಬಾರನ್ನು ತೆರೆಯಲು ಕೆಲವರು ತೆರೆಮರೆಯಲ್ಲಿ ಕಸರತ್ತು ನಡೆಸಿ, ಊರವರು ಕಡಬದಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲೇ ಕಲ್ಲುಗುಡ್ಡೆಯಲ್ಲಿ ಸೋಮವಾರದಂದು ಬೆಳಿಗ್ಗೆ ಪೊಲೀಸ್ ರಕ್ಷಣೆಯಲ್ಲಿ ಮದ್ಯದಂಗಡಿಯನ್ನು ತೆರೆಯಲಾಯಿತು. ವಿಷಯ ತಿಳಿದ‌ ಪ್ರತಿಭಟನಾಕಾರರು ಅಬಕಾರಿ

ಕಲ್ಲುಗುಡ್ಡೆ: ತೀವ್ರ ವಿರೋಧದ ನಡುವೆಯೂ ಆರಂಭವಾದ ಮದ್ಯದಂಗಡಿ ► ಕಡಬ ತಹಶೀಲ್ದಾರ್ ಕಛೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ Read More »

ಕರಾವಳಿ

ಮೀನುಗಾರಿಕಾ ಕ್ಷೇತ್ರದಲ್ಲಿ ಹೊಸ ಕ್ರಾಂತಿ ►ಮೀನುಗಳು ಯಾವ ಜಾಗದಲ್ಲಿ ಇವೆ ಎಂಬುದನ್ನು ಇನ್ನ್ಮುಂದೆ ಮೊಬೈಲ್ ಆ್ಯಪ್ ಮೂಲಕ ತಿಳಿದುಕೊಳ್ಳಬಹುದು…!!!

(ನ್ಯೂಸ್ ಕಡಬ) newskadaba.com ಮಂಗಳೂರು,ಸೆ.11, ಜೀವದ ಹಂಗು ತೊರೆದು ಸಮುದ್ರದಲ್ಲಿ ಮೀನು ಹಿಡಿಯುವ ಮೀನುಗಾರಿಕೆಗಾಗಿ ಹೊಸ ಮೊಬೈಲ್ ಆ್ಯಪ್ ರೆಡಿಯಾಗಿದೆ. ಮೀನು ಯಾವ ಜಾಗದಲ್ಲೇ ಇದೆ ಎಂಬುದರ ಖಚಿತ ಮಾಹಿತಿಯನ್ನು ಈ ಮೊಬೈಲ್ ಆ್ಯಪ್ ತಿಳಿಸಿಕೊಡುತ್ತದೆ. ಚೆನ್ನೈನ ಎಂ.ಎಸ್.ಸ್ವಾಮಿನಾಥನ್ ರಿಸರ್ಚ್ ಫೌಂಡೇಷನ್ ಮೀನುಗಾರ ಸ್ನೇಹಿ ಮೊಬೈಲ್ ಅಪ್ಲಿಕೇಶನ್ ಹೊರತಂದಿದ್ದು, ಮೀನುಗಾರಿಕಾ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿದೆ. ಕನ್ನಡ, ಇಂಗ್ಲಿಷ್, ತಮಿಳು, ಮಲಯಾಳಂ, ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ಮೊಬೈಲ್ ಆ್ಯಪ್ ಲಭ್ಯವಿದ್ದು ಗೂಗಲ್ ಪ್ಲೇಸ್ಟೋರ್‍ನಲ್ಲಿ ಉಚಿತವಾಗಿ ಡೌನ್‍ಲೋಡ್

ಮೀನುಗಾರಿಕಾ ಕ್ಷೇತ್ರದಲ್ಲಿ ಹೊಸ ಕ್ರಾಂತಿ ►ಮೀನುಗಳು ಯಾವ ಜಾಗದಲ್ಲಿ ಇವೆ ಎಂಬುದನ್ನು ಇನ್ನ್ಮುಂದೆ ಮೊಬೈಲ್ ಆ್ಯಪ್ ಮೂಲಕ ತಿಳಿದುಕೊಳ್ಳಬಹುದು…!!! Read More »

ಕರಾವಳಿ

Breaking News ► ಕಡೇಶಿವಾಲಯ ದೇವಸ್ಥಾನದಲ್ಲಿ ಕಳ್ಳತನ

(ನ್ಯೂಸ್ ಕಡಬ) newskadaba.com ಬಂಟ್ವಾಳ,ಸೆ.11, ಇಲ್ಲಿನ ಕಡೇಶಿವಾಲಯ ದೇವಸ್ಥಾನಕ್ಕೆ ಕಳ್ಳರು ನುಗ್ಗಿ ಅಪಾರ ಪ್ರಮಾಣದ ನಗನಗದು ಕಳವುಗೈದ ಘಟನೆ ಸೋಮವಾರ ಬೆಳಕಿಗೆ ಬಂದಿದೆ. ಬಂಟ್ವಾಳ ತಾಲೂಕಿನ ಕಡೇಶಿವಾಲಯ ದೇವಸ್ಥಾನದಲ್ಲಿ ಅಳವಡಿಸಲಾದ ಸಿಸಿ ಕ್ಯಾಮರವನ್ನು ದ್ವಂಸಗೊಳಿಸಿದ ಕಳ್ಳರು ಗುಡಿಯಲ್ಲಿದ್ದ ಬಂಗಾರದ ಮೂರ್ತಿ, ಬೆಳ್ಳಿಯ ಆಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ.

Breaking News ► ಕಡೇಶಿವಾಲಯ ದೇವಸ್ಥಾನದಲ್ಲಿ ಕಳ್ಳತನ Read More »

ಕರಾವಳಿ

ಏಣಿತಡ್ಕ ಶಿರಾಡಿ ದೈವಸ್ಥಾನಕ್ಕೆ ಶಾಸಕರ ಭೇಟಿ ► ಕಾಮಗಾರಿ ವೀಕ್ಷಣೆ

(ನ್ಯೂಸ್ ಕಡಬ) newskadaba.com ಕಡಬ,ಸೆ.11, ಕೊೖಲ ಗ್ರಾಮದ ಏಣಿತಡ್ಕ ಕಾಲೋನಿಯಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಶಿರಾಡಿ ದೈವಸ್ಥಾನಕ್ಕೆ ಸುಳ್ಯ ಶಾಸಕ ಎಸ್.ಅಂಗಾರ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಯನ್ನು ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಇಲ್ಲಿನ ಬಿಜೆಪಿ ಮುಖಂಡ ಮಾತನಾಡಿ ಹಿಂದಿನ ಚುನಾವಣೆಯಲ್ಲಿ ಕಾರಣಿಕ ದೈವವಾದ ಏಣಿತಡ್ಕ ಶಿರಾಡಿ ದೈವಕ್ಕೆ ಶಾಸಕರ ಗೆಲುವಿಗೆ ಹರಕೆ ಹೇಳಲಾಗಿತ್ತು. ಜಿಲ್ಲೆಯಲ್ಲಿ ಎಲ್ಲಾ ಬಿಜೆಪಿ ಸಂಪೂರ್ಣ ನೆಕಚ್ಚಿದರೂ ಸುಳ್ಯ ಕ್ಷೇತ್ರದಲ್ಲಿ ಅಂಗಾರ ಅವರು ಶಾಸಕರಾಗಿ ಮತ್ತೆ ಆಯ್ಕೆಯಾಗಿದ್ದಾರೆ. ಮುಂದಿನ ಚುನಾವಣೆಯಲ್ಲೂ ಶಾಸಕರು ಗೆಲ್ಲುವುದರೊಂದಿಗೆ ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ

ಏಣಿತಡ್ಕ ಶಿರಾಡಿ ದೈವಸ್ಥಾನಕ್ಕೆ ಶಾಸಕರ ಭೇಟಿ ► ಕಾಮಗಾರಿ ವೀಕ್ಷಣೆ Read More »

ಕರಾವಳಿ

ಏಮ್ಸ್ ಪ್ರಥಮ ದರ್ಜೆ ಕಾಲೇಜು ಕಡಬ ► ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಉದ್ಯೋಗ ಮಾಹಿತಿ, ಸೆ.11. ಕಡಬದ ಏಮ್ಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ಕೆಳಕಂಡ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 15 ರ ಒಳಗಾಗಿ ಅರ್ಜಿಯನ್ನು ಸಲ್ಲಿಸಲು ಸಂಸ್ಥೆಯ ಪ್ರಕಟಣೆ ತಿಳಿಸಿದೆ. Lecturer in commerce Post: 3 ವಿದ್ಯಾರ್ಹತೆ: MCOM/ Lecturer in kannada Post: 1 ವಿದ್ಯಾರ್ಹತೆ: MA/M.Phil/Phd Lecturer in political science Post: 2 ವಿದ್ಯಾರ್ಹತೆ: MA in political science Lecturer in

ಏಮ್ಸ್ ಪ್ರಥಮ ದರ್ಜೆ ಕಾಲೇಜು ಕಡಬ ► ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ Read More »

ಕರಾವಳಿ

ಕಲ್ಲುಗುಡ್ಡೆ: ಮದ್ಯದಂಗಡಿ ವಿರೋಧಿಸಿ ಜಮಾಯಿಸಿದ ಗ್ರಾಮಸ್ಥರು ► ನಾಳೆ‌ ಕಡಬ ತಹಶೀಲ್ದಾರ್ ಕಛೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಸೆ.10. ಸುಪ್ರೀಂ ಕೋರ್ಟ್ ಆದೇಶದನ್ವಯ ನೆಲ್ಯಾಡಿ ಹೆದ್ದಾರಿ ಬದಿಯಲ್ಲಿನ ಬಾರನ್ನು ಇಲ್ಲಿನ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಎಂಬಲ್ಲಿಗೆ ಸ್ಥಳಾಂತರಿಸುವುದನ್ನು ವಿರೋಧಿಸಿ ಸ್ಥಳೀಯರು ಜಮಾಯಿಸಿದ್ದು, ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರಿಂದ ಪರಿಸ್ಥಿತಿ ಶಾಂತವಾದ ಘಟನೆ ಭಾನುವಾರ ಸಂಜೆ ಕಲ್ಲುಗುಡ್ಡೆಯಲ್ಲಿ ನಡೆದಿದೆ. ಕಲ್ಲುಗುಡ್ಡೆಯಲ್ಲಿ ಸ್ಥಳೀಯರ ವಿರೋಧದ ನಡುವೆಯೂ ಬಾರನ್ನು ತೆರೆಯಲು ಕೆಲವರು ತೆರೆಮರೆಯಲ್ಲಿ ಕಸರತ್ತು ಆರಂಭಿಸಿದ್ದು, ಅದರಂತೆ ಶನಿವಾರ ತಡರಾತ್ರಿ ಮದ್ಯವನ್ನು ದಾಸ್ತಾನು ಮಾಡಲಾಗಿದೆ‌ ಎಂದು ಸ್ಥಳೀಯರು ಆರೋಪಿಸಿ ಭಾನುವಾರ ಸಂಜೆ ವೇಳೆ

ಕಲ್ಲುಗುಡ್ಡೆ: ಮದ್ಯದಂಗಡಿ ವಿರೋಧಿಸಿ ಜಮಾಯಿಸಿದ ಗ್ರಾಮಸ್ಥರು ► ನಾಳೆ‌ ಕಡಬ ತಹಶೀಲ್ದಾರ್ ಕಛೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ Read More »

ಕರಾವಳಿ

ಕೊಯಿಲ ಗ್ರಾಮ ಪಂಚಾಯತ್ ಸದಸ್ಯ ವಿಷ ಸೇವಿಸಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ, ಸೆ.10. ಠಾಣಾ ವ್ಯಾಪ್ತಿಯ ಕೊಯಿಲ ಗ್ರಾಮ ಪಂಚಾಯತ್ ಸದಸ್ಯರೋರ್ವರು ಶುಕ್ರವಾರದಂದು ವಿಷ ಸೇವಿಸಿ‌ದ್ದು, ಶನಿವಾರ ರಾತ್ರಿ ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಕೊಯಿಲ ಗ್ರಾಮ ಪಂಚಾಯತಿ ಸದಸ್ಯ, ವಳಕಡಮ ನಿವಾಸಿ ದಿ| ವೆಂಕಪ್ಪ ಕುಂಬಾರ ಎಂಬವರ ಪುತ್ರ ನಾಗೇಶ್ ಕುಂಬಾರ (30) ಎಂದು ಗುರುತಿಸಲಾಗಿದೆ. ಕೈ ಸಾಲದ ಬಾಧೆಯಿಂದ ಬಳಲುತ್ತಿದ್ದರೆನ್ನಲಾಗಿದ್ದು, ಈ ಬಗ್ಗೆ ಕಡಬ ಠಾಣೆಗೆ ದೂರು ನೀಡಲಾಗಿದೆ.

ಕೊಯಿಲ ಗ್ರಾಮ ಪಂಚಾಯತ್ ಸದಸ್ಯ ವಿಷ ಸೇವಿಸಿ ಆತ್ಮಹತ್ಯೆ Read More »

ಕರಾವಳಿ

ನೆಲ್ಯಾಡಿ: ಕಂಟೈನರ್ ಲಾರಿ – ಅಶೋಕ್ ಲೈಲ್ಯಾಂಡ್ ದೋಸ್ತ್ ಢಿಕ್ಕಿ ► ಓರ್ವ ಮೃತ್ಯು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಸೆ.09. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ವಳಾಲು ಎಂಬಲ್ಲಿ ಕಂಟೈನರ್ ಲಾರಿ ಮತ್ತು ಅಶೋಕ್ ಲೇಲ್ಯಾಂಡ್ ದೋಸ್ತ್ ವಾಹನದ ನಡುವೆ ಢಿಕ್ಕಿ ಹೊಡೆದು ಓರ್ವ ಮೃತಪಟ್ಟ ಘಟನೆ ಶನಿವಾರ ರಾತ್ರಿ ನಡೆದಿದೆ. ಮೃತರನ್ನು ಅಶೋಕ್ ಲೇಲ್ಯಾಂಡ್ ದೋಸ್ತ್ ಚಾಲಕ ಮೆಲ್ಕಾರ್ ನಿವಾಸಿ ನವಾಝ್ ಎಂದು ಗುರುತಿಸಲಾಗಿದೆ. ನಾಲ್ಕು ತಿಂಗಳ ಹಿಂದೆ ವಿವಾಹವಾಗಿದ್ದ ನವಾಝ್ ಬೇಕರಿ ತಿಂಡಿ ಲೈನ್ ಸೇಲ್ ಮಾಡುತ್ತಿದ್ದರು. ಮೃತದೇಹವನ್ನು ಪುತ್ತೂರು ಆಸ್ಪತ್ರೆಯಲ್ಲಿ ಇಡಲಾಗಿದೆ.

ನೆಲ್ಯಾಡಿ: ಕಂಟೈನರ್ ಲಾರಿ – ಅಶೋಕ್ ಲೈಲ್ಯಾಂಡ್ ದೋಸ್ತ್ ಢಿಕ್ಕಿ ► ಓರ್ವ ಮೃತ್ಯು Read More »

ಕರಾವಳಿ

ಆಲಂಕಾರು: ಪಿಕಪ್ ಢಿಕ್ಕಿ – ಮಗು ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಸೆ.09. ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಆಲಂಕಾರು ಎಂಬಲ್ಲಿ ಪಿಕಪ್‌ ವಾಹನವೊಂದು ಮಗುವೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮಗು ಆಸ್ಪತ್ರೆಗೆ ಸಾಗಿಸುವ ಹಾದಿ‌ ಮಧ್ಯೆ ಮೃತಪಟ್ಟ ಘಟನೆ ಶನಿವಾರ ಸಂಜೆ ನಡೆದಿದೆ. ಮೃತ ಮಗುವನ್ನು ನೆಕ್ಕರೆ ನಿವಾಸಿ ಆ ಸಮಯದಲ್ಲಿ ಮಗುವಿಗೆ ಮಹಮ್ಮದ್ ಹನೀಫ್ ಎಂಬವರ ಪುತ್ರಿ ಶೈಮಾ(6) ಎಂದು ಗುರುತಿಸಲಾಗಿದೆ. ಆಲಂಕಾರು ಸಮೀಪದ ನೆಕ್ಕರೆ ಎಂಬಲ್ಲಿ ತನ್ನ ರಸ್ತೆ ಬದಿಯ ಮನೆಯಿಂದ ಹಠಾತ್ ರಸ್ತೆಗೆ ಬಂದ ಮಗುವಿಗೆ ಕುಂತೂರು

ಆಲಂಕಾರು: ಪಿಕಪ್ ಢಿಕ್ಕಿ – ಮಗು ಮೃತ್ಯು Read More »

ಕರಾವಳಿ
Scroll to Top