ಕರಾವಳಿ

ಸೈನೈಡ್‌ ಮೋಹನ್‌ ► 2003 ರಿಂದ 2009 ರ ವರೆಗೆ 20 ಯುವತಿಯರ ಹತ್ಯೆ….!!!

(ನ್ಯೂಸ್ ಕಡಬ) newskadaba.com ಬಂಟ್ವಾಳ,ಸೆ.14, 2003 ರಿಂದ 2009 ರ ವರೆಗೆ 20 ಯುವತಿಯರನ್ನು ಹತ್ಯೆ ಮಾಡಿದ ಸೈನೈಡ್‌‌ ಮೋಹನ್‌ನ ಆ ಕೊಲೆಗಳ ಹಿಂದಿನ ಹಿಸ್ಟರಿ ಕೇಳಿದರೆ ಒಂದು ಕ್ಷಣ ಉಸಿರೆ ನಿಂತು ಹೋಗುವಷ್ಟು ಭಯ ಹುಟ್ಟುತ್ತದೆ. ವೃತ್ತಿಯಲ್ಲಿ ಅಧ್ಯಾಪಕನಾಗಿದ್ದ ಮೋಹನ್‌ ಬಂಟ್ವಾಳ ತಾಲೂಕಿನ ಕನ್ಯಾನದ ನಿವಾಸಿ. ವಿವಾಹಿತನಾಗಿದ್ದ ಈತ ತನ್ನ ತಾಯಿಯ ಜೊತೆಗೆ ವಾಸವಾಗಿದ್ದ. ಅಧ್ಯಾಪಕನಾದ ಈತ ಹಲವಾರು ಸಭೆ, ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದ ಹಾಗೆ ಅಲ್ಲಿ ತನಗೆ ಪರಿಚಯವಾಗುವ ಯುವತಿಯರನ್ನು ತನ್ನ ಪ್ರೇಮದ ಬಲೆಯಲ್ಲಿ ಸಿಲುಕಿಸುತ್ತಿದ್ದ. […]

ಸೈನೈಡ್‌ ಮೋಹನ್‌ ► 2003 ರಿಂದ 2009 ರ ವರೆಗೆ 20 ಯುವತಿಯರ ಹತ್ಯೆ….!!! Read More »

ಕರಾವಳಿ

ಕಡಬ: ಮೂವರು ಮಕ್ಕಳಿಗೆ ವಿಷ ಕುಡಿಸಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ ► ನಾಲ್ವರು ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಸೆ.13. ಇಲ್ಲಿನ ಕೋಡಿಂಬಾಳ ಗ್ರಾಮದ ಪನ್ಯ ಸಮೀಪದ ಬೆದ್ರಾಜೆ ಎಂಬಲ್ಲಿ ಮಹಿಳೆ ತನ್ನ ಮೂವರು ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ಅಪರಾಹ್ನ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದವರನ್ನು ಬೆದ್ರಾಜೆ ನಿವಾಸಿ ಸುರೇಶ್ ಎಂಬವರ ಪತ್ನಿ ಯಮುನಾ ಹಾಗೂ ಮೂವರು ಪುತ್ರಿಯರು ಎಂದು ಗುರುತಿಸಲಾಗಿದೆ. ಗಂಡ ಹೆಂಡತಿ ನಡುವೆ ಉಂಟಾದ ಮನಸ್ತಾಪದಿಂದಾಗಿ ತನ್ನ ಮೂವರು ಮಕ್ಕಳಿಗೆ ವಿಷ ನೀಡಿದ ಯಮುನಾ ಚಿಂತಾಜನಕ‌ ಸ್ಥಿತಿಯಲ್ಲಿ ಮನೆಯಲ್ಲಿ ಬಿದ್ದಿದ್ದರೆನ್ನಲಾಗಿದೆ. ಇವರನ್ನು ಕಡಬ ಸಮುದಾಯ

ಕಡಬ: ಮೂವರು ಮಕ್ಕಳಿಗೆ ವಿಷ ಕುಡಿಸಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ ► ನಾಲ್ವರು ಗಂಭೀರ Read More »

ಕರಾವಳಿ

ಶಿರಾಡಿ: ಗುಂಡ್ಯ ಹೊಳೆಯಲ್ಲಿ ಅಪರಿಚಿತ ಶವ ಪತ್ತೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ.13. ಠಾಣಾ ವ್ಯಾಪ್ತಿಯ ಶಿರಾಡಿ ಬಳಿಯ ಗುಂಡ್ಯ ಹೊಳೆಯಲ್ಲಿ ಅಪರಿಚಿತ ಶವವೊಂದು ಬುಧವಾರ ಅಪರಾಹ್ನ ಪತ್ತೆಯಾಗಿದೆ. ಸುಮಾರು 35 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಶವವಾಗಿದ್ದು, ಸುಮಾರು 4 – 5 ದಿನಗಳ ಹಿಂದೆ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಶಿರಾಡಿ: ಗುಂಡ್ಯ ಹೊಳೆಯಲ್ಲಿ ಅಪರಿಚಿತ ಶವ ಪತ್ತೆ Read More »

ಕರಾವಳಿ

ದೇಯಿಬೈದೆತಿಯ ಮೂರ್ತಿಗೆ ಅವಮಾನ ► ಕಡಬ ಬಿಲ್ಲವ ಸಂಘದಿಂದ ಉಗ್ರ ಕ್ರಮಕ್ಕೆ ಮನವಿ

(ನ್ಯೂಸ್ ಕಡಬ) newskadaba.com ಕಡಬ,ಸೆ.13, ಕೋಟಿ-ಚೆನ್ನಯರ ಮಾತೆ ದೇಯಿಬೈದೆತಿಯ ಮೂರ್ತಿಗೆ ಅವಮಾನ ಮಾಡಿರುವ ವಿಕೃತ ಮನಸ್ಸಿನ ಎಲ್ಲಾ ಆರೋಪಿಗಳನ್ನು ತಕ್ಷಣ ಬಂಧಿಸಿ ಶಿಸ್ತುಕ್ರಮ ಜರಗಿಸಬೇಕು ಎಂದು ಕಡಬ ವಲಯ ಬಿಲ್ಲವ ಸಂಘದಿಂದ ಕಡಬ ಠಾಣೆಗೆ ಹಾಗೂ ತಹಶಿಲ್ದಾರ್ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬಿಲ್ಲವ ಸಂಘದ ಸಂಚಾಲಕ ಜಿನ್ನಪ್ಪ ಸಾಲ್ಯಾನ್, ಐತ್ತೂರು ಪಂಚಾಯಿತಿ ಅಧ್ಯಕ್ಷ ಸತೀಶ್ ಕೆ, ಬಿಲ್ಲವ ಮುಖಂಡರಾದ ಲಕ್ಷ್ಮೀಶ ಬಂಗೇರ, ನಾರಾಯಣ ಪೂಜಾರಿ ಪಾಲಪ್ಪೆ, ಸಂಜೀವ ಪೂಜಾರಿ ನೈಲ, ವಸಂತ ಪೂಜಾರಿ

ದೇಯಿಬೈದೆತಿಯ ಮೂರ್ತಿಗೆ ಅವಮಾನ ► ಕಡಬ ಬಿಲ್ಲವ ಸಂಘದಿಂದ ಉಗ್ರ ಕ್ರಮಕ್ಕೆ ಮನವಿ Read More »

ಕರಾವಳಿ

ಉಪ್ಪಿನಂಗಡಿ: ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಳ್ಳತನ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ,ಸೆ.13, ಇಲ್ಲಿನ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಗೆ ಕಳ್ಳರು ನುಗ್ಗಿ ಸುಮಾರು.36 ಸಾವಿರ ರುಪಾಯಿ ನಗದು ದೋಚಿ ಪರಾರಿಯಾದ ಘಟನೆ ಬುಧವಾರ ಬೆಳಕಿಗೆ ಬಂದಿದೆ. ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು, ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಶಾಲಾ ಪ್ರಾಚಾರ್ಯರ ಕೊಠಡಿ ಹಾಗೂ ಶಿಕ್ಷಕರ ಮತ್ತು ಸಿಬಂದಿಗಳ ಕೊಠಡಿ ಸೇರಿದಂತೆ ಕಚೇರಿಗಳ ಬೀಗಗಳನ್ನು ತುಂಡರಿಸಿ ಅಲ್ಲಿದ್ದ ಸುಮಾರು.36 ಸಾವಿರ ರೂ.ಗಳನ್ನು ದೋಚಿದ್ದಾರೆ. ಸುದ್ದಿ ತಿಳಿದು ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕಾಗಮಿಸಿ ಶ್ವಾನದಳ ಹಾಗೂ

ಉಪ್ಪಿನಂಗಡಿ: ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಳ್ಳತನ Read More »

ಕರಾವಳಿ

ದೇಯಿಬೈದೆತಿಯ ಅವಹೇಳನ ಆರೋಪಿಗೆ ಸೂಕ್ತ ಶಿಕ್ಷೆಗೆ ಆಗ್ರಹ ► ವಿಹಿಂಪ, ಬಜರಂಗದಳದಿಂದ ಕಡಬದಲ್ಲಿ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಸೆ.13. ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯರ ತಾಯಿ ದೇಯಿಬೈದೆತಿಯ ಪುತ್ತಳಿಯ ಸಮೀಪ ಕುಳಿತು ಅಶ್ಲೀಲವಾಗಿ ಫೊಟೊ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಡಬ ಪ್ರಖಂಡದ ವತಿಯಿಂದ ಬ್ರಹತ್ ಪ್ರತಿಭಟನೆ ಹಾಗೂ ರಸ್ತೆ ತಡೆಯು ಕಡಬದಲ್ಲಿ ನಡೆಯಿತು. ಇತ್ತೀಚೆಗೆ ಈಶ್ವರ ಮಂಗಲದ ಹನೀಫ್ ಎಂಬಾತ ದೇಯಿಬೈದಿತಿಯ ನೆನಪಿಗೋಸ್ಕರ ಸರಕಾರದಿಂದ ನಿರ್ಮಿಸಲ್ಪಟ್ಟ ದೇಯಿಬೈದಿತಿ ಔಷಧಿ ವನದಲ್ಲಿ

ದೇಯಿಬೈದೆತಿಯ ಅವಹೇಳನ ಆರೋಪಿಗೆ ಸೂಕ್ತ ಶಿಕ್ಷೆಗೆ ಆಗ್ರಹ ► ವಿಹಿಂಪ, ಬಜರಂಗದಳದಿಂದ ಕಡಬದಲ್ಲಿ ಪ್ರತಿಭಟನೆ Read More »

ಕರಾವಳಿ

ಮೇಲಾಧಿಕಾರಿಗಳ ಮಾನಸಿಕ ಕಿರುಕುಳ ► ನೇಣು ಬಿಗಿದು ಯುವತಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಮಂಗಳೂರು,ಸೆ.13, ಇಲ್ಲಿನ ಆಸ್ಪತ್ರೆಯ ಮೇಲಾಧಿಕಾರಿಗಳ ಮಾನಸಿಕ ಕಿರುಕುಳಕ್ಕೆ ಬೇಸತ್ತ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನ ಉಳ್ಳಾಲದಲ್ಲಿ ನಡೆದಿದೆ. ಸ್ಫೂರ್ತಿ ಆತ್ಮಹತ್ಯೆಗೆ ಶರಣಾದ ಯುವತಿ. ಫಳ್ನೀರ್‍ನಲ್ಲಿರುವ ಯುನಿಟಿ ಆಸ್ಪತ್ರೆಯ ಇನ್ಶುರೆನ್ಸ್ ವಿಭಾಗದಲ್ಲಿ ಕೆಲಸ ಮಾಡಿಕೊಂಡಿದ್ದ ಸ್ಫೂರ್ತಿಯವರಿಗೆ ಕೆಲಸದ ವೇಳೆಯಲ್ಲಿ ಮೇಲಾಧಿಕಾರಿಗಳು ಮಾನಸಿಕ ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ಆಗಾಗ ಮನೆಯಲ್ಲಿ ತಾಯಿ ಮತ್ತು ತಂಗಿ ಬಳಿ ಸ್ಫೂರ್ತಿ ಹೇಳಿಕೊಂಡಿದ್ದರು ಎನ್ನಲಾಗಿದೆ. ತನ್ನ ತಾಯಿ ಹೊಂದಾಣಿಕೆ ಮಾಡಿಕೊಂಡು ಕೆಲಸ ಮುಂದುವರೆಸುವಂತೆ ಸಲಹೆ ನೀಡಿದ್ದರು. ಬಡತನ

ಮೇಲಾಧಿಕಾರಿಗಳ ಮಾನಸಿಕ ಕಿರುಕುಳ ► ನೇಣು ಬಿಗಿದು ಯುವತಿ ಆತ್ಮಹತ್ಯೆ Read More »

ಕರಾವಳಿ

ESI ಆಸ್ಪತ್ರೆಯಲ್ಲಿ ಕರೆಂಟ್ ಇಲ್ಲ ► ಮೊಬೈಲ್ ಟಾರ್ಚ್ ಲೈಟ್‍ನಲ್ಲೇ ರೋಗಿಗಳಿಗೆ ಚಿಕಿತ್ಸೆ

(ನ್ಯೂಸ್ ಕಡಬ) newskadaba.com ದಾವಣಗೆರೆ,ಸೆ.13, ಅವ್ಯವಸ್ಥೆಗಳ ಆಗರವಾದ ಕಾರ್ಮಿಕರ ವಿಮಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೂಕ್ತ ಸೌಕರ್ಯಗಳು ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮಂಗಳವಾರ ಸಂಜೆಯಿಂದ ಇಎಸ್‍ಐ ಅಸ್ಪತ್ರೆಯಲ್ಲಿ ಕರೆಂಟ್ ಇಲ್ಲದೆ ರೋಗಿಗಳು ಪರದಾಡುವ ಸ್ಥಿತಿ ಉಂಟಾಗಿತ್ತು. ವೈದ್ಯರು ಹಾಗೂ ಅಸ್ಪತ್ರೆ ಸಿಬ್ಬಂದಿಗಳು ಮೊಬೈಲ್ ಲೈಟ್ ಹಾಗೂ ಟಾರ್ಚ್ ಹಿಡಿದು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ದೃಶ್ಯ ಕಂಡುಬಂತು. ಅದರಲ್ಲೂ ಹೆರಿಗೆ ಮಾಡಿಸಲು ದಾಖಲಾಗಿದ್ದ ಗರ್ಭಿಣಿಯರು ನಾವು ಆಸ್ಪತ್ರೆಯಲ್ಲಿದ್ದೇವೋ ಇಲ್ಲ ನರಕದಲ್ಲಿ ಇದ್ದೇವೋ ಎನ್ನುವಂತಾಗಿದೆ. ಇದರಿಂದ ಬೇಸತ್ತ ಕೆಲವು ಗರ್ಭಿಣಿಯರು ಬೇರೆ ಆಸ್ಪತ್ರೆಗೆ

ESI ಆಸ್ಪತ್ರೆಯಲ್ಲಿ ಕರೆಂಟ್ ಇಲ್ಲ ► ಮೊಬೈಲ್ ಟಾರ್ಚ್ ಲೈಟ್‍ನಲ್ಲೇ ರೋಗಿಗಳಿಗೆ ಚಿಕಿತ್ಸೆ Read More »

ಕರಾವಳಿ

ನೂಜಿಬಾಳ್ತಿಲ: ರೆಂಜಿಲಾಡಿ ಗ್ರಾಮ ಬಿಜೆಪಿ ಸಮಿತಿ ಅಧ್ಯಕ್ಷ ಚಂದ್ರಶೇಖರ ಹಳೆನೂಜಿ► ಗ್ರಾ.ಪಂ. ಸದಸ್ಯ ಹರೀಶ್ ನಡುವಳಿಕೆ ಪಕ್ಷದ ಹುದ್ದೆಗೆ ರಾಜೀನಾಮೆ

(ನ್ಯೂಸ್ ಕಡಬ) newskadaba.com ಕಡಬ,ಸೆ.13, ನೂಜಿಬಾಳ್ತಿಲ ರೆಂಜಿಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಜೆಪಿ ಸಮಿತಿ ಅಧ್ಯಕ್ಷ ಮಾಜಿ ಸಿ.ಎ. ಬ್ಯಾಂಕ್ ನಿರ್ದೇಶಕ ಕೊಣಾಜೆ ಗ್ರಾಮದ ಬಿಜೆಪಿ ವಿಸ್ತಾರಕ ಚಂದ್ರಶೇಖರ ಹಳೆನೂಜಿ ಹಾಗೂ ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಸದಸ್ಯ ಹಾಗೂ ನೂಜಿಬಾಳ್ತಿಲ ಗ್ರಾಮದ ಬೂತ್ ಸಂಖ್ಯೆ 30ರ ಬಿಜೆಪಿ ಪಕ್ಷದ ಗ್ರಾಮ ಸಮಿತಿ ಅಧ್ಯಕ್ಷನಾಗಿರುವ ಹರೀಶ್ ನಡುವಳಿಕೆ ಪಕ್ಷದ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವರು ಕಡಬ ಶಕ್ತಿ ಕೇಂದ್ರದ ಅಧ್ಯಕ್ಷರಿಗೆ ಸೆ.12ರಂದು ಸಲ್ಲಿಸಿದ ರಾಜೀನಾಮೆ ಪತ್ರದಲ್ಲಿ ತನ್ನ ವೈಯಕ್ತಿಕ

ನೂಜಿಬಾಳ್ತಿಲ: ರೆಂಜಿಲಾಡಿ ಗ್ರಾಮ ಬಿಜೆಪಿ ಸಮಿತಿ ಅಧ್ಯಕ್ಷ ಚಂದ್ರಶೇಖರ ಹಳೆನೂಜಿ► ಗ್ರಾ.ಪಂ. ಸದಸ್ಯ ಹರೀಶ್ ನಡುವಳಿಕೆ ಪಕ್ಷದ ಹುದ್ದೆಗೆ ರಾಜೀನಾಮೆ Read More »

ಕರಾವಳಿ

ಫೇಸ್‌ಬುಕ್‌ ನಲ್ಲಿ ಏಸುಕ್ರಿಸ್ತರ ಅವಹೇಳನ ► ಆರೋಪಿ ಸುಳ್ಯ ನಿವಾಸಿ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.13. ಮದರ್ ತೆರೆಸಾ ಹಾಗೂ ಏಸು ಕ್ರಿಸ್ತರ ಬಗ್ಗೆ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್ ನಲ್ಲಿ ಅವಹೇಳಿಸಿದ ಆರೋಪಿಯನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸುಳ್ಯ ನಿವಾಸಿ ಅಕ್ಷರ್ ಬೋಳಿಯ ಮಜಲು ತನ್ನ ಫೇಸ್ಬುಕ್ ವಾಲ್ ನಲ್ಲಿ ಕ್ರೈಸ್ತ ಧರ್ಮ ಹಾಗೂ ಮದರ್ ತೆರೇಸಾ ರವರ ಬಗ್ಗೆ ಅವಹೇಳನಕಾರಿ ಸಂದೇಶ ಹಾಕಿದ್ದನೆನ್ನಲಾಗಿದೆ. ಈ ಬಗ್ಗೆ ಕ್ರೈಸ್ತ ಮುಖಂಡರು ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ನೇತೃತ್ವದಲ್ಲಿ ನೀಡಿದ್ದ ದೂರಿನನ್ವಯ ಸುಳ್ಯ ಪೊಲೀಸರು ಬಂಧಿಸಿದ್ದಾರೆ.

ಫೇಸ್‌ಬುಕ್‌ ನಲ್ಲಿ ಏಸುಕ್ರಿಸ್ತರ ಅವಹೇಳನ ► ಆರೋಪಿ ಸುಳ್ಯ ನಿವಾಸಿ ಬಂಧನ Read More »

ಕರಾವಳಿ
Scroll to Top