ದೇಯಿಬೈದೆತಿಯ ಮೂರ್ತಿಗೆ ಅವಮಾನ ► ಕಡಬ ಬಿಲ್ಲವ ಸಂಘದಿಂದ ಉಗ್ರ ಕ್ರಮಕ್ಕೆ ಮನವಿ

(ನ್ಯೂಸ್ ಕಡಬ) newskadaba.com ಕಡಬ,ಸೆ.13, ಕೋಟಿ-ಚೆನ್ನಯರ ಮಾತೆ ದೇಯಿಬೈದೆತಿಯ ಮೂರ್ತಿಗೆ ಅವಮಾನ ಮಾಡಿರುವ ವಿಕೃತ ಮನಸ್ಸಿನ ಎಲ್ಲಾ ಆರೋಪಿಗಳನ್ನು ತಕ್ಷಣ ಬಂಧಿಸಿ ಶಿಸ್ತುಕ್ರಮ ಜರಗಿಸಬೇಕು ಎಂದು ಕಡಬ ವಲಯ ಬಿಲ್ಲವ ಸಂಘದಿಂದ ಕಡಬ ಠಾಣೆಗೆ ಹಾಗೂ ತಹಶಿಲ್ದಾರ್ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬಿಲ್ಲವ ಸಂಘದ ಸಂಚಾಲಕ ಜಿನ್ನಪ್ಪ ಸಾಲ್ಯಾನ್, ಐತ್ತೂರು ಪಂಚಾಯಿತಿ ಅಧ್ಯಕ್ಷ ಸತೀಶ್ ಕೆ, ಬಿಲ್ಲವ ಮುಖಂಡರಾದ ಲಕ್ಷ್ಮೀಶ ಬಂಗೇರ, ನಾರಾಯಣ ಪೂಜಾರಿ ಪಾಲಪ್ಪೆ, ಸಂಜೀವ ಪೂಜಾರಿ ನೈಲ, ವಸಂತ ಪೂಜಾರಿ ನೂಜಿಬಾಳ್ತಿಲ, ಗಣೇಶ್ ಕರ್ಕೇರ, ಸುಂದರ ಕರ್ಕೇರ ಮರ್ಧಾಳ, ಆನಂದ ಪೂಜಾರಿ ಅಮೈ, ಸದಾನಂದ ಮಡ್ಯೊಟ್ಟು, ಮೊದಲಾದವರು ಉಪಸ್ಥಿತರಿದ್ದರು.

Scroll to Top