ಫೇಸ್‌ಬುಕ್‌ ನಲ್ಲಿ ಏಸುಕ್ರಿಸ್ತರ ಅವಹೇಳನ ► ಆರೋಪಿ ಸುಳ್ಯ ನಿವಾಸಿ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.13. ಮದರ್ ತೆರೆಸಾ ಹಾಗೂ ಏಸು ಕ್ರಿಸ್ತರ ಬಗ್ಗೆ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್ ನಲ್ಲಿ ಅವಹೇಳಿಸಿದ ಆರೋಪಿಯನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಸುಳ್ಯ ನಿವಾಸಿ ಅಕ್ಷರ್ ಬೋಳಿಯ ಮಜಲು ತನ್ನ ಫೇಸ್ಬುಕ್ ವಾಲ್ ನಲ್ಲಿ ಕ್ರೈಸ್ತ ಧರ್ಮ ಹಾಗೂ ಮದರ್ ತೆರೇಸಾ ರವರ ಬಗ್ಗೆ ಅವಹೇಳನಕಾರಿ ಸಂದೇಶ ಹಾಕಿದ್ದನೆನ್ನಲಾಗಿದೆ. ಈ ಬಗ್ಗೆ ಕ್ರೈಸ್ತ ಮುಖಂಡರು ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ನೇತೃತ್ವದಲ್ಲಿ ನೀಡಿದ್ದ ದೂರಿನನ್ವಯ ಸುಳ್ಯ ಪೊಲೀಸರು ಬಂಧಿಸಿದ್ದಾರೆ.

Scroll to Top