ಕರಾವಳಿ

ರಾಷ್ಟ್ರಗೀತೆ ಹಾಗೂ ರಾಷ್ಟ್ರಧ್ವಜದ ಮಹತ್ವ ► ವಿದ್ಯಾರ್ಥಿಗಳೊಂದಿಗೆ ಪರಸ್ಪರ ಸಂವಾದ

(ನ್ಯೂಸ್ ಕಡಬ) newskadaba.com ಕಡಬ,ಸೆ.8, ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಸಹಯೋಗದಲ್ಲಿ ರಾಷ್ಟ್ರಗೀತೆ ಹಾಗೂ ರಾಷ್ಟ್ರಧ್ವಜದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಶ್ರೀ ಭಾರತೀ ಕಾಲೇಜಿನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಡಾ. ಮುರಳಿ ಮೋಹನ್ ಚೂಂತಾರು ಅವರು ರಾಷ್ಟ್ರಗೀತೆ ಹಾಗೂ ರಾಷ್ಟ್ರಧ್ವಜದ ಮಹತ್ವವನ್ನು ಅರಿತುಕೊಳ್ಳಬೇಕು ಎಂದರು. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಭಾರತ ಸೇವಾ ದಳದ ಕರ್ನಾಟಕ ರಾಜ್ಯದ ಕಾರ್ಯಕಾರಿಣಿ ಸದಸ್ಯರಾದ ಆಲ್ಫೋನ್ಸ್‌ ಫ್ರಾಂಕೊ ಅವರು ಪ್ರಾತ್ಯಕ್ಷಿತೆಯ […]

ರಾಷ್ಟ್ರಗೀತೆ ಹಾಗೂ ರಾಷ್ಟ್ರಧ್ವಜದ ಮಹತ್ವ ► ವಿದ್ಯಾರ್ಥಿಗಳೊಂದಿಗೆ ಪರಸ್ಪರ ಸಂವಾದ Read More »

ಕರಾವಳಿ

ಭರತನಾಟ್ಯ ಜೂನಿಯರ್ ಗ್ರೇಡ್ ► ಉಪ್ಪಿನಂಗಡಿ ಇಂದ್ರಪ್ರಸ್ತ ವಿದ್ಯಾರ್ಥಿನಿ ಭವಿಷ್ಯಗೆ ವಿಶಿಷ್ಟ ಶ್ರೇಣಿ

(ನ್ಯೂಸ್ ಕಡಬ) newskadaba.com ಕಡಬ,ಸೆ.8, ಬೆಂಗಳೂರು ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯು 2017 ಮೇ ತಿಂಗಳಲ್ಲಿ ನಡೆಸಿದ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಉಪ್ಪಿನಂಗಡಿ ಇಂದ್ರಪ್ರಸ್ತ ವಿದ್ಯಾಲಯದ 7 ನೇ ತರಗತಿ ವಿದ್ಯಾರ್ಥಿನಿ ಭವಿಷ್ಯ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಶ್ರೀ ಶಾರದ ಕಲಾ ಕೇಂದ್ರದ ಸುದರ್ಶನ್ ಭಟ್ ಮತ್ತು ಮಂಜುನಾಥ್ ಭಟ್ ಅವರ ಶಿಷ್ಯೆಯಾಗಿರುವ ಈಕೆ ರಾಮಕುಂಜ ಗ್ರಾಮದ ತಾವೂರು ನಿವಾಸಿ ನಾಗೇಶ್ ಎನ್ ಸಿ ಮತ್ತು ನವ್ಯ ದಂಪತಿ ಪುತ್ರಿಯಾಗಿರುತ್ತಾಳೆ.

ಭರತನಾಟ್ಯ ಜೂನಿಯರ್ ಗ್ರೇಡ್ ► ಉಪ್ಪಿನಂಗಡಿ ಇಂದ್ರಪ್ರಸ್ತ ವಿದ್ಯಾರ್ಥಿನಿ ಭವಿಷ್ಯಗೆ ವಿಶಿಷ್ಟ ಶ್ರೇಣಿ Read More »

ಕರಾವಳಿ

ತೂಫಾನ್- ಕೆಎಸ್ಆರ್ಟಿಸಿ ಬಸ್ ಢಿಕ್ಕಿ ► 6 ಮಂದಿ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಬಾಗಲಕೋಟೆ,ಸೆ8, ತೂಫಾನ್ ಹಾಗೂ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕೊರ್ತಿ ಕ್ರಾಸ್ ನಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದೆ. ಭೀಕರ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದು, ಅವರನ್ನು ಬೀಳಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಾರಾಷ್ಟ್ರ ಪಾಸಿಂಗ್ ಇರುವ ತೂಫಾನ್ ಹಾಗೂ ವಿಜಯಪುರದಿಂದ ಹುಬ್ಬಳಿ ಮಾರ್ಗವಾಗಿ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ತೂಫಾನ್- ಕೆಎಸ್ಆರ್ಟಿಸಿ ಬಸ್ ಢಿಕ್ಕಿ ► 6 ಮಂದಿ ಸ್ಥಳದಲ್ಲೇ ಮೃತ್ಯು Read More »

ಕರಾವಳಿ

ಉಪ್ಪಿನಂಗಡಿ: ಸಿನಿಮೀಯ ಶೈಲಿಯಲ್ಲಿ ಹಾರಿದ ಕಾರು ► ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ದೃಶ್ಯ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ.08. ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ 34ನೇ ನೆಕ್ಕಿಲಾಡಿ ಸಮೀಪ ಮಾರುತಿ ಎಸ್ ಕ್ರಾಸ್ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಸಿನಿಮೀಯ ಶೈಲಿಯಲ್ಲಿ ಮುಖ್ಯ ರಸ್ತೆಯಿಂದ ಕೆಳಗಿನ ರಸ್ತೆಗೆ ಇಳಿದ ದೃಶ್ಯ ಗುರುವಾರ ಸಂಜೆ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಉಪ್ಪಿನಂಗಡಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರಿನಲ್ಲಿ ಚಾಲಕ ಸೇರಿ ಇಬ್ಬರು ಪ್ರಯಾಣಿಸುತ್ತಿದ್ದರು. ಚಾಲಕ ಸೀಟ್ ಬೆಲ್ಟ್ ಧರಿಸಿದ್ದ ಕಾರಣದಿಂದ ಕಾರನ್ನು ಹತೋಟಿಗೆ ತರಲು ಸಾಧ್ಯವಾಯಿತೆನ್ನಲಾಗಿದೆ. ಕಾರು ಕೆಳಗಿನ ರಸ್ತೆಗೆ ಬಂದು ನಿಲ್ಲುವ

ಉಪ್ಪಿನಂಗಡಿ: ಸಿನಿಮೀಯ ಶೈಲಿಯಲ್ಲಿ ಹಾರಿದ ಕಾರು ► ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ದೃಶ್ಯ Read More »

ಕರಾವಳಿ

ಕಾನೂನು ಉಲ್ಲಂಘಿಸಿ ಜ್ಯೋತಿ ವೃತ್ತದಲ್ಲಿ ಸಮಾವೇಶ ► ಯಡಿಯೂರಪ್ಪ ಸೇರಿ 50 ಮಂದಿಯ ವಿರುದ್ಧ ಕೇಸು ದಾಖಲು

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.07. ಬಿಜೆಪಿ ಯುವಮೋರ್ಚಾ ವತಿಯಿಂದ ನಡೆದ‌ ಮಂಗಳೂರು ಚಲೋ ಕಾರ್ಯಕ್ರಮವನ್ನು ನಗರದ ನೆಹರೂ ಮೈದಾನದಲ್ಲಿ ಮಾಡುವ ಬದಲು ಜ್ಯೋತಿ ಸಮೀಪದ ಅಂಬೇಡ್ಕರ್ ವೃತ್ತದ ಬಳಿ ಸಮಾವೇಶ ಮಾಡಿ ಕಾನೂನನ್ನು ಉಲ್ಲಂಘಿಸಿದ ಆರೋಪದಡಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ 50 ಮಂದಿಯ ವಿರುದ್ಧ ಬಂದರ್ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಬಿಜೆಪಿ ಯುವಮೋರ್ಚಾ ಸಮಾವೇಶಕ್ಕೆ ಪೊಲೀಸರು ನೆಹರು ಮೈದಾನದಲ್ಲಿ ಮಾತ್ರ ಅನುಮತಿ ನೀಡಿದ್ದು, ಆದರೆ ಬಿಜೆಪಿಯ ನಾಯಕರು, ಕಾರ್ಯಕರ್ತರು ಈ ಆದೇಶವನ್ನು ಉಲ್ಲಂಘಿಸಿ

ಕಾನೂನು ಉಲ್ಲಂಘಿಸಿ ಜ್ಯೋತಿ ವೃತ್ತದಲ್ಲಿ ಸಮಾವೇಶ ► ಯಡಿಯೂರಪ್ಪ ಸೇರಿ 50 ಮಂದಿಯ ವಿರುದ್ಧ ಕೇಸು ದಾಖಲು Read More »

ಕರಾವಳಿ

ಪೊಲೀಸ್ ಅಧಿಕಾರಿಯನ್ನು ನಿಂದಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ► ಸಾರ್ವಜನಿಕವಾಗಿ ಅಬ್ಬರಿಸಿದ ವೀಡಿಯೋ ವೈರಲ್

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.07. ಬಿಜೆಪಿ ಯುವ ಮೋರ್ಛಾ ನೇತೃತ್ವದಲ್ಲಿ ಇಂದು ಮಂಗಳೂರಿನಲ್ಲಿ ನಡೆದ ರ್ಯಾಲಿ, ಪ್ರತಿಭಟನೆಗೆ ಸಂಬಂಧಿಸಿ ಪೊಲೀಸ್ ಅಧಿಕಾರಿಯೋರ್ವರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಬೆದರಿಕೆ ಹಾಕಿರುವ ವೀಡಿಯೋ ಇದೀಗ ವೈರಲ್ ಆಗಿದೆ. ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಪೊಲೀಸ್ ಅಧಿಕಾರಿಯ ಫೋನ್ ಕಿತ್ತುಕೊಳ್ಳಲು ಯತ್ನಿಸಿದ್ದಲ್ಲದೆ ಸಾರ್ವಜನಿಕರ ಎದುರಲ್ಲೇ ಏಕವಚನದಲ್ಲಿ ಅಧಿಕಾರಿಗೆ ಬೆದರಿಕೆ ಹಾಕುತ್ತಿರುವುದು ಕಾಣಬಹುದಾಗಿದೆ.

ಪೊಲೀಸ್ ಅಧಿಕಾರಿಯನ್ನು ನಿಂದಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ► ಸಾರ್ವಜನಿಕವಾಗಿ ಅಬ್ಬರಿಸಿದ ವೀಡಿಯೋ ವೈರಲ್ Read More »

ಕರಾವಳಿ

ಬೈಕ್‌ ರ್ಯಾಲಿ ತಡೆದರೂ ನಾವು ಮಂಗಳೂರು ತಲುಪಿದ್ದೇವೆ ► ಮಂಗಳೂರು ಚಲೋ ಯಶಸ್ವಿಯಾಗಿದೆ: ಯಡಿಯೂರಪ್ಪ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.07. ಬಿಜೆಪಿ ಯುವ ಮೋರ್ಚಾ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಂಗಳೂರು ಚಲೋ ಬೈಕ್ ರ್ಯಾಲಿಯನ್ನು ತಡೆದ ಸಂದರ್ಭ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ – ತಳ್ಳಾಟವುಂಟಾಗಿದ್ದು, ನೂಕುನುಗ್ಗಲಿನ ಪರಿಣಾಮ ಕೆಲವರು ಗಾಯಗೊಂಡ ಘಟನೆಯೂ ಗುರುವಾರದಂದು ನಡೆದಿದೆ. ಈ ಸಂದರ್ಭ ಜಿಲ್ಲಾಧಿಕಾರಿ ಕಚೇರಿ ಸಮೀಪ ತೆರಳಲೆತ್ನಿಸಿದ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದು, ನಂತರ ಬಿಡುಗಡೆಗೊಳಿಸಲಾಗಿದೆ. ನೆಹರೂ ಮೈದಾನದ ಕ್ರಿಕೆಟ್ ಅಸೋಸಿಯೇಶನ್ ಮುಂಭಾಗ ಬಿಜೆಪಿ ನಾಯಕರ ನೇತೃತ್ವದಲ್ಲಿ ಸಭೆ

ಬೈಕ್‌ ರ್ಯಾಲಿ ತಡೆದರೂ ನಾವು ಮಂಗಳೂರು ತಲುಪಿದ್ದೇವೆ ► ಮಂಗಳೂರು ಚಲೋ ಯಶಸ್ವಿಯಾಗಿದೆ: ಯಡಿಯೂರಪ್ಪ Read More »

ಕರಾವಳಿ

ಕುಡಿದ ಮತ್ತಿನಲ್ಲಿ ಪತ್ನಿ, ಮಕ್ಕಳಿಗೆ ಬೆಂಕಿಯಿಟ್ಟು ► ಆತ್ಮಹತ್ಯೆಗೆ ಶರಣಾದ ಪತಿ..!!!

(ನ್ಯೂಸ್ ಕಡಬ) newskadaba.com ಬಾಗಲಕೋಟೆ,ಸೆ.7, ಕುಡಿದ ಮತ್ತಿನಲ್ಲಿ ವ್ಯಕ್ತಿಯೊರ್ವ ತನ್ನ ಪತ್ನಿ ಹಾಗು ಮಕ್ಕಳಿಗೆ ಬೆಂಕಿ ಇಟ್ಟು ತಾನೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನೆಲವಗಿ ಗ್ರಾಮದಲ್ಲಿ ನಡೆದಿದೆ. ಬಸಪ್ಪ ಎಂಬವರು ತನ್ನ ಕುಟುಂಬದೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಘಟನೆಯಲ್ಲಿ ಪತ್ನಿ ನಿರ್ಮಲಾ ಮತ್ತು ಮಕ್ಕಳಾದ ಸವಿತಾ ಮತ್ತು ರಾಹುಲ್ ಬದುಕುಳಿದಿದ್ದಾರೆ. ಬೆಂಕಿ ಹಚ್ಚಿಕೊಂಡ ಬಸಪ್ಪ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪಾನಮತ್ತರಾಗಿದ್ದ ಬಸಪ್ಪ ಬೆಳಗಿನ ಜಾವ 3 ಗಂಟೆ ಸುಮಾರಿಗೆ ತನ್ನ

ಕುಡಿದ ಮತ್ತಿನಲ್ಲಿ ಪತ್ನಿ, ಮಕ್ಕಳಿಗೆ ಬೆಂಕಿಯಿಟ್ಟು ► ಆತ್ಮಹತ್ಯೆಗೆ ಶರಣಾದ ಪತಿ..!!! Read More »

ಕರಾವಳಿ

ಕಡಬ ಗ್ರಾ.ಪಂ.ನಲ್ಲಿ ಜಮಾಬಂಧಿ ► ಕೊರುಂದೂರು ಅಂಗನವಾಡಿ ಕಟ್ಟಡ ಕಾಮಗಾರಿ ಪರಿಶೀಲನೆ

(ನ್ಯೂಸ್ ಕಡಬ) newskadaba.com ಕಡಬ,ಸೆ.7, 2016-17ನೇ ಸಾಲಿನ ಜಮಾಬಂಧಿ ಕಡಬ ಗ್ರಾ.ಪಂ.ಸಭಾಂಗಣದಲ್ಲಿ ತಾಲೂಕು ಹಿಂದುಳಿದ ಕಲ್ಯಾಣ ಇಲಾಖಾಧಿಕಾರಿ ಕುಮಾರ್ ಎಸ್ ರವರ ನೇತೃತ್ವದಲ್ಲಿ ನಡೆಯಿತು. ಕಡಬ ಗ್ರಾ.ಪಂ.ಅಧ್ಯಕ್ಷ ಬಾಬು ಮುಗೇರ, ಉಪಾಧ್ಯಕ್ಷೆ ಜ್ಯೋತಿ ಡಿ ಕೋಲ್ಪೆ, ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್, ತಾ.ಪಂ.ಸದಸ್ಯ ಫಝಲ್ ಕೋಡಿಂಬಾಳ, ಗ್ರಾ.ಪಂ.ಸದಸ್ಯರಾದ ಅಶ್ರಫ್ ಶೇಡಿಗುಂಡಿ, ಹಾಜಿ ಹನೀಫ್ ಕೆ.ಎಂ, ಶೆರೀಫ್ ಎ.ಎಸ್, ನೀಲಾವತಿ, ಶಾಲಿನಿ ಸತೀಶ್ ನಾೖಕ್, ನಾರಾಯಣ ಪೂಜಾರಿ, ರೇವತಿ, ಹರ್ಷ, ಮಾಧವ, ಇಂದಿರಾ, ಸರೋಜಿನಿ ಆಚಾರ್, ಯಶೋಧ, ಆದಂ ಕುಂಡೋಳಿ, ಸೇರಿದಂತೆ

ಕಡಬ ಗ್ರಾ.ಪಂ.ನಲ್ಲಿ ಜಮಾಬಂಧಿ ► ಕೊರುಂದೂರು ಅಂಗನವಾಡಿ ಕಟ್ಟಡ ಕಾಮಗಾರಿ ಪರಿಶೀಲನೆ Read More »

ಕರಾವಳಿ

ಕಡಬ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ► 9ನೇ ವರ್ಷಕ್ಕೆ ಪಾದಾರ್ಪಣೆ

(ನ್ಯೂಸ್ ಕಡಬ) newskadaba.com ಕಡಬ,ಸೆ.7, ಇಲ್ಲಿಯ ವೈಭವ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಇದರ ಕಡಬ ಶಾಖೆಯು 9ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ ಇದರ ಪ್ರಯುಕ್ತ ಶಾಖೆಯಲ್ಲಿ ಗಣಹೋಮ ಹಾಗೂ ಲಕ್ಷ್ಮೀಪೂಜೆ ನಡೆಯಿತು.   ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಪ್ರಥಮ ಶಾಖೆ ಕಡಬದಲ್ಲಿ ಪ್ರಾರಂಭಗೊಂಡು 8 ವರ್ಷಗಳನ್ನು ಪೂರೈಸಿ ಇದೀಗ 9ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಹಿನ್ನಲೆಯಲ್ಲಿ ಸಂಘದಲ್ಲಿ ಪೂಜಾಕಾರ್ಯಕ್ರಮ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಒಕ್ಕಲಿಗ ಗೌಡ ಸಹಕಾರ ಸಂಘದ ಅಧ್ಯಕ್ಷ

ಕಡಬ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ► 9ನೇ ವರ್ಷಕ್ಕೆ ಪಾದಾರ್ಪಣೆ Read More »

ಕರಾವಳಿ
Scroll to Top