ಭರತನಾಟ್ಯ ಜೂನಿಯರ್ ಗ್ರೇಡ್ ► ಉಪ್ಪಿನಂಗಡಿ ಇಂದ್ರಪ್ರಸ್ತ ವಿದ್ಯಾರ್ಥಿನಿ ಭವಿಷ್ಯಗೆ ವಿಶಿಷ್ಟ ಶ್ರೇಣಿ

(ನ್ಯೂಸ್ ಕಡಬ) newskadaba.com ಕಡಬ,ಸೆ.8, ಬೆಂಗಳೂರು ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯು 2017 ಮೇ ತಿಂಗಳಲ್ಲಿ ನಡೆಸಿದ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಉಪ್ಪಿನಂಗಡಿ ಇಂದ್ರಪ್ರಸ್ತ ವಿದ್ಯಾಲಯದ 7 ನೇ ತರಗತಿ ವಿದ್ಯಾರ್ಥಿನಿ ಭವಿಷ್ಯ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಶ್ರೀ ಶಾರದ ಕಲಾ ಕೇಂದ್ರದ ಸುದರ್ಶನ್ ಭಟ್ ಮತ್ತು ಮಂಜುನಾಥ್ ಭಟ್ ಅವರ ಶಿಷ್ಯೆಯಾಗಿರುವ ಈಕೆ ರಾಮಕುಂಜ ಗ್ರಾಮದ ತಾವೂರು ನಿವಾಸಿ ನಾಗೇಶ್ ಎನ್ ಸಿ ಮತ್ತು ನವ್ಯ ದಂಪತಿ ಪುತ್ರಿಯಾಗಿರುತ್ತಾಳೆ.

Scroll to Top