ಏಣಿತಡ್ಕ ಶಿರಾಡಿ ದೈವಸ್ಥಾನಕ್ಕೆ ಶಾಸಕರ ಭೇಟಿ ► ಕಾಮಗಾರಿ ವೀಕ್ಷಣೆ

(ನ್ಯೂಸ್ ಕಡಬ) newskadaba.com ಕಡಬ,ಸೆ.11, ಕೊೖಲ ಗ್ರಾಮದ ಏಣಿತಡ್ಕ ಕಾಲೋನಿಯಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಶಿರಾಡಿ ದೈವಸ್ಥಾನಕ್ಕೆ ಸುಳ್ಯ ಶಾಸಕ ಎಸ್.ಅಂಗಾರ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಯನ್ನು ವೀಕ್ಷಣೆ ಮಾಡಿದರು.


ಈ ಸಂದರ್ಭದಲ್ಲಿ ಇಲ್ಲಿನ ಬಿಜೆಪಿ ಮುಖಂಡ ಮಾತನಾಡಿ ಹಿಂದಿನ ಚುನಾವಣೆಯಲ್ಲಿ ಕಾರಣಿಕ ದೈವವಾದ ಏಣಿತಡ್ಕ ಶಿರಾಡಿ ದೈವಕ್ಕೆ ಶಾಸಕರ ಗೆಲುವಿಗೆ ಹರಕೆ ಹೇಳಲಾಗಿತ್ತು. ಜಿಲ್ಲೆಯಲ್ಲಿ ಎಲ್ಲಾ ಬಿಜೆಪಿ ಸಂಪೂರ್ಣ ನೆಕಚ್ಚಿದರೂ ಸುಳ್ಯ ಕ್ಷೇತ್ರದಲ್ಲಿ ಅಂಗಾರ ಅವರು ಶಾಸಕರಾಗಿ ಮತ್ತೆ ಆಯ್ಕೆಯಾಗಿದ್ದಾರೆ. ಮುಂದಿನ ಚುನಾವಣೆಯಲ್ಲೂ ಶಾಸಕರು ಗೆಲ್ಲುವುದರೊಂದಿಗೆ ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬಂದು ಸುಳ್ಯ ಶಾಸಕರು ಸಚಿವರಾಗಿ ಕ್ಷೇತ್ರಕ್ಕೆ ಬರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಧರ್ಮಪಾಲ ರಾವ್ ಕಜೆ, ಲಕ್ಷ್ಮೀನಾರಾಯಣ ರಾವ್ ಆತೂರು, ಶೀನಪ್ಪ ಗೌಡ ವಳಕಡಮ, ಶಿವಣ್ಣ ಗೌಡ ಕಕ್ವೆ, ತಾಲೂಕು ಪಂಚಾಯಿತಿ ಸದಸ್ಯೆ ಜಯಂತಿ ಆರ್ ಗೌಡ, ಕೊೖಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಬುಡಲೂರು, ಸದಸ್ಯರಾದ ಪ್ರೇಮಾ, ಸುಂದರ ನಾಯ್ಕ, ಲ್ಯಾಂಪ್ ಸೊಸೈಟಿ ನಿರ್ದೆಶಕ ನೇತ್ರಾಕ್ಷ ಹಾಗೂ ಹಿರಿಯರಾದ ಕೃಷ್ಣ ನಾಯ್ಕ ಉಪಸ್ಥಿತರಿದ್ದರು.

Scroll to Top