ಕರಾವಳಿ

ವಿರೋಧದ ನಡುವೆ ಮರ್ದಾಳದಲ್ಲಿ ಮದ್ಯದಂಗಡಿ ಆರಂಭ ► ಗ್ರಾಮಸ್ಥರಿಗೆ ಚಳ್ಳೆಹಣ್ಣು ತಿನ್ನಿಸಿದ ಅಬಕಾರಿ ಅಧಿಕಾರಿಗಳು

(ನ್ಯೂಸ್ ಕಡಬ) newskadaba.com ಕಡಬ, ನ.09. ಗ್ರಾಮಸ್ಥರ ವಿರೋಧದ ನಡುವೆಯೂ ಇಲ್ಲಿನ ಮರ್ಧಾಳ ಸಮೀಪದ ಚಾಕಟೆಕರೆ ಎಂಬಲ್ಲಿ ಗುರುವಾರದಂದು ಮದ್ಯದಂಗಡಿ ಆರಂಭಗೊಂಡಿದೆ. ಮದ್ಯದಂಗಡಿಯನ್ನು ವಿರೋಧಿಸಿ ಮರ್ಧಾಳ ಪರಿಸರದ ಗ್ರಾಮಸ್ಥರು ಕಾನೂನಾತ್ಮಕ ಹೋರಾಟಕ್ಕಿಳಿದಿದ್ದು, ಅಬಕಾರಿ ಇಲಾಖಾ ಅಧಿಕಾರಿಗಳಿಗೆ ಹಲವು ಮನವಿಗಳನ್ನು ಅರ್ಪಿಸಿದ್ದರು. ಒಂದೆಡೆ ಅಬಕಾರಿ ಅಧಿಕಾರಿಗಳು ಮದ್ಯದಂಗಡಿಯ ಬಗ್ಗೆ ಯಾವುದೇ ಅರ್ಜಿಗಳು ಇಲಾಖೆಗೆ ಬಂದಿಲ್ಲ ಎಂದು ಗ್ರಾಮಸ್ಥರನ್ನು ನಂಬಿಸಿ ಇನ್ನೊಂದೆಡೆ ಮದ್ಯದಂಗಡಿಗೆ ಅನುಮತಿ ನೀಡುವ ಮೂಲಕ ಗ್ರಾಮಸ್ಥರಿಗೆ ಚಳ್ಳೆಹಣ್ಣು ತಿನ್ನಿಸಿದ್ದಾರೆ. ರಾಜ್ಯ ಹೆದ್ದಾರಿಯಿಂದ 100 ಮೀಟರ್ ಹಾಗೂ ಪರಿಶಿಷ್ಟ […]

ವಿರೋಧದ ನಡುವೆ ಮರ್ದಾಳದಲ್ಲಿ ಮದ್ಯದಂಗಡಿ ಆರಂಭ ► ಗ್ರಾಮಸ್ಥರಿಗೆ ಚಳ್ಳೆಹಣ್ಣು ತಿನ್ನಿಸಿದ ಅಬಕಾರಿ ಅಧಿಕಾರಿಗಳು Read More »

ಕರಾವಳಿ

ಮಂಗಳೂರು ವಿಶ್ವವಿದ್ಯಾನಿಲಯ ► ನಾಳೆ ನಡೆಯಬೇಕಾಗಿದ್ದ ಪದವಿ ಪರೀಕ್ಷೆಗಳ ಮುಂದೂಡಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ.09. ನಾಳೆ (ನವೆಂಬರ್ 10) ನಡೆಯಬೇಕಾಗಿದ್ದ ಪ್ರಥಮ ಹಾಗೂ ಪಂಚಮ ಬಿ.ಎ, ಬಿ.ಎಸ್ಸಿ, ಬಿ.ಕಾಂ., ಪಂಚಮ ಬಿ.ಕಾಂ. ಹಾಗೂ ಪಂಚಮ ಬಿ.ಎಸ್ಸಿ.(ಎಫ್ಎನ್ ಡಿ) ಸೆಮಿಸ್ಟರ್ ಪರೀಕ್ಷೆಯನ್ನು ಮುಂದೂಡಲಾಗಿದೆ. ಶುಕ್ರವಾರದಂದು ನಡೆಯಬೇಕಾಗಿದ್ದ ಪದವಿ ಪರೀಕ್ಷೆಗಳನ್ನು ನವೆಂಬರ್ 15 ಬುಧವಾರದಂದು ನಿಗದಿಪಡಿಸಲಾಗಿದ್ದು, ಪ್ರಥಮ ಹಾಗೂ ದ್ವಿತೀಯ ವರ್ಷದ ಪರೀಕ್ಷೆಗಳನ್ನು ಪೂರ್ವಾಹ್ನ ಹಾಗೂ ತೃತೀಯ ವರ್ಷದ ಪರೀಕ್ಷೆಗಳನ್ನು ಅಪರಾಹ್ನ ನಡೆಸುವಂತೆ ತಿಳಿಸಲಾಗಿದೆ. ಈಗಾಗಲೇ ನವೆಂಬರ್ 15 ರಂದು ನಡೆಯಲಿರುವ ತೃತೀಯ ವರ್ಷದ ಪರೀಕ್ಷೆಗಳು ಹಿಂದಿನಂತೆ ಅದೇ

ಮಂಗಳೂರು ವಿಶ್ವವಿದ್ಯಾನಿಲಯ ► ನಾಳೆ ನಡೆಯಬೇಕಾಗಿದ್ದ ಪದವಿ ಪರೀಕ್ಷೆಗಳ ಮುಂದೂಡಿಕೆ Read More »

ಕರಾವಳಿ

ಮರ್ಧಾಳ: ಮದ್ಯದಂಗಡಿ ವಿರೋಧಿಸಿ ಗ್ರಾಮಸ್ಥರಿಂದ ಸಭೆ ► ಕಾನೂನು ಹೋರಾಟ ಮಾಡಲು ತೀರ್ಮಾನ

(ನ್ಯೂಸ್ ಕಡಬ) newskadaba.com ಕಡಬ, ನ.08. ಇಲ್ಲಿನ ಮರ್ಧಾಳ ಸಮೀಪದ ಚಾಕಟೆಕರೆ ಎಂಬಲ್ಲಿ ಮದ್ಯದಂಗಡಿ ತೆರೆಯಲಾಗುತ್ತಿದ್ದು ಅದನ್ನು ವಿರೋಧಿಸಿ ಮರ್ಧಾಳ ಪರಿಸರದ ನಾಗರೀಕರು ಸಭೆ ಸೇರಿ ಮುಂದಿನ ಹೆಜ್ಜೆಯ ಬಗ್ಗೆ ಮಾತುಕತೆ ನಡೆಸಲಾಯಿತು. ಮರ್ಧಾಳ ಗ್ರಾಮದಲ್ಲಿ ಇಷ್ಟರವರೆಗೆ ಮದ್ಯದಂಗಡಿ ಇಲ್ಲದೆ ಇರುವಾಗ ಇದೀಗ ಹಠಾತ್ತಾಗಿ ಮದ್ಯದಂಗಡಿಯನ್ನು ಪ್ರಾರಂಭಿಸುವುದು ಸರಿಯಲ್ಲ. ಎಲ್ಲರೂ ಕಾನೂನು ಮೂಲಕ ಹೋರಾಡಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಎ.ಬಿ.ಮನೋಹರ ರೈ, ಮರ್ಧಾಳ ಗ್ರಾ.ಪಂ. ಸದಸ್ಯ ಹರೀಶ್ ಕೋಡಂದೂರು, ಪ್ರಮುಖರಾದ ವಾಸುದೇವ ಬೈಪಾಡಿತ್ತಾಯ, ಗಣೇಶ್,

ಮರ್ಧಾಳ: ಮದ್ಯದಂಗಡಿ ವಿರೋಧಿಸಿ ಗ್ರಾಮಸ್ಥರಿಂದ ಸಭೆ ► ಕಾನೂನು ಹೋರಾಟ ಮಾಡಲು ತೀರ್ಮಾನ Read More »

ಕರಾವಳಿ

ಕೇಂದ್ರ ಸರಕಾರದ ನೋಟು ಅಮಾನೀಕರಣ ಕಪ್ಪುಹಣ ತಡೆಯಲು ಸರಿಯಾದ ಕ್ರಮ ► ಕಡಬ ಬಿಜೆಪಿ ಶಕ್ತಿ ಕೇಂದ್ರದಿಂದ ಹರ್ಷಾಚರಣೆ

(ನ್ಯೂಸ್ ಕಡಬ) newskadaba.com ಕಡಬ, ನ.08. ಕಪ್ಪು ಹಣದ ವಿರುದ್ಧದ ಪ್ರಧಾನಿ ಮೋದಿಯವರ ಹೋರಾಟಕ್ಕೆ ಯಶಸ್ಸು ಸಿಗಲಿ ಎಂದು ಕಡಬ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ಬುಧವಾರ ಸಂಜೆ ಹರ್ಷಾಚರಣೆ ನಡೆಸಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಕೃಷ್ಣ ಶೆಟ್ಟಿ ಕಡಬ, ಸತೀಶ್ ನಾಯ್ಕ್, ಸುಂದರ ಗೌಡ ಮಂಡೆಕರ, ಶಿವಪ್ರಸಾದ್ ರೈ ಮೈಲೇರಿ, ಆದಂ ಕುಂಡೋಳಿ, ಅಶೋಕ್ ಕುಮಾರ್, ಹರೀಶ್ ಉಂಡಿಲ, ಜಯರಾಂ ಆರ್ತಿಲ, ಮೋನಪ್ಪ

ಕೇಂದ್ರ ಸರಕಾರದ ನೋಟು ಅಮಾನೀಕರಣ ಕಪ್ಪುಹಣ ತಡೆಯಲು ಸರಿಯಾದ ಕ್ರಮ ► ಕಡಬ ಬಿಜೆಪಿ ಶಕ್ತಿ ಕೇಂದ್ರದಿಂದ ಹರ್ಷಾಚರಣೆ Read More »

ಕರಾವಳಿ

ಮಂಗಳೂರು: ಪರಾರಿಯಾಗಲು ಯತ್ನಿಸಿದ ವಿಚಾರಣಾದೀನ ಖೈದಿ ► ಸಾರ್ವಜನಿಕರ ಸಹಾಯದಿಂದ ಆರೋಪಿಯ ಸೆರೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ 8, ಕರ್ತವ್ಯದಲ್ಲಿದ್ದ ಪೊಲೀಸರಿಗೆ ವಿಚಾರಣಾದೀನ ಖೈದಿಯೊಬ್ಬ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಘಟನೆ ಪಿವಿಎಸ್ ವೃತ್ತದ ಬಳಿ ಬುಧವಾರ ಮದ್ಯಾಹ್ನ ನಡೆದಿದೆ. ಕಳ್ಳತನ ಮತ್ತು ಗಾಂಜಾ ಪ್ರಕರಣದ ಆರೋಪಿಯಾಗಿರುವ ಪುಂಜಾಲಕಟ್ಟೆಯ ಖೈದಿಯನ್ನು ವಿಚಾರಣೆಗಾಗಿ ನ್ಯಾಯಲಯಕ್ಕೆ ಕರೆತಂದು, ಜೈಲಿಗೆ ಹಿಂತಿರುಗುತ್ತಿರುವಾಗ ಕೈಗೆ ಹಾಕಿದ ಸರಪಳಿಯಿಂದ ಪೊಲೀಸರ ಮೇಲೆ ದಾಳಿ ಮಾಡಿ, ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾನೆ. ಆದರೆ ತಕ್ಷಣ ಎಚ್ಚೆತ್ತ ಪೊಲೀಸರು ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ ಟ್ರಾಫಿಕ್ ಪೊಲೀಸ್ ಹಾಗೂ ಸಾರ್ವಜನಿಕರ ಸಹಾಯದಿಂದ ಆತನನ್ನು ಸೆರೆಹಿಡಿಯುವಲ್ಲಿ

ಮಂಗಳೂರು: ಪರಾರಿಯಾಗಲು ಯತ್ನಿಸಿದ ವಿಚಾರಣಾದೀನ ಖೈದಿ ► ಸಾರ್ವಜನಿಕರ ಸಹಾಯದಿಂದ ಆರೋಪಿಯ ಸೆರೆ Read More »

ಕರಾವಳಿ

ಅಸಹಾಯಕ ಯುವಕನಿಗೆ ನೆರವು ನೀಡಿದ ಉಪ್ಪಿನಂಗಡಿ ಆಟೋ ಚಾಲಕರು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ನ.8. ಗ್ರಾಮೀಣ ಭಾಗದ ಆಟೋ ರಿಕ್ಷಾ ಚಾಲಕರು ಸಂಕಷ್ಟದ ಬದುಕು ಸಾಗಿಸಿ ತಮ್ಮ ಜೀವನ ನಿರ್ವಹಣೆ ಮಾಡುತ್ತಿರುವುದು ಸಾಮಾನ್ಯ. ಆದರೆ ತಮ್ಮ ಸಮಸ್ಯೆಗಳ ನಡುವೆಯೂ ಉಪ್ಪಿನಂಗಡಿಯ ನೇತ್ರಾವತಿ ಆಟೋ ರಿಕ್ಷಾ ಚಾಲಕ-ಮಾಲಕ ಸಂಘದವರು ಅಸಾಹಯಕರೊಬ್ಬರಿಗೆ ನೆರವಾಗುವ ಮೂಲಕ ಮಾನವೀಯತೆ ಪ್ರದರ್ಶಿಸಿದ್ದಾರೆ. ಅಪರಿಚಿತ ಊರಿನಲ್ಲಿ ಬಸ್ಸಿಗೆ ಹಣವಿಲ್ಲದೆ ಒಬ್ಬಂಟಿಯಾಗಿದ್ದ ಚಿತ್ರದುರ್ಗದ ಯುವಕನಾದ ಮೋಹನ್‌ ಅವರಿಗೆ ಆಟೋ ರಿಕ್ಷಾದವರು ಹಣ ಸಂಗ್ರಹಿಸಿ ಅವರನ್ನು ಮರಳಿ ಊರಿಗೆ ಕಳುಹಿಸಿಕೊಟ್ಟಿದ್ದಾರೆ. ಚಿತ್ರದುರ್ಗದ ಹೊಳಲ್ಕೆರೆಯವರಾಗಿದ್ದ ಮೋಹನ್‌ ಅವರ ಗೆಳೆಯ ಪುತ್ತೂರಿನಲ್ಲಿ ಕೆಲಸಕ್ಕಿದ್ದರು. ಆತನಿಗೆ ನೀಡಿದ್ದ

ಅಸಹಾಯಕ ಯುವಕನಿಗೆ ನೆರವು ನೀಡಿದ ಉಪ್ಪಿನಂಗಡಿ ಆಟೋ ಚಾಲಕರು Read More »

ಕರಾವಳಿ

ಕಡಬ: ಎಂಡೋ ಪೀಡಿತೆ ಯುವತಿ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ನ.8. ► ಇಲ್ಲಿನ ಕುಟ್ರುಪ್ಪಾಡಿ ಗ್ರಾಮದ ಪುರಿಯ ಎಂಬಲ್ಲಿ ಎಂಡೋ ಪೀಡಿತೆ ಯುವತಿಯೋರ್ವಳು ಸಾವನ್ನಪ್ಪಿದ ಘಟನೆ ಮಂಗಳವಾರ ನಡೆದಿದೆ. ಮೃತಪಟ್ಟವರನ್ನು ಪುರಿಯ ನಿವಾಸಿ ಪೋಸ್ಟ್‌ಮ್ಯಾನ್ ರವಿ ಎಂಬವರ ಪುತ್ರಿ ಅಶ್ವಿನಿ(28) ಎಂದು ಗುರುತಿಸಲಾಗಿದೆ. ಈಕೆ ಹುಟ್ಟಿನಿಂದಲೇ ಎಂಡೋ ಪೀಡಿತಳಾಗಿ ಕಳೆದ ಇಪ್ಪತ್ತೆಂಡು ವರ್ಷಗಳಿಂದ ದೃಷ್ಟಿಕ ಳೆದುಕೊಂಡು ಪೋಷಕರ ಆಶ್ರಯದಲ್ಲಿ ಬೆಳೆದು ಬಂದಿದ್ದಾಳೆ. ಕಳೆದ ಹತ್ತು ದಿನಗಳಿಂದ ಖಾಯಿಲೆ ಉಲ್ಭಣಿಸಿ ಮೃತಪಟ್ಟಿದ್ದಾಳೆ. ರವಿಯವರ ಇಬ್ಬರೂ ಹೆಣ್ಣು ಮಕ್ಕಳು ಕೂಡಾ ಎಂಡೋ ಪೀಡಿತರಾಗಿದ್ದು, ಈ ಪೈಕಿ ಹಿರಿ ಮಗಳು

ಕಡಬ: ಎಂಡೋ ಪೀಡಿತೆ ಯುವತಿ ಮೃತ್ಯು Read More »

ಕರಾವಳಿ

ಕೇಂದ್ರ ಸರಕಾರದ ನೋಟು ಅಮಾನೀಕರಣಕ್ಕೆ‌ ಖಂಡನೆ ► ಕಡಬ ಬ್ಲಾಕ್ ಕಾಂಗ್ರೆಸ್‌ನಿಂದ ಕರಾಳ‌ ದಿನಾಚರಣೆ

(ನ್ಯೂಸ್ ಕಡಬ) newskadaba.com ಕಡಬ, ನ.08. ಕಳೆದ 2016 ರ ನವೆಂಬರ್ 08 ರಂದು ಕೇಂದ್ರ ಸರಕಾರ ಹಳೆ ನೋಟು ಅಮಾನೀಕರಣಗೊಳಿಸಿರುವುದನ್ನು ಖಂಡಿಸಿ ಕಡಬ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕರಾಳ ದಿನವನ್ನಾಗಿ ಆಚರಿಸಲಾಯಿತು. ಕೇಂದ್ರ ಸರಕಾರದ ವಿರುದ್ಧ ಕಡಬ ತಹಶೀಲ್ದಾರ್ ಕಛೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ತಹಶಿಲ್ದಾರರ ಮೂಲಕ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿವಾಕರ ಗೌಡ ಶಿರಾಡಿ, ಕಡಬ ಗ್ರಾ.ಪಂ. ಅಧ್ಯಕ್ಷ ಬಾಬು ಮುಗೇರ, ಜಿ.ಪಂ. ಸದಸ್ಯ

ಕೇಂದ್ರ ಸರಕಾರದ ನೋಟು ಅಮಾನೀಕರಣಕ್ಕೆ‌ ಖಂಡನೆ ► ಕಡಬ ಬ್ಲಾಕ್ ಕಾಂಗ್ರೆಸ್‌ನಿಂದ ಕರಾಳ‌ ದಿನಾಚರಣೆ Read More »

ಕರಾವಳಿ

ಕಡಬ: ರಾಮಕುಂಜ ಸಂಸ್ಕೃತ ಹಿ.ಪ್ರಾ.ಶಾಲಾ ಶತಮಾನೋತ್ಸವ ► ಪೂರ್ವಭಾವಿ ಸಭೆ, ಸಮಿತಿ ರಚನೆ

(ನ್ಯೂಸ್ ಕಡಬ) newskadaba.com ಕಡಬ, ನ.8. ಗ್ರಾಮೀಣ ಪ್ರದೇಶದಲ್ಲಿ 1919ರಲ್ಲಿ ಆರಂಭಗೊಂಡ ಶ್ರೀ ರಾಮಕುಂಜೇಶ್ವರ ಸಂಸ್ಕೃತ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವದ ಸಂಭ್ರಮದಲ್ಲಿದೆ. ವಿದ್ಯಾಲಯದ ಶತಮಾನದ ಹಾದಿಯಲ್ಲಿ ಸೇವೆಗೈದವರನ್ನು ಸ್ಮರಿಸುವ ಉತ್ಸವವನ್ನು 2018ರ ಕೊನೆಗೆ ನಡೆಸಲು ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಶ್ರೀ ಪಾದರ ಮಾರ್ಗದರ್ಶನದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು. ಶಾಲಾ ಆಡಳಿತ ಮಂಡಳಿ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸದಸ್ಯರ ಉಪಸ್ಥಿತಿಯಲ್ಲಿ ಹಾಗೂ ಊರವರ ಸಹಭಾಗಿತ್ವದಲ್ಲಿ ಶತಮಾನೋತ್ಸವದ ಆಚರಣೆಗೆ ವಿವಿಧ ಸಮಿತಿಗಳಿಗೆ ಮುಖ್ಯಸ್ಥರನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು.

ಕಡಬ: ರಾಮಕುಂಜ ಸಂಸ್ಕೃತ ಹಿ.ಪ್ರಾ.ಶಾಲಾ ಶತಮಾನೋತ್ಸವ ► ಪೂರ್ವಭಾವಿ ಸಭೆ, ಸಮಿತಿ ರಚನೆ Read More »

ಕರಾವಳಿ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತೆರಳುತ್ತಿದ್ದ ಪಾದಯಾತ್ರಿಕರಿಗೆ ► ಕುಂತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ಮಧ್ಯಾಹ್ನದ ಭೋಜನದ ವ್ಯವಸ್ಥೆ

(ನ್ಯೂಸ್ ಕಡಬ) newskadaba.com ಕಡಬ, ನ.8. ತಣ್ಣೀರುಪಂತ ಶ್ರೀ ಶಾರದಾಂಬಾ ಭಜನಾ ಮಂದಿರ ಹಾಗೂ ಪುತ್ತಿಲ ದೇರಾಜೆ ಶ್ರೀ ವಿಘ್ನೇಶ್ವರ ಭಜನಾ ಮಂದಿರದ ಆಶ್ರಯದಲ್ಲಿ ತನಿಯಪ್ಪ ಹಳೆಕೋಟೆ ಬೆಳ್ತಂಗಡಿ ಇವರ ನೇತೃತ್ವದಲ್ಲಿ ಆಗಮಿಸಿದ 59 ಮಂದಿ ಪಾದಯಾತ್ರಿಕರಿಗೆ ಕುಂತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ಸ್ವಾಗತ ಕೋರಲಾಯಿತು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಪಾದಯಾತ್ರಿಕರನ್ನು ಭಜನಾ ಮಂದಿರಕ್ಕೆ ಬರಮಾಡಿಕೊಂಡು ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಲಾಯಿತು. ಪೆರಾಬೆ ಗ್ರಾ.ಪಂ.ಉಪಾಧ್ಯಕ್ಷರಾದ ಜನಾರ್ದನ ಶೆಟ್ಟಿಯವರು ಭೋಜನದ ವ್ಯವಸ್ಥೆ ಮಾಡಿದ್ದರು. ಭಜನಾ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತೆರಳುತ್ತಿದ್ದ ಪಾದಯಾತ್ರಿಕರಿಗೆ ► ಕುಂತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ಮಧ್ಯಾಹ್ನದ ಭೋಜನದ ವ್ಯವಸ್ಥೆ Read More »

ಕರಾವಳಿ
Scroll to Top