ಕರಾವಳಿ

ಬಲ್ಯ:”ಮನೆ ಮನೆಗೆ ಕಾಂಗ್ರೆಸ್” ಕಾರ್ಯಕ್ರಮ ► ಕಾಂಗ್ರೆಸ್ ಸರಕಾರದ ಸಾಧನೆ, ಬಿಜೆಪಿಯ ವೈಪಲ್ಯವನ್ನು ಜನರಿಗೆ ತಿಳಿಸಿ-ಸವಿತಾ ರಮೇಶ್

(ನ್ಯೂಸ್ ಕಡಬ) newskadaba.com ಕಡಬ, ನ.11. ಕಾಂಗ್ರೆಸ್ ಸರಕಾರದ ಸಾಧನೆ ಮತ್ತು ಬಿಜೆಪಿ ಸರಕಾರದ ವೈಪಲ್ಯವನ್ನು ಮನೆ ಮನೆ ಭೇಟಿ ವೇಳೆ ಜನರಿಗೆ ತಿಳಿಸಿ ಮನದಟ್ಟು ಮಾಡಬೇಕು ಎಂದು ಪುತ್ತೂರು, ಸುಳ್ಯ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಸವಿತಾ ರಮೇಶ್ ಹೇಳಿದರು. ಬಲ್ಯ ಗ್ರಾಮದ ದೇರಾಜೆ ಬೂತ್‍ನ ವತಿಯಿಂದ ನಡೆದ ಮನೆ ಮನೆಗೆ ಕಾಂಗ್ರೆಸ್ ನಡಿಗೆ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ, ಅಧಿಕಾರ ಇರುವುದು ಜನರ ಸೇವೆ ಮಾಡಲು ಆದರೆ ಇದನ್ನು ದುರುಪಯೋಗ ಮಾಡಬಾರದು, ಪಕ್ಷದ ಪದಾಧಿಕಾರಿಗಳಿಗೆ ದೊಡ್ಡ ಜವಾಬ್ದಾರಿ […]

ಬಲ್ಯ:”ಮನೆ ಮನೆಗೆ ಕಾಂಗ್ರೆಸ್” ಕಾರ್ಯಕ್ರಮ ► ಕಾಂಗ್ರೆಸ್ ಸರಕಾರದ ಸಾಧನೆ, ಬಿಜೆಪಿಯ ವೈಪಲ್ಯವನ್ನು ಜನರಿಗೆ ತಿಳಿಸಿ-ಸವಿತಾ ರಮೇಶ್ Read More »

ಕರಾವಳಿ

ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ ►ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡ ದ್ವಿತೀಯ

(ನ್ಯೂಸ್ ಕಡಬ) newskadaba.com ಕಡಬ, ನ.11. ನೆಲ್ಯಾಡಿ ಸಂತ ಜಾರ್ಜ್ ಪದವಿ ಪೂರ್ವ ಶಿಕ್ಷಣ ಸಂಸ್ಥೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖಾ ವತಿಯಿಂದ ನಡೆದ ಪುತ್ತೂರು ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದುಕೊಂಡಿತ್ತು. ಇವರಿಗೆ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕರಾದ ರಾಧಕೃಷ್ಣ ಎಂ ತರಭೇತಿ ನೀಡಿರುತ್ತಾರೆ.

ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ ►ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡ ದ್ವಿತೀಯ Read More »

ಕರಾವಳಿ

ಬೈಕ್ ಡಿಕ್ಕಿ ► ಯುವಕರಿಬ್ಬರು ಮೃತ್ಯು

(ನ್ಯೂಸ್ ಕಡಬ) newskadaba.com ಮಂಡ್ಯ, ನ.11. ಅತಿವೇಗದಿಂದ ಬಂದ ಬೈಕೊಂದು ಬ್ರಿಡ್ಜ್ ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಮಂಡ್ಯದ ಮಳವಳ್ಳಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 209ರ ಚಿಲ್ಲಾಪುರ ಗೇಟ್ ಬಳಿ ಶುಕ್ರವಾರ ತಡರಾತ್ರಿ  ನಡೆದಿದೆ. ಹಲಗೂರಿನ ಪ್ರತಾಪ್(23) ಬಾಣಸಮುದ್ರದ ಶಶಿ(24) ಮೃತ ದುರ್ದೈವಿಗಳು. ಘಟನೆಯಿಂದ ಪ್ರತಾಪ್ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಶಶಿ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಅತಿವೇಗವೇ ಈ ಘಟನೆಗೆ ಕಾರಣ ಎಂದು ತಿಳಿದುಬಂದಿದೆ. ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಡಿಕ್ಕಿ ► ಯುವಕರಿಬ್ಬರು ಮೃತ್ಯು Read More »

ಕರಾವಳಿ

ಮರೆಯಾದ ಕಡಬದ ಹಿರಿಯ ಸಾಹಿತಿ ಕೆ.ಗೋಪಾಲ ರಾವ್ ► ಇಂದು ಕಡಬದಲ್ಲಿ ಸಾರ್ವಜನಿಕ ಶ್ರದ್ಧಾಂಜಲಿಯ ಸಮಾಲೋಚನಾ ಸಭೆ

(ನ್ಯೂಸ್ ಕಡಬ) newskadaba.com ಕಡಬ, ನ.11. ಇತ್ತೀಚೆಗೆ ನಮ್ಮಿಂದ ಅಗಲಿದ ಹಿರಿಯ ಸಾಹಿತಿ, ರಾಷ್ಟ್ರ ಪ್ರಶಸ್ತಿ ವಿಜೇತ ಧಾರ್ಮಿಕ ಮುಂದಾಳು, ನಿವೃತ್ತ ಮುಖ್ಯ ಶಿಕ್ಷಕ ದಿವಂಗತ ಕೆ. ಗೋಪಾಲ ರಾವ್ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ನಡೆಸುವ ಸಲುವಾಗಿ ಇಂದು ಸಮಾಲೋಚನಾ ಸಭೆ ಕರೆಯಲಾಗಿದೆ. ಕಡಬದ ಅನುಗ್ರಹ ಮಿನಿ ಹಾಲ್‌ನಲ್ಲಿ ಬೆಳಿಗ್ಗೆ 10.00 ಗಂಟೆಗೆ ನಡೆಯಲಿರುವ ಈ ಸಮಾಲೋಚನಾ ಸಭೆಯಲ್ಲಿ ಗೋಪಾಲ ರಾವ್ ಅವರ ಅಭಿಮಾನಿಗಳು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸಲಹೆ, ಸೂಚನೆಗಳನ್ನು ನೀಡಬೇಕಾಗಿ ಸಾರ್ವಜನಿಕ ಪ್ರಕಟಣೆ

ಮರೆಯಾದ ಕಡಬದ ಹಿರಿಯ ಸಾಹಿತಿ ಕೆ.ಗೋಪಾಲ ರಾವ್ ► ಇಂದು ಕಡಬದಲ್ಲಿ ಸಾರ್ವಜನಿಕ ಶ್ರದ್ಧಾಂಜಲಿಯ ಸಮಾಲೋಚನಾ ಸಭೆ Read More »

ಕರಾವಳಿ

ದಿನಬಳಕೆಯ 177 ವಸ್ತುಗಳ ಜಿಎಸ್‌ಟಿ ದರ ಕಡಿತ ► ಫಿಟ್‌ಮೆಂಟ್ ಸಮಿತಿಯ ಶಿಫಾರಸ್ಸಿಗೆ ಮಣೆ ಹಾಕಿದ ಕೇಂದ್ರ ಸರಕಾರ

(ನ್ಯೂಸ್ ಕಡಬ) newskadaba.com ಗುವಾಹಟಿ, ನ.10. ಒಟ್ಟು 177 ವಸ್ತುಗಳ ಮೇಲಿನ ತೆರಿಗೆ (ಜಿಎಸ್‌ಟಿ) ದರವನ್ನು ಕಡಿತಗೊಳಿಸಲು ಸರಕು ಮತ್ತು ಸೇವಾತೆರಿಗೆಗಳ(ಜಿಎಸ್‌ಟಿ) ಮಂಡಳಿಯ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ. ಅವರು ಗುವಾಹಟಿಯಲ್ಲಿ ಶನಿವಾರದಂದು ನಡೆದ ಸರಕು ಮತ್ತು ಸೇವಾ ತೆರಿಗೆಗಳ (ಜಿಎಸ್‌ಟಿ) ಮಂಡಳಿಯ 23ನೇ ಸಭೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಚ್ಯೂಯಿಂಗ್ ಗಮ್‌ನಿಂದ ಹಿಡಿದು ಡಿಟರ್ಜಂಟ್‌ವರೆಗೆ 177 ವಸ್ತುಗಳ ಮೇಲಿನ ತೆರಿಗೆ ದರವನ್ನು ಈಗಿನ ಶೇ.28ರಿಂದ ಶೇ.18ಕ್ಕೆ ತಗ್ಗಿಸಲು

ದಿನಬಳಕೆಯ 177 ವಸ್ತುಗಳ ಜಿಎಸ್‌ಟಿ ದರ ಕಡಿತ ► ಫಿಟ್‌ಮೆಂಟ್ ಸಮಿತಿಯ ಶಿಫಾರಸ್ಸಿಗೆ ಮಣೆ ಹಾಕಿದ ಕೇಂದ್ರ ಸರಕಾರ Read More »

ಕರಾವಳಿ

ಯಡಿಯೂರಪ್ಪ, ಶೋಭಾ, ಸದಾನಂದ ಗೌಡರಿಂದ ಹಿಂದೂ ಕಾರ್ಯಕರ್ತರ ಕೊಲೆ ► ಸುಳ್ಯದಲ್ಲಿ ಹೇಳಿಕೆ ನೀಡಿದ ಬಿಜೆಪಿ ಸಂಸದ ಶ್ರೀರಾಮುಲು

(ನ್ಯೂಸ್ ಕಡಬ) newskadaba.com ಸುಳ್ಯ, ನ.11. ಕರ್ನಾಟಕದಲ್ಲಿ ಆರ್‍ಎಸ್‍ಎಸ್ ಮತ್ತು ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡುವ ಕೆಲಸವನ್ನು ಶೋಭಾ ಕರಂದ್ಲಾಜೆ, ಬಿ.ಎಸ್. ಯಡಿಯೂರಪ್ಪ ಮತ್ತು ಸದಾನಂದ ಗೌಡ ಅವರು ಮಾಡಿದ್ದಾರೆ ಎಂದು ಹೇಳುವ ಮೂಲಕ ಮಾಜಿ ಸಚಿವ ಬಳ್ಳಾರಿ ಸಂಸದ ಬಿ. ಶ್ರೀರಾಮುಲು ಎಡವಟ್ಟು ಮಾಡಿಕೊಂಡಿದ್ದಾರೆ. ಅವರು ಶನಿವಾರದಂದು ಸುಳ್ಯದಲ್ಲಿ ಏರ್ಪಡಿಸಲಾಗಿದ್ದ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿ, ಮಾತಿನ ಭರದಲ್ಲಿ ಕರಾವಳಿಯ ಕೊಲೆ ರಾಜಕೀಯದ ಬಗ್ಗೆ ಉಲ್ಲೇಖಿಸಿ ಈ ರೀತಿಯಾಗಿ ಹೇಳಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡ ಅವರು

ಯಡಿಯೂರಪ್ಪ, ಶೋಭಾ, ಸದಾನಂದ ಗೌಡರಿಂದ ಹಿಂದೂ ಕಾರ್ಯಕರ್ತರ ಕೊಲೆ ► ಸುಳ್ಯದಲ್ಲಿ ಹೇಳಿಕೆ ನೀಡಿದ ಬಿಜೆಪಿ ಸಂಸದ ಶ್ರೀರಾಮುಲು Read More »

ಕರಾವಳಿ

ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕು ► ಅದ್ಧೂರಿಯಾಗಿ ನಡೆದ ಬಿಜೆಪಿ ನವ ಕರ್ನಾಟಕ ಯಾತ್ರೆ

(ನ್ಯೂಸ್ ಕಡಬ) newskadaba.com ಪುತ್ತೂರು, ನ.10. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರವರ ನೇತೃತ್ವದಲ್ಲಿ ನಡೆಯುತ್ತಿರುವ ನವ ಕರ್ನಾಟಕ ಪರಿವರ್ತನಾ ಯಾತ್ರೆಯು ಜಿಲ್ಲೆಯ ಮೂರು ಕಡೆಗಳಿಗೆ ಆಗಮಿಸಿದ್ದು, ಸಮಾವೇಶ ಅದ್ಧೂರಿಯಾಗಿ ನಡೆಯಿತು. ಶುಕ್ರವಾರದಂದು ಬೆಳಿಗ್ಗೆ ದಕ್ಷಿಣ ಭಾರತದ ಪ್ರಸಿದ್ಧ ಕ್ಷೇತ್ರವಾದ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಸುಳ್ಯದಲ್ಲಿ ಬೃಹತ್ ಸಮಾವೇಶ ನಡೆಯಿತು. ನಂತರ ಅಪರಾಹ್ನ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಹಾಗೂ ಸಂಜೆ ಬೆಳ್ತಂಗಡಿಯಲ್ಲಿ ಸಮಾವೇಶ ನಡೆಯಿತು. ಪರಿವರ್ತನಾ ಯಾತ್ರೆಯ ರಥದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಕೇಂದ್ರ

ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕು ► ಅದ್ಧೂರಿಯಾಗಿ ನಡೆದ ಬಿಜೆಪಿ ನವ ಕರ್ನಾಟಕ ಯಾತ್ರೆ Read More »

ಕರಾವಳಿ

ಕಾಂಗ್ರೆಸ್ ನಾಯಕ ಹರಿಕೃಷ್ಣ ಬಂಟ್ವಾಳ್ ನಾಳೆ ಬಿಜೆಪಿಗೆ ಸೇರ್ಪಡೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ.10. ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಅವರ ಆಪ್ತ ಹರಿಕೃಷ್ಣ ಬಂಟ್ವಾಳ ಅವರು ಶನಿವಾರ ನೆಹರೂ ಮೈದಾನದಲ್ಲಿ ನಡೆಯಲಿರುವ ಬಿಜೆಪಿಯ ನವಕರ್ನಾಟಕ ಪರಿವರ್ತನಾ ಯಾತ್ರೆಯ ವೇಳೆ ಬಿಜೆಪಿ ಸೇರಲಿದ್ದು, ಇದರೊಂದಿಗೆ ಕಳೆದ ಕೆಲವು ದಿನಗಳಿಂದ ಉಂಟಾಗಿದ್ದ ಉಹಾಪೋಹಗಳಿಗೆ ತೆರೆ ಬಿದ್ದಿದೆ. ಈ ಬಗ್ಗೆ ಹರಿಕೃಷ್ಣ ಬಂಟ್ವಾಳ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಮಾಣಿಯಲ್ಲಿ ಸರ್ಕಾರದ ಜಮೀನನ್ನು ಅಕ್ರಮವಾಗಿ

ಕಾಂಗ್ರೆಸ್ ನಾಯಕ ಹರಿಕೃಷ್ಣ ಬಂಟ್ವಾಳ್ ನಾಳೆ ಬಿಜೆಪಿಗೆ ಸೇರ್ಪಡೆ Read More »

ಕರಾವಳಿ

ಮರ್ಧಾಳದಲ್ಲಿ ಮದ್ಯದಂಗಡಿಗೆ ಅನುಮತಿ ನೀಡಿರುವುದು ಕಾನೂನು ಬಾಹಿರ ► ವಾರದೊಳಗೆ ಅನುಮತಿ ರದ್ದುಗೊಳಿಸದಿದ್ದಲ್ಲಿ ಉಗ್ರ ಪ್ರತಿಭಟನೆಯ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಕಡಬ, ನ.09. ಇಲ್ಲಿನ ಬಂಟ್ರ ಗ್ರಾಮದ ಚಾಕೋಟೆಕರೆ ಎಂಬಲ್ಲಿ ಕಾನೂನು ಬಾಹಿರವಾಗಿ ಬಾರ್ & ರೆಸ್ಟೋರೆಂಟನ್ನು ತೆರೆಯಲಾಗಿದ್ದು, ವಾರದೊಳಗೆ ಪರವಾನಿಗೆಯನ್ನು ರದ್ದುಗೊಳಿಸದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಕಡಬ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಎ.ಬಿ. ಮನೋಹರ್ ರೈ ಹೇಳಿದ್ದಾರೆ. ಅವರು ಗುರುವಾರದಂದು ಕಡಬದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಅಬಕಾರಿ ಕಾನೂನಿನಲ್ಲಿ ಮದ್ಯದಂಗಡಿಯು ರಾಜ್ಯ ಹೆದ್ದಾರಿಯಿಂದ 220 ಮೀಟರ್ ಹಾಗೂ ಪರಿಶಿಷ್ಟ ಜಾತಿ/ಪಂಗಡದ ಕಾಲನಿಯಿಂದ 100 ಮೀಟರ್ ದೂರದಲ್ಲಿರಬೇಕೆಂಬ ನಿಯಮವಿದ್ದರೂ, ಚಾಕೋಟೆಕರೆಯಲ್ಲಿ ಪರಿಶಿಷ್ಟ ಜಾತಿ

ಮರ್ಧಾಳದಲ್ಲಿ ಮದ್ಯದಂಗಡಿಗೆ ಅನುಮತಿ ನೀಡಿರುವುದು ಕಾನೂನು ಬಾಹಿರ ► ವಾರದೊಳಗೆ ಅನುಮತಿ ರದ್ದುಗೊಳಿಸದಿದ್ದಲ್ಲಿ ಉಗ್ರ ಪ್ರತಿಭಟನೆಯ ಎಚ್ಚರಿಕೆ Read More »

ಕರಾವಳಿ

ಸಬಳೂರು ಶಾಲೆಯಲ್ಲಿ ಮೆಟ್ರಿಕ್ ಮೇಳ ► ಯಶಸ್ವಿಯಾಗಿ ನಡೆದ ನಾಲ್ಕನೇ ವರ್ಷದ ಮಕ್ಕಳ ಸಂತೆ

(ನ್ಯೂಸ್ ಕಡಬ) newskadaba.com ಕಡಬ, ನ.09. ಪುತ್ತೂರು ತಾಲೂಕಿನ ಕೊಯಿಲ ಗ್ರಾಮದ ಸಬಳೂರು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ವರ್ಷದ ‘ಮೆಟ್ರಿಕ್ ಮೇಳ’ ಮಕ್ಕಳ ಮಾರುಕಟ್ಟೆ ಬುಧವಾರ ಯಶಸ್ವಿಯಾಗಿ ನಡೆಯಿತು. ಗ್ರಾಮೀಣ ಪ್ರದೇಶವಾದ ಸಬಳೂರು ಶಾಲಾ ಮಕ್ಕಳು ತಮ್ಮ ಮನೆಯಲ್ಲಿ ಬೆಳೆದ ತರಕಾರಿ, ಗೆಡ್ಡೆ ಗೆಣಸು, ಹೂವು, ಹಣ್ಣು ಹಂಪಲುಗಳನ್ನು, ತಿಂಡಿ ತಿನಿಸುಗಳನ್ನು ಶಾಲಾ ಆವರಣದಲ್ಲಿ ಮಾರಾಟ ಮಾಡಿ ಸಂತೆಯ ವಾತಾವರಣವನ್ನು ನೆನಪಿಸುವುದರೊಂದಿಗೆ ವಿದ್ಯಾರ್ಥಿಗಳಲ್ಲಿ ವ್ಯಾಪಾರ ವ್ಯವಹಾರ ಜ್ಞಾನವನ್ನು ವೃದ್ಧಿಸುವ ಕಾರ್ಯವನ್ನು ಮಾಡಲಾಯಿತು. ಪೋಷಕರು

ಸಬಳೂರು ಶಾಲೆಯಲ್ಲಿ ಮೆಟ್ರಿಕ್ ಮೇಳ ► ಯಶಸ್ವಿಯಾಗಿ ನಡೆದ ನಾಲ್ಕನೇ ವರ್ಷದ ಮಕ್ಕಳ ಸಂತೆ Read More »

ಕರಾವಳಿ
Scroll to Top