ಕಾಣಿಯೂರು: ಬೋರ್ ಪೈಪ್ ಮೈಮೇಲೆ ಬಿದ್ದು ಕಾರ್ಮಿಕ ಮೃತ್ಯು
(ನ್ಯೂಸ್ ಕಡಬ) newskadaba.com ಬೆಳ್ಳಾರೆ, ನ.19. ಬೋರ್‍ವೆಲ್ ಲಾರಿಯಿಂದ ಕಬ್ಬಿಣದ ಪೈಪೊಂದು ಮೈಮೇಲೆ ಬಿದ್ದ ಪರಿಣಾಮ ಕಾರ್ಮಿಕ ಮೃತಪಟ್ಟ ಘಟನೆ ಭಾನುವಾರ ಸಂಜೆ ಕಾಣಿಯೂರು ಗ್ರಾಮದ ನಾವೂರು ಎಂಬಲ್ಲಿ ನಡೆದಿದೆ. ಮೃತನನ್ನು ಬೋರ್‍ವೆಲ್ ಯಂತ್ರದ ಕಾರ್ಮಿಕ ಛತ್ತಿಸ್‍ಗಡ ನಿವಾಸಿ ಸತೀಶ್(19) ಎಂದು ಗುರುತಿಸಲಾಗಿದೆ. ಭಾನುವಾರದಂದು ಸಂಜೆ ನಾವೂರು ಬಳಿ ಬೋರ್‍ವೆಲ್ ಕೊರೆಸುತ್ತಿದ್ದ ವೇಳೆ ಲಾರಿಯಿಂದ ಡ್ರಿಲ್ಲಿಂಗ್ ಪೈಪ್ ಮೈಮೇಲೆ ಬಿದ್ದ ಪರಿಣಾಮ ಸತೀಶ್ ಗಂಭೀರ ಗಾಯಗೊಂಡಿದ್ದು, ಆಂಬ್ಯುಲೆನ್ಸ್ ಮೂಲಕ ಪುತ್ತೂರು ಆಸ್ಪತ್ರೆಗೆ ದಾಖಲಿಸುವ ಹಾದಿ ಮಧ್ಯೆ ಮೃತಪಟ್ಟನೆನ್ನಲಾಗಿದೆ. […]
ಕಾಣಿಯೂರು: ಬೋರ್ ಪೈಪ್ ಮೈಮೇಲೆ ಬಿದ್ದು ಕಾರ್ಮಿಕ ಮೃತ್ಯು Read More »
ಕರಾವಳಿ






