ಕರಾವಳಿ

ಇಚಿಲಂಪಾಡಿ: ಖಾಸಗಿ ಬಸ್ – ಓಮ್ನಿ ಢಿಕ್ಕಿ ► ಓರ್ವ ಮೃತ್ಯು, ನಾಲ್ವರು ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ನ.18. ಖಾಸಗಿ ಬಸ್ ಹಾಗೂ ಓಮ್ನಿ ಕಾರು ನಡುವೆ ಢಿಕ್ಕಿ ಸಂಭವಿಸಿ ಓರ್ವ ಮೃತಪಟ್ಟು ನಾಲ್ವರು ಗಂಭೀರ ಗಾಯಗೊಂಡ ಘಟನೆ ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ಇಚಿಲಂಪಾಡಿ ಎಂಬಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ. ಬೆಂಗಳೂರಿನಿಂದ ಧರ್ಮಸ್ಥಳ ಮೂಲಕ ಸುಬ್ರಹ್ಮಣ್ಯ ಕ್ಕೆ ತೆರಳುತ್ತಿದ್ದ ಕುಕ್ಕೇಶ್ರೀ ಹೆಸರಿನ ಖಾಸಗಿ ಬಸ್ ಹಾಗೂ ಧರ್ಮಸ್ಥಳ ಕ್ಕೆ ತೆರಳುತ್ತಿದ್ದ ಉಡುಪಿ ಮೂಲದ ಓಮ್ನಿ ಕಾರು ಢಿಕ್ಕಿಯಾಗಿದ್ದು, ಘಟನೆಯಲ್ಲಿ ಕಾರಿನಲ್ಲಿದ್ದ ಓರ್ವ ಮೃತಪಟ್ಟಿದ್ದು, ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. […]

ಇಚಿಲಂಪಾಡಿ: ಖಾಸಗಿ ಬಸ್ – ಓಮ್ನಿ ಢಿಕ್ಕಿ ► ಓರ್ವ ಮೃತ್ಯು, ನಾಲ್ವರು ಗಂಭೀರ Read More »

ಕರಾವಳಿ

ವೈದ್ಯರ ಮುಷ್ಕರಕ್ಕೆ ಜಿಲ್ಲೆಯಲ್ಲಿ ಮತ್ತೊಂದು ಬಲಿ ► ಸೂಕ್ತ ಚಿಕಿತ್ಸೆ ಸಿಗದೆ ವಿಟ್ಲ ನಿವಾಸಿ ಮೃತ್ಯು

(ನ್ಯೂಸ್ ಕಡಬ) newskadaba.com ವಿಟ್ಲ, ನ.17. ವೈದ್ಯರು ನಡೆಸುತ್ತಿರುವ ಮುಷ್ಕರಕ್ಕೆ ರಾಜ್ಯದ ವಿವಿಧೆಡೆ ಹಲವು ಜೀವಗಳು ಬಲಿಯಾಗಿರುವಂತೆಯೇ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರದಂದು ಎರಡು ಜೀವಗಳು ಬಲಿಯಾಗಿವೆ‌. ಶುಕ್ರವಾರದಂದು ಸೂಕ್ತ ಚಿಕಿತ್ಸೆ ದೊರೆಯದೆ ಪುತ್ತೂರಿನ ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿ ಮೃತಪಟ್ಟ ಘಟನೆಯ ಮರುಕ್ಷಣವೇ ವಿಟ್ಲದಲ್ಲಿ ವ್ಯಕ್ತಿಯೋರ್ವರು ಶುಕ್ರವಾರದಂದು ಸಂಜೆ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯನ್ನು ವಿಟ್ಲ ಕಸಬಾ ಗ್ರಾಮದ ರಾಯರಬೆಟ್ಟು ನಿವಾಸಿ ರುಕ್ಮ ಪೂಜಾರಿ ಎಂಬವರ ಪುತ್ರ ರಜತ್ (27) ಎಂದು ಗುರುತಿಸಲಾಗಿದೆ. ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಇವರನ್ನು

ವೈದ್ಯರ ಮುಷ್ಕರಕ್ಕೆ ಜಿಲ್ಲೆಯಲ್ಲಿ ಮತ್ತೊಂದು ಬಲಿ ► ಸೂಕ್ತ ಚಿಕಿತ್ಸೆ ಸಿಗದೆ ವಿಟ್ಲ ನಿವಾಸಿ ಮೃತ್ಯು Read More »

ಕರಾವಳಿ

ವೈದ್ಯರ ಮುಷ್ಕರಕ್ಕೆ ಜಿಲ್ಲೆಯಲ್ಲಿ ಮೊದಲ ಬಲಿ ► ಪುತ್ತೂರಿನ ಕಾಲೇಜು ವಿದ್ಯಾರ್ಥಿನಿ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ನ.17. ಕರ್ನಾಟಕ ಖಾಸಗಿ ಆಸ್ಪತ್ರೆ ನಿಯಂತ್ರಣ ತಿದ್ದುಪಡಿ ವಿಧೇಯಕ (ಕೆಪಿಎಂಇ) ವಿರುದ್ಧ ಖಾಸಗಿ ವೈದ್ಯರು ನಡೆಸುತ್ತಿರುವ ಮುಷ್ಕರದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ‌ ವಿದ್ಯಾರ್ಥಿನಿಯೋರ್ವರು ಮೊದಲ‌ ಬಲಿಯಾಗಿದ್ದಾರೆ. ಮೃತರನ್ನು ಪುತ್ತೂರು ವಿವೇಕಾನಂದ ಕಾಲೇಜಿನ ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿ ಪೂಜಾ(19) ಎಂದು ಗುರುತಿಸಲಾಗಿದೆ. ಈಕೆ ತನ್ನ ಎರಡೂ ಕಿಡ್ನಿಗಳ ವೈಫಲ್ಯದಿಂದ ಬಳಲುತ್ತಿದ್ದು, ವಾರದಲ್ಲಿ ಎರಡು ಬಾರಿ ಡಯಾಲಿಸಿಸ್ ನಡೆಸಲಾಗುತ್ತಿತ್ತು. ಆದರೆ ವೈದ್ಯರ ಮುಷ್ಕರದಿಂದಾಗಿ ಡಯಾಲಿಸಿಸ್ ನಡೆಸಿರಲಿಲ್ಲವೆನ್ನಲಾಗಿದ್ದು, ಅನಾರೋಗ್ಯ ತೀವ್ರಗೊಂಡ ಹಿನ್ನೆಲೆಯಲ್ಲಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ

ವೈದ್ಯರ ಮುಷ್ಕರಕ್ಕೆ ಜಿಲ್ಲೆಯಲ್ಲಿ ಮೊದಲ ಬಲಿ ► ಪುತ್ತೂರಿನ ಕಾಲೇಜು ವಿದ್ಯಾರ್ಥಿನಿ ಮೃತ್ಯು Read More »

ಕರಾವಳಿ

ಅಗಲ ಕಿರಿದಾದ ಕಡಬ – ಪಂಜ ರಸ್ತೆಯ ಅಭಿವೃದ್ಧಿಗೆ ಚಾಲನೆ ► 5 ಕೋಟಿ ರೂ. ವೆಚ್ಚದಲ್ಲಿ ಉನ್ನತೀಕರಣಗೊಳ್ಳುತ್ತಿದೆ ಜಿಲ್ಲಾ ಮುಖ್ಯರಸ್ತೆ

(ನ್ಯೂಸ್ ಕಡಬ) newskadaba.com ಕಡಬ, ನ.18. ಸುಳ್ಯ ತಾಲೂಕಿನಿಂದ ಪ್ರಸ್ತಾವಿತ ಕಡಬ ತಾಲೂಕನ್ನು ಸಂಪಕರ್ಿಸುವ ಪ್ರಮುಖ ಜಿಲ್ಲಾ ರಸ್ತೆಯಾಗಿರುವ ಕಡಬ-ಪಂಜ ರಸ್ತೆಯನ್ನು ಆಗಲಗೊಳಿಸಿ ಉನ್ನತೀಕರಿಸುವ ಕಾಮಗಾರಿ ಆರಂಭಗೊಂಡಿದ್ದು, ಸುಳ್ಯ ಶಾಸಕ ಎಸ್.ಅಂಗಾರ ಅವರ ಮುತುವರ್ಜಿಯಿಂದಾಗಿ ಪರಿಸರದ ಜನರ ಬಹುಕಾಲದ ಬೇಡಿಕೆಯೊಂದು ಈಡೇರುತ್ತಿದೆ. ಕಡಬದಿಂದ ಪಂಜ, ನಿಂತಿಕಲ್, ಬೆಳ್ಳಾರೆ ಮೂಲಕ ಸುಳ್ಯಕ್ಕೆ ಪ್ರಯಾಣಿಸುವ ಜನರಿಗೆ ಕಡಬ-ಪಂಜ ನಡುವಿನ ಪ್ರಯಾಣ ಅತ್ಯಂತ ತ್ರಾಸದಾಯಕ ಪ್ರಯಾಣ ಎನ್ನುವ ಕಾರಣದಿಂದಾಗಿ ಸದ್ರಿ ರಸ್ತೆಯ ಅಭಿವೃದ್ಧಿಗೆ ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿಗಳನ್ನು ಸಲ್ಲಿಸಲಾಗಿತ್ತು. ಅಗಲ ಕಿರಿದಾದ

ಅಗಲ ಕಿರಿದಾದ ಕಡಬ – ಪಂಜ ರಸ್ತೆಯ ಅಭಿವೃದ್ಧಿಗೆ ಚಾಲನೆ ► 5 ಕೋಟಿ ರೂ. ವೆಚ್ಚದಲ್ಲಿ ಉನ್ನತೀಕರಣಗೊಳ್ಳುತ್ತಿದೆ ಜಿಲ್ಲಾ ಮುಖ್ಯರಸ್ತೆ Read More »

ಕರಾವಳಿ

ಉಪ್ಪಿನಂಗಡಿ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಮೃತ್ಯು ► ಹೃದಯಾಘಾತದ ಶಂಕೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ನ.17. ಬೆಂಗಳೂರಿನಿಂದ ಮಂಗಳೂರು ತೆರಳುತ್ತಿದ್ದ ವೋಲ್ವೋ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಅಪರಿಚಿತ ವ್ಯಕ್ತಿಯೋರ್ವರು ಬಸ್ಸಿನಲ್ಲಿಯೇ ಮೃತಪಟ್ಟ ಘಟನೆ ಗುರುವಾರ ರಾತ್ರಿ ಉಪ್ಪಿನಂಗಡಿ ಸಮೀಪದಲ್ಲಿ ನಡೆದಿದೆ. ಹೃದಯಾಘಾತದಿಂದಾಗಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದ್ದು, ಮೃತರ ಪರಿಚಯ ಇನ್ನಷ್ಟೇ ತಿಳಿದು ಬರಬೇಕಿದೆ. ಮೃತರ ಜೇಬಿನಲ್ಲಿ ಯದೀಶ್ ಡಿ. ವರದಿಗಾರರು, ಕರ್ನಾಟಕ ರಾಜಕೀಯ ಎನ್ನುವ ಐಡಿ ಕಾರ್ಡ್ ಪತ್ತೆಯಾಗಿದೆ ಎನ್ನಲಾಗಿದೆ.

ಉಪ್ಪಿನಂಗಡಿ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಮೃತ್ಯು ► ಹೃದಯಾಘಾತದ ಶಂಕೆ Read More »

ಕರಾವಳಿ

ಕಡಬ: ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದ ಅಧಿಕಾರಿ ► ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

(ನ್ಯೂಸ್ ಕಡಬ) newskadaba.com ಕಡಬ, ನ.16. ಸರಕಾರದಿಂದ ದೊರೆಯಲ್ಪಡುವ ಸಹಾಯಧನ ಬಿಡುಗಡೆಗಾಗಿ ಕಡಬದಲ್ಲಿ ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದ ಅಧಿಕಾರಿಗೆ ಲೋಕಾಯುಕ್ತ ನ್ಯಾಯಾಲಯವು ಒಂದು ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ. ಕಡಬದ ವ್ಯಾಪಾರಿಯಾಗಿದ್ದ ಜೋನ್ಸನ್ ಪಿ.ಜೆ. ಎಂಬವರಿಂದ 2009 ಜೂನ್‌ 26 ರಂದು ಲಂಚಕ್ಕೆ ಬೇಡಿಕೆ ಇಟ್ಟು, ಹತ್ತು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ‌ ಸಿಕ್ಕಿ ಬಿದ್ದಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಖಾದಿ ಗ್ರಾಮೋದ್ಯೋಗ ಇಲಾಖೆಯ ಅಧಿಕಾರಿ ಭಾಸ್ಕರ ಪ್ರಭು ಎಂಬವರ

ಕಡಬ: ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದ ಅಧಿಕಾರಿ ► ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ Read More »

ಕರಾವಳಿ

ಅದ್ಯಪಾಡಿ: ಸುಮಾರು 1300 ಲೋಡ್ ಅಕ್ರಮ ಮರಳು ದಾಸ್ತಾನು ಪತ್ತೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ.16. ಅಕ್ರಮವಾಗಿ ಅಪಾರ ಪ್ರಮಾಣದಲ್ಲಿ ಸಂಗ್ರಹಿಸಿಡಲಾಗಿದ್ದ ಅಕ್ರಮ ಮರಳನ್ನು ಗಣಿ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ನಗರದ ಹೊರವಲಯದ ಅದ್ಯಪಾಡಿ ಡ್ಯಾಮ್ ಬಳಿ ಗುರುವಾರದಂದು ನಡೆದಿದೆ. ಖಚಿತ ವರ್ತಮಾನದ ಮೇರೆಗೆ ದಾಳಿ ನಡೆಸಿದ ಬಜ್ಪೆ ಪೊಲೀಸರು ಹಾಗೂ ಗಣಿ ಇಲಾಖೆಯ ಅಧಿಕಾರಿಗಳು ಅಕ್ರಮವಾಗಿ ಸಂಗ್ರಹಿಸಿದ್ದ ಸುಮಾರು1300 ಲೋಡ್ ಮರಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗಾಗಿ ಬಲೆ ಬೀಸಲಾಗಿದ್ದು, ಶೋಧ ಕಾರ್ಯ ಮುಂದುವರಿಸಿದ್ದಾರೆ.

ಅದ್ಯಪಾಡಿ: ಸುಮಾರು 1300 ಲೋಡ್ ಅಕ್ರಮ ಮರಳು ದಾಸ್ತಾನು ಪತ್ತೆ Read More »

ಕರಾವಳಿ

ಕಡಬದ ವಿವಿಧ ಸಂಘಸಂಸ್ಥೆಗಳ ಹಾಗೂ ಸಾರ್ವಜನಿಕರ ಪರವಾಗಿ ► ಸಾಹಿತಿ ಗೋಪಾಲ್ ರಾವ್‌ರಿಗೆ ಸಾರ್ವಜನಿಕ ಶ್ರದ್ಧಾಂಜಲಿ

(ನ್ಯೂಸ್ ಕಡಬ) newskadaba.com ಕಡಬ, ನ.16. ಗೋಪಾಲ ರಾವ್ ರವರು ಕಡಬ ಕಂಡ ಅತ್ಯಂತ ಶ್ರೇಷ್ಠ ಹಾಗೂ ಚಿಂತನಾ ಶೀಲ ಸಾಹಿತಿಯಾಗಿ ಕಡಬಕ್ಕೆ ನೀಡಿದ ಕೊಡುಗೆ ಅಪಾರ ಎಂದು ಕೊಕ್ಕಡ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ವಿಶ್ವನಾಥ್ ರೈ ಪೆರ್ಲ ಹೇಳಿದರು. ಅವರು ಇತ್ತೀಚೆಗೆ ನಮ್ಮಿಂದ ಅಗಲಿದ ಕಡಬದ ಹಿರಿಯ ಸಾಹಿತಿ, ರಾಷ್ಟ್ರ ಪ್ರಶಸ್ತಿ ವಿಜೇತ ಧಾರ್ಮಿಕ ಮುಂದಾಳು, ಸಾಮಾಜಿಕ ಹಿತಚಿಂತಕ, ನಿವೃತ್ತ ಮುಖ್ಯ ಶಿಕ್ಷಕ ದಿ| ಗೋಪಾಲ್ ರಾವ್ ರವರಿಗೆ ಗುರುವಾರದಂದು ಕಡಬದ ಅನುಗ್ರಹ ಮಿನಿ

ಕಡಬದ ವಿವಿಧ ಸಂಘಸಂಸ್ಥೆಗಳ ಹಾಗೂ ಸಾರ್ವಜನಿಕರ ಪರವಾಗಿ ► ಸಾಹಿತಿ ಗೋಪಾಲ್ ರಾವ್‌ರಿಗೆ ಸಾರ್ವಜನಿಕ ಶ್ರದ್ಧಾಂಜಲಿ Read More »

ಕರಾವಳಿ

ಕಡಬ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ► ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಮಂಗಳೂರು, ನ.16. ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 2017-18ನೇ ಸಾಲಿನಲ್ಲಿ ರಾಜ್ಯದಲ್ಲಿ ಅತ್ಯುತ್ತಮ ವ್ಯವಹಾರ ಮಾಡಿದ ಸಹಕಾರಿ ಸಂಘ ಪ್ರಶಸ್ತಿ ಲಭಿಸಿದೆ. ಬುಧವಾರದಂದು ಮಂಗಳೂರಿನಲ್ಲಿ ನಡೆದ 64ನೇ ಅಖಿಲ ಭಾರತ ಸಹಕಾರ ಸಪ್ತಾಹ – 2017 ಕಾರ್ಯಕ್ರಮದಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಸುಂದರ ಗೌಡ ಮಂಡೆಕರ, ಉಪಾಧ್ಯಕ್ಷರಾದ ರಮೇಶ್ ಭಟ್ ಕಲ್ಪುರೆ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಚಾಕೋ ಕೆ.ಎಂ., ನಿರ್ದೇಶಕರಾದ

ಕಡಬ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ► ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿ Read More »

ಕರಾವಳಿ

ಕೆಎಸ್ಸಾರ್ಟಿಸಿ ಬಸ್ – ಸ್ಕೂಲ್ ಬಸ್ ಢಿಕ್ಕಿ ► ಮೂವರು ವಿದ್ಯಾರ್ಥಿಗಳು ಮೃತ್ಯು

(ನ್ಯೂಸ್ ಕಡಬ) newskadaba.com ನ.16, ರಾಮನಗರ, ಚಾಲಕನ ನಿಯಂತ್ರಣ ತಪ್ಪಿದ ಸ್ಕೂಲ್ ಬಸ್ಸೊಂದು ಕೆಎಸ್‍ಆರ್ ಟಿಸಿ ಬಸ್‍ಗೆ ಡಿಕ್ಕಿ ಹೊಡೆದು ಬಳಿಕ ಮರಕ್ಕೆ ಗುದ್ದಿದ ಪರಿಣಾಮ ಮೂವರು ವಿದ್ಯಾರ್ಥಿಗಳು ಮೃತಪಟ್ಟ ಕನಕಪುರ ತಾಲೂಕಿನ ದೊಡ್ಡಮರಳವಾಡಿ ಸಮೀಪದ ಅನ್ನಪೂರ್ಣೇಶ್ವರಿ ಆಶ್ರಮದ ಬಳಿ ನಡೆದಿದೆ. ಗುರುಕುಲ ಶಾಲೆಯ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಮೃತ ವಿದ್ಯಾರ್ಥಿಗಳ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ. ಕನಕಪುರ-ತೇರುಬೀದಿ ಮಾರ್ಗವಾಗಿ ಮರಳವಾಡಿ ಕಡೆಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಗೆ ಸ್ಕೂಲ್ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಸ್ಕೂಲ್ ಬಸ್ ನ ಛಾವಣಿ

ಕೆಎಸ್ಸಾರ್ಟಿಸಿ ಬಸ್ – ಸ್ಕೂಲ್ ಬಸ್ ಢಿಕ್ಕಿ ► ಮೂವರು ವಿದ್ಯಾರ್ಥಿಗಳು ಮೃತ್ಯು Read More »

ಕರಾವಳಿ
Scroll to Top