ಕರಾವಳಿ

ಸುಳ್ಯ: ಡಬಲ್‌ ಮರ್ಡರ್ ಪ್ರಕರಣ ► ಆರೋಪಿಗೆ 10 ವರ್ಷ ಜೈಲು

(ನ್ಯೂಸ್ ಕಡಬ) newskadaba.com ಪುತ್ತೂರು, ನ.21. 2013ರಲ್ಲಿ ಸುಳ್ಯದಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣದ ಅಪರಾಧಿಗೆ 10 ವರ್ಷ ಕಠಿಣ ಸಜೆ ಮತ್ತು 20 ಸಾವಿರ ರೂ. ದಂಡ ವಿಧಿಸಿ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ. ಸುಳ್ಯ ಕಸಬಾ ಗ್ರಾಮದ ನಾರಾಜೆ ನಿವಾಸಿ ಹರೀಶ್ ನಾಯ್ಕ ಎಂಬವರ ಪತ್ನಿ ಪದ್ಮಾವತಿ ಮತ್ತು ಮನೆಗೆಲಸಕ್ಕೆಂದು ಬಂದಿದ್ದ ಟಿಪ್ಪರ್ ಚಾಲಕ ಹಿತೇಶ್ ಅವರನ್ನು ಬರ್ಬರವಾಗಿ ಕೊಲೆಗೈದಿದ್ದ ಅಜ್ಜಾವರ ಗ್ರಾಮದ ಮುಳಿಯ ನಿವಾಸಿ ವಸಂತ ಶೇರಿಗಾರ್ […]

ಸುಳ್ಯ: ಡಬಲ್‌ ಮರ್ಡರ್ ಪ್ರಕರಣ ► ಆರೋಪಿಗೆ 10 ವರ್ಷ ಜೈಲು Read More »

ಕರಾವಳಿ

ಬಂಟ್ವಾಳ: ಮದುವೆಯಾಗುವಂತೆ ಯುವತಿಗೆ ಪೀಡನೆ ► ಯುವಕ ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಬಂಟ್ವಾಳ ನ.21. ಯುವತಿಯೋರ್ವಳನ್ನು ಮದುವೆಯಾಗುವಂತೆ ನಿರಂತರವಾಗಿ ಪೀಡಿಸುತ್ತಿದ್ದ ಯುವಕನೊಬ್ಬನನ್ನು ಬಂಟ್ವಾಳ ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ಮಂಗಳವಾರದಂದು ನಡೆದಿದೆ.   ಪೊಲೀಸರ ವಶದಲ್ಲಿರುವ ಯುವಕನನ್ನು ಬಂಟ್ವಾಳ ಅಮ್ಟಾಡಿ‌ ನಿವಾಸಿ ಅನಿಲ್ ಪಿಂಟೋ‌ ಎಂದು ಗುರುತಿಸಲಾಗಿದೆ. ಈತ ಸ್ಥಳೀಯ ಯುವತಿಯನ್ನು ದಾರಿಯಲ್ಲಿ ತಡೆದು ನಿಲ್ಲಿಸಿ ತನ್ನನ್ನು ಮದುವೆ ಆಗುವಂತೆ ನಿತ್ಯವೂ ಪೀಡಿಸುತ್ತಿದ್ದನೆನ್ನಲಾಗಿದ್ದು, ಇದನ್ನು ಪ್ರಶ್ನಿಸಿದ ಆಕೆಗೆ ಹಾಗೂ ಆಕೆಯ ಮನೆಯವರಿಗೂ ಕೊಲೆ ಬೆದರಿಕೆ ಹಾಕಿದ್ದಾನೆಂದು ಆರೋಪಿಸಲಾಗಿದೆ. ಯುವತಿಯ ಮನೆಯವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿರುವ

ಬಂಟ್ವಾಳ: ಮದುವೆಯಾಗುವಂತೆ ಯುವತಿಗೆ ಪೀಡನೆ ► ಯುವಕ ಪೊಲೀಸ್ ವಶಕ್ಕೆ Read More »

ಕರಾವಳಿ

ಕ್ರೀಂ ಪಾರ್ಲರ್ ನಲ್ಲಿ ನಡೆಯಿತು ಪ್ರೇಮಿಗಳ ಲವ್ವಿಡವ್ವಿ ► ವೈರಲಾಯ್ತು ಮಂಗಳೂರು ಜೋಡಿಯ ಕಿಸ್ಸಿಂಗ್ ಸೀನ್

(ನ್ಯೂಸ್ ಕಡಬ) newskadaba.com ಮಂಗಳೂರು, ನ.21. ನಗರದ ಕ್ರೀಂ ಪಾರ್ಲರ್ ಒಂದರಲ್ಲಿ ಯುವಕನೊಬ್ಬ ಕಾಲೇಜು ಯುವತಿಗೆ ಮುತ್ತಿಟ್ಟ ದೃಶ್ಯದ ವಿಡಿಯೋವೊಂದು ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇಬ್ಬರು ಕೆಫೆಯಲ್ಲಿ ಏನೋ ಮಾತನಾಡುತ್ತಾ ಕೂತಿದ್ದು, ಯುವಕ ಯುವತಿಯನ್ನು ಹತ್ತಿರಕ್ಕೆಳೆದುಕೊಂಡು ಮುತ್ತಿಡುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ. ಮೇಲ್ನೋಟಕ್ಕೆ ಇವರಿಬ್ಬರು ಪ್ರೇಮಿಗಳಂತೆ ಕಂಡುಬರುತ್ತಿದ್ದು, ಯುವತಿ ಕಾಲೇಜಿನ ಸಮವಸ್ತ್ರ ಧರಿಸಿದ್ದು, ಯಾವ ಕಾಲೇಜಿನ ವಿದ್ಯಾರ್ಥಿನಿ ಎನ್ನುವುದು ಬಹಿರಂಗವಾಗಿಲ್ಲ. ವೀಡಿಯೋದಲ್ಲಿ ವಿದ್ಯಾರ್ಥಿನಿಯ ಮುಖಚಹರೆ ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಮಂಗಳೂರಿನ ಯಾವುದೋ ಕ್ರೀಂ ಪಾರ್ಲರ್

ಕ್ರೀಂ ಪಾರ್ಲರ್ ನಲ್ಲಿ ನಡೆಯಿತು ಪ್ರೇಮಿಗಳ ಲವ್ವಿಡವ್ವಿ ► ವೈರಲಾಯ್ತು ಮಂಗಳೂರು ಜೋಡಿಯ ಕಿಸ್ಸಿಂಗ್ ಸೀನ್ Read More »

ಕರಾವಳಿ

ಪುತ್ತೂರು: ವಾಕಿಂಗ್ ಹೋಗುತ್ತಿದ್ದಾಗ ಬೈಕ್ ಢಿಕ್ಕಿ ► ಗಂಭೀರ ಗಾಯಗೊಂಡಿದ್ದ ಪಾದಚಾರಿ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ನ.21. ಬೆಳಗ್ಗಿನ ಜಾವ ವಾಕಿಂಗ್ ಹೋಗುತ್ತಿದ್ದ ಸಂದರ್ಭ ಬೈಕೊಂದು ಢಿಕ್ಕಿಯಾಗಿ ತೀವ್ರ ಗಾಯಗೊಂಡಿದ್ದ ಪಾದಚಾರಿಯು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಸೋಮವಾರ ರಾತ್ರಿ ನಡೆದಿದೆ. ಮೃತರನ್ನು ಪುತ್ತೂರಿನ ಕೆಮ್ಮಾಯಿ ನೀರ್ಪಾಜೆ ನಿವಾಸಿ ರಾಮಚಂದ್ರ ಶಾಸ್ತ್ರಿ(78ವ) ಎಂದು ಗುರುತಿಸಲಾಗಿದೆ. ರಾಮಚಂದ್ರ ಶಾಸ್ತ್ರಿಯವರು ಇತ್ತೀಚೆಗೆ ಎಂದಿನಂತೆ ಬೆಳಿಗ್ಗಿನ ಜಾವ ವಾಕಿಂಗ್ ಹೋಗುತ್ತಿದ್ದಾಗ ಬೈಕೊಂದು ಢಿಕ್ಕಿಯಾಗಿತ್ತು. ಢಿಕ್ಕಿಯ ರಭಸಕ್ಕೆ ತೀವ್ರ ಗಾಯಗೊಂಡಿದ್ದ ರಾಮಚಂದ್ರ ಶಾಸ್ತ್ರಿಯವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆ ತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ

ಪುತ್ತೂರು: ವಾಕಿಂಗ್ ಹೋಗುತ್ತಿದ್ದಾಗ ಬೈಕ್ ಢಿಕ್ಕಿ ► ಗಂಭೀರ ಗಾಯಗೊಂಡಿದ್ದ ಪಾದಚಾರಿ ಮೃತ್ಯು Read More »

ಕರಾವಳಿ

ಪುತ್ತೂರು: ನಿವೃತ್ತ ಎಎಸ್ಐ ನೇಣು ಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಪುತ್ತೂರು, ನ.21. ನಿವೃತ್ತ ಎಎಸ್ಐ ಓರ್ವರು ರಕ್ಷಿತಾರಣ್ಯದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರದಂದು ಬೆಳಕಿಗೆ ಬಂದಿದೆ. ಪುತ್ತೂರು ನಗರ ಠಾಣೆಯಲ್ಲಿ ಎಎಸ್ಐ ಯಾಗಿ ನಿವೃತ್ತಿ ಹೊಂದಿದ್ದ ಕುಂಜೂರು ಪಂಜ ನಿವಾಸಿ ಪರ್ಲಡ್ಕದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಶೇಷಪ್ಪ ಪೂಜಾರಿ ಆತ್ಮಹತ್ಯೆ ಮಾಡಿಕೊಂಡವರು. ಇವರು ಸೋಮವಾರದಂದು ತನ್ನ ಕುಂಜೂರು ಪಂಜದ ಮನೆಗೆ ಬಂದಿದ್ದು, ಮಂಗಳವಾರದಂದು ತನ್ನ ಪಂಚೆಯಿಂದ ನೇಣು ಬಿಗಿದ‌ ಘಟನೆ ಬೆಳಕಿಗೆ ಬಂದಿದೆ. 1986 ರಲ್ಲಿ ಪಾಂಡೇಶ್ವರ ಠಾಣೆಯಲ್ಲಿ ಕಾನ್ ಸ್ಟೇಬಲ್

ಪುತ್ತೂರು: ನಿವೃತ್ತ ಎಎಸ್ಐ ನೇಣು ಬಿಗಿದು ಆತ್ಮಹತ್ಯೆ Read More »

ಕರಾವಳಿ

ಆಲಂಕಾರು: ಮೆಸ್ಕಾಂ ಶಾಖಾ ಕಚೇರಿಯಲ್ಲಿ ಮೆಸ್ಕಾಂ ಸುರಕ್ಷಾ ಮಾಸಾಚರಣೆ

(ನ್ಯೂಸ್ ಕಡಬ) newskadaba.com ಕಡಬ, ನ.21. ಸುರಕ್ಷತೆ ಎಂಬುವುದು ನಮ್ಮ ವೃತ್ತಿಯಲ್ಲಿ ಒಂದು ಕ್ಷಣ ಮರೆತರೆ ಜೀವನ ಪರ್ಯಂತ ಪಶ್ಚಾತ್ತಾಪ ಪಡಬೇಕಾದಿತು. ಇದಕ್ಕಾಗಿ ಸುರಕ್ಷತೆಯನ್ನು ನಮ್ಮ ವೃತ್ತಿಯ ಅವಿಭಾಜ್ಯ ಅಂಗವಾಗಿ ಅಳವಡಿಸಿಕೊಂಡಾಗ ಅಪಾಯ ಎಂಬುವುದು ಕನಸಲ್ಲು ಸುಳಿಯೋದಿಲ್ಲ ಎಂದು ಸುಳ್ಯ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ದಿವಾಕರ್ ಹೇಳಿದರು. ಆಲಂಕಾರು ಮೆಸ್ಕಾಂ ಶಾಖಾ ಕಚೇರಿಯಲ್ಲಿ ನಡೆದ ಮೆಸ್ಕಾಂ ಸುರಕ್ಷಾ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಇಲಾಖೆ ತನ್ನ ನೌಕರರ ಸುರಕ್ಷತೆಗಾಗಿ ಸುರಕ್ಷಾ ಸಾಮಾಗ್ರಿಗಳನ್ನು ನೀಡಿ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದೆ.

ಆಲಂಕಾರು: ಮೆಸ್ಕಾಂ ಶಾಖಾ ಕಚೇರಿಯಲ್ಲಿ ಮೆಸ್ಕಾಂ ಸುರಕ್ಷಾ ಮಾಸಾಚರಣೆ Read More »

ಕರಾವಳಿ

ಕಡಬ ತಾಲೂಕು ಪತ್ರಕರ್ತರ ಸಂಘಕ್ಕೆ ಹೊಸಮಠ ಸಿ.ಎ. ಬ್ಯಾಂಕಿನಿಂದ ಕಪಾಟು ಕೊಡುಗೆ

(ನ್ಯೂಸ್ ಕಡಬ) newskadaba.com ಕಡಬ, ನ.20. ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಕಡಬ ತಾಲೂಕು ಪತ್ರಕರ್ತರ ಸಂಘಕ್ಕೆ ಸ್ಟೀಲ್ ಕಪಾಟನ್ನು ಕೊಡುಗೆಯಾಗಿ ನೀಡಲಾಯಿತು. ಕೊಡುಗೆಯನ್ನು ಹಸ್ತಾಂತರಿಸಿ ಮಾತನಾಡಿದ ಸಹಕಾರಿ ಸಂಘದ ಅಧ್ಯಕ್ಷ ಎನ್. ಕರುಣಾಕರ ಗೋಗಟೆ ಅವರು ಮಾಧ್ಯಮಗಳು ಸಮಾಜದ ಅಗುಹೋಗುಗಳಿಗೆ ಸ್ಪಂದಿಸುವ ಮೂಲಕ ಸ್ವಸ್ಥ ಮತ್ತು ಆರೋಗ್ಯಕರ ಸಮಾಜದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಸಹಕಾರ ಚಳುವಳಿಯಲ್ಲಿ ಕೂಡ ಸುದ್ದಿ ಮಾಧ್ಯಮಗಳ ಪಾತ್ರ ಅತ್ಯಂತ ಪ್ರಮುಖವಾದುದು ಎಂದರು. ಕೊಡುಗೆಯನ್ನು ಸ್ವೀಕರಿಸಿ ಮಾತನಾಡಿದ

ಕಡಬ ತಾಲೂಕು ಪತ್ರಕರ್ತರ ಸಂಘಕ್ಕೆ ಹೊಸಮಠ ಸಿ.ಎ. ಬ್ಯಾಂಕಿನಿಂದ ಕಪಾಟು ಕೊಡುಗೆ Read More »

ಕರಾವಳಿ

ಬುಡೋಳಿ: ಆಟೋ ರಿಕ್ಷಾಗೆ ಢಿಕ್ಕಿ ಹೊಡೆದ ಟ್ಯಾಂಕರ್ ► ಚಾಲಕನಿಗೆ ಗಾಯ

(ನ್ಯೂಸ್ ಕಡಬ) newskadaba.com ವಿಟ್ಲ, ನ.20. ಟ್ಯಾಂಕರೊಂದು ಆಟೊ ರಿಕ್ಷಾದ ಹಿಂಬದಿಗೆ ಢಿಕ್ಕಿ ಹೊಡೆದ ಪರಿಣಾಮ ಆಟೊ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ‌‌ ಸೋಮವಾರದಂದು‌ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬುಡೋಳಿಯಲ್ಲಿ ನಡೆದಿದೆ. ಗಾಯಾಳು ಆಟೋ ಚಾಲಕನನ್ನು ಬುಡೋಳಿ ನಿವಾಸಿ ಆದಂ ಎಂದು ಗುರುತಿಸಲಾಗಿದೆ. ಬುಡೋಳಿಯಿಂದ ಮಾಣಿ ಕಡೆಗೆ ತೆರಳಲು ತನ್ನ ಆಟೊದಲ್ಲಿ ಜನರನ್ನು ಹತ್ತಿಸುತ್ತಿದ್ದ ವೇಳೆ ಹಿಂದಿನಿಂದ ಬಂದ ಟ್ಯಾಂಕರ್ ಢಿಕ್ಕಿ ಹೊಡೆದ ಪರಿಣಾಮ ಆಟೊ ಚಾಲಕ ಗಾಯಗೊಂಡಿದ್ದಾರೆ. ವಿಟ್ಲ ಠಾಣೆ ಪೊಲೀಸರು ಸ್ಥಳಕ್ಕೆ

ಬುಡೋಳಿ: ಆಟೋ ರಿಕ್ಷಾಗೆ ಢಿಕ್ಕಿ ಹೊಡೆದ ಟ್ಯಾಂಕರ್ ► ಚಾಲಕನಿಗೆ ಗಾಯ Read More »

ಕರಾವಳಿ

ಸುಳ್ಯದ ಮಾಜಿ ಶಾಸಕ ಬಾಕಿಲ ಹುಕ್ರಪ್ಪ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ಸುಳ್ಯ, ನ.20. ಸುಳ್ಯ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಾಕಿಲ ಹುಕ್ರಪ್ಪರವರು ಅಲ್ಪಕಾಲದ ಅಸೌಖ್ಯದಿಂದಾಗಿ ಸೋಮವಾರದಂದು ನಿಧನರಾದರು. ಬಾಕಿಲ ಹುಕ್ರಪ್ಪನವರು ಬಿಜೆಪಿಯಿಂದ ಸ್ಪರ್ಧಿಸಿ ಒಂದು ಬಾರಿ ಸುಳ್ಯ ಕ್ಷೇತ್ರದ ಶಾಸಕರಾಗಿದ್ದರು. ಶ್ರಮಜೀವಿಯಾಗಿದ್ದ ಅವರು ನಂತರ ವಿವಿಧ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದರು. ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಸುಳ್ಯದ ಮಾಜಿ ಶಾಸಕ ಬಾಕಿಲ ಹುಕ್ರಪ್ಪ ಇನ್ನಿಲ್ಲ Read More »

ಕರಾವಳಿ

ಕಡಬದ ಸಾಹಿತಿ ದಿ| ಗೋಪಾಲ್ ರಾವ್‌ರ ಕವನ ಸಂಕಲನ ಬಿಡುಗಡೆ ► ಸಾಹಿತಿಯ ಮರಣಾ ನಂತರ ಬಿಡುಗಡೆಗೊಂಡ ‘ತಾಯಿಯ ಕರೆ’

(ನ್ಯೂಸ್ ಕಡಬ) newskadaba.com ಮಂಗಳೂರು, ‌ನ.20. ಇತ್ತೀಚಿಗೆ ನಿಧನರಾದ ಕಡಬದ ಹಿರಿಯ ಸಾಹಿತಿ ದಿ| ಗೋಪಾಲ್‌ ರಾವ್‌ರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಹಾಗೂ ಅವರ ಕವನ ಸಂಕಲನ ಬಿಡುಗಡೆ ಸಮಾರಂಭವು ಕಡಬ ಶ್ರೀಕಂಠ ಸ್ವಾಮಿ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಶನಿವಾರ ನಡೆಯಿತು. ಗೋಪಾಲ್ ರಾವ್‌ರವರ ಜೀವಿತಾವಧಿಯಲ್ಲಿ ಅವರು ರಚಿಸಿದ ಕವನಗಳ ಕವನ ಸಂಕಲನ ‘ತಾಯಿಯ ಕರೆ’ ಎಂಬ ಪುಸ್ತಕವನ್ನು ಅವರ ಹಿರಿಯ ಪುತ್ರ ಚಲನಚಿತ್ರ ನಿರ್ದೇಶಕ ಶರತ್ ಬಿಳಿನೆಲೆ ಅವರ ಸಂಪಾದಕತ್ವದಲ್ಲಿ, ಪುತ್ರಿ ಸೌಮ್ಯ ಸತೀಶ್ ಭಟ್

ಕಡಬದ ಸಾಹಿತಿ ದಿ| ಗೋಪಾಲ್ ರಾವ್‌ರ ಕವನ ಸಂಕಲನ ಬಿಡುಗಡೆ ► ಸಾಹಿತಿಯ ಮರಣಾ ನಂತರ ಬಿಡುಗಡೆಗೊಂಡ ‘ತಾಯಿಯ ಕರೆ’ Read More »

ಕರಾವಳಿ
Scroll to Top