ಕರಾವಳಿ

ಸಮಸ್ಯೆಗಳ ಸುರಿಮಳೆಯಲ್ಲಿ ಮುಳುಗಿದ ಕಡಬದ ಮೆಸ್ಕಾಂ ಜನಸಂಪರ್ಕ ಸಭೆ ►ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸಿ ಮೆಸ್ಕಾಂ ಅಧಿಕಾರಿಗಳು ಕಂಗಾಲು

(ನ್ಯೂಸ್ ಕಡಬ) newskadaba.com ಕಡಬ, ಜ.18. ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಕಡಬ ಉಪವಿಭಾಗಮಟ್ಟದ ವಿದ್ಯುತ್ ಗ್ರಾಹಕರ ಜನಸಂಪರ್ಕ ಸಭೆ ಅಕ್ಷರಶಃ ಸಮಸ್ಯೆಗಳ ಆಗರವನ್ನೇ ಅನಾವರಣಗೊಳಿಸಿತು. ಮೆಸ್ಕಾಂ ಮಂಗಳೂರು ವೃತ್ತ ಕಚೇರಿಯ ಅಧೀಕ್ಷಕ ಇಂಜಿನಿಯರ್ ಮಂಜಪ್ಪರವರ ನೇತೃತ್ವದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಗ್ರಾಹಕರು ಬರಪೂರ ಸಮಸ್ಯೆಗಳ ಪಟ್ಟಿಯನ್ನೇ ಮುಂದಿಟ್ಟರು. ಕಡಬ ಅನುಗ್ರಹ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಗ್ರಾಹಕರು ಭಾರಿ ಸಂಖ್ಯೆಯಲ್ಲಿ ತಮ್ಮ ತಮ್ಮ ಭಾಗದ ಹತ್ತು ಹಲವು ವಿದ್ಯುತ್ ಸಮಸ್ಯೆಗಳನ್ನು ಮೆಸ್ಕಾಂ ಅಧಿಕಾರಿಗಳಿಗೆ ಮನವರಿಕೆ ಮಾಡಿದರು. ರೈತ […]

ಸಮಸ್ಯೆಗಳ ಸುರಿಮಳೆಯಲ್ಲಿ ಮುಳುಗಿದ ಕಡಬದ ಮೆಸ್ಕಾಂ ಜನಸಂಪರ್ಕ ಸಭೆ ►ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸಿ ಮೆಸ್ಕಾಂ ಅಧಿಕಾರಿಗಳು ಕಂಗಾಲು Read More »

ಕರಾವಳಿ

ಜೇಸಿಐ ಕಡಬ ಕದಂಬ ಹಾಗೂ ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ (ರಿ.) ► ಮರ್ಧಾಳದ ಕ್ಯಾನ್ಸರ್ ಪೀಡಿತ ಬಾಲಕನಿಗೆ ಸಹಾಯ ಧನ ಹಸ್ತಾಂತರ

(ನ್ಯೂಸ್ ಕಡಬ) newskadaba.com ಕಡಬ, ಜ.17. ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಮರ್ಧಾಳ ಸಮೀಪದ ಬಂಟ್ರ ಗ್ರಾಮದ ಕಂಪ ನಿವಾಸಿ ಸುರೇಶ್ ಗೌಡ ಮತ್ತು ಲಲಿತಾ ದಂಪತಿಯ ಪುತ್ರ, ಮರ್ದಾಳ ಸೈಂಟ್ ಮೇರಿಸ್ ಪ್ರೌಢಶಾಲಾ 9ನೇ ತರಗತಿಯ ವಿದ್ಯಾರ್ಥಿ ರಾಜೇಶ್ ಅವರ ಚಿಕಿತ್ಸೆಗೆ ಜೇಸಿಐ ಕಡಬ ಕದಂಬ ಹಾಗೂ ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬುಧವಾರ ಆರ್ಥಿಕ ನೆರವು ಹಸ್ತಾಂತರಿಸಲಾಯಿತು. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಒಂದು ಹಂತದ ಚಿಕಿತ್ಸೆ ಪಡೆದು ಸ್ವಲ್ಪಮಟ್ಟಿಗೆ ಚೇತರಿಸಿಕೊಂಡು  ಆಸ್ಪತ್ರೆಯಿಂದ ಬಿಡುಗಡೆಗೊಂಡು

ಜೇಸಿಐ ಕಡಬ ಕದಂಬ ಹಾಗೂ ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ (ರಿ.) ► ಮರ್ಧಾಳದ ಕ್ಯಾನ್ಸರ್ ಪೀಡಿತ ಬಾಲಕನಿಗೆ ಸಹಾಯ ಧನ ಹಸ್ತಾಂತರ Read More »

ಕರಾವಳಿ

ವಿಟ್ಲ: ಪತ್ರಕರ್ತರೋರ್ವರ ಮೇಲೆ ದಾಳಿ ನಡೆಸಿದ ಒಂಟಿ ಮಂಗ ► ಗಾಯಾಳು ಪತ್ರಕರ್ತ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ವಿಟ್ಲ, ಜ.17. ಪತ್ರಕರ್ತರೋರ್ವರಿಗೆ ಗಂಡು ಮಂಗವೊಂದು ದಾಳಿ ನಡೆಸಿ ಅವರ ಕಾಲನ್ನು ತಿವಿದು ತೀವ್ರ ತರದಲ್ಲಿ ಗಾಯಗೊಳಿಸಿದ ಘಟನೆ ಬುಧವಾರದಂದು ವಿಟ್ಲದಲ್ಲಿ ನಡೆದಿದೆ. ಗಾಯಾಳು ಪತ್ರಕರ್ತನನ್ನು ವಿಟ್ಲ ಸಮೀಪದ ಕೊಳ್ನಾಡು ಗ್ರಾಮದ ಮಾದಕಟ್ಟೆ ನಿವಾಸಿ ವಿ.ಟಿ ಪ್ರಸಾದ್ ಎಂದು ಗುರುತಿಸಲಾಗಿದೆ. ಪ್ರಸಾದ್ ಬುಧವಾರದಂದು ತನ್ನ ಮನೆಯ ಅಂಗಳದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಿಂದಿನಿಂದ ಬಂದ ಗಂಡು ಮಂಗ ದಾಳಿ ಮಾಡಿ ಅವರ ಬಲಕಾಲನ್ನು ತಿವಿದು ಗಾಯಗೊಳಿಸಿದೆ. ತಕ್ಷಣವೇ ಪ್ರಸಾದ್ ಅವರನ್ನು ವಿಟ್ಲದ ಸರ್ಕಾರಿ

ವಿಟ್ಲ: ಪತ್ರಕರ್ತರೋರ್ವರ ಮೇಲೆ ದಾಳಿ ನಡೆಸಿದ ಒಂಟಿ ಮಂಗ ► ಗಾಯಾಳು ಪತ್ರಕರ್ತ ಆಸ್ಪತ್ರೆಗೆ ದಾಖಲು Read More »

ಕರಾವಳಿ

ಹಜ್ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿರುವುದು ಸ್ವಾಗತಾರ್ಹ ► ಆಹಾರ ಸಚಿವ ಯು.ಟಿ.ಖಾದರ್

(ನ್ಯೂಸ್ ಕಡಬ) newskadaba.com ಮಂಗಳೂರು, ಜ.17. ಹಜ್ ಯಾತ್ರಿಕರಿಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಕೇಂದ್ರ ಸರಕಾರ ಸ್ಥಗಿತಗೊಳಿಸಿರುವ ಕ್ರಮವನ್ನು ಸ್ವಾಗತಿಸುವುದಾಗಿ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಬುಧವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಜ್ ಯಾತ್ರಿಕರಿಗೆ ನೀಡಲಾಗುತ್ತಿದ್ದ ಸಬ್ಸಿಡಿಯಿಂದ ಏರ್ ಇಂಡಿಯಾಕ್ಕೆ ಲಾಭವಾಗುತ್ತಿತ್ತೇ ಹೊರತು ವೈಯಕ್ತಿಕವಾಗಿ ಯಾತ್ರಿಕರಿಗೆ ಯಾವುದೇ ಲಾಭ ಇರಲಿಲ್ಲ. ಸಬ್ಸಿಡಿಯ ಕಾರಣದಿಂದಾಗಿ ಏರ್ ಇಂಡಿಯಾದಲ್ಲೇ ಯಾತ್ರಿಕರು ಪ್ರಯಾಣಿಸುವುದು ಕಡ್ಡಾಯವಾಗಿತ್ತು. ಆದರೆ ಇದೀಗ ಕಡಿಮೆ ವೆಚ್ಚದಲ್ಲಿ ಇತರ ವಿಮಾನಗಳಲ್ಲೂ

ಹಜ್ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿರುವುದು ಸ್ವಾಗತಾರ್ಹ ► ಆಹಾರ ಸಚಿವ ಯು.ಟಿ.ಖಾದರ್ Read More »

ಕರಾವಳಿ

ಅಕ್ರಮ ಮರಳುಗಾರಿಕೆಯ ವಿರುದ್ಧ ಮುಂದುವರಿದ ಕಾರ್ಯಾಚರಣೆ ► ಬೃಹತ್ ಅಕ್ರಮ ಮರಳು ದಾಸ್ತಾನು ಪತ್ತೆ, 5 ಘಟಕಗಳಿಗೆ ಬೀಗ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.17. ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶಗಳಲ್ಲಿ ಅಕ್ರಮ ಮರಳು ಸಾಗಣೆ ದಂಧೆ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವ ಜಿಲ್ಲಾಡಳಿತ 800ಕ್ಕೂ ಹೆಚ್ಚು ಲೋಡ್ ಮರಳು, ಯಂತ್ರ ಮತ್ತು ಹಲವಾರು ಲಾರಿಗಳನ್ನು ವಶಪಡಿಸಿಕೊಂಡಿದೆ. ಮಂಗಳೂರು ತಾಲ್ಲೂಕಿನ ಮರವೂರು ಡ್ಯಾಂ ಬಳಿ ಇದ್ದ ಐದು ಮರಳು ತೆಗೆಯುವ ಘಟಕಗಳನ್ನು ಪತ್ತೆ ಮಾಡಲಾಗಿದ್ದು, ಅವುಗಳಿಗೆ ಬೀಗ ಜಡಿಯಲಾಗಿದೆ. ಅಲ್ಲದೇ ಮರಳು ಕಳ್ಳಸಾಗಣೆಗೆ ಬಳಸುತ್ತಿದ್ದ 40 ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಹಲವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದಕ್ಷಿಣ ಕನ್ನಡ

ಅಕ್ರಮ ಮರಳುಗಾರಿಕೆಯ ವಿರುದ್ಧ ಮುಂದುವರಿದ ಕಾರ್ಯಾಚರಣೆ ► ಬೃಹತ್ ಅಕ್ರಮ ಮರಳು ದಾಸ್ತಾನು ಪತ್ತೆ, 5 ಘಟಕಗಳಿಗೆ ಬೀಗ Read More »

ಕರಾವಳಿ

ಸುಳ್ಯ: ಬಾಲಕನನ್ನು ಸಲಿಂಗ ಲೈಂಗಿಕ ಕ್ರಿಯೆಗೆ ಬಳಸಿದ ಯುವಕ ► ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಊರವರು

(ನ್ಯೂಸ್ ಕಡಬ) newskadaba.com ಸುಳ್ಯ, ಜ.16. ಒಂಬತ್ತನೇ ತರಗತಿಯ ಬಾಲಕನೋರ್ವನನ್ನು ಸಲಿಂಗಕಾಮಕ್ಕೆ ಬಳಸಿದ ಆರೋಪಿಯನ್ನು ಸುಳ್ಯ ಪೊಲೀಸರು ಬಂಧಿಸಿದ ಘಟನೆ ಮಂಗಳವಾರದಂದು ನಡೆದಿದೆ. ಬಂಧಿತ ಆರೋಪಿಯನ್ನು ಸುಳ್ಯ ಜಯನಗರ ನಿವಾಸಿ ಆಬೀದ್ ಎಂದು ಗುರುತಿಸಲಾಗಿದೆ. ಜ.14 ಭಾನುವಾರದಂದು 9ನೇ ತರಗತಿಯ ಹುಡುಗನೊಬ್ಬನನ್ನು ಕರೆದೊಯ್ದು ಲೈಂಗಿಕ ಕ್ರಿಯೆ ನಡೆಸಲಾಗಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದ್ದು, ಆಕ್ರೋಶಗೊಂಡ ಊರವರು ಆಬೀದ್‌ನನ್ನು ಪ್ರಶ್ನಿಸಿ ಬಳಿಕ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಆರೋಪಿಯನ್ನು ವಿಚಾರಣೆ ನಡೆಸಿರುವ ಪೊಲೀಸರು ಪೋಕ್ಸೋ ಕಾಯಿದೆಯನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸುಳ್ಯ: ಬಾಲಕನನ್ನು ಸಲಿಂಗ ಲೈಂಗಿಕ ಕ್ರಿಯೆಗೆ ಬಳಸಿದ ಯುವಕ ► ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಊರವರು Read More »

ಕರಾವಳಿ

ಶಿರಾಡಿ, ಅಡ್ಡಹೊಳೆಗೆ ನಕ್ಸಲರ ಆಗಮನದ ಹಿನ್ನೆಲೆ ►ನಕ್ಸಲ್ ನಿಗ್ರಹ ದಳದಿಂದ ಕೂಂಬಿಂಗ್ ಆರಂಭ

ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ.16. ಶಿರಾಡಿ ಗ್ರಾಮದ ಮಿತ್ತಮಜಲು ಪರಿಸರದಲ್ಲಿ ನಕ್ಸಲರಿದ್ದಾರೆ ಎಂಬ ಮಾಹಿತಿಯಾಧರಿಸಿ ಮಂಗಳವಾರದಿಂದ ಕೂಂಬಿಂಗ್ ಆರಂಭಿಸಲಾಗಿದೆ. ಕಾರ್ಕಳದಿಂದ ಆಗಮಿಸಿದ ನಕ್ಸಲ್ ನಿಗ್ರಹ ಪಡೆಯ 2 ತಂಡಗಳು ಶಿರಾಡಿ ಕಾಡಿನಲ್ಲಿ ಕೂಂಬಿಂಗ್ ಆರಂಭಿಸಿದ್ದು, ಇನ್ನೂ ಹೆಚ್ಚಿನ ತಂಡಗಳು ಸ್ಥಳಕ್ಕಾಗಮಿಸುವ ನಿರೀಕ್ಷೆ ಇದೆ. ಅಡ್ಡಹೊಳೆ ಪರಿಸರದ ಮಿತ್ತಮಜಲು ಎಂಬಲ್ಲಿ ಭಾನುವಾರ ಸಂಜೆ 7 ಗಂಟೆಯ ಸುಮಾರಿಗೆ ಮೂವರು ಅಪರಿಚಿತರು ಕಾಣಿಸಿಕೊಂಡಿದ್ದು, ನಕ್ಸಲರಾಗಿರಬಹುದೆಂಬ ಶಂಕೆ ವ್ಯಕ್ತವಾಗಿತ್ತು. ಮಿತ್ತಮಜಲಿನ ಮೋಹನ್, ಲೀಲಾ ಹಾಗೂ ಸುರೇಶ್ ಎಂಬವರ ಮನೆಗೆ ಭೇಟಿ

ಶಿರಾಡಿ, ಅಡ್ಡಹೊಳೆಗೆ ನಕ್ಸಲರ ಆಗಮನದ ಹಿನ್ನೆಲೆ ►ನಕ್ಸಲ್ ನಿಗ್ರಹ ದಳದಿಂದ ಕೂಂಬಿಂಗ್ ಆರಂಭ Read More »

ಕರಾವಳಿ

ಕಡಬ: ಮದ್ಯದ ನಶೆಯಲ್ಲಿ ಯುವತಿಗೆ ಹೂವಿನೊಂದಿಗೆ ಮೊಬೈಲ್ ನಂಬರ್ ಕೊಟ್ಟ ► ಆರೋಪಿಗೆ ಸಾರ್ವಜನಿಕರಿಂದ ಧರ್ಮದೇಟು

(ನ್ಯೂಸ್ ಕಡಬ) newskadaba.com ಕಡಬ, ಜ.16. ಮದ್ಯಪಾನ ಮಾಡಿದ ವ್ಯಕ್ತಿಯೋರ್ವ ಹೂವು ಹಾಗೂ ತನ್ನ ಮೊಬೈಲ್ ಸಂಖ್ಯೆಯನ್ನು ಚೀಟಿಯಲ್ಲಿ ಬರೆದು ಕೊಟ್ಟು ಯುವತಿಯನ್ನು ಚುಡಾಯಿಸಿ ಸಾರ್ವಜನಿಕರಿಂದ ಗೂಸಾ ತಿಂದ ಘಟನೆ ಸೋಮವಾರದಂದು ಕಡಬದಲ್ಲಿ ನಡೆದಿದೆ. ಕಡಬ ಪರಿಸರದಲ್ಲಿ ಟ್ಯಾಪಿಂಗ್ ಕೆಲಸ ಮಾಡುವ ಕೇರಳದ ಕೊಲ್ಲಂ ನಿವಾಸಿ ಸುಲೈಮಾನ್ ಎಂಬವರ ಪುತ್ರ ನಹಾಝ್(34) ಕಡಬದ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿರುವ ಯುವತಿಗೆ ತನ್ನ ಮೊಬೈಲ್ ಸಂಖ್ಯೆ ಬರೆದು ಹೂವಿನೊಂದಿಗೆ ಕೊಟ್ಟಿದ್ದ. ಯುವತಿ ತಕ್ಷಣವೇ ವಿಷಯವನ್ನು ಸ್ಥಳೀಯರಿಗೆ ತಿಳಿಸಿದಾಗ ಸ್ಥಳೀಯರು ಆರೋಪಿಗೆ

ಕಡಬ: ಮದ್ಯದ ನಶೆಯಲ್ಲಿ ಯುವತಿಗೆ ಹೂವಿನೊಂದಿಗೆ ಮೊಬೈಲ್ ನಂಬರ್ ಕೊಟ್ಟ ► ಆರೋಪಿಗೆ ಸಾರ್ವಜನಿಕರಿಂದ ಧರ್ಮದೇಟು Read More »

ಕರಾವಳಿ

ಇಲ್ಯಾಸ್ ಹಂತಕರನ್ನು ಕೊಲ್ಲದೆ ಬಿಡುವುದಿಲ್ಲ, ಮಲಗಿದ್ದವನನ್ನು ಕೊಲ್ಲಲು ನಾಚಿಕೆಯಾಗೋದಿಲ್ವ.? ►ನನ್ನ ಜೀವವನ್ನು ಕೊಂದು ಬಿಟ್ಟರಲ್ವಾ…? ಅನಾಮಧೇಯ ಆಡಿಯೋ ವೈರಲ್

(ನ್ಯೂಸ್ ಕಡಬ) newskadaba.com ಮಂಗಳೂರು, ಜ.16. ಉಳ್ಳಾಲ ಟಾರ್ಗೆಟ್ ಗ್ರೂಪ್ ರೂವಾರಿ, ನಟೋರಿಯಸ್ ರೌಡಿ ಇಲ್ಯಾಸ್ ಹತ್ಯೆಗೆ ಸೇಡು ತೀರಿಸದೆ ಬಿಡಲಾರೆವು ಎಂದು ಹೇಳಿಕೊಳ್ಳುವ ಆಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟಾರ್ಗೆಟ್ ಇಲ್ಯಾಸ್ ನ್ನು ಮಂಗಳೂರಿನ ಜೆಪ್ಪು ಕುದ್ಪಾಡಿಯಲ್ಲಿರುವ ಆತನ ಫ್ಲಾಟ್ ಗೆ ಸ್ನೇಹಿತರ ನೆಪದಲ್ಲಿ ನುಗ್ಗಿದ ದುಷ್ಕರ್ಮಿಗಳು ಚೂರಿಯಿಂದ ಇರಿದು ಹತ್ಯೆ ಮಾಡಿದ್ದರು.ಟಾರ್ಗೆಟ್ ಗ್ಯಾಂಗಿನಲ್ಲಿ ಈ ಹಿಂದೆ ಜತೆಯಲ್ಲೇ ಇದ್ದವರು ಈ ಕೃತ್ಯ ನಡೆಸಿದ್ದರೆಂಬ ಶಂಕೆ ವ್ಯಕ್ತವಾಗಿತ್ತು. ಇಲ್ಯಾಸ್ ಹತ್ಯೆಯ ಪ್ರತಿಕಾರ ಮಾಡದೆ

ಇಲ್ಯಾಸ್ ಹಂತಕರನ್ನು ಕೊಲ್ಲದೆ ಬಿಡುವುದಿಲ್ಲ, ಮಲಗಿದ್ದವನನ್ನು ಕೊಲ್ಲಲು ನಾಚಿಕೆಯಾಗೋದಿಲ್ವ.? ►ನನ್ನ ಜೀವವನ್ನು ಕೊಂದು ಬಿಟ್ಟರಲ್ವಾ…? ಅನಾಮಧೇಯ ಆಡಿಯೋ ವೈರಲ್ Read More »

ಕರಾವಳಿ

ದೀಪಕ್ ರಾವ್ ಕೊಲೆ ಪ್ರಕರಣ ► ಇನ್ನಿಬ್ಬರು ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.15. ಇತ್ತೀಚೆಗೆ ಹಾಡುಹಗಲೇ ಕಾಟಿಪಳ್ಳದಲ್ಲಿ ನಡೆದ ದೀಪಕ್ ರಾವ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಸೋಮವಾರದಂದು ಬಂಧಿಸಿದ್ದ ಬಂಧಿತರ ಸಂಖ್ಯೆ ಆರಕ್ಕೇರಿದೆ. ಬಂಧಿತ ಆರೋಪಿಗಳನ್ನು ಕಾಟಿಪಳ್ಳ 2 ನೇ ಬ್ಲಾಕ್ ನಿವಾಸಿ ಅಬ್ದುಲ್ ಅಝೀಝ್(42) ಮತ್ತು ಮೂಲತಃ ಕಾಟಿಪಳ್ಳ 2ನೆ ಬ್ಲಾಕ್‌ನ ನಿವಾಸಿ ಪ್ರಸ್ತುತ ಕೃಷ್ಣಾಪುರದಲ್ಲಿ ವಾಸವಾಗಿರುವ ಅಬ್ದುಲ್ ಅಝೀಮ್ (34) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಈ ಮೊದಲು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿತ್ತು. ಪಣಂಬೂರು ಪೊಲೀಸ್ ಠಾಣಾ

ದೀಪಕ್ ರಾವ್ ಕೊಲೆ ಪ್ರಕರಣ ► ಇನ್ನಿಬ್ಬರು ಆರೋಪಿಗಳ ಬಂಧನ Read More »

ಕರಾವಳಿ
Scroll to Top