ಚಾರ್ವಾಕ ಗ್ರಾಮವನ್ನು 5 ದಿನಗಳಿಂದ ಕತ್ತಲಲ್ಲಿಟ್ಟ ಮೆಸ್ಕಾಂ ಆಲಂಕಾರು ಶಾಖೆ ► ಗ್ರಾಮಸ್ಥರ ಪ್ರತಿಭಟನೆಗೆ ಮಣಿದು ಮರು ಸಂಪರ್ಕ ನೀಡಿದ ಶಾಖಾಧಿಕಾರಿ
(ನ್ಯೂಸ್ ಕಡಬ) newskadaba.com ಕಡಬ, ಜ.15. ಚಾರ್ವಾಕ ಗ್ರಾಮಕ್ಕೆ ಸರಬರಾಜಾಗುವ ವಿದ್ಯುತ್ ಸಂಪರ್ಕವನ್ನು ಕಳೆದ 5 ದಿನಗಳಿಂದ ಕಡಿತಗೊಳಿಸಿ ಕಾರಣ ಕೇಳಿದ ಸಾರ್ವಜನಿಕರಿಗೆ ಉಡಾಫೆಯ ಉತ್ತರವನ್ನು ನೀಡಿ ಉದ್ದಟತನವನ್ನು ಪ್ರದರ್ಶಿಸಿದ್ದಾರೆ ಎಂದು ಶಾಖಾಧಿಕಾರಿಗೆ ಪ್ರತಿಭಟನೆಯ ಮೂಲಕ ಬಿಸಿ ಮುಟ್ಟಿಸಿದ ಘಟನೆ ಆಲಂಕಾರಿನ ಮೆಸ್ಕಾಂ ಶಾಖಾ ಕಚೇರಿಯಲ್ಲಿ ಸೋಮವಾರದಂದು ನಡೆದಿದೆ. ಆಲಂಕಾರು ಮೆಸ್ಕಾಂ ಕಾರ್ಯ ವ್ಯಾಪ್ತಿಯ ಪೆರಾಬೆ ಗ್ರಾಮದ ಇಡಾಳದ ಬಳಿಯಿಂದ ಚಾರ್ವಾಕ ಗ್ರಾಮದ ಮೂರು ವಿದ್ಯುತ್ ಪರಿವರ್ತಕಗಳಿಗೆ ವಿದ್ಯುತ್ ಸಂಪರ್ಕವನ್ನು ಕಳೆದ 15 ವರ್ಷಗಳಿಂದ ನೀಡಲಾಗುತ್ತಿತ್ತು. ಆದರೆ […]










