ಕರಾವಳಿ

ಮಂಗಳೂರು: ಗ್ಯಾಂಗ್ ವಾರ್ ಗೆ ರೌಡಿಶೀಟರ್ ಬಲಿ ► ಟಾರ್ಗೆಟ್ ಗ್ಯಾಂಗ್ ಲೀಡರ್ ಇಲ್ಯಾಸ್ ಹತ್ಯೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.13. ದೇರಳಕಟ್ಟೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳನ್ನು ಅಪಹರಣಗೈದು ಅವರ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿ ಬ್ಲಾಕ್ ಮೇಲ್ ಮಾಡಿದ್ದ ಪ್ರಕರಣದ ಪ್ರಮುಖ ಆರೋಪಿ ಟಾರ್ಗೆಟ್ ಗ್ಯಾಂಗ್ ನ ನಾಯಕ ಇಲ್ಯಾಸ್ ನನ್ನು ದುಷ್ಕರ್ಮಿಗಳ ತಂಡವೊಂದು ಕೊಚ್ಚಿ ಕೊಲಗೈದ ಘಟನೆ ಶನಿವಾರ ಮುಂಜಾನೆ ಮಂಗಳೂರಿನಲ್ಲಿ ನಡೆದಿದೆ. ಇತ್ತೀಚೆಗೆ ಫರಂಗಿಪೇಟೆಯಲ್ಲಿ ನಡೆದ ಮೂವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿ ಎರಡು ದಿನಗಳ ಹಿಂದಷ್ಟೇ ಜಾಮೀನಿನ ಮೇಲೆ ಹೊರಗೆ ಬಂದಿದ್ದ ಇಲ್ಯಾಸ್ ಮಂಗಳೂರಿನ ಜಪ್ಪುವಿನಲ್ಲಿರುವ ಫ್ಲ್ಯಾಟ್ ನಲ್ಲಿದ್ದ […]

ಮಂಗಳೂರು: ಗ್ಯಾಂಗ್ ವಾರ್ ಗೆ ರೌಡಿಶೀಟರ್ ಬಲಿ ► ಟಾರ್ಗೆಟ್ ಗ್ಯಾಂಗ್ ಲೀಡರ್ ಇಲ್ಯಾಸ್ ಹತ್ಯೆ Read More »

ಕರಾವಳಿ

ಚಾರ್ವಾಕದಿಂದ ಆಲಂಕಾರಿಗೆ ವಿದ್ಯುತ್ ಪೂರೈಕೆಗೆ ಗ್ರಾಮಸ್ಥರ ವಿರೋಧ ►ಪ್ರತ್ಯೇಕ ಫೀಡರ್ ನಿಂದ ವಿದ್ಯುತ್ ಪೂರೈಸುವಂತೆ ಗ್ರಾಮಸ್ಥರಿಂದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಸವಣೂರು, ಜ.13. ಸವಣೂರು ಸಬ್ ಸ್ಟೇಷನ್ ಚಾರ್ವಾಕ ಫೀಡರ್ ನಿಂದ ಆಲಂಕಾರು ಗ್ರಾಮಕ್ಕೆ ವಿದ್ಯುತ್ ಪೂರೈಸಲು ಇಲಾಖೆಯು ಮುಂದಾಗಿರುವುದನ್ನು ವಿರೋಧಿಸಿ ಹಾಗೂ ಪ್ರತ್ಯೇಕ ಫೀಡರ್ ಮೂಲಕ ವಿದ್ಯುತ್ ಸರಬರಾಜುಗೊಳಿಸುವಂತೆ ಒತ್ತಾಯಿಸಿ ಚಾರ್ವಾಕ, ದೋಳ್ಪಾಡಿ, ಕುದ್ಮಾರು ಗ್ರಾಮಗಳ ಕೃಷಿಕರು ಪ್ರತಿಭಟನೆ ನಡೆಸಿದ ಘಟನೆ ಕುದ್ಮಾರು ಗ್ರಾಮದ ಶಾಂತಿಮೊಗರು ಎಂಬಲ್ಲಿ ಶುಕ್ರವಾರದಂದು ನಡೆಯಿತು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಪ್ರಗತಿಪರ ಕೃಷಿಕ ಪ್ರವೀಣ್ ಕುಂಟ್ಯಾನ, ಸವಣೂರು 33/11 ಕೆವಿ ವಿದ್ಯುತ್ ಉಪಕೇಂದ್ರದ ಚಾರ್ವಾಕ ಫೀಡರ್ ನಿಂದ ಈಗಾಗಲೇ

ಚಾರ್ವಾಕದಿಂದ ಆಲಂಕಾರಿಗೆ ವಿದ್ಯುತ್ ಪೂರೈಕೆಗೆ ಗ್ರಾಮಸ್ಥರ ವಿರೋಧ ►ಪ್ರತ್ಯೇಕ ಫೀಡರ್ ನಿಂದ ವಿದ್ಯುತ್ ಪೂರೈಸುವಂತೆ ಗ್ರಾಮಸ್ಥರಿಂದ ಪ್ರತಿಭಟನೆ Read More »

ಕರಾವಳಿ

ಬಂಟ್ವಾಳ: ವಾಟ್ಸಪ್ ನಲ್ಲಿ ಕೋಮು ಪ್ರಚೋದಕ ಮೆಸೇಜ್ ಶೇರ್ ಮಾಡಿದ ಪ್ರಕರಣ ► ಗ್ರೂಪ್ ಅಡ್ಮಿನ್ ಸೇರಿ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜ.13. ವಾಟ್ಸ್‌ಆ್ಯಪ್‌ ಗ್ರೂಪೊಂದರಲ್ಲಿ ಧರ್ಮನಿಂದನೆ, ಮಹಿಳೆಯ ಅವಹೇಳನ ಹಾಗೂ ಕೋಮುದ್ವೇಷ ಕೆರಳಿಸುವ ಸಂದೇಶ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ವಾಟ್ಸಪ್ ಗ್ರೂಪೊಂದರಲ್ಲಿ ಕೋಮುದ್ವೇಷ ಕೆರಳಿಸುವ ಹಾಗೂ ಮಹಿಳೆಯೋರ್ವರನ್ನು ಕೀಳು ಮಟ್ಟದಲ್ಲಿ ನಿಂದಿಸುವ ಮತ್ತು ಆಕ್ರಮಣಕಾರಿಯಾದ ಸಂದೇಶವನ್ನು ಹಾಕಿದ ಆರೋಪಿ ಕೆಎಸ್ಸಾರ್ಟಿಸಿ ಬಸ್‌ ಚಾಲಕ ಉಪ್ಪಿನಂಗಡಿಯ ಬಾಲಕೃಷ್ಣ ಪೂಜಾರಿ (48) ಹಾಗೂ ಗ್ರೂಪ್ ಅಡ್ಮಿನ್ ಬಂಟ್ವಾಳದ ಇರಾ ಗ್ರಾಮದ ಸತೀಶ್

ಬಂಟ್ವಾಳ: ವಾಟ್ಸಪ್ ನಲ್ಲಿ ಕೋಮು ಪ್ರಚೋದಕ ಮೆಸೇಜ್ ಶೇರ್ ಮಾಡಿದ ಪ್ರಕರಣ ► ಗ್ರೂಪ್ ಅಡ್ಮಿನ್ ಸೇರಿ ಇಬ್ಬರ ಬಂಧನ Read More »

ಕರಾವಳಿ

ಜೇಸಿಐ ನೆಕ್ಕಿಲಾಡಿ ಘಟಕದಿಂದ ರಾಷ್ಟ್ರೀಯ ಯುವ ದಿನಾಚರಣೆ ► ಯುವ ಸಮೂಹವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುವ ಕಾರ್ಯವಾಗಲಿ: ಸವಿತಾ ಪಿ.ಜಿ. ಭಟ್

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ.12. ಸ್ವಾಮಿ ವಿವೇಕಾನಂದರ ಆಚರಣೆಗಳೇ ಅವರ ಬೋಧನೆಯಾಗಿತ್ತು. ಆದ್ದರಿಂದ ಅವರ ತತ್ವ ಸಿದ್ದಾಂತಗಳು ನಮಗ್ಯಾವತ್ತೂ ಅನುಕರಣೀಯ. ಯುವ ಸಮೂಹದಿಂದ ಮಾತ್ರ ದೇಶದ ಬದಲಾವಣೆ ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಉತ್ತಮ ವಿಚಾರಗಳ ಮೂಲಕ ಯುವ ಸಮೂಹವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುವ ಕಾರ್ಯ ನಮ್ಮೆಲ್ಲರಿಂದಾಗಬೇಕು ಎಂದು ಮಹಿಳಾ ಪರ ಚಿಂತಕಿ ಸವಿತಾ ಪಿ.ಜಿ. ಭಟ್ ತಿಳಿಸಿದರು. ಸ್ವಾಮಿ ವಿವೇಕಾನಂದರ 155ನೇ ಜಯಂತಿಯ ಅಂಗವಾಗಿ ಜೇಸಿಐ ನೆಕ್ಕಿಲಾಡಿ ಘಟಕ, ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ

ಜೇಸಿಐ ನೆಕ್ಕಿಲಾಡಿ ಘಟಕದಿಂದ ರಾಷ್ಟ್ರೀಯ ಯುವ ದಿನಾಚರಣೆ ► ಯುವ ಸಮೂಹವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುವ ಕಾರ್ಯವಾಗಲಿ: ಸವಿತಾ ಪಿ.ಜಿ. ಭಟ್ Read More »

ಕರಾವಳಿ

ಜೇಸಿಐ ಕಡಬ ಕದಂಬ ವತಿಯಿಂದ ರಾಷ್ಟ್ರೀಯ ಯುವ ದಿನಾಚರಣೆ ► ವಿವೇಕಾನಂದರ ಚಿಂತನೆಗಳು ಯುವ ಸಮುದಾಯಕ್ಕೆ ದಾರಿದೀಪ: ಫಾ| ಆ್ಯಂಟನಿ

(ನ್ಯೂಸ್ ಕಡಬ) newskadaba.com ಕಡಬ, ಜ. 12. ಸ್ವಾಮಿ ವಿವೇಕಾನಂದರು ತಮ್ಮ ತಮ್ಮ ಶಕ್ತಿಯುತ ಚಿಂತನೆಗಳಿಂದ ಮತ್ತು ಸ್ಫೂರ್ತಿದಾಯಕ ನಡವಳಿಕೆಯಿಂದ ಇಂದಿಗೂ ನಮ್ಮನ್ನು ಸೆಳೆಯುತ್ತಿದ್ದಾರೆ. ಅವರ ಚಿಂತನೆಗಳು ಯುವ ಸಮುದಾಯಕ್ಕೆ ದಾರಿದೀಪ ಎಂದು ನೂಜಿಬಾಳ್ತಿಲದ ಬೆಥನಿ ಪ.ಪೂ.ಕಾಲೇಜಿನ ನಿರ್ದೇಶಕ ವಂ|ಆ್ಯಂಟನಿ ನಿರಂಞಪಳ್ಳಿ ಅವರು ಅಭಿಪ್ರಾಯಪಟ್ಟರು. ಅವರು ಶುಕ್ರವಾರ ಜೇಸಿಐ ಕಡಬ ಕದಂಬ, ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್‌ ಹಾಗೂ ಯುವ ಜೇಸಿ ವಿಭಾಗದ ಸಂಯುಕ್ತ ಆಶ್ರಯದಲ್ಲಿ  ನೂಜಿಬಾಳ್ತಿಲದ ಬೆಥನಿ ಪ.ಪೂ.ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಪ್ರಯುಕ್ತ ಆಯೋಜಿಲಾಗಿದ್ದ

ಜೇಸಿಐ ಕಡಬ ಕದಂಬ ವತಿಯಿಂದ ರಾಷ್ಟ್ರೀಯ ಯುವ ದಿನಾಚರಣೆ ► ವಿವೇಕಾನಂದರ ಚಿಂತನೆಗಳು ಯುವ ಸಮುದಾಯಕ್ಕೆ ದಾರಿದೀಪ: ಫಾ| ಆ್ಯಂಟನಿ Read More »

ಕರಾವಳಿ

ಗುಂಡ್ಯ: ನಾಲ್ವರ ತಂಡದಿಂದ ಲಾರಿ ಚಾಲಕನಿಗೆ ಹಲ್ಲೆ ನಡೆಸಿ ದರೋಡೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ.12. ಕಾರಿನಲ್ಲಿ ಬಂದ ನಾಲ್ವರ ತಂಡವೊಂದು ಲಾರಿ ಚಾಲಕನಿಗೆ ಹಲ್ಲೆ ನಡೆಸಿ ದರೋಡೆಗೈದ ಘಟನೆ ಗುರುವಾರ ರಾತ್ರಿ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 75ರ  ಗುಂಡ್ಯ ಜಂಕ್ಷನ್ ನಿಂದ ನಾಲ್ಕು ಕಿ.ಮೀ. ಮುಂದಕ್ಕೆ ನಿರ್ಜನ ಪ್ರದೇಶದಲ್ಲಿ ನಡೆದಿದೆ. ತಂಡದಿಂದ ದರೋಡೆಗೊಳಗಾದವರನ್ನು ಕೆದಿಲ ಗ್ರಾಮದ ಪೇರಮೊಗರಿನ ಗಡಿಯಾರ ನಿವಾಸಿ ಮೊಹಮ್ಮದ್ ಎಂಬವರ ಪುತ್ರ ಅಬ್ದುಲ್ ರವೂಫ್ (26) ಎಂದು ಗುರುತಿಸಲಾಗಿದೆ. ಇವರಿಂದ ದರೋಡೆಕೋರರು ಸುಮಾರು 17 ಸಾವಿರ ರೂಪಾಯಿ ದರೋಡೆಗೈದಿದ್ದಾರೆ.

ಗುಂಡ್ಯ: ನಾಲ್ವರ ತಂಡದಿಂದ ಲಾರಿ ಚಾಲಕನಿಗೆ ಹಲ್ಲೆ ನಡೆಸಿ ದರೋಡೆ Read More »

ಕರಾವಳಿ

ಕೊಂಬಾರು: ಕೆರೆಗೆ ಬಿದ್ದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ.12. ಆಕಸ್ಮಿಕವಾಗಿ ಕೆರೆಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಠಾಣಾ ವ್ಯಾಪ್ತಿಯ ಕೊಂಬಾರು ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ. ಮೃತರನ್ನು ಶಿರಾಡಿ ಗ್ರಾಮದ ಕೊಂಬಾರು ನಿವಾಸಿ ಓ.ಜಿ. ಜೋನ್ (60) ಎಂದು ಗುರುತಿಸಲಾಗಿದೆ. ಎಂದಿನಂತೆ ಮನೆ ಬಳಿಯ ತೋಟಕ್ಕೆ ರಾತ್ರಿ 10 ಸುಮಾರಿಗೆ ನೀರು ಬಿಡಲು ಹೋಗಿದ್ದ ಇವರು ಅರ್ಧಗಂಟೆ ಕಳೆದರೂ ವಾಪಸ್ ಬಂದಿರಲಿಲ್ಲ. ಈ ಬಗ್ಗೆ ಸಂಶಯಗೊಂಡ ಮನೆಯವರು ಹುಡುಕಾಡಿದಾಗ ತೋಟದಲ್ಲಿರುವ ಕೆರೆಯಲ್ಲಿ ಇವರ ಮೃತದೇಹ ಪತ್ತೆಯಾಗಿದೆ. ಕೈಯಲ್ಲಿದ್ದ ಟಾರ್ಚ್

ಕೊಂಬಾರು: ಕೆರೆಗೆ ಬಿದ್ದು ವ್ಯಕ್ತಿ ಮೃತ್ಯು Read More »

ಕರಾವಳಿ

ವಿದ್ಯುತ್ ಬಿಲ್ ಕಟ್ಟದೆ ಸಂಪರ್ಕ ಕಡಿತಗೊಳಿಸಿದ್ದಕ್ಕಾಗಿ ಮೆಸ್ಕಾಂ ಸಿಬ್ಬಂದಿಗೆ ಹಲ್ಲೆ ► ಕಡಬ ಠಾಣೆಯೆದುರು ಜಮಾಯಿಸಿದ ಮೆಸ್ಕಾಂ ಲೈನ್ ಮ್ಯಾನ್ ಗಳು

(ನ್ಯೂಸ್ ಕಡಬ) newskadaba.com ಕಡಬ, ಜ.12. ವಿದ್ಯುತ್ ಬಿಲ್ ಬಾಕಿ ಇದ್ದುದಕ್ಕೆ ಸಂಪರ್ಕ ಕಡಿತಗೊಳಿಸಲು ತೆರಳಿದ್ದ ಮೆಸ್ಕಾಂ ಸಿಬ್ಬಂದಿಗೆ ವ್ಯಕ್ತಿಯೋರ್ವರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಲೈನ್ ಮ್ಯಾನ್ ಗಳೆಲ್ಲ ಸೇರಿ ಕಡಬ ಪೊಲೀಸ್ ಠಾಣೆ ಬಳಿ ಜಮಾವಣೆಗೊಂಡ ಘಟನೆ ಶುಕ್ರವಾರ ಸಂಜೆ ನಡೆದಿದೆ. ಕಡಬ ಸಮೀಪದ ರೆಂಜಿಲಾಡಿ ಗ್ರಾಮದ ಅಲಂಗಾಜೆ ತರ್ಪೇಲ್ ನಿವಾಸಿ ಟಿ.ವಿ.ಕುರಿಯನ್ ಎಂಬವರ ಮನೆಯ ವಿದ್ಯುತ್ ಬಿಲ್ 460 ರೂ. ಬಾಕಿ ಇದ್ದ ಕಾರಣ ಸಂಪರ್ಕ ಕಡಿತಗೊಳಿಸಿದ್ದಕ್ಕೆ ಕಡಬ ರಮೇಶ್ ಪಾಟೀಲ್ ಎಂಬವರಿಗೆ ಕುರಿಯನ್

ವಿದ್ಯುತ್ ಬಿಲ್ ಕಟ್ಟದೆ ಸಂಪರ್ಕ ಕಡಿತಗೊಳಿಸಿದ್ದಕ್ಕಾಗಿ ಮೆಸ್ಕಾಂ ಸಿಬ್ಬಂದಿಗೆ ಹಲ್ಲೆ ► ಕಡಬ ಠಾಣೆಯೆದುರು ಜಮಾಯಿಸಿದ ಮೆಸ್ಕಾಂ ಲೈನ್ ಮ್ಯಾನ್ ಗಳು Read More »

ಕರಾವಳಿ

ಉಪ್ಪಿನಂಗಡಿ: ನೇತ್ರಾವತಿ ನದಿಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ.12. ಠಾಣಾ ವ್ಯಾಪ್ತಿಯ ನೇತ್ರಾವತಿ ನದಿಯ ಇಲ್ಲಿನ ಬಿಳಿಯೂರು ಎಂಬಲ್ಲಿ ಅಪರಿಚಿತ ಮಹಿಳೆಯ ಮೃತದೇಹವೊಂದು ಶುಕ್ರವಾರದಂದು ಪತ್ತೆಯಾಗಿದೆ. ಮೃತದೇಹವು ಕೊಳೆತಿದ್ದು, ಮೃತ ಮಹಿಳೆಗೆ ಸುಮಾರು 40 ರಿಂದ 42 ವರ್ಷ ವಯಸ್ಸಾಗಿರಬಹುದೆಂದು ಅಂದಾಜಿಸಲಾಗಿದೆ. ಮೃತದೇಹದ ಬಳಿಯಲ್ಲಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪ್ರಸಾದದ ಚೀಲವೊಂದು ಪತ್ತೆಯಾಗಿದ್ದು, ಸುಬ್ರಹ್ಮಣ್ಯ ದೇವರ ದರ್ಶನ ಮಾಡಿ ತೆರಳಿರಬಹುದೆನ್ನಲಾಗಿದೆ. ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರಾ ಅಥವಾ ಯಾರಾದರೂ ಕೊಲೆ ನಡೆಸಿ ಮೃತದೇಹವನ್ನು ನದಿ ತಟದಲ್ಲಿ ಹಾಕಿರಬಹುದಾ ಎನ್ನುವ ಬಗ್ಗೆ ಪೊಲೀಸ್

ಉಪ್ಪಿನಂಗಡಿ: ನೇತ್ರಾವತಿ ನದಿಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ Read More »

ಕರಾವಳಿ

ಕಳಂಜಿಮಲೆ ಕಾಡಿನಲ್ಲಿ ಬೆಂಕಿ ಅನಾಹುತ ► ಕೋಟ್ಯಂತರ ಮೌಲ್ಯದ ಮರಗಳು ಬೆಂಕಿಗಾಹುತಿ

(ನ್ಯೂಸ್ ಕಡಬ) newskadaba.com ವಿಟ್ಲ, ಜ. 12. ಸಮೀಪದ ಕನ್ಯಾನ ಗ್ರಾಮದ ಕಳಂಜಿ ಮಲೆ ರಕ್ಷಿತಾರಣ್ಯಕ್ಕೆ ಬೆಂಕಿ ತಗುಲಿದ ಪರಿಣಾಮ ಸುಮಾರು 10 ಎಕರೆಯಷ್ಟು ಜಾಗದಲ್ಲಿದ್ದ ಬೆಲೆಬಾಳುವ ಮರಗಳು ಬೆಂಕಿಗಾಹುತಿಯಾದ ಘಟನೆ ಗುರುವಾರದಂದು ನಡೆದಿದೆ. ಮಧ್ಯಾಹ್ನ ವೇಳೆಗೆ ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಾಡ್ಗಿಚ್ಚಿನಂತೆ ಹರಡಿ ಬೆಲೆಬಾಳುವ ಮರಗಳು ಭಾಗಶಃ ಸುಟ್ಟು ಹೋಗಿವೆ‌. ಬಂಟ್ವಾಳದಿಂದ ಅಗ್ನಿಶಾಮಕ ದಳ ಆಗಮಿಸಿದ್ದರೂ ಬೆಂಕಿ ತೀವ್ರತೆ ಹೆಚ್ಚಾಗಿದ್ದರಿಂದ ತಡರಾತ್ರಿ ವರೆಗೂ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ಅಗ್ನಿಶಾಮಕದಳದ ವಾಹನದಲ್ಲಿ ನೀರು ಖಾಲಿ ಆಗಿ ಆತಂಕದ

ಕಳಂಜಿಮಲೆ ಕಾಡಿನಲ್ಲಿ ಬೆಂಕಿ ಅನಾಹುತ ► ಕೋಟ್ಯಂತರ ಮೌಲ್ಯದ ಮರಗಳು ಬೆಂಕಿಗಾಹುತಿ Read More »

ಕರಾವಳಿ
Scroll to Top