ಕರಾವಳಿ

ಸುಳ್ಯ: ಚೂರಿಯಿಂದ ಇರಿದು ಕಾಲೇಜು ವಿದ್ಯಾರ್ಥಿನಿಯ ಕೊಲೆ

(ನ್ಯೂಸ್ ಕಡಬ) newskadaba.com ಸುಳ್ಯ, ಫೆ.20. ಕಾಲೇಜು ವಿದ್ಯಾರ್ಥಿನಿಯೋರ್ವಳನ್ನು ತನ್ನ ಸಹಪಾಠಿಯೋರ್ವ ಚೂರಿಯಿಂದ ಇರಿದು ಕೊಲೆಗೈದ ದಾರುಣ ಘಟನೆ ಸುಳ್ಯದಲ್ಲಿ ಮಂಗಳವಾರದಂದು ಸಂಜೆ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾದ ಶಾಂತಿ ನಗರ ನಿವಾಸಿ, ಸುಳ್ಯ ಎನ್‌ಎಂಸಿ ಕಾಲೇಜಿನ ದ್ವಿತೀಯ ಬಿಎಸ್ಸಿ ಪದವಿ ವಿದ್ಯಾರ್ಥಿನಿ ಅಕ್ಷತಾ ಎಂದು ಗುರುತಿಸಲಾಗಿದೆ. ಕೊಲೆಗೈದಾತನನ್ನು ದ್ವಿತೀಯ ಬಿಎಸ್ಸಿ ವಿದ್ಯಾರ್ಥಿ, ನೆಲ್ಲೂರು ಕೆಮ್ರಾಜೆ ನಿವಾಸಿ ಚಂದ್ರಶೇಖರ್ ಎಂಬವರ ಪುತ್ರ ಕಾರ್ತಿಕ್ ಕೊಲೆ ಎಂದು ಗುರುತಿಸಲಾಗಿದ್ದು, ಅಕ್ಷತಾ ಎಂದಿನಂತೆ ಇಂದು ಸಂಜೆ ಕಾಲೇಜಿನಿಂದ […]

ಸುಳ್ಯ: ಚೂರಿಯಿಂದ ಇರಿದು ಕಾಲೇಜು ವಿದ್ಯಾರ್ಥಿನಿಯ ಕೊಲೆ Read More »

ಕರಾವಳಿ

ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯತ್ ಚುನಾವಣೆ ► 34 ಸ್ಥಾನಗಳಲ್ಲಿ 27 ರಲ್ಲಿ ಕಾಂಗ್ರೆಸ್ ಭರ್ಜರಿ ಜಯ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಫೆ.20. ತಾಲೂಕಿನ ಪುದು ಗ್ರಾಮ ಪಂಚಾಯತ್‌ಗೆ ರವಿವಾರದಂದು ನಡೆದ ಚುನಾವಣೆಯ ಮತ ಎಣಿಕೆಯು ಪೂರ್ಣಗೊಂಡಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸುವುದರೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. 34 ಸ್ಥಾನಗಳ ಪೈಕಿ 27 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಗೆಲುವು ಸಾಧಿಸಿದ್ದು, ಬಿಜೆಪಿ ಆರು ಸ್ಥಾನಗಳಲ್ಲಿ ಜಯಿಸಿದ್ದರೆ, ಎಸ್‌ಡಿಪಿಐ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಪುದು ಗ್ರಾ.ಪಂ.ನ 10 ವಾರ್ಡ್‌ಗಳ 34 ಸ್ಥಾನಗಳಿಗೆ ರವಿವಾರ ಚುನಾವಣೆ ನಡೆದಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಮತ್ತು ಎಸ್‌ಡಿಪಿಐ

ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯತ್ ಚುನಾವಣೆ ► 34 ಸ್ಥಾನಗಳಲ್ಲಿ 27 ರಲ್ಲಿ ಕಾಂಗ್ರೆಸ್ ಭರ್ಜರಿ ಜಯ Read More »

ಕರಾವಳಿ

ಮುಂದಿನ ಬಾರಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ► ಕುಕ್ಕೇ ಸುಬ್ರಹ್ಮಣ್ಯದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಉದ್ಘೋಷ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಫೆ.20. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಅಧಿಕಾರಕ್ಕೆ ಬರಲಿದ್ದು, ಕಾಂಗ್ರೆಸ್ ಮುಕ್ತ ಭಾರತದ ಕನಸು ನನಸಾಗಲಿದೆ ಎಂದು ಬಿಜೆಪಿ ರಾಷ್ಟೀಯ ಅಧ್ಯಕ್ಷ ಅಮಿತ್ ಶಾ ಅವರು ಭವಿಷ್ಯ ನುಡಿದಿದ್ದಾರೆ. ವಿಧಾನಸಭಾ ಚುನಾವಣೆಗೆ ಬಿಜೆಪಿಯಲ್ಲಿ ಚೈತನ್ಯ ತುಂಬಲು ದಕ್ಷಿಣ ಭಾರತದ ಪ್ರಮುಖ ದೇವಸ್ಥಾನ ಕುಕ್ಕೇ ಸುಬ್ರಹ್ಮಣ್ಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ ನಂತರ ಸ್ವಾಮೀಜಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ಸಂದರ್ಭ ಸ್ವಾಮೀಜಿಯವರು ಅಮಿತ್ ಶಾ ಅವರನ್ನು ಶಾಲು ಹೊದಿಸಿ ಗೌರವಿಸಿದರು.

ಮುಂದಿನ ಬಾರಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ► ಕುಕ್ಕೇ ಸುಬ್ರಹ್ಮಣ್ಯದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಉದ್ಘೋಷ Read More »

ಕರಾವಳಿ

ಕೆಮ್ಮಾರ: ಬೈಕ್ ಗಳ ಮಧ್ಯೆ ಢಿಕ್ಕಿ ► ಸವಾರರಿಬ್ಬರು ಗಂಭೀರ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಫೆ.19. ಬೈಕ್ ಗಳೆರಡರ ಮಧ್ಯೆ ಢಿಕ್ಕಿ ಸಂಭವಿಸಿ ಇಬ್ಬರು ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೆಮ್ಮಾರದಲ್ಲಿ ಸೋಮವಾರ ಸಂಜೆ ನಡೆದಿದೆ. ಉಪ್ಪಿನಂಗಡಿಯಿಂದ ಕಡಬ ಕಡೆಗೆ ತೆರಳುತ್ತಿದ್ದ ಬೈಕ್ ಹಾಗೂ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಬೈಕ್ ನಡುವೆ ಢಿಕ್ಕಿ ಉಂಟಾದ‌ ಪರಿಣಾಮ ಸವಾರರಿಬ್ಬರು ಗಾಯಗೊಂಡಿದ್ದು, ಗಾಯಾಳುಗಳನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಬಗ್ಗೆಗಿನ ವಿವರ ಇನ್ನಷ್ಟೇ ತಿಳಿದುಬರಬೇಕಿದೆ.

ಕೆಮ್ಮಾರ: ಬೈಕ್ ಗಳ ಮಧ್ಯೆ ಢಿಕ್ಕಿ ► ಸವಾರರಿಬ್ಬರು ಗಂಭೀರ Read More »

ಕರಾವಳಿ

ಕುಕ್ಕೆಗೆ ಆಗಮಿಸಲಿರುವ ಅಮಿತ್ ಷಾಗೆ ನಕ್ಸಲರ ಕಾಟ…? ► ಸುಬ್ರಹ್ಮಣ್ಯದಲ್ಲಿ ನಕ್ಸಲ್ ನಿಗ್ರಹ ದಳದಿಂದ ಕೂಂಬಿಂಗ್ ಆರಂಭ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಫೆ.19. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಸುತ್ತಮುತ್ತ ಭಾರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಇತ್ತೀಚೆಗೆ ಸುಬ್ರಹ್ಮಣ್ಯ ಪರಿಸರದಲ್ಲಿ ನಕ್ಸಲ್ ಚಲನವಲನ ಕಂಡು ಬಂದಿದ್ದರಿಂದ ಸುಬ್ರಹ್ಮಣ್ಯ ಸುತ್ತಮುತ್ತಲಿನ ದಟ್ಟಾರಣ್ಯದಲ್ಲಿ ನಕ್ಸಲ್ ನಿಗ್ರಹ ದಳದಿಂದ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ಶಿರಾಡಿ, ಅಡ್ಡಹೊಳೆ ಹಾಗೂ ಸುಳ್ಯ ಮಡಿಕೇರಿ ಭಾಗದಲ್ಲಿ ನಕ್ಸಲ್ ಚಟುವಟಿಕೆ ಕಂಡು ಬಂದ ಹಿನ್ನಲೆಯಲ್ಲಿ ಕಟ್ಟೆಚ್ಚರ ವಹಿಸಿರುವ

ಕುಕ್ಕೆಗೆ ಆಗಮಿಸಲಿರುವ ಅಮಿತ್ ಷಾಗೆ ನಕ್ಸಲರ ಕಾಟ…? ► ಸುಬ್ರಹ್ಮಣ್ಯದಲ್ಲಿ ನಕ್ಸಲ್ ನಿಗ್ರಹ ದಳದಿಂದ ಕೂಂಬಿಂಗ್ ಆರಂಭ Read More »

ಕರಾವಳಿ

ಮಡಂತ್ಯಾರು: ಮಣ್ಣು ಅಗೆಯುತ್ತಿದ್ದಾಗ ಗುಡ್ಡ ಕುಸಿದು ಹೂತು ಹೋದ ಹಿಟಾಚಿ ► ಮಣ್ಣಿನೊಳಗೆ ಬಾಕಿಯಾದ ಆಪರೇಟರ್

(ನ್ಯೂಸ್ ಕಡಬ) newskadaba.com ಮಡಂತ್ಯಾರು, ಫೆ.19. ಮಣ್ಣು ಅಗೆಯುತ್ತಿದ್ದ ಹಿಟಾಚಿ ಮೇಲೆ ಗುಡ್ಡ ಕುಸಿದು ಬಿದ್ದ ಪರಿಣಾಮ ಹಿಟಾಚಿ ಆಪರೇಟರ್ ಮಣ್ಣಿನೊಳಗೆ ಕೆಲಕಾಲ ಬಾಕಿಯಾದ ಘಟನೆ ಮಡಂತ್ಯಾರಿನಲ್ಲಿ ಸೋಮವಾರದಂದು ನಡೆದಿದೆ. ಘಟನೆಯಲ್ಲಿ ಹಿಟಾಚಿ ಆಪರೇಟರ್ ದೀಪಕ್ (21) ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಹಿಟಾಚಿ ಕೆಲಕಾಲ ಮಣ್ಣಿನೊಳಗೆ ಸಂಪೂರ್ಣ ಹೂತು‌ಹೋಗಿತ್ತು. ಬಳಿಕ ಸ್ಥಳೀಯರು ಆಗಮಿಸಿ ಮಣ್ಣನ್ನು ತೆರವುಗೊಳಿಸಿ ಆಪರೇಟರ್ ದೀಪಕ್ ನನ್ನು ಹೊರತೆಗೆದರು.

ಮಡಂತ್ಯಾರು: ಮಣ್ಣು ಅಗೆಯುತ್ತಿದ್ದಾಗ ಗುಡ್ಡ ಕುಸಿದು ಹೂತು ಹೋದ ಹಿಟಾಚಿ ► ಮಣ್ಣಿನೊಳಗೆ ಬಾಕಿಯಾದ ಆಪರೇಟರ್ Read More »

ಕರಾವಳಿ

ಇಂದು ಕುಕ್ಕೇ ಸುಬ್ರಹ್ಮಣ್ಯಕ್ಕೆ ಬಿಜೆಪಿ ಮಾಸ್ಟರ್ ಮೈಂಡ್ ಅಮಿತ್ ಷಾ ಆಗಮನ ► ರಾಷ್ಟ್ರಾಧ್ಯಕ್ಷರ ಸ್ವಾಗತಕ್ಕೆ ಭರದಿಂದ ಸಿದ್ಧಗೊಂಡಿದೆ ಪುಣ್ಯಕ್ಷೇತ್ರ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಫೆ.19. ದಕ್ಷಿಣ ಭಾರತದ ಪುಣ್ಯ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಇಂದು ರಾತ್ರಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಆಗಮಿಸಲಿದ್ದು, ಅಧ್ಯಕ್ಷರ ಸ್ವಾಗತಕ್ಕೆ ಕುಕ್ಕೆಯಲ್ಲಿ ಭರದ ಸಿದ್ಧತೆ ನಡೆಸಲಾಗಿದೆ. ಕಳೆದ ಕೆಲವು ದಿನಗಳಿಂದ ಕಾರ್ಯಕರ್ತರು ಅಹರ್ನಿಶಿ ದುಡಿದು ನಗರಾಲಂಕಾರ ಮಾಡಿದ್ದಾರೆ. ಅಧ್ಯಕ್ಷರ ಭೇಟಿ ಹಿನ್ನೆಲೆಯಲ್ಲಿ ಕುಕ್ಕೆ ಕ್ಷೇತ್ರವು ಕೇಸರಿಮಯವಾಗಿದೆ. ಬಿಜೆಪಿ ಧ್ವಜ ಮತ್ತು ಬೃಹತ್ ಕಟೌಟ್ಗಳ ಮೂಲಕ ಸುಬ್ರಹ್ಮಣ್ಯವನ್ನು ಕಾರ್ಯಕರ್ತರು ಅಲಂಕಾರ ಮಾಡಿದ್ದಾರೆ. ಒಟ್ಟಾಗಿ ಅಮಿತ್ ಷಾ ಅವರ ಸ್ವಾಗತಕ್ಕೆ ಕಾರ್ಯಕರ್ತರು ಆತುರದಿಂದ

ಇಂದು ಕುಕ್ಕೇ ಸುಬ್ರಹ್ಮಣ್ಯಕ್ಕೆ ಬಿಜೆಪಿ ಮಾಸ್ಟರ್ ಮೈಂಡ್ ಅಮಿತ್ ಷಾ ಆಗಮನ ► ರಾಷ್ಟ್ರಾಧ್ಯಕ್ಷರ ಸ್ವಾಗತಕ್ಕೆ ಭರದಿಂದ ಸಿದ್ಧಗೊಂಡಿದೆ ಪುಣ್ಯಕ್ಷೇತ್ರ Read More »

ಕರಾವಳಿ

ಗೋಳಿತೊಟ್ಟು: ಕಾರು – ಟಿಪ್ಪರ್ ಢಿಕ್ಕಿ ► ಇಬ್ಬರು ಗಂಭೀರ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಫೆ.19. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗೋಳಿತೊಟ್ಟು ಎಂಬಲ್ಲಿ ಕಾರು ಹಾಗೆಯೇ ಟಿಪ್ಪರ್ ನಡುವೆ ಢಿಕ್ಕಿ ಸಂಭವಿಸಿ ಓರ್ವ ಗಂಭೀರ ಗಾಯಗೊಂಡ ಘಟನೆ ಸೋಮವಾರದಂದು ನಡೆದಿದೆ. ಗಾಯಾಳುವನ್ನು ಕಾರು ಚಾಲಕ ಸ್ಥಳೀಯ ನಿವಾಸಿ ಅಣ್ಣಿ ಗೌಡ ಎಂಬವರ ಪುತ್ರ ಯಶೋಧರ ಗೌಡ ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಪ್ಪಿನಂಗಡಿಯಿಂದ ನೆಲೆಯಾಗಿದೆ ಕಡೆಗೆ ತೆರಳುತ್ತಿದ್ದ ಮರಳು ಸಾಗಾಟದ ಟಿಪ್ಪರ್ ವಿರುದ್ಧ ದಿಕ್ಕಿನಿಂದ ಸಾಗಿ ಉಪ್ಪಿನಂಗಡಿ

ಗೋಳಿತೊಟ್ಟು: ಕಾರು – ಟಿಪ್ಪರ್ ಢಿಕ್ಕಿ ► ಇಬ್ಬರು ಗಂಭೀರ Read More »

ಕರಾವಳಿ

ಇನ್ನೋವಾ ಕಾರಿನಲ್ಲಿ ಬಂದು ಸೋಲಾರ್ ಬ್ಯಾಟರಿಗಳನ್ನು ದೋಚುವ ಹೈಟೆಕ್ ಕಳ್ಳರು ► ಪೊಲೀಸರಿಗೆ‌ ತಲೆನೋವಾಗಿರುವ ಕಡಬ ಪರಿಸರದ ಸಣ್ಣಪುಟ್ಟ ಕಳ್ಳತನ ಪ್ರಕರಣ

(ನ್ಯೂಸ್ ಕಡಬ) newskadaba.com ಕಡಬ, ಫೆ.18. ಪರಿಸರದಲ್ಲಿ ಸಣ್ಣಪುಟ್ಟ ಕಳ್ಳತನ ನಡೆಸುವ ಪುಡಿಗಳ್ಳರ ಕಾಟ ದಿನೇ ದಿನೇ ಹೆಚ್ಚುತ್ತಿದ್ದು, ಇದೀಗ ಸೋಲಾರ್ ಬ್ಯಾಟರಿಯನ್ನು ದೋಚುತ್ತಿರುವ ಹೈಟೆಕ್ ತಂಡವೊಂದು ಕಡಬ ಪರಿಸರದಲ್ಲಿ ಕಾರ್ಯಾಚರಿಸುತ್ತಿದೆ. ಕಡಬ ತಾಲೂಕಿನ ಪೆರಾಬೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುರಚಡವು, ಎರ್ಮಾಳ, ಕುಪ್ಲಾಜೆ, ಮಾಯಿಲ್ಗ ಸೇರಿದಂತೆ ಇನ್ನೆರಡು ಕಡೆಗಳಲ್ಲಿ ಹಾಗೂ ಕುಟ್ರುಪ್ಪಾಡಿ ಗ್ರಾಮದ ಪೆರ್ಲದಕೆರೆ ಎಂಬಲ್ಲಿ ಸರಕಾರದಿಂದ ಅಳವಡಿಸಲಾದ ಸೋಲಾರ್ ದೀಪದ ಬ್ಯಾಟರಿಗಳನ್ನು ಫೆಬ್ರವರಿ 16 ರಂದು ರಾತ್ರಿ ಕಳ್ಳರು ದೋಚಿದ್ದು, ಇನ್ನೋವಾ ವಾಹನದಲ್ಲಿ ಬಂದಂತಹ

ಇನ್ನೋವಾ ಕಾರಿನಲ್ಲಿ ಬಂದು ಸೋಲಾರ್ ಬ್ಯಾಟರಿಗಳನ್ನು ದೋಚುವ ಹೈಟೆಕ್ ಕಳ್ಳರು ► ಪೊಲೀಸರಿಗೆ‌ ತಲೆನೋವಾಗಿರುವ ಕಡಬ ಪರಿಸರದ ಸಣ್ಣಪುಟ್ಟ ಕಳ್ಳತನ ಪ್ರಕರಣ Read More »

ಕರಾವಳಿ

ಕೇಂದ್ರದ ಅಡಿಕೆ‌ ನಿಷೇಧ ಹೇಳಿಕೆಯನ್ನು ಕರಾವಳಿಗೆ ಆಗಮಿಸುತ್ತಿರುವ ಅಮಿತ್ ಷಾರಲ್ಲಿ ಪಕ್ಷ ಭೇದ ಮರೆತು ಪ್ರಶ್ನಿಸಬೇಕಿದೆ: ವೆಂಕಪ್ಪ ಗೌಡ ► ಕಡಬದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಪಕೋಡಾ ತಯಾರಿ ಅಣಕು ಪ್ರದರ್ಶಿಸಿ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಫೆ.18. ಕೇಂದ್ರದ ಮೋದಿ ಸರಕಾರದ ಬೆಲೆಯೇರಿಕೆ ವಿರೋಧಿಸಿ ಹಾಗೂ ಉದ್ಯೋಗ ಸೃಷ್ಟಿಸುವಲ್ಲಿ ವಿಫಲರಾಗಿದ್ದಾರೆಂದು ಆರೋಪಿಸಿ ಕಡಬ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ಭಾನುವಾರ ಅಪರಾಹ್ನ ಕಡಬ ಪೇಟೆಯಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಪ್ಪ ಗೌಡ ಮಾತನಾಡಿ, ಕೇಂದ್ರ ಆರೋಗ್ಯ ಸಚಿವೆ ಶ್ರೀಮತಿ ಅನುಪ್ರಿಯಾ ಪಟೇಲ್ ರವರು ಅಡಿಕೆ ಸೇವನೆಯು ಕ್ಯಾನ್ಸರ್ ನಂತಹ ಮಾರಕ ರೋಗಗಳನ್ನು ಉಂಟುಮಾಡುತ್ತದೆ ಎಂದು ಹೇಳಿಕೆ ನೀಡಿದ್ದಾರೆ.ಅದರನ್ವಯ ಅಡಿಕೆ ಹಾಗೂ

ಕೇಂದ್ರದ ಅಡಿಕೆ‌ ನಿಷೇಧ ಹೇಳಿಕೆಯನ್ನು ಕರಾವಳಿಗೆ ಆಗಮಿಸುತ್ತಿರುವ ಅಮಿತ್ ಷಾರಲ್ಲಿ ಪಕ್ಷ ಭೇದ ಮರೆತು ಪ್ರಶ್ನಿಸಬೇಕಿದೆ: ವೆಂಕಪ್ಪ ಗೌಡ ► ಕಡಬದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಪಕೋಡಾ ತಯಾರಿ ಅಣಕು ಪ್ರದರ್ಶಿಸಿ ಪ್ರತಿಭಟನೆ Read More »

ಕರಾವಳಿ
Scroll to Top