ಕರಾವಳಿ

ಅಕ್ರಮ ಜಿಂಕೆ ಚರ್ಮ ಸಾಗಾಟ ► ಬೈಕ್ ಸಹಿತ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.18. ಮಂಗಳೂರು ಅರಣ್ಯ ಸಂಚಾರಿ ದಳದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರು ಉಡುಪಿ ತಾಲೂಕಿನ ಸಾಸ್ತಾನ ಟೋಲ್ ಗೇಟ್ ನಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ಅಕ್ರಮ ಸಾಗಾಟ ಮಾಡುತ್ತಿದ್ದ ಜಿಂಕೆ ಚರ್ಮವನ್ನು ವಶಕ್ಕೆ ಪಡೆದು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ಸಾಗರದ ಮೋಹನ ಕುಮಾರ (22) ಮತ್ತು ಗಂಗೊಳ್ಳಿಯ ವಿಕ್ರಮ (24) ಎಂದು ಗುರುತಿಸಲಾಗಿದೆ. ಕುಂದಾಪುರ ಕಡೆಯಿಂದ ಬರುತ್ತಿದ್ದ ಬೈಕಿನಲ್ಲಿ ಪ್ಲಾಸ್ಟಿಕ್ ಗೋಣಿ ಚೀಲದಲ್ಲಿ ಒಂದು ಜಿಂಕೆ ಚರ್ಮವನ್ನು ಮಾರಾಟಕ್ಕಾಗಿ ಸಾಗಾಟ ಮಾಡುತ್ತಿದು […]

ಅಕ್ರಮ ಜಿಂಕೆ ಚರ್ಮ ಸಾಗಾಟ ► ಬೈಕ್ ಸಹಿತ ಇಬ್ಬರ ಬಂಧನ Read More »

ಕರಾವಳಿ

ಚುನಾವಣೆಗೆ ಮೊದಲೇ ಪೊಲೀಸ್ ಇಲಾಖೆಯಲ್ಲಿ ಭರ್ಜರಿ ಸರ್ಜರಿ ► ಪಶ್ಚಿಮ ವಲಯ ಹಾಗೂ ಮಂಗಳೂರು ನಗರದ 117 ಸಬ್ ಇನ್ಸ್‌ಪೆಕ್ಟರ್ ಗಳ ವರ್ಗಾವಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.18. ರಾಜ್ಯ ವಿಧಾನ ಸಭಾ ಚುನಾವಣೆ 2018 ರ ವರ್ಗಾವಣಾ ಮಾರ್ಗಸೂಚಿಯನುಸಾರ ಪಶ್ಚಿಮ ವಲಯ ಹಾಗೂ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ 117 ಸಬ್ ಇನ್ಸ್‌ಪೆಕ್ಟರ್ ರವರನ್ನು ವಿವಿಧೆಡೆ ವರ್ಗಾವಣೆ ಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.   ಕುಕ್ಕೇ ಸುಬ್ರಹ್ಮಣ್ಯದಿಂದ ಹಿಡಿದು ಮಂಗಳೂರು ನಗರದವರೆಗಿನ ಕರಾವಳಿಯಲ್ಲಿನ ಹೆಚ್ಚಿನ ಎಲ್ಲಾ ಪೊಲೀಸ್ ಠಾಣೆಗಳ ಸಬ್ ಇನ್ಸ್‌ಪೆಕ್ಟರ್ ಗಳ ಮತ್ತು ಪಶ್ಚಿಮ ವಲಯದ ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಸಬ್ ಇನ್ಸ್‌ಪೆಕ್ಟರ್ ಗಳನ್ನೂ ಸ್ಥಾನಪಲ್ಲಟಗೊಳಿಸಲಾಗಿದ್ದು, ಮುಂದಿನ

ಚುನಾವಣೆಗೆ ಮೊದಲೇ ಪೊಲೀಸ್ ಇಲಾಖೆಯಲ್ಲಿ ಭರ್ಜರಿ ಸರ್ಜರಿ ► ಪಶ್ಚಿಮ ವಲಯ ಹಾಗೂ ಮಂಗಳೂರು ನಗರದ 117 ಸಬ್ ಇನ್ಸ್‌ಪೆಕ್ಟರ್ ಗಳ ವರ್ಗಾವಣೆ Read More »

ಕರಾವಳಿ

ಶಿವರಾತ್ರಿಯಂದು ಕುಮಾರಧಾರಾ ನದಿಯಲ್ಲಿ ಸ್ನಾನಕ್ಕಿಳಿದ ಬಾಲಕರ ರಕ್ಷಣೆಯ ವಿಚಾರ ► ಕೆಲವರು ಪ್ರಚಾರ ಗಿಟ್ಟಿಸಲು ವದಂತಿ ಹಬ್ಬಿಸಿದ್ದಾರೆ: ಬಾಲಕರಿಂದ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಕಡಬ, ಫೆ.18. ಕಳೆದ ಫೆಬ್ರವರಿ 13 ರಂದು ಕುಂತೂರು ಪರಿಸರದ ಎಂಟುಮಂದಿ ಬಾಲಕರನ್ನು ನೀರಿನಿಂದ ರಕ್ಷಿಸಲಾಗಿದೆ ಎಂಬ ವರದಿಯನ್ನು ಕೆಲವು ದಿನಪತ್ರಿಕೆಗಳು ಹಾಗೂ ವೆಬ್‌ಸೈಟ್ ಗಳು ವರದಿ ಮಾಡಿದ್ದು, ಇದು ಸತ್ಯಕ್ಕೆ ದೂರವಾದ ವಿಚಾರ ಎಂದು ವಿದ್ಯಾರ್ಥಿಗಳು ಇದೀಗ ಸ್ಪಷ್ಟೀಕರಣ ನೀಡಿದ್ದಾರೆ. 8 ಮಂದಿ ಗೆಳೆಯರು ಶಿವರಾತ್ರಿ ಪ್ರಯುಕ್ತ ರಜೆ ಇದ್ದ ಕಾರಣ ಉರುಂಬಿ ಕುಮಾರಧಾರಾ ನದಿ ಪರಿಸರಕ್ಕೆ ತೆರಳಿದ್ದು ಮೊಟ್ಟೆ ಬೇಯಿಸಿ ತಿಂದು ಬರುವುದೆಂದು ತೀರ್ಮಾನಿಸಿದ್ದೆವು. ಅಲ್ಲಿನ ಸ್ಥಳೀಯರಲ್ಲಿ ಕೆಲವು ಮಾಹಿತಿಯನ್ನು

ಶಿವರಾತ್ರಿಯಂದು ಕುಮಾರಧಾರಾ ನದಿಯಲ್ಲಿ ಸ್ನಾನಕ್ಕಿಳಿದ ಬಾಲಕರ ರಕ್ಷಣೆಯ ವಿಚಾರ ► ಕೆಲವರು ಪ್ರಚಾರ ಗಿಟ್ಟಿಸಲು ವದಂತಿ ಹಬ್ಬಿಸಿದ್ದಾರೆ: ಬಾಲಕರಿಂದ ಸ್ಪಷ್ಟನೆ Read More »

ಕರಾವಳಿ

ಗೋಳಿತ್ತಡಿ – ಏಣಿತ್ತಡ್ಕ ರಸ್ತೆ ಕಾಮಗಾರಿಯ ಅವ್ಯವಸ್ಥೆ ► ಸಾರ್ವಜನಿಕರಿಂದ ಪ್ರತಿಭಟನೆಗೆ ಸಿದ್ಧತೆ

(ನ್ಯೂಸ್ ಕಡಬ) newskadaba.com ಕಡಬ, ಫೆ.18. ತಾಲೂಕಿನ ರಾಮಕುಂಜ ಗ್ರಾಮದ ಗೋಳಿತ್ತಡಿಯಿಂದ ಕೊಯಿಲ ಗ್ರಾಮದ ಏಣಿತಡ್ಕಕ್ಕೆ ಸಾಗುವ ರಸ್ತೆಯಲ್ಲಿ ಗೋಳಿತ್ತಡಿಯಿಂದ ನೆಲ್ಯೊಟ್ಟು ತನಕ ರಸ್ತೆ ಅಭಿವೃದ್ಧಿ ಕಾಮಗಾರಿ ನಿಧಾನ ಗತಿಯಲ್ಲಿ ಸಾಗುತ್ತಿದ್ದು ಅಸಮರ್ಪಕ ನಿರ್ವಹಣೆಯಿಂದಾಗಿ ಸಾರ್ವಜನಿಕರು ದಿನಾ ಪರದಾಡುವಂತಾಗಿ ಅಕ್ರೋಶ ವ್ಯಕ್ತಪಡುತ್ತಿದ್ದಾರೆ. ಕಳೆದ ಎರಡು ತಿಂಗಳಿಂದ ಕಾಮಗಾರಿ ನಡೆಯುತ್ತಿದ್ದು, ಜಲ್ಲಿ ಹಾಕಿ ವಾಹನ ಸಂಚಾರ ಸೇರಿದಂತೆ ರಸ್ತೆ ಬದಿಯಿಂದ ನಡೆದಾಡುವ ಜನತೆ ತಮ್ಮ ಜೀವ ಕ್ಯಯಲ್ಲಿ  ಹಿಡಿದು ಹೋಗುವಂತಾಗಿದೆ. ರಾಜ್ಯ ಸರಕಾರದ ಸುಮಾರು 49. ಲಕ್ಷ ರೂ

ಗೋಳಿತ್ತಡಿ – ಏಣಿತ್ತಡ್ಕ ರಸ್ತೆ ಕಾಮಗಾರಿಯ ಅವ್ಯವಸ್ಥೆ ► ಸಾರ್ವಜನಿಕರಿಂದ ಪ್ರತಿಭಟನೆಗೆ ಸಿದ್ಧತೆ Read More »

ಕರಾವಳಿ

ನಾಳೆಯಿಂದ (ಫೆ.18 ರಿಂದ 22) ನೆಕ್ಕಿತ್ತಡ್ಕ ಮಖಾಂ ಉರೂಸ್

(ನ್ಯೂಸ್ ಕಡಬ) newskadaba.com ಕಡಬ, ಫೆ.17. ಮರ್ಧಾಳ ತಖ್ವಿಯತುಲ್ ಇಸ್ಲಾಂ ಜಮಾಅತ್ ಕಮಿಟಿಯ ಅಧೀನದಲ್ಲಿರುವ ವತಿಯಿಂದ ನೆಕ್ಕಿತ್ತಡ್ಕ ಮಖಾಂ ಉರೂಸ್ ಸಮಾರಂಭವು 2018 ಫೆಬ್ರವರಿ 18 ಭಾನುವಾರದಂದು ಆರಂಭಗೊಂಡು ಫೆಬ್ರವರಿ 22 ಗುರುವಾರದವರೆಗೆ ನಡೆಯಲಿದೆ. ಫೆ.18ರಂದು ನೆಕ್ಕಿತ್ತಡ್ಕ ಉರೂಸ್ ಸಮಿತಿ ಅಧ್ಯಕ್ಷ ಜನಾಬ್ ಅಬ್ದುಲ್ ರಹಿಮಾನ್ ಹಾಜಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಮರ್ಧಾಳ ಜೆ.ಎಂ ಅಧ್ಯಕ್ಷ ಸಯ್ಯೀದ್ ಕೆ.ಎಸ್ ಹಮೀದ್ ತಂಙಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಗೇರುಕಟ್ಟೆಯ ಅಸ್ಸಯ್ಯದ್ ಸಿಟಿಎಂ ಉಮರ್ ಅಸ್ಸಖಾಫ್ ತಂಙಳ್ ದುಃಅ ಆಶೀರ್ವಚನ ನೀಡಲಿದ್ದಾರೆ. ಮರ್ಧಾಳ

ನಾಳೆಯಿಂದ (ಫೆ.18 ರಿಂದ 22) ನೆಕ್ಕಿತ್ತಡ್ಕ ಮಖಾಂ ಉರೂಸ್ Read More »

ಕರಾವಳಿ

ಬಲ್ಯ: ಕಾಯಂಕುಳಂ ಕೊಚ್ಚುನ್ನಿ ಚಿತ್ರೀಕರಣ ತಂಡಕ್ಕೆ ಎದುರಾಯ್ತು ಸಂಕಷ್ಟ ► ಕಡಬ ಪೊಲೀಸ್ ಠಾಣೆಯ ಮೆಟ್ಟಿಲೇರಿತು ಪ್ರಕರಣ

(ನ್ಯೂಸ್ ಕಡಬ) newskadaba.com ಕಡಬ, ಫೆ.17. ಕಳೆದ ಕೆಲವು ದಿನಗಳಿಂದ ಬಲ್ಯ ಗ್ರಾಮದ ಪರಂಕಾಜೆ ಎಂಬಲ್ಲಿ ನಡೆಯುತ್ತಿರುವ ಚಿತ್ರೀಕರಣ ತಂಡಕ್ಕೆ ಇದೀಗ ಸಂಕಷ್ಟ ಎದುರಾಗಿದ್ದು, ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಬಲ್ಯ ಗ್ರಾಮದ ವ್ಯಾಪ್ತಿಯ ಪರಂಕಾಜೆ ಎಂಬಲ್ಲಿ ಪಂಚಾಯತ್ ನಿಂದ ಯಾವುದೇ ಪರವಾನಿಗೆ ಪಡೆಯದೆ ಚಿತ್ರೀಕರಣ ಮಾಡುತ್ತಿರುವುದಲ್ಲದೆ, ಬೀದಿಯಲ್ಲಿ ಘನ ತ್ಯಾಜ್ಯ ಮತ್ತು ಪ್ಲಾಸ್ಟಿಕ್ ವಸ್ತುಗಳನ್ನು ಎಸೆದಿದ್ದಾರೆ ಎಂದು ಆರೋಪಿಸಿ ಚೆನ್ನೈನ ಗೋಕುಲಂ ಮೂವೀಸ್ ನ ಪ್ರೊಡಕ್ಷನ್ ಮ್ಯಾನೇಜರ್ ಟೋನಿ ಟೋಮ್ ವಿರುದ್ಧ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್

ಬಲ್ಯ: ಕಾಯಂಕುಳಂ ಕೊಚ್ಚುನ್ನಿ ಚಿತ್ರೀಕರಣ ತಂಡಕ್ಕೆ ಎದುರಾಯ್ತು ಸಂಕಷ್ಟ ► ಕಡಬ ಪೊಲೀಸ್ ಠಾಣೆಯ ಮೆಟ್ಟಿಲೇರಿತು ಪ್ರಕರಣ Read More »

ಕರಾವಳಿ

ನೆಲ್ಯಾಡಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳು ಅಂದರ್ ► ದೂರು ದಾಖಲಾಗಿ 12 ಗಂಟೆಗಳೊಳಗೆ ಆರೋಪಿಗಳನ್ನು ಬಂಧಿಸಿದ ಉಪ್ಪಿನಂಗಡಿ ಪೊಲೀಸರು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಫೆ.17. ಯುವತಿಯೋರ್ವಳನ್ನು ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಾಗಿ 12 ಗಂಟೆಗಳೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಬಂಧಿತ ಆರೋಪಿಗಳನ್ನು ಕೊಕ್ಕಡ ಗ್ರಾಮದವರಾದ ಧನಂಜಯ (26) ಹಾಗೂ ಕುಶಾಲಪ್ಪ (24) ಎಂದು ಗುರುತಿಸಲಾಗಿದೆ. ಬೆಟ್ಟಂಪಾಡಿಯ ಯುವತಿಯೋರ್ವಳು ತನ್ನ ಅಕ್ಕನ ಮನೆಯಾದ ದೇಲಂಪಾಡಿಯಲ್ಲಿದ್ದ ಸಂದರ್ಭ ಫೆ.15ರಂದು ರಾತ್ರಿ 10ರ ಸುಮಾರಿಗೆ ಧನಂಜಯ ಎಂಬಾತ ಕುಶಾಲಪ್ಪನೊಂದಿಗೆ ಅಲ್ಲಿಗೆ

ನೆಲ್ಯಾಡಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳು ಅಂದರ್ ► ದೂರು ದಾಖಲಾಗಿ 12 ಗಂಟೆಗಳೊಳಗೆ ಆರೋಪಿಗಳನ್ನು ಬಂಧಿಸಿದ ಉಪ್ಪಿನಂಗಡಿ ಪೊಲೀಸರು Read More »

ಕರಾವಳಿ

ಕಡಬ ಗ್ರಾಮ ಪಂಚಾಯತ್ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೆ ► ಪೂರಕ ಅಂಶಗಳ ಬಗ್ಗೆ ವರದಿ ಕೇಳಿದ ಸರಕಾರ

(ನ್ಯೂಸ್ ಕಡಬ) newskadaba.com ಕಡಬ, ಫೆ.17. ಹೊಸ ತಾಲೂಕುಗಳ ಕೇಂದ್ರ ಸ್ಥಾನದಲ್ಲಿರುವ ಪಂಚಾಯತ್‌ ಗಳನ್ನು ಪಟ್ಟಣ ಪಂಚಾಯತ್‌ ಆಗಿ ಉನ್ನತೀಕರಿಸಲು ಸರಕಾರ ಮುಂದಾಗಿದ್ದು, ಇದೀಗ ಸರಕಾರವೇ ಕಡಬ ಗ್ರಾ.ಪಂ. ಅನ್ನು ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೇರಿಸಲು ಪಂಚಾಯತ್‌ ನಿಂದ ಪೂರಕ ಅಂಶಗಳ ವರದಿ ಕೇಳಿದೆ. ಪ್ರಸ್ತುತ ಗ್ರಾಮ ಪಂಚಾಯತ್‌ ಆಗಿರುವ ಕಡಬವನ್ನು ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೇರಿಸಬೇಕೆಂಬ ಹಲವು ವರ್ಷಗಳ ಬೇಡಿಕೆಗೆ ಇದೀಗ ಮತ್ತಷ್ಟು ಬಲ ಬಂದಂತಾಗಿದೆ. ರಾಜ್ಯ ಪೌರಾಡಳಿತ ನಿರ್ದೇಶನಾಲಯದ ಸೂಚನೆಯಂತೆ ಈ ಪ್ರಸ್ತಾವನೆ ಸಲ್ಲಿಸಲಾಗಿದೆ.

ಕಡಬ ಗ್ರಾಮ ಪಂಚಾಯತ್ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೆ ► ಪೂರಕ ಅಂಶಗಳ ಬಗ್ಗೆ ವರದಿ ಕೇಳಿದ ಸರಕಾರ Read More »

ಕರಾವಳಿ

ಬಂಗ್ಲೆಗುಡ್ಡೆ: ದರೋಡೆ ಪ್ರಕರಣ ಬೇಧಿಸಿದ ಪೊಲೀಸರು ► ನಾಲ್ವರು ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಉಡುಪಿ, ಫೆ.17. ಇದೇ ತಿಂಗಳ 04 ನೇ ತಾರೀಕಿನಂದು ಮುಂಜಾನೆ ಕಾರ್ಕಳದ ಬಂಗ್ಲೆಗುಡ್ಡೆ ಎಂಬಲ್ಲಿ ಮನೆಗೆ ನುಗ್ಗಿ ದಂಪತಿಗೆ ಥಳಿಸಿ 21 ಪವನ್‌ ಚಿನ್ನಾಭರಣ ಹಾಗೂ ಒಂದು ಲಕ್ಷ ಹಣವನ್ನು ದೋಚಿದ್ದ ಪ್ರಕರಣವನ್ನು ಬೇಧಿಸಿರುವ ಕಾರ್ಕಳ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಭಟ್ಕಳ ನಿವಾಸಿಗಳಾದ ಮಹ್ರೂಫ್(21), ಹಾಗೂ ನಟರಾಜ್(24) ಎಂದು ಗುರುತಿಸಲಾಗಿದೆ. ಉಳಿದ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿಗಳಲ್ಲಿಬ್ಬರಾದ ಉಡುಪಿ ಬೆಳಪು ನಿವಾಸಿ ಸಾಜಿದ್‌ ರೆಹಮಾನ್‌ (19) ಮತ್ತು ಕಾರ್ಕಳ

ಬಂಗ್ಲೆಗುಡ್ಡೆ: ದರೋಡೆ ಪ್ರಕರಣ ಬೇಧಿಸಿದ ಪೊಲೀಸರು ► ನಾಲ್ವರು ಆರೋಪಿಗಳ ಬಂಧನ Read More »

ಕರಾವಳಿ

ಅತೀ ವೇಗದಿಂದಾಗಿ ನಿಯಂತ್ರಣ ತಪ್ಪಿ ಕಮರಿಗೆ ಉರುಳಿದ ಕಾರು ► ನಂಬರ್ ಪ್ಲೇಟ್ ನೊಂದಿಗೆ ಸ್ಥಳದಿಂದ ಕಾಲ್ಕಿತ್ತ ಪ್ರಯಾಣಿಕರು

(ನ್ಯೂಸ್ ಕಡಬ) newskadaba.com ಕಾರ್ಕಳ, ಫೆ.17. ಅತೀ ವೇಗದಿಂದ ಸಾಗಿಬಂದ ಹೋಂಡಾ ಕಂಪೆನಿಯ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಮರಿಗೆ ಉರುಳಿ ಬಿದ್ದ ಘಟನೆ ಶನಿವಾರ ಬೆಳಿಗ್ಗೆ ಕಾರ್ಕಳ ಸಮೀಪದ ಕುಂಟಲ್ಪಾಡಿ ಎಂಬಲ್ಲಿ ನಡೆದಿದೆ. ನಿಟ್ಟೆಯಿ೦ದ ಕಾಕ೯ಳಕ್ಕೆ ಬರುತ್ತಿದ್ದ ಕಾರು ಅತೀ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದಾಗಿ ಕಮರಿಗೆ ಬಿದ್ದಿದೆ ಎನ್ನಲಾಗಿದೆ. ಘಟನೆಯಲ್ಲಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಘಾತವಾದ ಕೂಡಲೇ ಅದರಲ್ಲಿ ನಂಬರ್ ಪ್ಲೇಟ್ ನೊಂದಿಗೆ ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ. ಘಟನೆಯಿಂದಾಗಿ ಕಾರು ಸಂಪೂರ್ಣ

ಅತೀ ವೇಗದಿಂದಾಗಿ ನಿಯಂತ್ರಣ ತಪ್ಪಿ ಕಮರಿಗೆ ಉರುಳಿದ ಕಾರು ► ನಂಬರ್ ಪ್ಲೇಟ್ ನೊಂದಿಗೆ ಸ್ಥಳದಿಂದ ಕಾಲ್ಕಿತ್ತ ಪ್ರಯಾಣಿಕರು Read More »

ಕರಾವಳಿ
Scroll to Top