ಕರಾವಳಿ

ಎಸ್ಕೆಎಸ್ಸೆಸ್ಸೆಫ್‌ ಟ್ರೆಂಡ್ ಜಿಲ್ಲಾ ಸಂಚಾಲಕರಾಗಿ ಇಕ್ಬಾಲ್ ಬಾಳಿಲ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಮಾ.03. ಎಸ್ಕೆಎಸ್ಸೆಸ್ಸೆಫ್‌ ಇದರ ಉಪ ಸಮಿತಿ ವಿದ್ಯಾಭ್ಯಾಸ ರಂಗದಲ್ಲಿ ವಿಶೇಷ ಸೇವೆ ಸಲ್ಲಿಸುವ ಟ್ರೆಂಡ್ ಸಮಿತಿ ಇದರ ರೂವಾರಿಯಾಗಿ ಲೇಖಕ ಯುವ ವಾಗ್ಮಿ ಕೆ.ಎಂ.ಇಕ್ಬಾಲ್ ಬಾಳಿಲ ಆಯ್ಕೆಗೊಂಡಿದ್ದಾರೆ. ಧಾರ್ಮಿಕ ಕ್ಷೇತ್ರದಲ್ಲಿ ಉನ್ನತ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಎಸ್ಕೆಎಸ್ಸೆಸ್ಸೆಫ್‌ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಹಲವು ಉಪ ಸಮಿತಿಗಳನ್ನು ಜಾರಿಗೆ ತಂದಿರುತ್ತದೆ. ಶಿಕ್ಷಣ ಕ್ಷೇತ್ರಗಳಲ್ಲಿ ಸೇವೆ ನಿರ್ವಹಿಸಲು ಟ್ರೆಂಡ್ ಎಂಬ ಹೆಸರಿನ ಉಪ ಸಮಿತಿಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು, ದೇಶದ ನಾನಾ ರಾಜ್ಯಗಳಲ್ಲಿ ಟ್ರೆಂಡ್ ವಿಶೇಷ […]

ಎಸ್ಕೆಎಸ್ಸೆಸ್ಸೆಫ್‌ ಟ್ರೆಂಡ್ ಜಿಲ್ಲಾ ಸಂಚಾಲಕರಾಗಿ ಇಕ್ಬಾಲ್ ಬಾಳಿಲ ಆಯ್ಕೆ Read More »

ಕರಾವಳಿ

ಬಂಟ್ವಾಳ: ಬೈಕ್, ಓಮ್ನಿ ಹಾಗೂ ಕಂಟೈನರ್ ನಡುವೆ ಸರಣಿ ಅಪಘಾತ ► ನಾಲ್ವರಿಗೆ ಗಾಯ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮಾ.02. ಬೈಕ್, ಓಮ್ನಿ ಹಾಗೂ ಕಂಟೈನರ್ ಲಾರಿ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ನಾಲ್ವರು ಗಾಯಗೊಂಡ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಿ.ಸಿ.ರೋಡ್ ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಬಿ.ಸಿ.ರೋಡ್ ಸರ್ಕಲ್ ನಲ್ಲಿ ಬೈಕ್ ಹಾಗೂ ಓಮ್ನಿ ನಡುವೆ ಢಿಕ್ಕಿಯಾದ ಕಾರಣ ರಸ್ತೆಯಲ್ಲಿ ನಿಲ್ಲಿಸಿದ್ದ ಓಮ್ನಿಗೆ ಕಂಟೈನರ್ ಲಾರಿಯೊಂದು ಹಿಂದಿನಿಂದ ಢಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಬೈಕಿನಲ್ಲಿದ್ದ ಮಗು ಸೇರಿ ಮೂವರು ಹಾಗೂ ಓಮ್ನಿ ಚಾಲಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಂಟ್ವಾಳ: ಬೈಕ್, ಓಮ್ನಿ ಹಾಗೂ ಕಂಟೈನರ್ ನಡುವೆ ಸರಣಿ ಅಪಘಾತ ► ನಾಲ್ವರಿಗೆ ಗಾಯ Read More »

ಕರಾವಳಿ

ನಿಮಗೆ ಐಟಿಐ, ಡಿಪ್ಲೊಮಾ ಪದವೀಧರರಾಗಿದ್ದರೂ ನಿರುದ್ಯೋಗದ ಸಮಸ್ಯೆಯೇ..? ► ಉಚಿತ ಕೌಶಲ್ಯಾಭಿವೃದ್ಧಿ ಯೋಜನೆ ತರಬೇತಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.02. ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಮುಖ್ಯ ಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಡಿ ಉದ್ಯೋಗಾಧಾರಿತ ವಿವಿಧ ತಾಂತ್ರಿಕ ಕೌಶಲ್ಯ ತರಬೇತಿಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ವಾಸವಾಗಿರುವ ಐಟಿಐ/ಡಿಪ್ಲ್ಲೊಮಾ/ಬಿ.ಇ (ಮೆಕ್ಯಾನಿಕಲ್ ವಿಭಾಗ) ನಿರುದ್ಯೋಗಿ ಯುವಕ/ಯುವತಿಯರು ಈ ತರಬೇತಿಗಳಿಗೆ ಅರ್ಹರಾಗಿರುತಾರೆ. ಈ ತರಬೇತಿಯನ್ನು ಮಂಗಳೂರಿನಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಅಯೋಜಿಸಲಾಗಿದ್ದು, ಈ ಯೋಜನೆಯಡಿ ಸಿಎನ್‍ಸಿ ಮೆಷಿನ್ ಪ್ರೋಗ್ರಾಮಿಂಗ್ (1 ತಿಂಗಳು) ಹಾಗೂ ಆಟೂಕ್ಯಾಡ್/ಪ್ರೊಇ/ಕ್ಯಾಟಿಯ/ಮಾಸ್ಟರ್ ಕ್ಯಾಮ್ (1

ನಿಮಗೆ ಐಟಿಐ, ಡಿಪ್ಲೊಮಾ ಪದವೀಧರರಾಗಿದ್ದರೂ ನಿರುದ್ಯೋಗದ ಸಮಸ್ಯೆಯೇ..? ► ಉಚಿತ ಕೌಶಲ್ಯಾಭಿವೃದ್ಧಿ ಯೋಜನೆ ತರಬೇತಿಗೆ ಅರ್ಜಿ ಆಹ್ವಾನ Read More »

ಕರಾವಳಿ

ನೂಜಿಬಾಳ್ತಿಲ: ಟ್ರಾನ್ಸ್‌ಫಾರ್ಮರ್ ನಿಂದ ಹಾರಿದ ಬೆಂಕಿ ಕಿಡಿಯಿಂದಾಗಿ ರಬ್ಬರ್ ತೋಟ ಬೆಂಕಿಗಾಹುತಿ ► ಬೆಂಕಿ ನಂದಿಸಲು ಯಶಸ್ವಿಯಾದ ಬೆಥನಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಊರವರು

(ನ್ಯೂಸ್ ಕಡಬ) newskadaba.com ಕಡಬ, ಮಾ.02. ವಿದ್ಯುತ್ ಪರಿವರ್ತಕದಿಂದ ಎಸೆಯಲ್ಪಟ್ಟ ಬೆಂಕಿ ಕಿಡಿಯಿಂದಾಗಿ ಸುಮಾರು ಒಂದು ಎಕರೆ ಗುಡ್ಡ ಬೆಂಕಿಗಾಹುತಿಯಾದ ಘಟನೆ ಸುಬ್ರಹ್ಮಣ್ಯ ಧರ್ಮಸ್ಥಳ ರಾಜ್ಯ ಹೆದ್ದಾರಿಯ ನೂಜಿಬಾಳ್ತಿಲ ಎಂಬಲ್ಲಿ ಶುಕ್ರವಾರ ಅಪರಾಹ್ನ ನಡೆದಿದೆ. ನೂಜಿಬಾಳ್ತಿಲ ಬೆಥನಿ ಪದವಿ ಪೂರ್ವ ಕಾಲೇಜಿಗೆ ಹೊಂದಿಕೊಂಡಂತೆ ಇರುವ ಸ್ಥಳೀಯರೊಬ್ಬರ ಸುಮಾರು ಒಂದು ಎಕರೆ ರಬ್ಬರ್ ತೋಟವು ಬೆಂಕಿಗಾಹುತಿಯಾಗಿದ್ದು, ಈ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳು, ಅಧ್ಯಾಪಕ ವೃಂದದವರು ಹಾಗೂ ಊರವರು ಸೇರಿಕೊಂಡು ಬೆಂಕಿ ನಂದಿಸುವ ಮೂಲಕ ಸಂಭಾವ್ಯ ಅಪಾಯವನ್ನು ತಪ್ಪಿಸಿದ್ದಾರೆ.

ನೂಜಿಬಾಳ್ತಿಲ: ಟ್ರಾನ್ಸ್‌ಫಾರ್ಮರ್ ನಿಂದ ಹಾರಿದ ಬೆಂಕಿ ಕಿಡಿಯಿಂದಾಗಿ ರಬ್ಬರ್ ತೋಟ ಬೆಂಕಿಗಾಹುತಿ ► ಬೆಂಕಿ ನಂದಿಸಲು ಯಶಸ್ವಿಯಾದ ಬೆಥನಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಊರವರು Read More »

ಕರಾವಳಿ

ಸುಳ್ಯ: ಲಾರಿ – ಟ್ಯಾಂಕರ್ ಮುಖಾಮುಖಿ ಢಿಕ್ಕಿ ► ಇಬ್ಬರು ಗಂಭೀರ

(ನ್ಯೂಸ್ ಕಡಬ) newskadaba.com ಸುಳ್ಯ, ಮಾ.02. ಟ್ಯಾಂಕರ್ ಹಾಗೂ ಲಾರಿ ನಡುವೆ ಢಿಕ್ಕಿ ಸಂಭವಿಸಿ ಚಾಲಕರಿಬ್ಬರು ಗಂಭೀರ ಗಾಯಗೊಂಡ ಘಟನೆ ಮಾಣಿ – ಮೈಸೂರು ರಾಜ್ಯ ಹೆದ್ದಾರಿಯ ಸುಳ್ಯ ಸಮೀಪದ ಪರಿವಾರಕಾನ ಎಂಬಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ. ಮಂಗಳೂರಿನಿಂದ ಮಡಿಕೇರಿ ಕಡೆಗೆ ಡೀಸೆಲ್ ಹೇರಿಕೊಂಡು ತೆರಳುತ್ತಿದ್ದ ಟ್ಯಾಂಕರ್ ಹಾಗೂ ಮಂಗಳೂರು ಕಡೆಗೆ ತೆರಳುತ್ತಿದ್ದ ಲಾರಿ ನಡುವೆ ಢಿಕ್ಕಿ ಸಂಭವಿಸಿ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಟ್ಯಾಂಕರ್ ರಸ್ತೆಗಡ್ಡವಾಗಿ ಮಗುಚಿ ಬಿದ್ದಿದ್ದು, ಗಾಯಾಳು ಚಾಲಕರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ಯಾಂಕರ್‌ನಿಂದ

ಸುಳ್ಯ: ಲಾರಿ – ಟ್ಯಾಂಕರ್ ಮುಖಾಮುಖಿ ಢಿಕ್ಕಿ ► ಇಬ್ಬರು ಗಂಭೀರ Read More »

ಕರಾವಳಿ

ಕೊಂಬಾರಿನ ದಲಿತ ಯುವಕನ ನಿಗೂಢ ಸಾವಿನ ಸೂಕ್ತ ತನಿಖೆಗೆ ಆಗ್ರಹ ► ಆರೋಪಿಗಳಿಗೆ ಶಿಕ್ಷೆಯಾಗದಿದ್ದಲ್ಲಿ ಸುಬ್ರಹ್ಮಣ್ಯ ಠಾಣೆಗೆ ಮುತ್ತಿಗೆಯ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.02. ಗೌಡ ಸಮುದಾಯದ ಹುಡುಗಿಯನ್ನು ಪ್ರೀತಿಸಿದ ಎಂಬ ಕಾರಣಕ್ಕೆ ದಲಿತ ಯುವಕನೋರ್ವನನ್ನು ನಿಗೂಢವಾಗಿ ಕೊಲೆ‌ ನಡೆಸಲಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕೆಂದು ಎಸ್ಡಿಪಿಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆಗ್ರಹಿಸಿದೆ. ಗುರುವಾರದಂದು ಪಕ್ಷದ ಜಿಲ್ಲಾ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಲಿತ ಮುಖಂಡ, ಎಸ್ಡಿಪಿಐ ಜಿಲ್ಲಾ ಉಪಾಧ್ಯಕ್ಷ ಆನಂದ್ ಮಿತ್ತಬೈಲ್, ಕಡಬ ತಾಲೂಕಿನ ಕೊಂಬಾರು ಗ್ರಾಮದ ಕಾಯರಡ್ಕ ನಿವಾಸಿ ಗಣೇಶ್ ಎಂಬವರ ಪುತ್ರ ಜಯಪ್ರಕಾಶ್ (19)

ಕೊಂಬಾರಿನ ದಲಿತ ಯುವಕನ ನಿಗೂಢ ಸಾವಿನ ಸೂಕ್ತ ತನಿಖೆಗೆ ಆಗ್ರಹ ► ಆರೋಪಿಗಳಿಗೆ ಶಿಕ್ಷೆಯಾಗದಿದ್ದಲ್ಲಿ ಸುಬ್ರಹ್ಮಣ್ಯ ಠಾಣೆಗೆ ಮುತ್ತಿಗೆಯ ಎಚ್ಚರಿಕೆ Read More »

ಕರಾವಳಿ

ಬಲ್ಯ: ಸ್ಥಳೀಯಾಡಳಿತದ ಅನುಮತಿ ಪಡೆಯದೇ ಮಲಯಾಳಂ ಚಿತ್ರದ ಚಿತ್ರೀಕರಣ ► ಚಿತ್ರ ತಂಡದ ವಿರುದ್ಧ ಕಾನೂನು ಹೋರಾಟಕ್ಕೆ ಸದಸ್ಯರ ಆಗ್ರಹ

(ನ್ಯೂಸ್ ಕಡಬ) newskadaba.com ಕಡಬ, ಮಾ.02. ತಾಲೂಕಿನ ಬಲ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಂಚಾಯತಿನ ಅನುಮತಿ ಪಡೆಯದೆ ಮಲಯಾಳಂ ಚಲನಚಿತ್ರದ ಚಿತ್ರೀಕರಣದ ವಿಚಾರಕ್ಕೆ ಸಂಬಂಧಿಸಿ ಚಿತ್ರ ತಂಡಕ್ಕೆ ನೋಟಿಸ್ ನೀಡಿದರೂ ಪ್ರತಿಕ್ರಿಯಿಸದಿರುವುದು ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ಗೆ ಆದ ಅವಮಾನವಾಗಿದ್ದು, ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮ ಪಂಚಾಯತ್ ಸದಸ್ಯರು ಆಗ್ರಹಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್, ಜಿಲ್ಲಾ ಪಂಚಾಯತ್ ನಲ್ಲಿ ಗ್ರಾಮ ಪಂಚಾಯತ್ ಪ್ರಕರಣಗಳಿಗೆಂದು ನೇಮಿಸಿರುವ

ಬಲ್ಯ: ಸ್ಥಳೀಯಾಡಳಿತದ ಅನುಮತಿ ಪಡೆಯದೇ ಮಲಯಾಳಂ ಚಿತ್ರದ ಚಿತ್ರೀಕರಣ ► ಚಿತ್ರ ತಂಡದ ವಿರುದ್ಧ ಕಾನೂನು ಹೋರಾಟಕ್ಕೆ ಸದಸ್ಯರ ಆಗ್ರಹ Read More »

ಕರಾವಳಿ

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾರಿಂದ ಅನುದಾನ ► ಕೊಯಿಲ – ಗಂಡಿಬಾಗಿಲು ರಸ್ತೆ ದುರಸ್ತಿಗೆ ಶಂಕುಸ್ಥಾಪನೆ

(ನ್ಯೂಸ್ ಕಡಬ) newskadaba.com ಕಡಬ, ಮಾ.01. ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾರವರ ಅನುದಾನದಲ್ಲಿ ಕೊಯಿಲ -ಗಂಡಿಬಾಗಿಲು ರಸ್ತೆ ದುರಸ್ಥಿ ಕಾಮಗಾರಿಗೆ ಗಂಡಿಬಾಗಿಲು ಎಂಬಲ್ಲಿ ಶಂಕುಸ್ಥಾಪನೆ ನೆರವೇರಿಸಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯ ಸರ್ವೋತ್ತಮ ಗೌಡ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾರವರು ಅಲ್ಪಸಂಖ್ಯಾತ ಅಭಿವೃದ್ಧಿ ಯೋಜನೆಯಡಿಯಲ್ಲಿ 5 ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡಿದ್ದಾರೆ. ಇದರ ಮುಂದಿನ ಶಾಖೆಪುರ ತನಕದ ಕಾಮಗಾರಿಗೆ ಈಗಾಗಲೇ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮುಂದಿನ ಹಂತದಲ್ಲಿ ಅನುದಾನ ನೀಡುವುದಾಗಿ ತಿಳಿಸಿದ್ದಾರೆ ಎಂದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾರಿಂದ ಅನುದಾನ ► ಕೊಯಿಲ – ಗಂಡಿಬಾಗಿಲು ರಸ್ತೆ ದುರಸ್ತಿಗೆ ಶಂಕುಸ್ಥಾಪನೆ Read More »

ಕರಾವಳಿ

ಸದ್ದಿಲ್ಲದೆ ಸ್ಥಗಿತಗೊಂಡ ಕಡಬ-ಪಂಜ ರಸ್ತೆ ಅಗಲೀಕರಣ ಕಾಮಗಾರಿ ► ಸುದ್ದಿಯಿಲ್ಲದೆ ಗಂಟುಮೂಟೆ ಕಟ್ಟಿದ ಕಾರ್ಮಿಕರು

(ನ್ಯೂಸ್ ಕಡಬ) newskadaba.com ಕಡಬ, ಮಾ.01. ಸುಳ್ಯ ತಾಲೂಕಿನಿಂದ ನೂತನ ಕಡಬ ತಾಲೂಕನ್ನು ಸಂಪರ್ಕಿಸುವ ಪ್ರಮುಖ ಜಿಲ್ಲಾ ರಸ್ತೆಯಾಗಿರುವ ಕಡಬ-ಪಂಜ ರಸ್ತೆಯನ್ನು 5 ಕೋಟಿ ರೂ. ಅನುದಾನದಲ್ಲಿ ಆಗಲಗೊಳಿಸಿ ಉನ್ನತೀಕರಿಸುವ ಕಾಮಗಾರಿ ಕೆಲ ದಿನಗಳಿಂದ ಸ್ಥಗಿತಗೊಂಡಿರುವುದು ಸಾರ್ವಜನಿಕ ವಲಯದಲ್ಲಿ ವಿವಿಧ ಉಹಾಪೋಹಗಳಿಗೆ ಕಾರಣವಾಗಿದೆ. ಕಳೆದ ನವೆಂಬರ್ ತಿಂಗಳಿನಲ್ಲಿ ಸುಳ್ಯ ಶಾಸಕ ಎಸ್.ಅಂಗಾರ ಅವರು ಕಾಮಗಾರಿಗೆ ಚಾಲನೆ ನೀಡಿದ್ದ ಬಳಿಕ ರಸ್ತೆಯನ್ನು ಆಗಲಗೊಳಿಸುವ ಕಾಮಗಾರಿ ವೇಗದಿಂದ ಮುಂದುವರೆದಿತ್ತು. ನಿರೀಕ್ಷೆಯಂತೆ ಕಾಮಗಾರಿ ನಡೆದಿದ್ದರೆ ಈಗಾಗಲೇ ಸುಂದರ ರಸ್ತೆ ನಿರ್ಮಾಣವಾಗಬೇಕಿತ್ತು. ಆದರೆ ಬಹುತೇಕ ಮಣ್ಣಿನ ಕೆಲಸ

ಸದ್ದಿಲ್ಲದೆ ಸ್ಥಗಿತಗೊಂಡ ಕಡಬ-ಪಂಜ ರಸ್ತೆ ಅಗಲೀಕರಣ ಕಾಮಗಾರಿ ► ಸುದ್ದಿಯಿಲ್ಲದೆ ಗಂಟುಮೂಟೆ ಕಟ್ಟಿದ ಕಾರ್ಮಿಕರು Read More »

ಕರಾವಳಿ

ಮಾಣಿ: ಟಿಪ್ಪರ್, ಬಸ್, ಬೊಲೆರೋ, ಇನ್ನೋವಾ ನಡುವೆ ಸರಣಿ ಅಪಘಾತ ► ಇನ್ನೋವಾದ ಮೇಲೇರಿ ನಿಂತ ಟಿಪ್ಪರ್

(ನ್ಯೂಸ್ ಕಡಬ) newskadaba.com ವಿಟ್ಲ, ಮಾ.01. ಟಿಪ್ಪರ್, ಬಸ್, ಬೊಲೆರೊ ಹಾಗೂ ಇನ್ನೊವಾ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಐವರು ಪ್ರಯಾಣಿಕರು ಪವಾಡಸದೃಶ್ಯ ರೀತಿಯಲ್ಲಿ ಪಾರಾದ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ವಿಟ್ಲದ ಸೂರಿಕುಮೇರ್ ಎಂಬಲ್ಲಿ ಗುರುವಾರದಂದು ಸಂಭವಿಸಿದೆ. ಮಾಣಿ ಕಡೆಯಿಂದ ಕಲ್ಲಡ್ಕ ಕಡೆಗೆ ತೆರಳುತ್ತಿದ್ದ ಟಿಪ್ಪರ್ ಎದುರಿನಿಂದ ಬರುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದ ಬಳಿಕ ಮುಂಭಾಗದಿಂದ ಬರುತ್ತಿದ್ದ ಬೊಲೆರೋಗೆ ಹೊಡೆದು, ಇನ್ನೊವಾ ಕಾರಿಗೆ ಢಿಕ್ಕಿ ಹೊಡೆದಿದೆಯಲ್ಲದೆ ಇನ್ನೊವಾ ಕಾರನ್ನು ಎಳೆದುಕೊಂಡು ಹೋಗಿ ರಸ್ತೆ

ಮಾಣಿ: ಟಿಪ್ಪರ್, ಬಸ್, ಬೊಲೆರೋ, ಇನ್ನೋವಾ ನಡುವೆ ಸರಣಿ ಅಪಘಾತ ► ಇನ್ನೋವಾದ ಮೇಲೇರಿ ನಿಂತ ಟಿಪ್ಪರ್ Read More »

ಕರಾವಳಿ
Scroll to Top