ಮಾಣಿ: ಟಿಪ್ಪರ್, ಬಸ್, ಬೊಲೆರೋ, ಇನ್ನೋವಾ ನಡುವೆ ಸರಣಿ ಅಪಘಾತ ► ಇನ್ನೋವಾದ ಮೇಲೇರಿ ನಿಂತ ಟಿಪ್ಪರ್



(ನ್ಯೂಸ್ ಕಡಬ) newskadaba.com ವಿಟ್ಲ, ಮಾ.01. ಟಿಪ್ಪರ್, ಬಸ್, ಬೊಲೆರೊ ಹಾಗೂ ಇನ್ನೊವಾ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಐವರು ಪ್ರಯಾಣಿಕರು ಪವಾಡಸದೃಶ್ಯ ರೀತಿಯಲ್ಲಿ ಪಾರಾದ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ವಿಟ್ಲದ ಸೂರಿಕುಮೇರ್ ಎಂಬಲ್ಲಿ ಗುರುವಾರದಂದು ಸಂಭವಿಸಿದೆ.







ಮಾಣಿ ಕಡೆಯಿಂದ ಕಲ್ಲಡ್ಕ ಕಡೆಗೆ ತೆರಳುತ್ತಿದ್ದ ಟಿಪ್ಪರ್ ಎದುರಿನಿಂದ ಬರುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದ ಬಳಿಕ ಮುಂಭಾಗದಿಂದ ಬರುತ್ತಿದ್ದ ಬೊಲೆರೋಗೆ ಹೊಡೆದು, ಇನ್ನೊವಾ ಕಾರಿಗೆ ಢಿಕ್ಕಿ ಹೊಡೆದಿದೆಯಲ್ಲದೆ ಇನ್ನೊವಾ ಕಾರನ್ನು ಎಳೆದುಕೊಂಡು ಹೋಗಿ ರಸ್ತೆ ಬದಿಯ ಹೊಂಡಕ್ಕೆ ಉರುಳಿ ಕಾರಿನ ಮೇಲೆ ನಿಂತಿದೆ. ಘಟನೆಯಲ್ಲಿ ಇನ್ನೊವಾದಲ್ಲಿದ್ದವರು ಪವಾಡಸದೃಶವಾಗಿ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






error: Content is protected !!
Scroll to Top