
(ನ್ಯೂಸ್ ಕಡಬ) newskadaba.com, ಅ.06 . ನಾಲ್ಕೈದು ದಿನಗಳ ಹಿಂದೆ ಆತೂರಿನಲ್ಲಿರುವ ತಮ್ಮ ಅಂಗಡಿಗೆ ತೆರಳುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಮಾಧವ ಗೌಡ ಅವರು ಮನೆಗೆ ವಾಪಸಾಗಿರಲಿಲ್ಲ.ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಕುಮಾರಧಾರ ಸೇತುವೆಯ ಮೇಲೆ ಅವರ ಮೋಟಾರ್ ಸೈಕಲ್, ಮೊಬೈಲ್ ಫೋನ್ ಹಾಗೂ ಇತರ ವಸ್ತುಗಳು ಪತ್ತೆಯಾಗಿದ್ದವು. ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕುಟುಂಬಸ್ಥರ ಮನವಿ ಮೇರೆಗೆ ಪುತ್ತೂರು ಅಗ್ನಿಶಾಮಕ ಮತ್ತು ರಕ್ಷಣಾ సేವೆಗಳ ಶಂಕರ್ ಅವರ ನೇತೃತ್ವದ ತಂಡ ಭಾನುವಾರ ಕುಮಾರಧಾರ ನದಿಯಲ್ಲಿ ಸುಮಾರು 4 ಗಂಟೆಗಳ ಕಾಲ ಸುದೀರ್ಘ ಶೋಧ ನಡೆಸಿತು. ಆದರೆ ವ್ಯಕ್ತಿಯ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.
ಉಪ್ಪಿನಂಗಡಿಯಲ್ಲಿ ರಕ್ಷಣಾ ದೋಣಿ ಲಭ್ಯವಿಲ್ಲದ ಕಾರಣ ಪುತ್ತೂರು ಕಚೇರಿಯಿಂದ ದೋಣಿಯನ್ನು ತರಿಸಿ ಶೋಧ ನಡೆಸಬೇಕಾಯಿತು (ಈ ಹಿಂದೆ ಮಂಗಳೂರಿನಿಂದ ತರಲಾಗಿದ್ದ ರಬ್ಬರ್ ದೋಣಿಯ ನಾಲ್ಕು ತಿಂಗಳ ಅವಧಿ ಮುಗಿದಿದ್ದರಿಂದ ಅದನ್ನು ವಾಪಸ್ ಕಳುಹಿಸಲಾಗಿತ್ತು).




