ಕರಾವಳಿ

ಕೊನೆಗೂ ಆರಂಭವಾಯಿತು ಬಂಟ್ವಾಳದ ನೂತನ ಆರ್.ಟಿ.ಓ. ಕಛೇರಿ ► ಬಂಟ್ವಾಳದ ನೂತನ ವಾಹನ ನೋಂದಣಿ ಸಂಖ್ಯೆಯೆಷ್ಟು ಗೊತ್ತೇ…?

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮಾ.05. ಬಂಟ್ವಾಳ ಸಹಾಯಕ ಪ್ರಾದೇಶಿಕ ಸಾರಿಗೆ ಕಛೇರಿಯು ನೂತನವಾಗಿ ಆರಂಭಗೊಂಡಿದ್ದು, ಕೆಎ-70 ಸಂಖ್ಯೆಯಲ್ಲಿ ಇನ್ನು ಮುಂದೆ ವಾಹನಗಳು ರಸ್ತೆಗಿಳಿಯಲಿವೆ. ಬಂಟ್ವಾಳ ತಾಲೂಕಿನ ಮೇಲ್ಕಾರ್ ನಲ್ಲಿರುವ ಬಿರ್ವ ಟವರ್ಸ್ ನಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ನೂತನ ಕಚೇರಿಯನ್ನು ಶನಿವಾರದಂದು ಚಾಲನೆ ನೀಡಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಆರ್.ಟಿ.ಓ. ಕಚೇರಿಯ ಸ್ವಂತ ಕಟ್ಟಡಕ್ಕೆ ನಿವೇಶನ ಒದಗಿಸಲಾಗುವುದು ಎಂದು ಹೇಳಿದ್ದಾರೆ. ಜನರ ಹಿತ ಕಾಪಾಡುವ ಕೆಲಸಗಳು ಇಂದು ಆಗಬೇಕಿದ್ದು, ಆರ್.ಟಿ.ಒ. […]

ಕೊನೆಗೂ ಆರಂಭವಾಯಿತು ಬಂಟ್ವಾಳದ ನೂತನ ಆರ್.ಟಿ.ಓ. ಕಛೇರಿ ► ಬಂಟ್ವಾಳದ ನೂತನ ವಾಹನ ನೋಂದಣಿ ಸಂಖ್ಯೆಯೆಷ್ಟು ಗೊತ್ತೇ…? Read More »

ಕರಾವಳಿ

ಸುಬ್ರಹ್ಮಣ್ಯದಲ್ಲಿ ಇಂದಿನಿಂದ (ಮಾರ್ಚ್ 5 ರಿಂದ 7 ರವರೆಗೆ) 22ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಮಾ.05. ಇಂದಿನಿಂದ (ಮಾರ್ಚ್ 5 ರಿಂದ 7 ರವರೆಗೆ ಜರಗಲಿರುವ 22ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯಲಿದ್ದು, ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಈ ಕೆಳಗಿನ ಸಾಧಕರಿಗೆ ಮಾ.7 ರಂದು ಅಪರಾಹ್ನ 3 ರಿಂದ 4  ಗಂಟೆಗೆ ಸನ್ಮಾನ ನೀಡಿ ಗೌರವಿಸಲಾಗುವುದು. ಪ್ರೊ. ಅಭಯ ಕುಮಾರ್, (ಜಾನಪದ ವಿದ್ವಾಂಸರು), ಜಾಕೆ ಮಾಧವ ಗೌಡ (ಸಹಕಾರ ಮತ್ತು ಸಮಾಜ ಸೇವೆ.) ಪ್ರೊ. ಎ.ವಿ. ನಾರಾಯಣ ಪುತ್ತೂರು (ಶಿಕ್ಷಣ,ಸಂಘಟನೆ), ಡಾ|

ಸುಬ್ರಹ್ಮಣ್ಯದಲ್ಲಿ ಇಂದಿನಿಂದ (ಮಾರ್ಚ್ 5 ರಿಂದ 7 ರವರೆಗೆ) 22ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ Read More »

ಕರಾವಳಿ

ತ್ರಿಪುರ, ನಾಗಾಲ್ಯಾಂಡ್ನಲ್ಲಿ ಪ್ರಥಮ ಬಾರಿಗೆ ಬಿಜೆಪಿ ಅಧಿಕಾರಕ್ಕೆ : ಕಡಬದಲ್ಲಿ ವಿಜಯೋತ್ಸವ

(ನ್ಯೂಸ್ ಕಡಬ) newskadaba.com ಕಡಬ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಡಳಿತವನ್ನು ಮೆಚ್ಚಿಕೊಂಡು ದೇಶಾದ್ಯಂತ ಮತದಾರರು ಬಿಜೆಪಿ ಕಡೆ ಒಲವು ತೋರುತ್ತಿದ್ದು ಈಗಾಗಲೇ ಚುನಾವಣೆ ನಡೆದ ರಾಜ್ಯಗಳಲ್ಲಿ ಬಿಜೆಪಿಗೆ ಪ್ರಚಂಡ ಬಹುಮತ ದೊರೆಯುತ್ತಿದ್ದು ಈವರೆಗೆ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಅಧಿಕಾರದಲ್ಲಿದ್ದ ತ್ರಿಪುರ ಮತ್ತು ನಾಗಾಲ್ಯಾಂಡ್ ರಾಜ್ಯಗಳಲ್ಲಿ ಬಿಜೆಪಿ ಪ್ರಚಂಡ ಬಹುಮತದೊಂದಿಗೆ ವಿಜಯ ಸಾಧಿಸುವುದರೊಂದಿಗೆ ಬಿಜೆಪಿ ಆಡಳಿತಕ್ಕೆ ಮುಂದಾಗಿದ್ದು ಮಾ.3 ರಂದು ಕಡಬದಲ್ಲಿ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು. ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರಲ್ಲದೆ

ತ್ರಿಪುರ, ನಾಗಾಲ್ಯಾಂಡ್ನಲ್ಲಿ ಪ್ರಥಮ ಬಾರಿಗೆ ಬಿಜೆಪಿ ಅಧಿಕಾರಕ್ಕೆ : ಕಡಬದಲ್ಲಿ ವಿಜಯೋತ್ಸವ Read More »

ಕರಾವಳಿ

ಸಂಪಾಜೆ: ಕಲ್ಲಿದ್ದಲು ಸಾಗಾಟದ ನೆಪದಲ್ಲಿ ಅಕ್ರಮ ಮರಳು ಸಾಗಾಟ ► ಲಕ್ಷಾಂತರ ರೂ ಮೌಲ್ಯದ ಸ್ವತ್ತುಗಳೊಂದಿಗೆ ಐವರ ಬಂಧನ

(ನ್ಯೂಸ್ ಕಡಬ) newskadaba.com ಸುಳ್ಯ, ಮಾ.04. ಕಲ್ಲಿದ್ದಲು ಸಾಗಾಟ ಮಾಡುವ ನೆಪದಲ್ಲಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆಹಚ್ಚಿರುವ ಕೊಡಗು ಡಿಸಿಐಬಿ ಪೊಲೀಸರು ಎರಡು ಲಾರಿ ಮರಳು ಸಹಿತ ಐವರನ್ನು ಬಂಧಿಸಿದ್ದಾರೆ. ಮಂಗಳೂರಿನಿಂದ ಬೆಂಗಳೂರಿಗೆ ಕಲ್ಲಿದ್ದಲು ಸಾಗಾಟ ಮಾಡುವ ನೆಪದಲ್ಲಿ ಅಕ್ರಮವಾಗಿ ಮರಳನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ಖಚಿತ ಮಾಹಿತಿ ಮೇರೆಗೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ರವರ ಸೂಚನೆಯ ಮೇರೆಗೆ ಡಿಸಿಐಬಿ ಪೊಲೀಸ್ ನಿರೀಕ್ಷಕ ಎಂ.ಮಹೇಶ್ ಅವರ ನೇತೃತ್ವದ ತಂಡವು ಸಂಪಾಜೆ ಬಳಿ ದಾಳಿ

ಸಂಪಾಜೆ: ಕಲ್ಲಿದ್ದಲು ಸಾಗಾಟದ ನೆಪದಲ್ಲಿ ಅಕ್ರಮ ಮರಳು ಸಾಗಾಟ ► ಲಕ್ಷಾಂತರ ರೂ ಮೌಲ್ಯದ ಸ್ವತ್ತುಗಳೊಂದಿಗೆ ಐವರ ಬಂಧನ Read More »

ಕರಾವಳಿ

ನೇಮದ ಕಾರಣ ನೀಡಿ ವೃದ್ಧರ ಹೆಣ ಸಾಗಿಸಲು ನಿರಾಕರಿಸಿದ ಗ್ರಾಮಸ್ಥರು ► ಹೆಗಲು‌ಕೊಟ್ಟ ಕಡಬ ಪೊಲೀಸರನ್ನೂ, ಮಾಹಿತಿ ನೀಡಿದ ಪತ್ರಕರ್ತನನ್ನೂ ಪ್ರಶಂಸಿಸಿದ ಹಿರಿಯ ಅಧಿಕಾರಿಗಳು

(ನ್ಯೂಸ್ ಕಡಬ) newskadaba.com ಕಡಬ, ಮಾ.03. ಊರಿನಲ್ಲಿ ದೈವದ ನೇಮ ನಡೆಯಲಿರುವ ಕಾರಣ ನೀಡಿ ಮೃತದೇಹವನ್ನು ಮುಟ್ಟಲು ಗ್ರಾಮದ ಜನ ಹಿಂಜರಿದಾಗ ಪೊಲೀಸ್ ಅಧಿಕಾರಿಯೇ ತನ್ನ ಸಿಬ್ಬಂದಿಗಳ ಜೊತೆಗೆ ಹೆಗಲುಕೊಟ್ಟು ಮೃತದೇಹವನ್ನು ಸಾಗಿಸಿರುವುದನ್ನು ಹಾಗೂ ಮಾಹಿತಿ ನೀಡಿದ ಪತ್ರಕರ್ತನನ್ನು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಪ್ರಶಂಸಿಸಿದ್ದಾರೆ‌. ವೃದ್ಧರೋರ್ವರು ಕಡಬ ತಾಲೂಕಿನ ಕೊಯಿಲ ಗ್ರಾಮದ ಗುಲ್ಗೋಡಿ ಎಂಬಲ್ಲಿನ ಗುಡ್ಡದ ಕಾಲು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕುಸಿದು ಬಿದ್ದು ಮೃತಪಟ್ಟಿದ್ದರು‌. ಬಡ ಕುಟುಂಬದವರಾದುದರಿಂದ ಕುಟುಂಬಸ್ಥರು ಯಾರೂ ಇಲ್ಲದ ಹಿನ್ನೆಲೆಯಲ್ಲಿ ಮತ್ತು

ನೇಮದ ಕಾರಣ ನೀಡಿ ವೃದ್ಧರ ಹೆಣ ಸಾಗಿಸಲು ನಿರಾಕರಿಸಿದ ಗ್ರಾಮಸ್ಥರು ► ಹೆಗಲು‌ಕೊಟ್ಟ ಕಡಬ ಪೊಲೀಸರನ್ನೂ, ಮಾಹಿತಿ ನೀಡಿದ ಪತ್ರಕರ್ತನನ್ನೂ ಪ್ರಶಂಸಿಸಿದ ಹಿರಿಯ ಅಧಿಕಾರಿಗಳು Read More »

ಕರಾವಳಿ

ವೃದ್ದರೊಬ್ಬರ ಅಸಹಾಯಕ ಕುಟುಂಬದ ಮೃತದೇಹವನ್ನು ಸಾಗಿಸಲು ತಾವೇ ಹೆಗಲುಗೊಟ್ಟ ಸಬ್ ಇನ್ಸ್‌ಪೆಕ್ಟರ್ ► ಕಡಬ ಪೊಲೀಸರ ಮಾನವೀಯತೆಗೆ ವ್ಯಕ್ತವಾಗುತ್ತಿದೆ ವ್ಯಾಪಕ ಪ್ರಶಂಸೆ

(ನ್ಯೂಸ್ ಕಡಬ) newskadaba.com ಕಡಬ, ಮಾ.03. ವೃದ್ಧರೋರ್ವರು ಗುಡ್ಡದ ಕಾಲು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕುಸಿದು ಬಿದ್ದು ಮೃತಪಟ್ಟ ಘಟನೆ ಕೊಯಿಲ ಗ್ರಾಮದ ಗುಲ್ಗೋಡಿ ಎಂಬಲ್ಲಿ ಶನಿವಾರದಂದು ನಡೆದಿದೆ. ಮೃತರನ್ನು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಜಂಬದ ಹಳ್ಳಿ ನಿವಾಸಿ ಪಲನಿ ಸ್ವಾಮಿ ಎಂಬವರ ಪುತ್ರ ಅಸಲಪ್ಪ (80) ಎಂದು ಗುರುತಿಸಲಾಗಿದೆ. ಮೀನು ಹಿಡಿಯುವ ಕಾಯಕದ ಹಿನ್ನೆಲೆಯಲ್ಲಿ ಕಳೆದ ಹಲವು ವರ್ಷಗಳ ಹಿಂದೆ ಕಡಬ ತಾಲೂಕಿನ ಕೊಯಿಲಕ್ಕೆ ಆಗಮಿಸಿದ ಇವರ ಪುತ್ರ ಇಲ್ಲಿನ ಮಹಿಳೆಯೋರ್ವರನ್ನು ವಿವಾಹವಾಗಿದ್ದರೆನ್ನಲಾಗಿದೆ. ತನ್ನ

ವೃದ್ದರೊಬ್ಬರ ಅಸಹಾಯಕ ಕುಟುಂಬದ ಮೃತದೇಹವನ್ನು ಸಾಗಿಸಲು ತಾವೇ ಹೆಗಲುಗೊಟ್ಟ ಸಬ್ ಇನ್ಸ್‌ಪೆಕ್ಟರ್ ► ಕಡಬ ಪೊಲೀಸರ ಮಾನವೀಯತೆಗೆ ವ್ಯಕ್ತವಾಗುತ್ತಿದೆ ವ್ಯಾಪಕ ಪ್ರಶಂಸೆ Read More »

ಕರಾವಳಿ

ಮಂಗಳೂರು: ಸ್ಕ್ರೂ ಡ್ರೈವರ್ ನಿಂದ ಇರಿದು ಲಾರಿ ಚಾಲಕನ ಕೊಲೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.03. ಕ್ಷುಲ್ಲಕ ಕಾರಣಕ್ಕಾಗಿ ಸ್ಕ್ರೂಡ್ರೈವರ್ ನಿಂದ ಇರಿದು ಲಾರಿ ಚಾಲಕನೋರ್ವನನ್ನು ಕೊಲೆಗೈದ ಘಟನೆ ನಗರದ ಹೊರವಲಯದ ಪಡೀಲ್‌ನಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಮೃತ ಚಾಲಕನನ್ನು ತಮಿಳುನಾಡು ಮೂಲದ ಸೆಲ್ವಮಣಿ(38) ಎಂದು ಗುರುತಿಸಲಾಗಿದೆ. ಸೆಲ್ವಮಣಿ ಹಾಗೂ ಇನ್ನೊಂದು ಲಾರಿಯ ಚಾಲಕ ತಮಿಳುನಾಡು ಮೂಲದ ಸುರೇಶ್ ಕುಮಾರ್ ನಡುವೆ ಶುಕ್ರವಾರ ತಡರಾತ್ರಿ ಪಡೀಲ್‌ನ ನೂತನ ರೈಲ್ವೆ ಸೇತುವೆ ಸಮೀಪ ಕ್ಷುಲ್ಲಕ ಕಾರಣಕ್ಕಾಗಿ ಮಾತಿನ ಚಕಮಕಿ ನಡೆದಿದ್ದು, ಈ ಸಂದರ್ಭದಲ್ಲಿ ಆರೋಪಿಯು ಸ್ಕ್ರೂ ಡ್ರೈವರ್ ನಿಂದ

ಮಂಗಳೂರು: ಸ್ಕ್ರೂ ಡ್ರೈವರ್ ನಿಂದ ಇರಿದು ಲಾರಿ ಚಾಲಕನ ಕೊಲೆ Read More »

ಕರಾವಳಿ

ಮಾರ್ಚ್‌ 06 ರಂದು ಬಿಜೆಪಿ ವತಿಯಿಂದ ‘ಮಂಗಳೂರು ಚಲೋ’ ► ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಗಳೂರಿಗೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.03. ಜಿಲ್ಲೆಯಲ್ಲಿ ಆಗಿರುವ ಬಿ.ಜೆ.ಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರ ಕೊಲೆ ಪ್ರಕರಣವನ್ನು ಸಿಬಿಐ ಗೆ ವಹಿಸಿಕೊಡಬೇಕು ಹಾಗೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಮಾರ್ಚ್ 06 ರಂದು ನಡೆಯಲಿರುವ ‘ಮಂಗಳೂರು ಚಲೋ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಲಿದ್ದಾರೆ. ಇಂದು (ಮಾ.03) ಸಂಸದ ಪ್ರತಾಪಸಿಂಹ ಮತ್ತು ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ ಕುಶಾಲನಗರದಿಂದ ಹಾಗೂ ಕೇಂದ್ರ ಸಚಿವ ಡಿ.ವಿ ಸದಾನಂದ

ಮಾರ್ಚ್‌ 06 ರಂದು ಬಿಜೆಪಿ ವತಿಯಿಂದ ‘ಮಂಗಳೂರು ಚಲೋ’ ► ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಗಳೂರಿಗೆ Read More »

ಕರಾವಳಿ

ಗುತ್ತಿಗಾರು: ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂದು ಪ್ರಧಾನ ಮಂತ್ರಿಗೆ ದೂರು ನೀಡಿದ ಯುವಕ ► ಪ್ರಧಾನ ಮಂತ್ರಿ ಕಛೇರಿಯಿಂದ ಕಾಮಗಾರಿ ಪರಿಶೀಲನೆಗೆ ಆದೇಶ

(ನ್ಯೂಸ್ ಕಡಬ) newskadaba.com ಸುಳ್ಯ, ಮಾ.03. ಬಳ್ಪ-ಕಮಿಲ-ಗುತ್ತಿಗಾರು ರಸ್ತೆ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ಮತ್ತು ಅವ್ಯವಹಾರ ನಡೆದಿದೆ ಎಂದು ಕಮಿಲದ ಯುವಕನೋರ್ವ ಪ್ರಧಾನಮಂತ್ರಿಗಳಿಗೆ ದೂರು ನೀಡಿದ್ದು, ಅದರಂತೆ ಪ್ರಧಾನಮಂತ್ರಿ ಕಾರ್ಯಾಲಯದಿಂದ ಸಂಬಂಧಪಟ್ಟ ಇಲಾಖೆಗಳಿಗೆ ತನಿಖೆ ನಡೆಸುವಂತೆ ಸೂಚನೆ ಬಂದಿದೆ. ಕೇಂದ್ರ ಸರಕಾರದ ಅನುದಾನದಲ್ಲಿ ನಡೆಯುತ್ತಿರುವ ಬಳ್ಪ-ಕಮಿಲ-ಗುತ್ತಿಗಾರು ರಸ್ತೆಯ ಅಭಿವೃದ್ಧಿ ಕಾಮಗಾರಿಯು ಕಳಪೆಯಾಗಿದೆ ಮತ್ತು ಅವ್ಯವಹಾರವಾಗಿದೆ ಎಂದು ಕಮಿಲ ನಿವಾಸಿ ಪ್ರಸ್ತುತ ಬೆಂಗಳೂರಿನಲ್ಲಿರುವ ಹರಿಸುಬ್ರಹ್ಮಣ್ಯ ಪುಚ್ಚಪ್ಪಾಡಿ ಎಂಬವರು ಪ್ರಧಾನಮಂತ್ರಿಯವರಿಗೆ ಇ-ಮೈಲ್ ಮೂಲಕ ದೂರು ನೀಡಿದ್ದರು. ಪ್ರಧಾನಮಂತ್ರಿಗಳ ಕಾರ್ಯಾಲಯವು ಜಿಲ್ಲಾ

ಗುತ್ತಿಗಾರು: ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂದು ಪ್ರಧಾನ ಮಂತ್ರಿಗೆ ದೂರು ನೀಡಿದ ಯುವಕ ► ಪ್ರಧಾನ ಮಂತ್ರಿ ಕಛೇರಿಯಿಂದ ಕಾಮಗಾರಿ ಪರಿಶೀಲನೆಗೆ ಆದೇಶ Read More »

ಕರಾವಳಿ

ಕಡಬ ಪ್ರಾ.ಕೃ.ಪ.ಸ.ಸಂಘದಲ್ಲಿ ನವೋದಯ ಸದಸ್ಯರಿಗೆ ಸಮವಸ್ತ್ರ ಸೀರೆ ವಿತರಣೆ ► ಸೀರೆಯಿಂದ ಸಮಾನತೆ ಮಾತ್ರವಲ್ಲ, ಹೃದಯ ವೈಶಾಲ್ಯತೆಯು ಬೇಕು: ಶಾಸಕ ಅಂಗಾರ

(ನ್ಯೂಸ್ ಕಡಬ) newskadaba.com ಕಡಬ, ಮಾ.03. ಸ್ವಸಹಾಯ ಸಂಘಗಳು ಸ್ವಾವಲಂಬಿ ಬದುಕಿನೊಂದಿಗೆ ದೇಶದ ಅಭಿವೃದ್ದಿಗೆ ಪ್ರಮುಖ ಪಾತ್ರ ವಹಿಸುತ್ತಿವೆ. ಸಂಘಗಳ ಮಹಿಳಾ ಸದಸ್ಯರು ಕೇವಲ ಒಂದೇ ರೀತಿಯ ಸೀರೆ ಉಡುವುದರಿಂದ ಸಮಾನತೆ ಬರಲು ಸಾಧ್ಯವಿಲ್ಲ, ಹೃದಯ ವೈಶಾಲ್ಯತೆಯಿಂದ ಮೇಲು ಕೀಳು ಭಾವನೆ ತೊರೆದು ಸಮಾನತೆ ತೋರುವ ಕೆಲಸ ಕೂಡ ಆಗಬೇಕು ಎಂದು ಸುಳ್ಯ ಶಾಸಕ ಎಸ್.ಅಂಗಾರ ಹೇಳಿದರು. ಅವರು ಕಡಬ ಪ್ರಾ.ಕೃ.ಸ.ಸಂಘದ ಸಭಾಂಗಣದಲ್ಲಿ ಸಂಘದ ಸಹಯೋಗದೊಂದಿಗೆ ಮಂಗಳೂರು ನವೋದಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನವೋದಯ ಸ್ವಸಹಾಯ ಸಂಘದ ಮಹಿಳಾ

ಕಡಬ ಪ್ರಾ.ಕೃ.ಪ.ಸ.ಸಂಘದಲ್ಲಿ ನವೋದಯ ಸದಸ್ಯರಿಗೆ ಸಮವಸ್ತ್ರ ಸೀರೆ ವಿತರಣೆ ► ಸೀರೆಯಿಂದ ಸಮಾನತೆ ಮಾತ್ರವಲ್ಲ, ಹೃದಯ ವೈಶಾಲ್ಯತೆಯು ಬೇಕು: ಶಾಸಕ ಅಂಗಾರ Read More »

ಕರಾವಳಿ
Scroll to Top