ಕರಾವಳಿ

ಕರಾವಳಿಯ ಯುವಕ ದುಬೈನಲ್ಲಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.25. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಯುವಕನೋರ್ವ ದುಬೈನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ರಾತ್ರಿ ನಡೆದಿದೆ. ಮೃತ ಯುವಕನನ್ನು ಉಡುಪಿಯ ಕೊಳಂಬೆ ನಿವಾಸಿ ರಾಘವೇಂದ್ರ ಭಂಡಾರಿ (35) ಎಂದು ಗುರುತಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ದುಬೈನಲ್ಲಿ ದುಡಿಯುತ್ತಿದ್ದ ಅವರು ಇತ್ತೀಚೆಗಷ್ಟೆ ಮದುವೆಯಾಗಿದ್ದರು. ಶನಿವಾರದಂದು ರಾತ್ರಿ ದುಬೈನ ಹೋಟೆಲೊಂದರಲ್ಲಿ ತಂಗಿದ್ದ ರಾಘವೇಂದ್ರ ಊರಿನಲ್ಲಿರುವ ಸಹೋದರರಿಗೆ ಕರೆ ಮಾಡಿ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ವೈಯಕ್ತಿಕ ಕಾರಣದಿಂದ ಮನನೊಂದು ಕಟ್ಟಡದಿಂದ ಹಾರಿ […]

ಕರಾವಳಿಯ ಯುವಕ ದುಬೈನಲ್ಲಿ ಆತ್ಮಹತ್ಯೆ Read More »

ಕರಾವಳಿ

ಬೈಕ್ ನ ಚಕ್ರಕ್ಕೆ ದುಪ್ಪಟ್ಟಾ ಸಿಲುಕಿ ಬಾಲಕಿ ಮೃತ್ಯು ► ಬೈಕಿನಲ್ಲಿ‌ ಸಂಚರಿಸುವಾಗ ಎಚ್ಚರ

(ನ್ಯೂಸ್ ಕಡಬ) newskadaba.com ಕಾಸರಗೋಡು, ಮಾ.25. ಪೋಷಕರ ಜೊತೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಚೂಡಿದಾರ್ ನ ದುಪ್ಪಟ್ಟಾ ಬೈಕ್ ನ ಚಕ್ರಕ್ಕೆ ಸಿಲುಕಿದ ಪರಿಣಾಮ ಬಾಲಕಿ ರಸ್ತೆಗೆಸೆಲ್ಪಟ್ಟು ಮೃತಪಟ್ಟ ದಾರುಣ ಘಟನೆ ಭಾನುವಾರದಂದು ಕಾಸರಗೋಡಿನಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಕಾಸರಗೋಡಿನ ಬೀರಿಕುಳಂ ಪೆರಿಯಂಗೋನತ್ ನಿವಾಸಿ ಸಜಿ ಹಾಗೂ ಬಿಂದು ದಂಪತಿಯ ಪುತ್ರಿ, ಪರಪ್ಪ ಸರಕಾರಿ ಹಯರ್ ಸೆಕಂಡರಿ ಶಾಲಾ ಏಳನೇ ತರಗತಿ ವಿದ್ಯಾರ್ಥಿನಿ ಮರಿಯ(12) ಎಂದು ಗುರುತಿಸಲಾಗಿದೆ. ಮರಿಯ ಭಾನುವಾರದಂದು ‘ಪಾಮ್ ಸಂಡೆ’ ಅಂಗವಾಗಿ ತಂದೆ-ತಾಯಿ

ಬೈಕ್ ನ ಚಕ್ರಕ್ಕೆ ದುಪ್ಪಟ್ಟಾ ಸಿಲುಕಿ ಬಾಲಕಿ ಮೃತ್ಯು ► ಬೈಕಿನಲ್ಲಿ‌ ಸಂಚರಿಸುವಾಗ ಎಚ್ಚರ Read More »

ಕರಾವಳಿ

ಮುಂದಿನ ಚುನಾವಣೆಯಲ್ಲಿ ಸುಳ್ಯದಲ್ಲಿ ಕಾಂಗ್ರೆಸ್ ಗೆಲುವು ಗ್ಯಾರಂಟಿ: ರಮಾನಾಥ ರೈ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.25. 2018 ರ ವಿಧಾನಸಭಾ ಚುನಾವಣೆಯಲ್ಲಿ ಸುಳ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲಿದ್ದು, ಬಿಜೆಪಿಯ ಶಾಸಕರು ಇದಕ್ಕೆ ಅವಕಾಶ ಮಾಡಿಕೊಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ. ಅವರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದೆ ಬಿಜೆಪಿಯು ಸುಳ್ಯ ಕ್ಷೇತ್ರಕ್ಕೆ ಏನು ಮಾಡಿದೆ ಎಂಬುದು ಜನರಿಗೆ ತಿಳಿದಿದೆ. ಸುಳ್ಯದಲ್ಲಿ ಪಶು ವೈದ್ಯಕೀಯ ಕಾಲೇಜು, ಕಡಬ ಪ್ರತ್ಯೇಕ ತಾಲೂಕು ಆಗಿ ಘೋಷಣೆ ಹಾಗೂ ಇತರ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು

ಮುಂದಿನ ಚುನಾವಣೆಯಲ್ಲಿ ಸುಳ್ಯದಲ್ಲಿ ಕಾಂಗ್ರೆಸ್ ಗೆಲುವು ಗ್ಯಾರಂಟಿ: ರಮಾನಾಥ ರೈ Read More »

ಕರಾವಳಿ

ಸಂಪ್ಯ: ಖಾಸಗಿ ಬಸ್ – ರಿಕ್ಷಾ ಢಿಕ್ಕಿ ► ಮಹಿಳೆ‌ ಮೃತ್ಯು, ನಾಲ್ವರು ಗಂಭೀರ

(ನ್ಯೂಸ್ ಕಡಬ) newskadaba.com ಪುತ್ತೂರು, ಮಾ.25. ಖಾಸಗಿ ಬಸ್ ಮತ್ತು ರಿಕ್ಷಾ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟು, ಮೂವರು ಗಂಭೀರ ಗಾಯಗೊಂಡ ಘಟನೆ ಮಾಣಿ – ಮೈಸೂರು ರಾಜ್ಯ ಹೆದ್ದಾರಿಯ ಸಂಪ್ಯದಲ್ಲಿ ಭಾನುವಾರದಂದು ನಡೆದಿದೆ. ಮೃತ ಮಹಿಳೆಯನ್ನು ಆರ್ಯಾಪು ಗ್ರಾಮದ ನಿವಾಸಿ ಮೋಹನ್ ಗೌಡ ಎಂಬವರ ಪತ್ನಿ ಲೀಲಾವತಿ (50) ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ಮಂಗಳೂರು ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಹಾಗೂ ಸಂಪ್ಯದ ರಿಕ್ಷಾ ನಡುವೆ ಢಿಕ್ಕಿ ಸಂಭವಿಸಿ ರಿಕ್ಷಾದಲ್ಲಿದ್ದ ಮಹಿಳೆ‌

ಸಂಪ್ಯ: ಖಾಸಗಿ ಬಸ್ – ರಿಕ್ಷಾ ಢಿಕ್ಕಿ ► ಮಹಿಳೆ‌ ಮೃತ್ಯು, ನಾಲ್ವರು ಗಂಭೀರ Read More »

ಕರಾವಳಿ

ಮೂರನೇ ಬಾರಿಗೆ ನೂತನ ಕಡಬ ತಾಲೂಕು ಉದ್ಘಾಟನೆಗೆ ಕೂಡಿಬಂತು ಕಾಲ ► ಯಾವಾಗ ಉದ್ಘಾಟನೆ ಎನ್ನುವ ಕುತೂಹಲವೇ…?

(ನ್ಯೂಸ್ ಕಡಬ) newskadaba.com ಕಡಬ, ಮಾ.24. ಎರಡೆರಡು ಬಾರಿ ಮುಂದೂಡಲಾಗಿದ್ದ ಕಡಬ ತಾಲೂಕು ಉದ್ಘಾಟನೆಗೆ ಕೊನೆಗೂ ಗಳಿಗೆ ಕೂಡಿ ಬಂದಿದೆ. ಮಾರ್ಚ್ 27 ಮಂಗಳವಾರದಂದು ಬೆಳಿಗ್ಗೆ 11 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರು ನೂತನ ಕಡಬ ತಾಲೂಕನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಈ ಹಿಂದೆ ಎರಡೆರಡು ಬಾರಿ ದಿನ‌ ನಿಗದಿಯಾಗಿದ್ದರೂ ಕಾರಣಾಂತರಗಳಿಂದಾಗಿ ಮುಂದೂಡಲಾಗಿತ್ತು. ಕೊನೆಗೂ ನೂತನ ತಾಲೂಕು ಉದ್ಘಾಟನೆಗೆ ಗಳಿಗೆ ಕೂಡಿ ಬಂದಿದೆ.

ಮೂರನೇ ಬಾರಿಗೆ ನೂತನ ಕಡಬ ತಾಲೂಕು ಉದ್ಘಾಟನೆಗೆ ಕೂಡಿಬಂತು ಕಾಲ ► ಯಾವಾಗ ಉದ್ಘಾಟನೆ ಎನ್ನುವ ಕುತೂಹಲವೇ…? Read More »

ಕರಾವಳಿ

ಸುಳ್ಯ: ಭೀಕರ ರಸ್ತೆ ಅಪಘಾತ ► ಮೂರು ತಿಂಗಳ ಮಗು ಸೇರಿ ಇಬ್ಬರು ಮೃತ್ಯು

(ನ್ಯೂಸ್ ಕಡಬ) newskadaba.com ಸುಳ್ಯ, ಮಾ.25. ರಸ್ತೆ ಬದಿ ನಿಲ್ಲಿಸಿದ್ದ ಕಂಟೈನರ್ ಲಾರಿಗೆ ಆಟೋ ರಿಕ್ಷಾವೊಂದು ಢಿಕ್ಕಿ ಹೊಡೆದ ಪರಿಣಾಮ ಮೂರು ತಿಂಗಳ ಹಸುಗೂಸು ಸೇರಿದಂತೆ ಇಬ್ಬರು ಮೃತಪಟ್ಟ ಘಟನೆ ಸುಳ್ಯದಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಮೃತರನ್ನು ಸುಳ್ಯ ತಾಲೂಕಿನ ಪೆರಾಜೆ ಗ್ರಾಮದ ಚಿತ್ತರಂಜನ್(30) ಹಾಗು ಅವರ‌ ಮೂರು ವರ್ಷ ಪ್ರಾಯದ ಎಳೆಗೂಸು ದಿಯಾ ಎಂದು ಗುರುತಿಸಲಾಗಿದೆ. ಮಗುವಿಗೆ ಅನಾರೋಗ್ಯ ಇದ್ದ ಕಾರಣ ಮಂಗಳೂರಿನ ಆಸ್ಪತ್ರೆಗೆ ತೆರಳಿ ಹಿಂತಿರುಗುತ್ತಿದ್ದಾಗ ಸುಳ್ಯದ ಅರಂಬೂರು ಸಮೀಪ ರಸ್ತೆ ಬದಿ ನಿಲ್ಲಿಸಲಾಗಿದ್ದ

ಸುಳ್ಯ: ಭೀಕರ ರಸ್ತೆ ಅಪಘಾತ ► ಮೂರು ತಿಂಗಳ ಮಗು ಸೇರಿ ಇಬ್ಬರು ಮೃತ್ಯು Read More »

ಕರಾವಳಿ

ಕಾಣಿಯೂರು ಗ್ರಾಮ ಡಿಜಿಟಲ್ ಗ್ರಾಮವಾಗಿ ಆಯ್ಕೆ

(ನ್ಯೂಸ್ ಕಡಬ) newskadaba.com  ಸವಣೂರು, ಮಾ.24. ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಡಿಜಿಟಲ್‌ ಇಂಡಿಯಾ ಪರಿಕಲ್ಪನೆಗೆ ಪೂರಕವಾಗಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಕಾಣಿಯೂರು ಗ್ರಾಮದಲ್ಲಿ ಅತೀಹೆಚ್ಚು ರೂಪೇ ಕಾರ್ಡ್ ವಿತರಣೆ ಮಾಡಿ, ಅಂತರ್ಜಾಲ ಬ್ಯಾಂಕಿಂಗ್ , ಎಟಿಎಂ ವ್ಯವಹಾರ ಉತ್ತೇಜನ, ಗ್ರಾಮದ ಪ್ರತಿಯೊಬ್ಬರಿಗೂ ಉಳಿತಾಯ ಖಾತೆಗಳನ್ನು ಹೊಂದುವಂತೆ ಮಾಡಿ ಡಿಜಿಟಲ್ ಗ್ರಾಮ ಪುರಸ್ಕಾರಕ್ಕೆ ಆಯ್ಕೆಗೊಂಡಿದೆ ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಜನರಲ್ ಮೇನೆಜರ್ ಎಸ್.ಎಂ. ಗೋರ್ಬಲ್ ಹೇಳಿದರು. ಅವರು ಕಾಣಿಯೂರು ಗ್ರಾ.ಪಂ. ಕಚೇರಿಯಲ್ಲಿ ಕರ್ನಾಟಕ

ಕಾಣಿಯೂರು ಗ್ರಾಮ ಡಿಜಿಟಲ್ ಗ್ರಾಮವಾಗಿ ಆಯ್ಕೆ Read More »

ಕರಾವಳಿ

ಸವಣೂರು ವಿಷ್ಣುಪುರ ಆರಿಗಮಜಲಿನಲ್ಲಿ ಬಸ್ ತಂಗುದಾಣ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಸವಣೂರು, ಮಾ.24. ಇಲ್ಲಿನ ವಿಷ್ಣುಪುರ ಆರಿಗಮಜಲಿನಲ್ಲಿ ಸವಣೂರು ಗ್ರಾಮ ಪಂಚಾಯತ್‍ನ ಅನುದಾನದಲ್ಲಿ ನಿರ್ಮಾಣಗೊಂಡ ನೂತನ ಬಸ್ ತಂಗುದಾಣವನ್ನು ಉದ್ಘಾಟಿಸಲಾಯಿತು. ಈ ಸಂದರ್ಭ ತಾ.ಪಂ. ಉಪಾಧ್ಯಕ್ಷೆ  ರಾಜೇಶ್ವರಿ ಕೆ, ಎಪಿಎಂಸಿ ನಿರ್ದೇಶಕ ದಿನೇಶ್ ಮೆದು, ಸವಣೂರು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಬಿ.ಕೆ, ಉಪಾಧ್ಯಕ್ಷರಾದ ರವಿಕುಮಾರ್ ಬಿ.ಕೆ, ಲೆಕ್ಕ ಸಹಾಯಕ ಎ.ಮನ್ಮಥ, ಸದಸ್ಯರಾದ ಸತೀಶ್ ಬಲ್ಯಾಯ, ಪ್ರಕಾಶ್ ಕುದ್ಮನಮಜಲು, ಗಾಯತ್ರಿ ಬರೆಮೇಲು, ವೇದಾವತಿ ಬಾಲಕೃಷ್ಣ ಅಂಜಯ, ರಾಜೀವಿ ವಿಠಲ ಶೆಟ್ಟಿ ಕೆಡೆಂಜಿ, ಸಿಬ್ಬಂಧಿ ಪ್ರಮೋದ್ ಕುಮಾರ್ ರೈ, ದಯಾನಂದ

ಸವಣೂರು ವಿಷ್ಣುಪುರ ಆರಿಗಮಜಲಿನಲ್ಲಿ ಬಸ್ ತಂಗುದಾಣ ಉದ್ಘಾಟನೆ Read More »

ಕರಾವಳಿ

ಐತಿಹಾಸಿಕ 250ನೇ ಪಾಲ್ತಾಡು ಒತ್ತೆಕೋಲಕ್ಕೆ ಕ್ಷಣಗಣನೆ

(ನ್ಯೂಸ್ ಕಡಬ) newskadaba.com ಸವಣೂರು, ಮಾ.24. ಕೊಳ್ತಿಗೆ ಗ್ರಾಮದ ಪಾಲ್ತಾಡು ವಿಷ್ಣುನಗರದಲ್ಲಿ ಐತಿಹಾಸಿಕ 250ನೇ ವರ್ಷದ ವಿಷ್ಣುಮೂರ್ತಿ ದೈವದ ಒತ್ತೆಕೋಲಕ್ಕೆ ಕ್ಷಣಗಣನೆ ಆರಂಭವಾಗಿದೆ. ಒತ್ತೆಕೋಲವು ಮಾ.24ರಂದು ರಾತ್ರಿ ಆರಂಭಗೊಂಡು ಮಾ.25ರ ಮದ್ಯಾಹ್ನದವರೆಗೆ ನಡೆಯಲಿದೆ.ಮಾ.24ರಂದು ಬೆಳಿಗ್ಗೆ ದೈವಸ್ಥಾನದಲ್ಲಿ ಗಣಹೋಮ, ಶುದ್ಧಿ ಕಲಶ, ಮಧ್ಯಾಹ್ನ ಕಲಶ ಪೂಜೆ ನಡೆದು, ಸಂಜೆ ನಡುಮನೆ ದೈವಸ್ಥಾನದಿಂದ ಭಂಡಾರ ತೆಗೆದು ರಾತ್ರಿ ಮೇಲೇರಿಗೆ ಅಗ್ನಿ ಸ್ಪರ್ಶ,ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.ಅನ್ನಸಂತರ್ಪಣೆಯ ಬಳಿಕ ಕುಳಿಚಟ್ಟು ನಡೆಯಲಿದೆ. ನಂತರ  ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಬಯಲಾಟ ನಡೆಯಲಿದೆ.ಮಾ.25ರಂದು ಬೆಳಿಗ್ಗೆ ವಿಷ್ಣುಮೂರ್ತಿ

ಐತಿಹಾಸಿಕ 250ನೇ ಪಾಲ್ತಾಡು ಒತ್ತೆಕೋಲಕ್ಕೆ ಕ್ಷಣಗಣನೆ Read More »

ಕರಾವಳಿ

 ಸವಣೂರು, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟ

(ನ್ಯೂಸ್ ಕಡಬ) newskadaba.com ಸವಣೂರು, ಮಾ.24. ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಕ್ರೀಡೋತ್ಸವವು ಮಾ.24 ರಂದು ನಡೆಯಿತು.  ಕ್ರೀಡಾಕೂಟವನ್ನು ಉದ್ಘಾಟಿಸಿದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ  ಶ್ರೀ. ಕೆ. ಸೀತಾರಾಮ ರೈ ಸವಣೂರು ಇವರು,  “ಇತ್ತೀಚಿನ ದಿನಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆಯುವಂತಹ ಸಂದರ್ಭದಲ್ಲಿ ಪೋಷಕರ ಹಾಗೂ ವಿದ್ಯಾರ್ಥಿಗಳ ಒಲವು ಓದಿನ ಕಡೆಗೆ ಮಾತ್ರವಿದ್ದು, ಕ್ರೀಡೆಯ ಕಡೆಗೆ ಕಡಿಮೆಯಾಗುತ್ತಿದೆ.  ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು ಒಂದೇ ನಾಣ್ಯದ ಎರಡು ಮುಖಗಳಾಗಿದ್ದು ಜೊತೆ ಜೊತೆಯಲ್ಲಿ ಸಾಗಬೇಕು,  ಕ್ರೀಡೆಯಲ್ಲಿ ಮುಂದಿರುವ ವಿದ್ಯಾರ್ಥಿಗಳೇ ಇಂದು

 ಸವಣೂರು, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟ Read More »

ಕರಾವಳಿ
Scroll to Top