ಕರಾವಳಿ

ಪಾಲ್ತಾಡು: ವಿಷ್ಣುಮೂರ್ತಿ ದೈವದ ಒತ್ತೆಕೋಲ

(ನ್ಯೂಸ್ ಕಡಬ) newskadaba.com ಸವಣೂರು, ಮಾ.27. ಕೊಳ್ತಿಗೆ ಗ್ರಾಮದ ಪಾಲ್ತಾಡು ನಡುಮನೆ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ವರ್ಷಾವಧಿ ಒತ್ತೆಕೋಲವು ನಡೆಯಿತು. ಕಾರ್ಯಕ್ರಮದಲ್ಲಿ ಬೆಳಿಗ್ಗೆ ದೈವಸ್ಥಾನದಲ್ಲಿ ಗಣಹೋಮ, ಶುದ್ದಿ ಕಲಶ, ಮಧ್ಯಾಹ್ನ ಕಲಶ ಪೂಜೆ ನಡೆಯಿತು.ಸಂಜೆ ನಡುಮನೆ ದೈವಸ್ಥಾನದಿಂದ ಭಂಡಾರ ತೆಗೆದು ರಾತ್ರಿ ಮೇಲೇರಿಗೆ ಅಗ್ನಿ ಸ್ಪರ್ಶ ಮಾಡಲಾಯಿತು. ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸುಮಾರು 5000 ಕ್ಕೂ ಮಿಕ್ಕಿ ಜನರು ಅನ್ನಪ್ರಸಾದ ಸ್ವೀಕರಿಸಿದರು.ಅನ್ನಸಂತರ್ಪಣೆಯ ಬಳಿಕ ಕುಳಿಚಟ್ಟು ನಡೆಯಿತು. ನಂತರ ಜಿಲ್ಲೆಯ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಪ್ರಾತಃಕಾಲ […]

ಪಾಲ್ತಾಡು: ವಿಷ್ಣುಮೂರ್ತಿ ದೈವದ ಒತ್ತೆಕೋಲ Read More »

ಕರಾವಳಿ

ಸವಣೂರು: ಮುಗೇರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಜಾತ್ರೋತ್ಸವ

(ನ್ಯೂಸ್ ಕಡಬ) newskadaba.com ಸವಣೂರು, ಮಾ.27. ಸವಣೂರು ಗ್ರಾಮದ ಮುಗೇರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ 4ನೇ ವಾರ್ಷಿಕ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಜಾತ್ರೋತ್ಸವವು ಬ್ರಹ್ಮಶ್ರೀ ನೀಲೇಶ್ವರ ದಾಮೋದರ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ಮಾ.25 ರಂದು ಬೆಳಿಗ್ಗೆ ಭಕ್ತಾಧಿಗಳಿಂದ ಹೊರೆಕಾಣಿಕೆ ಸಮರ್ಪಣೆ ಬಳಿಕ ಭಕ್ತಾಧಿಗಳಿಂದ ಕ್ಷೇತ್ರ ಸ್ವಚ್ಚತೆ, ಅಲಂಕಾರ ಸೇವೆ, ಸಂಜೆ ತಂತ್ರಿಗಳ ಆಗಮನ, ಪೂರ್ಣಕುಂಭ ಸ್ವಾಗತ, ಸಾಮೂಹಿಕ ಪ್ರಾರ್ಥನೆ ,ಪುಣ್ಯಾಹ, ಪ್ರಸಾದ ಶುದ್ದಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ರಾತ್ರಿ ಪೂಜೆ ನಡೆಯಿತು. ಮಾ.26

ಸವಣೂರು: ಮುಗೇರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಜಾತ್ರೋತ್ಸವ Read More »

ಕರಾವಳಿ

ಕುದ್ಮಾರು: ತಿರಂಗಾ ವಾರಿಯರ್ಸ್ ವತಿಯಿಂದ ಸ್ಚಚ್ಛತಾ ಕಾರ್ಯ

(ನ್ಯೂಸ್ ಕಡಬ) newskadaba.com ಬೆಳಂದೂರು, ಮಾ.27. ದ.ಕ. ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ಬೆಳಂದೂರು, ತಿರಂಗಾ ವಾರಿಯರ್ಸ್ ಕುದ್ಮಾರು ಇವುಗಳ ಸಹಯೋಗದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕುದ್ಮಾರು ಗ್ರಾಮದಲ್ಲಿ ಸ್ಚಚ್ಛತಾ ಕಾರ್ಯ ನಡೆಯಿತು. ಬೆಳಂದೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಉಮೇಶ್ವರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ನಮ್ಮ ಮನೆ, ಪರಿಸರ, ಗ್ರಾಮವನ್ನು ಸ್ಚಚ್ಛವಾಗಿಟ್ಟುಕೊಳ್ಳುವ ಕಾರ್ಯವಾಗಬೇಕು. ಎಲ್ಲೆಂದರಲ್ಲಿ ಕಸ ಬಿಸಾಡುವ ರೂಢಿಗೆ ಸ್ವಪ್ರೇರಣೆಯಿಂದ ಕಡಿವಾಣ ಹಾಕುವಂತಾಗಬೇಕೆಂದರು. ಪಿಡಿಒ ನವೀನ್, ಕುದ್ಮಾರು ಶಾಲಾ ಎಸ್‍ಡಿಎಂಸಿ ಅಧ್ಯಕ್ಷೆ ಪುಷ್ಪಾಲತಾ ಪಿ. ಗೌಡ, ತಿರಂಗಾ ವಾರಿಯರ್ಸ್ ಕುದ್ಮಾರು

ಕುದ್ಮಾರು: ತಿರಂಗಾ ವಾರಿಯರ್ಸ್ ವತಿಯಿಂದ ಸ್ಚಚ್ಛತಾ ಕಾರ್ಯ Read More »

ಕರಾವಳಿ

ಪುಂಜಾಲಕಟ್ಟೆ: ಅಟೋರಿಕ್ಷಾ – ಬೈಕ್ ಢಿಕ್ಕಿ ► ಸವಾರರಿಗೆ ಗಾಯ

(ನ್ಯೂಸ್ ಕಡಬ) newskadaba.com ಪುಂಜಾಲಕಟ್ಟೆ, ಮಾ.27. ಅಟೋರಿಕ್ಷಾವೊಂದು ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರರು ಗಾಯಗೊಂಡಿರುವ ಘಟನೆ ಪುಂಜಾಲಕಟ್ಟೆಯಲ್ಲಿ ನಡೆದಿದೆ. ಗಾಯಾಳುಗಳನ್ನು ಮೋಟಾರು ಸೈಕಲ್ ಸವಾರ ಉಮೇಶ್ ಹಾಗೂ ಸಹಸವಾರ ತೆಂಕಕಜೆಕಾರು ಗ್ರಾಮ ನಿವಾಸಿ  ಚಂದ್ರ ಎಂದು ಗುರುತಿಸಲಾಗಿದೆ. ಇವರು ಉಮೇಶ್ ಎಂಬವರ  ಮೋಟಾರು ಸೈಕಲ್ನಲ್ಲಿ ಮಡಂತ್ಯಾರು ಕಡೆಯಿಂದ ಪಾಂಡವರಕಲ್ಲಿಗೆ ಹೋಗುತ್ತಿರುವಾಗ,   ಬಂಟ್ವಾಳ ತಾಲೂಕು ಬಡಗಕಜೆಕಾರು ಗ್ರಾಮದ ಕೊಮಿನಡ್ಕ ಎಂಬಲ್ಲಿ ಈ ಘಟನೆಯು ಸಂಧವಿಸಿದೆ. ವಿರುದ್ದ ದಿಕ್ಕಿನಿಂದ ಅಟೋ ರಿಕ್ಷಾವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ

ಪುಂಜಾಲಕಟ್ಟೆ: ಅಟೋರಿಕ್ಷಾ – ಬೈಕ್ ಢಿಕ್ಕಿ ► ಸವಾರರಿಗೆ ಗಾಯ Read More »

ಕರಾವಳಿ

ಕಳಾರ ತಡೆಗೋಡೆಗೆ ಗುದ್ದಲಿಪುಜೆ

(ನ್ಯೂಸ್ ಕಡಬ) newskadaba.com ಕಡಬ, ಮಾ.27. ಕಡಬ ಗ್ರಾ.ಪಂ. ವ್ಯಾಪ್ತಿಯ ಕಳಾರ ದಲಿತ ಕಾಲೋನಿಯಲ್ಲಿ ಸುಳ್ಯ ಶಾಸಕರ ಅನುದಾನದಲ್ಲಿ ತಡೆಗೋಡೆ ನಿರ್ಮಾಣಕ್ಕಾಗಿ ಸೋಮವಾರ ಗುದ್ದಲಿಪುಜೆ ನೆರವೇರಿಸಲಾಯಿತು. ಶಾಸಕರ ಸುಮಾರು 5 ಲಕ್ಷ ರೂ.ಅನುದಾನದಲ್ಲಿ ನಿರ್ಮಾಣವಾಗಲಿರುವ ತಡೆಗೋಡೆಗೆ ತಾ.ಪಂ.ಮಾಜಿ ಅಧ್ಯಕ್ಷ ಎಪಿಎಂಸಿ ನಿರ್ದೇಶಕಿ ಪುಲಸ್ತ್ಯಾ ರೈ ಗುದ್ದಲಿಪುಜೆ ನೆರವೇರಿಸಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಸಮಾಜದ ಎಲ್ಲಾ ವರ್ಗದ ಜನತೆ ನೆಮ್ಮದಿಯ ಬದುಕನ್ನು ಕಾಣಬೇಕು ಎಂಬ ದೃಷ್ಟಿಯಿಂದ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದು ಜನ ಮೆಚ್ಚುಗೆಯನ್ನು ಪಡೆದಿದ್ದಾರೆ. ಮುಂದೆ

ಕಳಾರ ತಡೆಗೋಡೆಗೆ ಗುದ್ದಲಿಪುಜೆ Read More »

ಕರಾವಳಿ

ಕರಾಯ: ಭೀಕರ ರಸ್ತೆ ಅಪಘಾತ ► ಬಸ್ಸಿನ ಚಕ್ರ ಹರಿದು ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮಾ.27. ಖಾಸಗಿ ಬಸ್ ಹಾಗೂ ಬೈಕ್‌ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಓರ್ವ ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪದ ಕರಾಯ ಎಂಬಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ. ಮೃತರನ್ನು ಕೊಲ್ಯ ನಿವಾಸಿ ಚಂದ್ರಶೇಖರ(34) ಎಂದು ಗುರುತಿಸಲಾಗಿದೆ. ಉಪ್ಪಿನಂಗಡಿಯಿಂದ ಕಕ್ಕೆಪದವು ತೆರಳುತ್ತಿದ್ದ ಜೀವನ್ ಜ್ಯೋತಿ ಖಾಸಗಿ ಬಸ್ ಹಾಗೂ ಟಿವಿಎಸ್ ವೇಗೋ ಸ್ಕೂಟಿ ನಡುವೆ ಢಿಕ್ಕಿ ಸಂಭವಿಸಿದ್ದು, ಘಟನೆಯಲ್ಲಿ ಸವಾರನ ಮೇಲೆ ಬಸ್ಸಿನ ಚಕ್ರ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕರಾಯ: ಭೀಕರ ರಸ್ತೆ ಅಪಘಾತ ► ಬಸ್ಸಿನ ಚಕ್ರ ಹರಿದು ಬೈಕ್ ಸವಾರ ಸ್ಥಳದಲ್ಲೇ ಮೃತ್ಯು Read More »

ಕರಾವಳಿ

ರಾಜಕೀಯದ ಮೇಲಾಟವೋ…? ಸರಕಾರದ ಇಚ್ಚಾಶಕ್ತಿಯ ಕೊರತೆಯೋ..? ► ಅಂತೂ ಕಡಬ ತಾಲೂಕು ಉದ್ಘಾಟನೆಗೆ ಬಿತ್ತು ಬ್ರೇಕ್….!!

(ನ್ಯೂಸ್ ಕಡಬ) newskadaba.com ಕಡಬ, ಮಾ.27. ಕಳೆದ ಹಲವು ದಶಕಗಳ ಬೇಡಿಕೆಯಾಗಿದ್ದ ನೂತನ ಕಡಬ ತಾಲೂಕು ರಚನೆಯ ಕನಸು ನನಸಾಗುವ ಹಂತಕ್ಕೆ ತಲುಪಿದ್ದರೂ ಇದೀಗ ರಾಜಕೀಯದ ಮೇಲಾಟದಿಂದಲೋ..? ಸರಕಾರದ ಇಚ್ಚಾಶಕ್ತಿಯ ಕೊರತೆಯಿಂದಲೋ..? ಕಡಬ ತಾಲೂಕು ಉದ್ಘಾಟನೆಗೆ ಬ್ರೇಕ್ ಬಿದ್ದಿದೆ. ಎರಡೆರಡು ಬಾರಿ ದಿನಾಂಕ ನಿಗದಿಯಾಗಿ ಕಾರಣಾಂತರಗಳಿಂದಾಗಿ ಮುಂದೂಡಲಾಗಿದ್ದ ಕಡಬ ತಾಲೂಕು ಉದ್ಘಾಟನೆಯು ಮಾರ್ಚ್ 27 ರಂದು ನಡೆಯಲಿದೆ ಎಂದು ಜಿಲ್ಲಾಡಳಿತದ ವತಿಯಿಂದ ಅಧಿಕೃತ ದಿನಾಂಕ ಘೋಷಣೆಯಾದ ನಂತರ ಕಡಬದಲ್ಲಿ ಸಮಾಧಾನಕರ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ

ರಾಜಕೀಯದ ಮೇಲಾಟವೋ…? ಸರಕಾರದ ಇಚ್ಚಾಶಕ್ತಿಯ ಕೊರತೆಯೋ..? ► ಅಂತೂ ಕಡಬ ತಾಲೂಕು ಉದ್ಘಾಟನೆಗೆ ಬಿತ್ತು ಬ್ರೇಕ್….!! Read More »

ಕರಾವಳಿ

ಕಡಬ: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಮಾ.27. ಕಳೆದ ಐದು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಗೌಡಿಗೆ ನಿವಾಸಿ ತೇಜಕುಮಾರ ಯಾನೆ ತಾರಾನಾಥ(38ವ) ಎಂಬವರ ಮೃತ ದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಸೋಮವಾರದಂದು ಪತ್ತೆಯಾಗಿದೆ. ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಅವರು ಮಾರ್ಚ್ 21 ರಂದು ತನ್ನ ಮನೆಯಿಂದ ಹೊರಟವರು ಮನೆಯ ಕಡೆ ಬಾರದೆ ನಾಪತ್ತೆಯಾಗಿದ್ದರು. ಬಳಿಕ ಮನೆಯವರು ಎಲ್ಲಾ ಕಡೆ ಹುಡುಕಾಡಿದ್ದರಾದರೂ ಎಲ್ಲೂ ಸುಳಿವು ದೊರೆತಿರಲಿಲ್ಲ. ಸೋಮವಾರದಂದು ತನ್ನ ಮನೆಯಿಂದ ಸುಮಾರು ಒಂದು ಕಿಲೋಮೀಟರ್

ಕಡಬ: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ Read More »

ಕರಾವಳಿ

ಕಡಬ: ಬೈಕಿಗೆ ಪಿಕಪ್ ಢಿಕ್ಕಿ, ಸವಾರನಿಗೆ ಗಾಯ ► ಪೊಲೀಸ್ ಠಾಣೆಗೆ ಜಮಾಯಿಸಿದ ಸಂಘಟನೆಯ ಕಾರ್ಯಕರ್ತರು – ಕಡಬದಲ್ಲಿ ಉದ್ವಿಗ್ನ ಪರಿಸ್ಥಿತಿ

(ನ್ಯೂಸ್ ಕಡಬ) newskadaba.com ಕಡಬ, ಮಾ.26. ಪಿಕಪ್ ವಾಹನವೊಂದು ಬೈಕಿಗೆ ಢಿಕ್ಕಿ ಹೊಡೆದುದರ ಪರಿಣಾಮ ಬೈಕ್ ಸವಾರ ಗಾಯಗೊಂಡ ಘಟನೆ ಕಡಬದಲ್ಲಿ ಸೋಮವಾರ ರಾತ್ರಿ ನಡೆದಿದೆ. ಗಾಯಾಳು ಬೈಕ್ ಸವಾರನನ್ನು ಕೋಡಿಂಬಾಳ‌ ನಿವಾಸಿ ನವೀನ್ ಎಂದು ಗುರುತಿಸಲಾಗಿದೆ. ಈತ ತನ್ನ ಬೈಕಿನಲ್ಲಿ ತೆರಳುತ್ತಿದ್ದಾಗ ಕಡಬ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಪಿಕಪ್ ಢಿಕ್ಕಿ ಹೊಡೆದಿದೆ. ಪಿಕಪ್ ಚಾಲಕ ರಾಜು ಎಂಬಾತ ಕೆಲದಿನಗಳ ಹಿಂದೆ ಅಕ್ರಮ ಗೋ ಸಾಗಾಟ ಪ್ರಕರಣದಲ್ಲಿ ಬಂಧಿತನಾಗಿದ್ದು, ಆ ಕಾರಣಕ್ಕಾಗಿ ಉದ್ದೇಶಪೂರ್ವಕವಾಗಿ ಅಪಘಾತ ಎಸಗಿದ್ದಾರೆ ಎಂದು

ಕಡಬ: ಬೈಕಿಗೆ ಪಿಕಪ್ ಢಿಕ್ಕಿ, ಸವಾರನಿಗೆ ಗಾಯ ► ಪೊಲೀಸ್ ಠಾಣೆಗೆ ಜಮಾಯಿಸಿದ ಸಂಘಟನೆಯ ಕಾರ್ಯಕರ್ತರು – ಕಡಬದಲ್ಲಿ ಉದ್ವಿಗ್ನ ಪರಿಸ್ಥಿತಿ Read More »

ಕರಾವಳಿ

ಶಾಸಕರ ಅನುದಾನದ ಆನೆಗುಂಡಿ ಕುಡಿಯುವ ನೀರಿನ ಯೋಜನೆಗೆ ಚಾಲನೆ

(ನ್ಯೂಸ್ ಕಡಬ) newskadaba.com ಕೊೖಲ, ಮಾ.26.  ಕಡಬ ತಾಲೂಕಿನ ಕೊೖಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆನೆಗುಂಡಿ ದಲಿತ ಕಾಲೋನಿಗೆ ಕುಡಿಯುವ ನೀರಿನ ಯೋಜನೆ ಅನುಷ್ಟಾನಕ್ಕಾಗಿ ಸುಳ್ಯ ಶಾಸಕ ಎಸ್.ಅಂಗಾರ 3.5 ಲಕ್ಷ ರೂ ಅನುದಾನ ಮಂಜೂರುಗೊಳಿಸಿದ್ದು, ಭಾನುವಾರ ಕೊಳವೆ ಬಾವಿ ಕೊರೆಯಲು ಪ್ರಾರಂಭಿಸುವ ಮೂಲಕ ಯೋಜನೆಗೆ ಚಾಲನೆ ದೊರೆಯಿತು. ಶಾಸಕರ ಅನುದಾನದಲ್ಲಿ ನಡೆಯುವ ಕಾಮಗಾರಿಗೆ ಕೊೖಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಮೋಹನ್ದಾಸ್ ಶೆಟ್ಟಿ ಬೆಳಿಗ್ಗೆ ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೊೖಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ

ಶಾಸಕರ ಅನುದಾನದ ಆನೆಗುಂಡಿ ಕುಡಿಯುವ ನೀರಿನ ಯೋಜನೆಗೆ ಚಾಲನೆ Read More »

ಕರಾವಳಿ
Scroll to Top