ಸವಣೂರು ವಿಷ್ಣುಪುರ ಆರಿಗಮಜಲಿನಲ್ಲಿ ಬಸ್ ತಂಗುದಾಣ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಸವಣೂರು, ಮಾ.24. ಇಲ್ಲಿನ ವಿಷ್ಣುಪುರ ಆರಿಗಮಜಲಿನಲ್ಲಿ ಸವಣೂರು ಗ್ರಾಮ ಪಂಚಾಯತ್‍ನ ಅನುದಾನದಲ್ಲಿ ನಿರ್ಮಾಣಗೊಂಡ ನೂತನ ಬಸ್ ತಂಗುದಾಣವನ್ನು ಉದ್ಘಾಟಿಸಲಾಯಿತು.

ಈ ಸಂದರ್ಭ ತಾ.ಪಂ. ಉಪಾಧ್ಯಕ್ಷೆ  ರಾಜೇಶ್ವರಿ ಕೆ, ಎಪಿಎಂಸಿ ನಿರ್ದೇಶಕ ದಿನೇಶ್ ಮೆದು, ಸವಣೂರು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಬಿ.ಕೆ, ಉಪಾಧ್ಯಕ್ಷರಾದ ರವಿಕುಮಾರ್ ಬಿ.ಕೆ, ಲೆಕ್ಕ ಸಹಾಯಕ ಎ.ಮನ್ಮಥ, ಸದಸ್ಯರಾದ ಸತೀಶ್ ಬಲ್ಯಾಯ, ಪ್ರಕಾಶ್ ಕುದ್ಮನಮಜಲು, ಗಾಯತ್ರಿ ಬರೆಮೇಲು, ವೇದಾವತಿ ಬಾಲಕೃಷ್ಣ ಅಂಜಯ, ರಾಜೀವಿ ವಿಠಲ ಶೆಟ್ಟಿ ಕೆಡೆಂಜಿ, ಸಿಬ್ಬಂಧಿ ಪ್ರಮೋದ್ ಕುಮಾರ್ ರೈ, ದಯಾನಂದ ಮಾಲೆತ್ತಾರು, ಪಾಲ್ತಾಡಿ ಚೈತನ್ಯ ರೈತಶಕ್ತಿ ಗುಂಪಿನ ಅಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ತಾರಾನಾಥ ಕಾಯರ್ಗ, ಗಣೇಶ್ ಪಟ್ಟೆ, ಹರಿಪ್ರಸಾದ್ ಎ.ಪಿ. ಅಂಗಡಿಮೂಲೆ, ಗುತ್ತಿಗೆ ದಾರ ಪ್ರಜ್ವಲ ಕೆ.ಆರ್, ಚಂದ್ರ  ಮೊದಲಾದವರಿದ್ದರು.

ಈಡೇರಿತು ಬಹುದಿನಗಳ ಬೇಡಿಕೆ

ಈ ಮೂಲಕ ಈ ಭಾಗದ ಜನತೆಯ ಬಹುದಿನಗಳ ಕನಸೊಂದು ಈಡೇರಿದಂತಾಗಿದೆ ವಿಷ್ಣುಪುರ ಆರಿಗ ಮಜಲಿನಲ್ಲಿ  ಮಾಡಾವು-ಕುಮಾರಮಂಗಲ-ಸವಣೂರು ಬಸ್ ಮತ್ತು ಬೆಳ್ಳಾರೆ ಸವಣೂರು ಬಸ್ ಹಾದು ಹೋಗುತ್ತಿದ್ದರು ಇಲ್ಲಿ ಬಸ್ ನಿಲ್ದಾಣವಿಲ್ಲದೆ ಪ್ರಯಾಣಿಕರು ಬಿಸಿಲಲ್ಲೇ ನಿಲ್ಲುವ ಪರಿಸ್ಥಿತಿ ಇತ್ತು. ಬಸ್ ತಂಗುದಾಣ ನಿರ್ಮಾಣದ ಮೂಲಕ ಬೇಡಿಕೆಯೊಂದು ಈಡೇರಿದೆ.

 

Scroll to Top