ಸುಳ್ಯ: ಭೀಕರ ರಸ್ತೆ ಅಪಘಾತ ► ಮೂರು ತಿಂಗಳ ಮಗು ಸೇರಿ ಇಬ್ಬರು ಮೃತ್ಯು

(ನ್ಯೂಸ್ ಕಡಬ) newskadaba.com ಸುಳ್ಯ, ಮಾ.25. ರಸ್ತೆ ಬದಿ ನಿಲ್ಲಿಸಿದ್ದ ಕಂಟೈನರ್ ಲಾರಿಗೆ ಆಟೋ ರಿಕ್ಷಾವೊಂದು ಢಿಕ್ಕಿ ಹೊಡೆದ ಪರಿಣಾಮ ಮೂರು ತಿಂಗಳ ಹಸುಗೂಸು ಸೇರಿದಂತೆ ಇಬ್ಬರು ಮೃತಪಟ್ಟ ಘಟನೆ ಸುಳ್ಯದಲ್ಲಿ ಶನಿವಾರ ತಡರಾತ್ರಿ ನಡೆದಿದೆ.

ಮೃತರನ್ನು ಸುಳ್ಯ ತಾಲೂಕಿನ ಪೆರಾಜೆ ಗ್ರಾಮದ ಚಿತ್ತರಂಜನ್(30) ಹಾಗು ಅವರ‌ ಮೂರು ವರ್ಷ ಪ್ರಾಯದ ಎಳೆಗೂಸು ದಿಯಾ ಎಂದು ಗುರುತಿಸಲಾಗಿದೆ. ಮಗುವಿಗೆ ಅನಾರೋಗ್ಯ ಇದ್ದ ಕಾರಣ ಮಂಗಳೂರಿನ ಆಸ್ಪತ್ರೆಗೆ ತೆರಳಿ ಹಿಂತಿರುಗುತ್ತಿದ್ದಾಗ ಸುಳ್ಯದ ಅರಂಬೂರು ಸಮೀಪ ರಸ್ತೆ ಬದಿ ನಿಲ್ಲಿಸಲಾಗಿದ್ದ ಕಂಟೇಬರ್ ಲಾರಿಗೆ ರಿಕ್ಷಾ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಯತ್ನಿಸಿದ್ದು, ಆ ಸಂದರ್ಭದಲ್ಲಿ ರಿಕ್ಷಾದಿಂದ ಹೊರಕ್ಕೆಸೆಯಲ್ಪಟ್ಟು ಕಂಟೈನರ್ ಮೇಲ ತಲೆ ತಾಗಿದ್ದರಿಂದ ತಂದೆ ಮತ್ತು ಮಗು ಸ್ಥಳದಲ್ಲೇ ಮೃತಪಟ್ಟಿದ್ದಾರೆ‌. ತಾಯಿ ಮತ್ತು ರಿಕ್ಷಾ ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಸುಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Scroll to Top