ಕರಾವಳಿ

ಗೃಹರಕ್ಷಕರ ವಾರ್ಷಿಕ ಮೂಲ ತರಬೇತಿ ಶಿಬಿರದ ಸಮಾರೋಪ ಸಮಾರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಎ.23. ದಿನಾಂಕ 13-04-2018 ರಿಂದ 22-04-2018 ರವರೆಗೆ ನಡೆದ ವಾರ್ಷಿಕ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಆದಿತ್ಯವಾರ ದಂದು ಸಂಜೆ 4.00ಗಂಟೆಗೆ ಪೊಲೀಸ್ ಪೆರೇಡ್ ಮೈದಾನದಲ್ಲಿ ನಡೆಯಿತು. ಈ ಸಮಾರಂಭದಲ್ಲಿ ವಸಂತ್ ಕುಮಾರ್, ಬೆಳ್ಳಾರೆ ಘಟಕ ಇವರ ನೇತೃತ್ವದಲ್ಲಿ 4 ತುಕಡಿಗಳ ಪಥ ಸಂಚಲನ ನಡೆಯಿತು. ಮೊದಲನೇ ತುಕಡಿಯ ಮುಂದಾಳತ್ವವನ್ನು ಶ್ರೀ ರಮೇಶ್ ಭಂಡಾರಿ, ಎರಡನೇ ತುಕಡಿಯ ಮುಂದಾಳತ್ವವನ್ನು ಶ್ರೀ ಸತೀಶ್.ಕೆ, ಮೂರನೆಯ ತುಕಡಿಯ ಮುಂದಾಳತ್ವವನ್ನು ವಾಣಿಶ್ರೀ ಹಾಗೂ ನಾಲ್ಕನೆಯ ತುಕಡಿಯ ಮುಂದಾಳತ್ವವನ್ನು […]

ಗೃಹರಕ್ಷಕರ ವಾರ್ಷಿಕ ಮೂಲ ತರಬೇತಿ ಶಿಬಿರದ ಸಮಾರೋಪ ಸಮಾರಂಭ Read More »

ಕರಾವಳಿ

ಎತ್ತರ ಜಿಗಿತದಲ್ಲಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಎ.23 ಮಾಸ್ಟರ್ ಅಥ್ಲೆಟಿಕ್ಸ್‌ ವತಿಯಿಂದ ಎ.12ರಿಂದ 15ರ ವರೆಗೆ ಮಂಗಳೂರು ಮಂಗಳಾ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರಮಟ್ಟದ ಮಾಸ್ಟರ್ ಅಥ್ಲೆಟಿಕ್ಸ್‌ನಲ್ಲಿ ಎತ್ತರ ಜಿಗಿತದಲ್ಲಿ ಓಂತ್ರಡ್ಕ ಉ.ಹಿ.ಪ್ರಾ.ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಎ.ಬಾಲಕೃಷ್ಣ ರೈಯವರು ಪ್ರಥಮ ಸ್ಥಾನ ಪಡೆದು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಎತ್ತರ ಜಿಗಿತದಲ್ಲಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ Read More »

ಕರಾವಳಿ

ಎಸ್ಕೆಎಸ್ಸೆಸ್ಸೆಫ್ ಮತ್ತು ಬ್ಲಡ್ ಡೋನರ್ಸ್ ಮಂಗಳೂರು ಸಹಭಾಗಿತ್ವ ► ಕಲ್ಲಡ್ಕದಲ್ಲಿ ಬೃಹತ್ ರಕ್ತದಾನ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, ಎ.23. ಎಸ್ಕೆಎಸ್ಸೆಸ್ಸೆಫ್ ಕಲ್ಲಡ್ಕ ಕ್ಲಸ್ಟರ್ ಮತ್ತು ಬ್ಲಡ್ ಡೋನರ್ಸ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಎ.ಜೆ. ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ಹಜಾಜ್ ಸ್ಪೋರ್ಟ್ಸ್ ಕ್ಲಬ್ ಗೋಳ್ತಮಜಲು ಇದರ ಸಭಾಂಗಣದಲ್ಲಿ ನಡೆಯಿತು. ಎಸ್ಕೆಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಖಾಸಿಂ ದಾರಿಮಿ ಕಿನ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಲ್ಲಡ್ಕ ಖತೀಬರಾದ ಇಸ್ಮಾಯಿಲ್ ಫೈಝಿ ದುವಾಃ ನೆರವೇರಿಸಿದರು. ಸ್ವಾಗತ ಭಾಷಣವನ್ನು ಸದಕತುಲ್ಲಾಹ್ ಮುಸ್ಲಿಯಾರ್ ಹಾಗೂ ಅಧ್ಯಕ್ಷತೆಯನ್ನು ಕೆ. ಅಶ್ರಫ್ ಮಾನಿಮಜಲು ವಹಿಸಿದ್ದರು.

ಎಸ್ಕೆಎಸ್ಸೆಸ್ಸೆಫ್ ಮತ್ತು ಬ್ಲಡ್ ಡೋನರ್ಸ್ ಮಂಗಳೂರು ಸಹಭಾಗಿತ್ವ ► ಕಲ್ಲಡ್ಕದಲ್ಲಿ ಬೃಹತ್ ರಕ್ತದಾನ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮ Read More »

ಕರಾವಳಿ

ಚುನಾವಣಾ ಪ್ರಚಾರಕ್ಕಾಗಿ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಕರಾವಳಿಗೆ ► ಏಪ್ರಿಲ್ 27 ರಂದು ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ

(ನ್ಯೂಸ್ ಕಡಬ) newskadaba.com ಮಂಗಳೂರು, ಎ.22. ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯದಲ್ಲಿ ಭರ್ಜರಿ ರೋಡ್‌ ಶೋ ನಡೆಸಲು ಸಿದ್ಧತೆ ನಡೆಸಿದ್ದಾರೆ. ಏಪ್ರಿಲ್ 26 ಹಾಗೂ 27 ರಂದು ಎರಡು ದಿನದ ಪ್ರವಾಸಕ್ಕಾಗಿ ರಾಜ್ಯಕ್ಕೆ ಆಗಮಿಸಲಿರುವ ರಾಹುಲ್ ಗಾಂಧಿಯವರು ಎಪ್ರಿಲ್ 27 ರಂದು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿ ಮಂಜುನಾಥ ಸ್ವಾಮಿಯ ದರ್ಶನ ಪಡೆಯಲಿದ್ದಾರೆ. ಆ ಬಳಿಕ ಕೊಡಗಿನ ಗೋಣಿಕೊಪ್ಪಲಿನಲ್ಲಿ ಕಾರ್ಯಕರ್ತರ ಸಭೆ ನಡೆಸಿದ ನಂತರ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ರೋಡ್‌ ಶೋ

ಚುನಾವಣಾ ಪ್ರಚಾರಕ್ಕಾಗಿ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಕರಾವಳಿಗೆ ► ಏಪ್ರಿಲ್ 27 ರಂದು ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ Read More »

ಕರಾವಳಿ

ಕಲ್ಲುಗುಂಡಿ: ಬಸ್ ನಿಲ್ದಾಣದಲ್ಲಿ ಅನಾಥ ವೃದ್ಧೆಯ ಮೃತದೇಹ ► ವಿಲೇವಾರಿ ನಡೆಸಿದ ಎಸ್ಕೆಎಸ್ಸೆಸ್ಸೆಫ್ ಎಮರ್ಜೆನ್ಸಿ ತಂಡದ ಸದಸ್ಯರು

(ನ್ಯೂಸ್ ಕಡಬ) newskadaba.com ಸುಳ್ಯ, ಎ.22. ತಾಲೂಕಿನ ಕಲ್ಲುಗುಂಡಿ ಕೂಲಿಶೆಡ್ ಬಳಿಯ ಬಸ್ ನಿಲ್ದಾಣದಲ್ಲಿ ಶನಿವಾರ ರಾತ್ರಿ ಅನಾಥ ವೃದ್ಧರೋರ್ವರು ಮೃತಪಟ್ಟಿದ್ದು, ಭಾನುವಾರದಂದು ಗೂನಡ್ಕದ ಎಸ್ಕೆಎಸ್ಸೆಸ್ಸೆಫ್ ಎಮರ್ಜೆನ್ಸಿ ಟೀಮ್ ಸದಸ್ಯರು ಮೃತದೇಹದ ದಫನ ಕಾರ್ಯ ನಡೆಸಿದರು. ಕಲ್ಲುಗುಂಡಿಯ‌ ಬಸ್ ನಿಲ್ದಾಣದಲ್ಲಿ ಅನಾಥ ವೃದ್ಧರೋರ್ವರ ಮೃತದೇಹವಿದ್ದು, ವಿಲೇವಾರಿಗೆ ಸಹಕರಿಸಬೇಕೆಂಬ ಕಲ್ಲುಗುಂಡಿ ಪೊಲೀಸ್ ಠಾಣೆ ಸಿಬ್ಬಂದಿಯ ಕರೆಯ ಮೇರೆಗೆ ಸ್ಥಳಕ್ಕೆ ತೆರಳಿದ ಎಸ್ಕೆಎಸ್ಸೆಸ್ಸೆಫ್ ಸುಳ್ಯ ವಲಯ ವಿಖಾಯ ಕಾರ್ಯದರ್ಶಿ, ಎಸ್ಕೆಎಸ್ಸೆಸ್ಸೆಫ್ ಎಮರ್ಜೆನ್ಸಿ ತಂಡದ ನಿರ್ವಾಹಕ, ನವಶಕ್ತಿ ಕರ್ನಾಟಕ ಇದರ ಜಿಲ್ಲಾಧ್ಯಕ್ಷರಾದ

ಕಲ್ಲುಗುಂಡಿ: ಬಸ್ ನಿಲ್ದಾಣದಲ್ಲಿ ಅನಾಥ ವೃದ್ಧೆಯ ಮೃತದೇಹ ► ವಿಲೇವಾರಿ ನಡೆಸಿದ ಎಸ್ಕೆಎಸ್ಸೆಸ್ಸೆಫ್ ಎಮರ್ಜೆನ್ಸಿ ತಂಡದ ಸದಸ್ಯರು Read More »

ಕರಾವಳಿ

ಸುಬ್ರಹ್ಮಣ್ಯ: ಟೆಂಪೋ ಟ್ರಾವೆಲ್ಲರ್ – ಇಂಡಿಕಾ ಕಾರು ನಡುವೆ ಢಿಕ್ಕಿ ► ಮಗು ಸೇರಿದಂತೆ ಐವರು ಗಂಭೀರ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಎ.22. ಇಂಡಿಕಾ ಕಾರು ಹಾಗೂ ಟೆಂಪೋ ಟ್ರಾವೆಲ್ಲರ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಐವರು ಗಂಭೀರ ಗಾಯಗೊಂಡ ಘಟನೆ ಭಾನುವಾರದಂದು ಸುಬ್ರಹ್ಮಣ್ಯದಲ್ಲಿ ನಡೆದಿದೆ. ಕುಕ್ಕೇ ಸುಬ್ರಹ್ಮಣ್ಯ ದೇವರ ದರ್ಶನ ಮುಗಿಸಿ ಬೆಂಗಳೂರಿಗೆ ತೆರಳುತ್ತಿದ್ದ ಟೆಂಪೋ ಟ್ರಾವೆಲ್ಲರ್ ಹಾಗೂ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಇಂಡಿಕಾ ಕಾರು ನಡುವೆ ಸುಬ್ರಹ್ಮಣ್ಯದ ಇಂಜಾಡಿ ಎಂಬಲ್ಲಿ ಮುಖಾಮುಖಿ ಢಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಮಗು ಸೇರಿ ಐವರ ಸ್ಥಿತಿ ಗಂಭೀರವಾಗಿದ್ದು, 108 ಆಂಬ್ಯುಲೆನ್ಸ್‌ ಮೂಲಕ

ಸುಬ್ರಹ್ಮಣ್ಯ: ಟೆಂಪೋ ಟ್ರಾವೆಲ್ಲರ್ – ಇಂಡಿಕಾ ಕಾರು ನಡುವೆ ಢಿಕ್ಕಿ ► ಮಗು ಸೇರಿದಂತೆ ಐವರು ಗಂಭೀರ Read More »

ಕರಾವಳಿ

ರಾಜ್ಯ ಪ್ರೌಢಶಿಕ್ಷಣ ಮಂಡಳಿಯ ಚಿತ್ರಕಲಾ ಪರೀಕ್ಷೆ 2017-18 ► ಸೈಂಟ್ ಜೋಕಿಮ್ಸ್‌, ಸೈಂಟ್ ಆನ್ಸ್‌, ಸರಸ್ವತಿ ಶಾಲೆಗಳಿಗೆ ಶೇಕಡ 100 ಫಲಿತಾಂಶ

(ನ್ಯೂಸ್ ಕಡಬ) newskadaba.com ಕಡಬ, ಎ.22. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷೆ ಮಂಡಳಿಯ 2017-18ನೇ  ಸಾಲಿನ ಚಿತ್ರಕಲಾ ಗ್ರೇಡ್ ಪರೀಕ್ಷೆಗಳಲ್ಲಿ ಲೋಯರ್ ಮತ್ತು ಹೈಯರ್ ಗ್ರೇಡ್ ವಿಭಾಗದಲ್ಲಿ, ಕಡಬ ಸೈಂಟ್ ಜೋಕಿಮ್ಸ್, ಸೈಂಟ್ ಆನ್ಸ್‌, ಸರಸ್ವತಿ ವಿದ್ಯಾಲಯ, ಸ್ಯಾಂತೋಮ್ ಪ್ರೌಢ ಶಾಲೆ, ಬೆಸ್ಟ್‌ ಕುರಿಯಕ್ರೋಸ್ ಪ್ರೌಢಶಾಲೆ, ವಿದ್ಯಾಬೋಧಿನಿ ಬಾಳಿಲ ಪ್ರಗತಿ ಪ್ರೌಢಶಾಲೆ, ಸರ್ಕಾರಿ ಪ್ರೌಢಶಾಲೆ ಏನೆಕಲ್, ಸರ್ಕಾರಿ ಪ್ರೌಡಶಾಲೆ ಎಡಮಂಗಲ ಈ ಎಲ್ಲಾ ಶಾಲೆಗಳಿಗೆ ಶೇಕಡ 100 ಫಲಿತಾಂಶ ಲಭಿಸಿದೆ. ಸೈಂಟ್ ಜೋಕಿಮ್ಸ್‌ ಪ್ರೌಢಶಾಲೆ ಕಡಬ: ಲೋಯರ್

ರಾಜ್ಯ ಪ್ರೌಢಶಿಕ್ಷಣ ಮಂಡಳಿಯ ಚಿತ್ರಕಲಾ ಪರೀಕ್ಷೆ 2017-18 ► ಸೈಂಟ್ ಜೋಕಿಮ್ಸ್‌, ಸೈಂಟ್ ಆನ್ಸ್‌, ಸರಸ್ವತಿ ಶಾಲೆಗಳಿಗೆ ಶೇಕಡ 100 ಫಲಿತಾಂಶ Read More »

ಕರಾವಳಿ

ಹೊಸ್ಮಠ ಸೇತುವೆ ಬಳಿ ವಾಹನ ತೊಳೆದು ನೀರು ಕಲುಷಿತಗೊಳಿಸದಂತೆ ಕ್ರಮ ► ಹೊಳೆಗೆ ಇಳಿಯುವ ಮಾರ್ಗ ಬಂದ್ ಮಾಡಿ ಎಚ್ಚರಿಕೆ ಫಲಕ ಹಾಕಿದ ಪಂಚಾಯತ್

(ನ್ಯೂಸ್ ಕಡಬ) newskadaba.com ಕಡಬ, ಎ.21. ಇಲ್ಲಿನ ಹೊಸ್ಮಠ ಸೇತುವೆಯ ಬಳಿ ಗುಂಡ್ಯ ಹೊಳೆಗೆ ವಾಹನಗಳನ್ನು ಇಳಿಸಿ ತೊಳೆಯುತ್ತಿರುವುದರಿಂದಾಗಿ ನೀರು ಕಲುಷಿತಗೊಂಡು ಹೊಳೆಯ ನೀರನ್ನು ಉಪಯೋಗಿಸುತ್ತಿರುವವರಿಗೆ ತೊಂದರೆಯಾಗುತ್ತಿದೆ ಎನ್ನುವ ಸಚಿತ್ರ ವರದಿ ಮಾಧ್ಯಮಗಳಲ್ಲಿ ಪ್ರಕಟಗೊಂಡ ಬೆನ್ನಲ್ಲೇ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ವತಿಯಿಂದ ಹೊಳೆಗೆ ಇಳಿಯುವ ಮಾರ್ಗ ಬಂದ್ ಮಾಡಿ ನೀರು ಮಲಿನಗೊಳಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ಫಲಕ ನೆಡಲಾಗಿದೆ. ಹೊಳೆಯ ಬದಿಯ ನಿವಾಸಿಗಳು ತಮ್ಮ ಬಾವಿಗಳಲ್ಲಿ ನೀರಿನ ಕೊರತೆ ಎದುರಾಗಿರುವುದರಿಂದ ಕುಡಿಯುವುದಕ್ಕಾಗಿಯೂ ಹೊಳೆಯ ನೀರನ್ನು

ಹೊಸ್ಮಠ ಸೇತುವೆ ಬಳಿ ವಾಹನ ತೊಳೆದು ನೀರು ಕಲುಷಿತಗೊಳಿಸದಂತೆ ಕ್ರಮ ► ಹೊಳೆಗೆ ಇಳಿಯುವ ಮಾರ್ಗ ಬಂದ್ ಮಾಡಿ ಎಚ್ಚರಿಕೆ ಫಲಕ ಹಾಕಿದ ಪಂಚಾಯತ್ Read More »

ಕರಾವಳಿ

ರಕ್ತದ ಕ್ಯಾನ್ಸರ್ ಗೆ ತುತ್ತಾಗಿರುವ ಪೂಜಾಶ್ರೀಗೆ ಧನ ಸಹಾಯ ► ನೊಂದವರಿಗೆ ಬೆಳಕಾಗುತ್ತಿರುವ ಬೆಳ್ಳಾರೆಯ ಜ್ಞಾನದೀಪ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಎ.22. ರಕ್ತದ ಕ್ಯಾನ್ಸರ್ (ಲ್ಯುಕೇಮಿಯಾ) ಗೆ ತುತ್ತಾಗಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಳ್ಯ ತಾಲೂಕಿನ ಬಳ್ಪ ಗ್ರಾಮದ ಹೊಪ್ಪಾಳೆ ನಿವಾಸಿ ಪೂಜಾಶ್ರೀಗೆ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ಸಂಸ್ಥೆಯು ಸಹಾಯ ಧನ ನೀಡಿ ನೆರವಾಗಿದೆ. ಸುಬ್ರಹ್ಮಣ್ಯ ಎಸ್.ಎಸ್.ಪಿ.ಯು ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾಗಿರುವ ಪೂಜಾಶ್ರೀ ಕೆಲವು ಸಮಯಗಳ ಹಿಂದೆ ರಕ್ತದ ಕ್ಯಾನ್ಸರ್ ಗೆ ತುತ್ತಾಗಿ ಇದೀಗ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೂಲಿ ಕೆಲಸ ಮಾಡಿ

ರಕ್ತದ ಕ್ಯಾನ್ಸರ್ ಗೆ ತುತ್ತಾಗಿರುವ ಪೂಜಾಶ್ರೀಗೆ ಧನ ಸಹಾಯ ► ನೊಂದವರಿಗೆ ಬೆಳಕಾಗುತ್ತಿರುವ ಬೆಳ್ಳಾರೆಯ ಜ್ಞಾನದೀಪ Read More »

ಕರಾವಳಿ

ಕಡಲ ಚಿಪ್ಪು ಅಕ್ರಮ ಮಾರಾಟ ಯತ್ನ ► ನೆಲ್ಯಾಡಿ ನಿವಾಸಿ ಸೇರಿದಂತೆ ಏಳು ಮಂದಿಯ ಬಂಧನ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಎ.22. ಕಡಲ ಚಿಪ್ಪನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಸಿಸಿಬಿ ಪೊಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕಡಬ ತಾಲೂಕಿನ ನೆಲ್ಯಾಡಿ ನಿವಾಸಿ ಇಸ್ಮಾಈಲ್(40), ನೆಲ್ಯಾಡಿಯ ದೋಂತಿಲ ನಿವಾಸಿ ಜಾರ್ಜ್ ವಿ.ಕೆ. (35), ಅಡ್ಡೂರು ಗ್ರಾಮದ ಕೋಡಿಬೆಟ್ಟು ಮುಹಮ್ಮದ್ ಮನ್ಸೂರ್(27), ಬಡಗುಳಿಪಾಡಿ ಗ್ರಾಮದ ನಾಡಾಜೆ ರಸ್ತೆ ನಿವಾಸಿ ಇಬ್ರಾಹೀಂ(35), ಕಳವಾರು ಗ್ರಾಮದ ಕುಪ್ಪೆಪದವು ಅಟ್ಟಿಪದವು ನಿವಾಸಿ ದಿನೇಶ್ (29), ಪಾವೂರು ಗ್ರಾಮದ ಹರೇಕಳ ಮುಹಮ್ಮದ್ ಮುಖ್ತಾರ್(19), ಕಳವಾರು

ಕಡಲ ಚಿಪ್ಪು ಅಕ್ರಮ ಮಾರಾಟ ಯತ್ನ ► ನೆಲ್ಯಾಡಿ ನಿವಾಸಿ ಸೇರಿದಂತೆ ಏಳು ಮಂದಿಯ ಬಂಧನ Read More »

ಕರಾವಳಿ
Scroll to Top