ಕರಾವಳಿ

ಕೊನೆಯ ಕ್ಷಣದಲ್ಲಿ ಸುಳ್ಯ ಕ್ಷೇತ್ರದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದ ಎಸ್ಡಿಪಿಐ ► ಕಾರಣವೇನು ಗೊತ್ತೇ…?

(ನ್ಯೂಸ್ ಕಡಬ) newskadaba.com ಸುಳ್ಯ, ಎ.24. ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಮುಂದಾಗಿದ್ದ ಎಸ್ಡಿಪಿಐ ಪಕ್ಷವು ಕೊನೆಯ ಹಂತದಲ್ಲಿ ಸ್ಪರ್ಧೆಯಿಂದ ಹಿಂಜರಿದಿದ್ದು, ಖಾತೆ ತೆರೆಯಲು ಪರದಾಡುತ್ತಿರುವ ಕಾಂಗ್ರೆಸ್ ಗೆ ಅನುಕೂಲಕರ ವಾತಾವರಣ ಸೃಷ್ಟಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ಡಿಪಿಐ ಅಭ್ಯರ್ಥಿಯಾಗಿ ಘೋಷಿಸಲಾಗಿದ್ದ ಆನಂದ ಮಿತ್ತಬೈಲ್, 2103 ರ ಚುನಾವಣೆಯಲ್ಲಿ ಎಸ್ಡಿಪಿಐ ಪಕ್ಷದ ಸ್ಪರ್ಧೆಯಿಂದ ಬಿಜೆಪಿಗೆ ಅನುಕೂಲಕರವಾಗಿತ್ತು. ಈ ಚುನಾವಣೆಯಲ್ಲೂ ಜಾತ್ಯಾತೀತ ಮತಗಳು ವಿಭಜನೆಯಾಗಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸುವ ಉದ್ದೇಶದಿಂದ ಕೊನೆಯ ಕ್ಷಣದಲ್ಲಿ ಸುಳ್ಯ ಕ್ಷೇತ್ರದಲ್ಲಿ ಎಸ್ಡಿಪಿಐ […]

ಕೊನೆಯ ಕ್ಷಣದಲ್ಲಿ ಸುಳ್ಯ ಕ್ಷೇತ್ರದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದ ಎಸ್ಡಿಪಿಐ ► ಕಾರಣವೇನು ಗೊತ್ತೇ…? Read More »

ಕರಾವಳಿ

ಸುಳ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಗುರುವಪ್ಪ ಕಲ್ಲುಗುಡ್ಡೆ ಕಣಕ್ಕೆ…?

(ನ್ಯೂಸ್ ಕಡಬ) newskadaba.com ಕಡಬ, ಎ.24. ಸುಳ್ಯ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಕಡಬದ ದಲಿತ ಮುಖಂಡ ಗುರುವಪ್ಪ ಕಲ್ಲುಗುಡ್ಡೆಯವರು ಇಂದು‌ ನಾಮಪತ್ರ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ನಲ್ಲಿ ರಾತ್ರಿ ಹಗಲೆನ್ನದೆ ದುಡಿದು ಪಕ್ಷವನ್ನು ಸಂಘಟಿಸುವಲ್ಲಿ ಮುಂಚೂಣಿಯಲ್ಲಿದ್ದರೂ, ಪಕ್ಷದಲ್ಲಿ ಗಣನೆಗೆ ತೆಗೆದುಕೊಳ್ಳದೆ ಇರುವುದರಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಸುಳ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಗುರುವಪ್ಪ ಕಲ್ಲುಗುಡ್ಡೆ ಕಣಕ್ಕೆ…? Read More »

ಕರಾವಳಿ

ಪುತ್ತೂರು: ನಿರ್ಮಾಣ ಹಂತದ ಕಟ್ಟಡದ ಮೇಲೆ ಗುಡ್ಡ ಕುಸಿತ ► ಇಬ್ಬರು ಮೃತ್ಯು, ಹಲವರಿಗೆ ಗಾಯ

(ನ್ಯೂಸ್ ಕಡಬ) newskadaba.com ಪುತ್ತೂರು, ಎ.24. ನಿರ್ಮಾಣ ಹಂತದ ಕಟ್ಟಡದ ಮೇಲೆ ಮಣ್ಣು ಕುಸಿದ ಪರಿಣಾಮ ಇಬ್ಬರು ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂಡ ಘಟನೆ ಪುತ್ತೂರಿನಲ್ಲಿ ಮಂಗಳವಾರದಂದು ನಡೆದಿದೆ. ಮೃತರನ್ನು ಉತ್ತರ ಕರ್ನಾಟಕ ಮೂಲದವರೆಂದು ಗುರುತಿಸಲಾಗಿದೆ. ಇವರು ಮಂಗಳವಾರದಂದು ಇಲ್ಲಿನ ನೆಲ್ಲಿಕಟ್ಟೆ ಅನಿತಾ ಆಯಿಲ್ ಮಿಲ್ ಬಳಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಕಾಮಗಾರಿ ವೇಳೆ ಗುಡ್ಡ ಕುಸಿದ ಪರಿಣಾಮ ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾರೆ. ಮಣ್ಣಿನಡಿ ಸಿಲುಕಿರುವ ಕಾರ್ಮಿಕರ ವಿವರ ಇನ್ನಷ್ಟೇ ತಿಳಿದುಬರಬೇಕಿದೆ.

ಪುತ್ತೂರು: ನಿರ್ಮಾಣ ಹಂತದ ಕಟ್ಟಡದ ಮೇಲೆ ಗುಡ್ಡ ಕುಸಿತ ► ಇಬ್ಬರು ಮೃತ್ಯು, ಹಲವರಿಗೆ ಗಾಯ Read More »

ಕರಾವಳಿ

ಬೆಳ್ಳಂಬೆಳಗ್ಗೆ ಮುರಿದು ಬಿದ್ದ ದುರ್ಗಾಂಬಿಕಾ ದೇವಸ್ಥಾನದ ಬಳಿಯ ಅಶ್ವತ್ಥ ಮರದ ಕೊಂಬೆ ► ಉಪ್ಪಿನಂಗಡಿ – ಕಡಬ ರಾಜ್ಯ ಹೆದ್ದಾರಿ ಕೆಲಕಾಲ ಬಂದ್

(ನ್ಯೂಸ್ ಕಡಬ) newskadaba.com ಕಡಬ, ಎ.24. ಇಲ್ಲಿನ ದುರ್ಗಾಂಬಿಕಾ ದೇವಸ್ಥಾನದ ಬಳಿಯಿರುವ ಬೃಹತ್ ಅಶ್ವತ್ಥ ಮರದ ಕೊಂಬೆಯೊಂದು ಮುರಿದು ರಸ್ತೆಗಡ್ಡವಾಗಿ ಬಿದ್ದ ಪರಿಣಾಮ ಕೆಲಕಾಲ ರಸ್ತೆ ತಡೆಯುಂಟಾದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. ಬೆಳಿಗ್ಗಿನ ಸಮಯವಾದ್ದರಿಂದ ದೇವಸ್ಥಾನಕ್ಕೆ ಬರುವ ಮತ್ತು ನ್ಯೂಸ್ ಪೇಪರ್ ಖರೀದಿಸಲು ಹಾಗೂ ವಾಹನ ಸಂಚಾರವಿರುವ ಪ್ರದೇಶವಾಗಿದ್ದರೂ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬಳಿಕ ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರು ಸೇರಿ ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಬೆಳ್ಳಂಬೆಳಗ್ಗೆ ಮುರಿದು ಬಿದ್ದ ದುರ್ಗಾಂಬಿಕಾ ದೇವಸ್ಥಾನದ ಬಳಿಯ ಅಶ್ವತ್ಥ ಮರದ ಕೊಂಬೆ ► ಉಪ್ಪಿನಂಗಡಿ – ಕಡಬ ರಾಜ್ಯ ಹೆದ್ದಾರಿ ಕೆಲಕಾಲ ಬಂದ್ Read More »

ಕರಾವಳಿ

ಉಪ್ಪಿನಂಗಡಿಯ ನವಜೋಡಿಗೆ ವೈವಾಹಿಕ ಶುಭಾಶಯ ಕೋರಿದ ಪ್ರಧಾನಿ ಮೋದಿ ► ಪ್ರಧಾನಿಯ ಪತ್ರದಿಂದ ಮದುವೆ ಮನೆಯಲ್ಲಿ ಮೇರೆ ಮೀರಿದ ಸಂಭ್ರಮ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಎ.23. ವಿವಾಹ ಕಾರ್ಯಕ್ರಮಕ್ಕೆ ತುಂಬಾ ಅಭಿಮಾನದ ಗಣ್ಯ ವ್ಯಕ್ತಿಗಳು ಆಗಮಿಸಿದರೆ ಎಲ್ಲರಿಗೂ ತುಂಬಾ ಸಂತೋಷವಾಗುವುದು ಸಹಜ. ಅಂತೆಯೇ ದೇಶದ ಪ್ರಧಾನಿಯೇ ದೇಶದ ನಾಗರಿಕರೊಬ್ಬರ ವಿವಾಹಕ್ಕೆ ಶುಭಾಶಯ ಕೋರಿ ಪತ್ರ ಬರೆದರೆ ಸಂತಸ ಸಂಭ್ರಮ ಮುಗಿಲು ಮುಟ್ಟವುದು ಸಹಜ ತಾನೆ…? ಉಪ್ಪಿನಂಗಡಿಯ ಹಿರಿಯ ಸಾಮಾಜಿಕ ಮುಂದಾಳು ಕಂಗ್ವೆ ವಿಶ್ವನಾಥ ಶೆಟ್ಟಿ ಹಾಗೂ ಶಾಂತ ಶೆಟ್ಟಿ ದಂಪತಿಯ ಪುತ್ರ ನಿಶಿತ್ ರವರ ವಿವಾಹವು ಬಜಪೆ ಮೇಗಿನ ಆರ್ಲ ಉದಯಶಂಕರ ಶೆಟ್ಟಿಯವರ ಪುತ್ರಿ ಡಾ| ಕೃತಿಕಾ

ಉಪ್ಪಿನಂಗಡಿಯ ನವಜೋಡಿಗೆ ವೈವಾಹಿಕ ಶುಭಾಶಯ ಕೋರಿದ ಪ್ರಧಾನಿ ಮೋದಿ ► ಪ್ರಧಾನಿಯ ಪತ್ರದಿಂದ ಮದುವೆ ಮನೆಯಲ್ಲಿ ಮೇರೆ ಮೀರಿದ ಸಂಭ್ರಮ Read More »

ಕರಾವಳಿ

ಕಡಬ: ಕುಡಿದ ಮತ್ತಿನಲ್ಲಿ ರಸ್ತೆಗೆ ಕಲ್ಲು ಇಟ್ಟು ಕೆಎಸ್ಸಾರ್ಟಿಸಿ ಬಸ್ಸನ್ನು ತಡೆದ ಮದ್ಯಪಾನಿ ► ಕುಡುಕನ ಅವಾಂತರದಿಂದ ಸಾರ್ವಜನಿಕರಿಗೆ ಪುಕ್ಕಟೆ ಮನರಂಜನೆ

(ನ್ಯೂಸ್ ಕಡಬ) newskadaba.com ಕಡಬ, ಎ.23. ಮದ್ಯವ್ಯಸನಿಯೋರ್ವನ ಅವಾಂತರದಿಂದ ಸಾರ್ವಜನಿಕರಿಗೆ ಪುಕ್ಕಟೆ ಮನರಂಜನೆ ದೊರಕಿದ ಘಟನೆ ಸೋಮವಾರದಂದು ಕಡಬ ಪೇಟೆಯಲ್ಲಿ ನಡೆದಿದೆ. ಕೊಂಬಾರು ನಿವಾಸಿಯೋರ್ವ ಕಳೆದ ಕೆಲವು ಸಮಯಗಳ ಹಿಂದೆ ಕುಡಿದ ಮತ್ತಿನಲ್ಲಿ ತನ್ನಲ್ಲಿದ್ದ ಒಂದು ಲಕ್ಷ ಎಪ್ಪತ್ತೈದು ಸಾವಿರದಷ್ಟು ಹಣವನ್ನು ಕಡಬ ಪೇಟೆಯಲ್ಲಿ ಕಳೆದುಕೊಂಡಿದ್ದನು. ತದನಂತರ ದಿನಾಲೂ ಕುಡಿದು ಕಡಬ ಪೇಟೆಯಲ್ಲಿ ಒಂದಲ್ಲ ಒಂದು ಕೀಟಲೆಗಳನ್ನು ನಡೆಸುತ್ತಾ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಈತ ಸೋಮವಾರದಂದು ಬೆಳಿಗ್ಗೆ ಸುಬ್ರಹ್ಮಣ್ಯದಿಂದ ಕಡಬಕ್ಕೆ ಬರುವ ಕೆಎಸ್ಸಾರ್ಟಿಸಿ ಬಸ್ಸಿನ ನಿರ್ವಾಹಕನ ಜೊತೆ

ಕಡಬ: ಕುಡಿದ ಮತ್ತಿನಲ್ಲಿ ರಸ್ತೆಗೆ ಕಲ್ಲು ಇಟ್ಟು ಕೆಎಸ್ಸಾರ್ಟಿಸಿ ಬಸ್ಸನ್ನು ತಡೆದ ಮದ್ಯಪಾನಿ ► ಕುಡುಕನ ಅವಾಂತರದಿಂದ ಸಾರ್ವಜನಿಕರಿಗೆ ಪುಕ್ಕಟೆ ಮನರಂಜನೆ Read More »

ಕರಾವಳಿ

ಕೋಡಿಂಬಾಳ ರೈಲ್ವೇ ನಿಲ್ದಾಣ ಎಕ್ಸ್‌ಪ್ರೆಸ್ ರೈಲು ನಿಲುಗಡೆ , ಮೂಲಭೂತ ಸೌಕರ್ಯ ಅಭಿವೃದ್ದಿ ಕನಸು ಮಾತ್ರ

(ನ್ಯೂಸ್ ಕಡಬ) newskadaba.com, ಕಡಬ, ಎ.23.  ಕಡಬ ತಾಲೂಕಿನ ಕೋಡಿಂಬಾಳ ರೈಲು ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆ, ನಿಲ್ದಾಣ ಅಭಿವೃದ್ದಿಪಡಿಸಬೇಕೆಂದು ಈ ಭಾಗದ ಜನತೆ ಮನವಿ ನೀಡಿ, ಹೋರಾಟ ಮಾಡಿ ಸಂಬಂದಪಟ್ಟವರಿಗೆ ಹಕ್ಕೋತ್ತಾಯ ಮಂಡಿಸಿದರೂ ಯಾವೂದೆ ಪ್ರಯೋಜನವಿಲ್ಲ. ಇಲಾಖಾಧಿಕಾರಿಗಳು ಕಾನೂನು ನೆಪವೊಡ್ಡಿ ರೈಲು ನಿಲುಗಡೆ ಸಾಧ್ಯವಿಲ್ಲ ಎಂದಿದ್ದಾರೆ. ದಿನನಿತ್ಯ ಕಡಬ ಹಾಗೂ ಸುತ್ತಮುತ್ತಲಿನ ಹೊಸಮಠ, ಬಲ್ಯ, ಕುಟ್ರುಪ್ಪಾಡಿ, ಪದವು, ಕುಂತೂರು, ಪೆರಾಬೆ, ಆಲಂಕಾರು, ನೂಜಿಬಾಳ್ತಿಲ, ಇಚ್ಲಂಪಾಡಿ, ನೆಲ್ಯಾಡಿ, ರೆಂಜಿಲಾಡಿ, ಬಂಟ್ರ, ಮರ್ದಾಳ, ಕೋಡಿಂಬಾಳ, ಕೇಪು ಪ್ರದೇಶಗಳಿಂದ ದಿನನಿತ್ಯ ಮಂಗಳೂರು

ಕೋಡಿಂಬಾಳ ರೈಲ್ವೇ ನಿಲ್ದಾಣ ಎಕ್ಸ್‌ಪ್ರೆಸ್ ರೈಲು ನಿಲುಗಡೆ , ಮೂಲಭೂತ ಸೌಕರ್ಯ ಅಭಿವೃದ್ದಿ ಕನಸು ಮಾತ್ರ Read More »

ಕರಾವಳಿ

ಉಳ್ಳಾಲ: ಹವಾಮಾನ ವೈಪರೀತ್ಯ ► ಕಡಲಿನ ಅಬ್ಬರಕ್ಕೆ ಹಲವು ಮನೆಗಳಿಗೆ ಹಾನಿ

(ನ್ಯೂಸ್ ಕಡಬ) newskadaba.com ಮಂಗಳೂರು, ಎ.23. ಹವಾಮಾನ ವೈಪರೀತ್ಯದಿಂದಾಗಿ ಉಳ್ಳಾಲ, ಸೋಮೇಶ್ವರ, ಉಚ್ಚಿಲ ಪ್ರದೇಶಗಳಲ್ಲಿ ಕಡಲಿನ ಅಬ್ಬರ ತೀವ್ರಗೊಂಡ ಪರಿಣಾಮ ಕೆಲವು ಮನೆಗಳಿಗೆ ಹಾನಿಯಾಗಿವೆ. ಶನಿವಾರ ರಾತ್ರಿಯಿಂದಲೇ ಸೋಮೇಶ್ವರ, ಉಚ್ಚಿಲ ಭಾಗದಲ್ಲಿ ಕಡಲ್ಕೊರೆತದ ತೀವ್ರತೆ ವಿಪರೀತವಾಗಿತ್ತು. ಸೋಮೇಶ್ವರ, ಉಚ್ಚಿಲದಲ್ಲಿ ನಾಲ್ಕು ಮನೆಗಳಿಗೆ ಹಾನಿಯಾಗಿದ್ದು, ಹಲವು ಮನೆಗಳಿಗೆ ನೀರು ನುಗ್ಗಿವೆ. ರವಿವಾರ ಮಧ್ಯಾಹ್ನದಿಂದ ಉಳ್ಳಾಲ ಸೋಮೇಶ್ವರ ಪ್ರದೇಶದಲ್ಲಿ ಕಡಲು ಪ್ರಕ್ಷುಬ್ದಗೊಂಡಿದ್ದು, ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಪ್ರತಿ ವರ್ಷ ಮಳೆಗಾಲ ಆರಂಭದ ಬಳಿಕವಷ್ಟೇ ಕಡಲ್ಕೊರೆತದ ಸಮಸ್ಯೆ ಎದುರಾಗುತ್ತಿತ್ತು,

ಉಳ್ಳಾಲ: ಹವಾಮಾನ ವೈಪರೀತ್ಯ ► ಕಡಲಿನ ಅಬ್ಬರಕ್ಕೆ ಹಲವು ಮನೆಗಳಿಗೆ ಹಾನಿ Read More »

ಕರಾವಳಿ

ಪಂಜ: ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ಅಂಚೆ ಪಾಲಕ

(ನ್ಯೂಸ್ ಕಡಬ) newskadaba.com ಪಂಜ, ಎ.23. ಅನಾರೋಗ್ಯದಿಂದ ಬಳಲುತ್ತಿದ್ದ ನಿವೃತ್ತ ಅಂಚೆ ಪಾಲಕರೋರ್ವರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ರಾತ್ರಿ ಪಾಣೆ ಮಂಗಳೂರಿನಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ನಿಂತಿಕಲ್ ಕುಳಾಯಿತೋಡಿ ನಿವಾಸಿ ಕರಿಕ್ಕಳ ಅಂಚೆ ಕಛೇರಿಯ ನಿವೃತ್ತ ಅಂಚೆ ಪಾಲಕ ಯಶವಂತ ಅಡ್ಕಾರ್‌(66) ಎಂದು ಗುರುತಿಸಲಾಗಿದೆ. ಕಳೆದ ಕೆಲವು ಸಮಯಗಳಿಂದ ಅನಾರೋಗ್ಯ ಕಾಣಿಸಿಕೊಂಡು ಖಿನ್ನತೆಗೊಳಗಾಗಿದ್ದ ಅವರು ಕಳೆದ ಒಂದು ವರ್ಷದಿಂದ ಬೆಂಗಳೂರಿನಲ್ಲಿ ಮಗನ ಮನೆಯಲ್ಲಿದ್ದರೆನ್ನಲಾಗಿದೆ. ವಾರದ ಹಿಂದೆ ಊರಿನಲ್ಲಿ ಶುಭ ಕಾರ್ಯಕ್ರಮಗಳು ಇದ್ದುದರಿಂದ

ಪಂಜ: ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ಅಂಚೆ ಪಾಲಕ Read More »

ಕರಾವಳಿ

ಪ್ರಥಮ ಪಿಯುಸಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಎ.23. ಸರ್ಕಾರಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಿಜ್ಞಾನ ವಸತಿ ಕಾಲೇಜು ದೇರಳಕಟ್ಟೆ, ಮಂಗಳೂರು ಇಲ್ಲಿ 2018-19 ನೇ ಸಾಲಿಗೆ ಪ್ರಥಮ ಪಿಯುಸಿ ವಿಜ್ಞಾನ ಕೋರ್ಸಿನ ಪ್ರವೇಶಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪಿಸಿಎಂಬಿ 40 ಸೀಟುಗಳು ಹಾಗೂ ಪಿಸಿಎಮ್‍ಸಿಎಸ್ 40 ಸೇರಿ ಒಟ್ಟು 80 ಸೀಟುಗಳು ಲಭ್ಯವಿದು, ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ದ, ಸಿಖ್, ಪಾರ್ಸಿ ಸಮುದಾಯದ ಬಾಲಕಿಯರಿಗೆ ಶೇ 75 ಹಾಗೂ ಇತರೆ ಸಮುದಾಯದ ಬಾಲಕಿಯರಿಗೆ ಶೇ. 25 ಸೀಟುಗಳನ್ನು

ಪ್ರಥಮ ಪಿಯುಸಿಗೆ ಅರ್ಜಿ ಆಹ್ವಾನ Read More »

ಕರಾವಳಿ
Scroll to Top