ಕರಾವಳಿ

ಕಡಬ: ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿದ್ದ ಮಹಿಳೆ ಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಜೂ.02. ತನ್ನ ಇಬ್ಬರು ಮಕ್ಕಳೊಂದಿಗೆ ಗುರುವಾರದಂದು ಕುಂತೂರಿನಿಂದ ನಾಪತ್ತೆಯಾಗಿದ್ದ ಮಹಿಳೆಯನ್ನು ಕಡಬ ಪೊಲೀಸರು ಶನಿವಾರದಂದು ಪತ್ತೆ ಹಚ್ಚಿ ಕರೆತಂದಿದ್ದಾರೆ. ಐತ್ತೂರು ಗ್ರಾಮದ ಮಾಯಿಪತ್ತೆಪಾಲು ನಿವಾಸಿ ಹುಕ್ರಪ್ಪ ಗೌಡ ಎಂಬವರ ಪುತ್ರಿ ಯಶೋಧಾ(37) ಎಂಬಾಕೆಯನ್ನು ಕುಂತೂರು ಗ್ರಾಮದ ಬಾಚಡ್ಕ‌ ಎಂಬಲ್ಲಿಗೆ ಸುಮಾರು ಹದಿನೈದು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಗುರುವಾರದಂದು ಆಕೆಯ ಮನೆಯವರು ಕರೆ ಮಾಡಿದಾಗ ಕರೆಯನ್ನು ಸ್ವೀಕರಿಸದ ಹಿನ್ನೆಲೆಯಲ್ಲಿ ಅನುಮಾನಗೊಂಡು ಕುಂತೂರಿನ ಮನೆಗೆ ತೆರಳಿದ ಆಕೆಯ ಹೆತ್ತವರಿಗೆ ಬೀಗ ಹಾಕಿರುವುದು ಕಂಡುಬಂದಿದ್ದು, […]

ಕಡಬ: ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿದ್ದ ಮಹಿಳೆ ಪತ್ತೆ Read More »

ಕರಾವಳಿ

ಬಂಟ್ವಾಳ: ಮಾವನಿಂದ ಅಳಿಯನ‌ ಬರ್ಬರ ಕೊಲೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜೂ.02. ಮಾವನೇ ತನ್ನ ಅಳಿಯನನ್ನು ಕೊಲೆಗೈದಿರುವ ವಿಚಿತ್ರ ಘಟನೆ ಬಂಟ್ವಾಳದಲ್ಲಿ ಶನಿವಾರದಂದು ನಡೆದಿದೆ. ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಕಟ್ಟದಪಡ್ಪು ನಿವಾಸಿ ಅಮನ್ನ ಪೂಜಾರಿ ತನ್ನ ಮಗಳ ಗಂಡ ರಮಾನಂದ(50) ಎಂಬವರನ್ನು ಬರ್ಬರವಾಗಿ ಕೊಂದಿದ್ದಾರೆ. ರಮಾನಂದರ ಪತ್ನಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಸಾಂಸಾರಿಕ ಕಲಹ ಕೃತ್ಯಕ್ಕೆ ಕಾರಣವೆಂದು ಹೇಳಲಾಗಿದ್ದು, ನಿಖರವಾದ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸರು, ಡಿವೈಎಸ್ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಂಟ್ವಾಳ: ಮಾವನಿಂದ ಅಳಿಯನ‌ ಬರ್ಬರ ಕೊಲೆ Read More »

ಕರಾವಳಿ

ಐತ್ತೂರು: ವಿವಾಹಿತ ಮಹಿಳೆ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ, ಜೂ.02. ಮಹಿಳೆಯೋರ್ವರು ವಿಷ ಸೇವಿಸಿ‌ ಆತ್ಮಹತ್ಯೆ ಮಾಡಿಕೊಂಡ ಘಟನೆ ಠಾಣಾ ವ್ಯಾಪ್ತಿಯ ಐತ್ತೂರಿನಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಾಕೆಯನ್ನು ಐತ್ತೂರು ಗ್ರಾಮದ 72 ಕಾಲನಿ ನಿವಾಸಿ ಪರಶುರಾಮ ಎಂಬವರ ಪತ್ನಿ ಶಾರದಾ(28) ಎಂದು ಗುರುತಿಸಲಾಗಿದೆ. ಈಕೆ ಮೇ 26 ರಂದು ತನ್ನ ಮನೆಯಲ್ಲಿ ವಿಷ ಸೇವಿಸಿದ್ದು, ಮೇ 28 ರಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರದಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಐತ್ತೂರು: ವಿವಾಹಿತ ಮಹಿಳೆ ಆತ್ಮಹತ್ಯೆ Read More »

ಕರಾವಳಿ

ಕಡಬದ ಪತ್ರಕರ್ತ ನಾಗರಾಜ್ ಎನ್.ಕೆ.ಯವರಿಗೆ ಪಿತೃ ವಿಯೋಗ

(ನ್ಯೂಸ್ ಕಡಬ) newskadaba.com ಕಡಬ, ಜೂ.02. ಹಿರಿಯ ಆರೆಸ್ಸೆಸ್ ಕಾರ್ಯಕರ್ತ, ಮೇಕಪ್ ಕಲಾವಿದ ವಿದ್ಯಾನಗರ ನಿವಾಸಿ ನಾರಾಯಣ ಭಂಡಾರಿ (70) ಅಲ್ಪಕಾಲದ ಅಸೌಖ್ಯದಿಂದ ಶನಿವಾರದಂದು ಸ್ವಗೃಹದಲ್ಲಿ ನಿಧನರಾದರು. ಕಳೆದ ಕೆಲ‌ ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರದಂದು ಮನೆಗೆ ಕರೆದುಕೊಂಡು ಬರಲಾಗಿತ್ತು. ಮೃತರು ಪತ್ನಿ, ಪುತ್ರರಾದ ಕಡಬದ ಉದಯವಾಣಿ ಪತ್ರಕರ್ತ ನಾಗರಾಜ್ ಎನ್.ಕೆ., ಕಡಬ ಬಿಜೆಪಿ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಎನ್.ಕೆ., ಪಿಡಬ್ಲ್ಯೂಡಿ ಕಾಂಟ್ರಾಕ್ಟರ್ ಪ್ರಸಾದ್ ಕೆ.ಎನ್.,

ಕಡಬದ ಪತ್ರಕರ್ತ ನಾಗರಾಜ್ ಎನ್.ಕೆ.ಯವರಿಗೆ ಪಿತೃ ವಿಯೋಗ Read More »

ಕರಾವಳಿ

ಚೊಕ್ಕಬೆಟ್ಟು: ವ್ಯಕ್ತಿಯನ್ನು ತುಂಡರಿಸಿ ಗೋಣಿಚೀಲದಲ್ಲಿ ತುಂಬಿಸಿಟ್ಟ ಸ್ಥಿತಿಯಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.02. ವ್ಯಕ್ತಿಯೋರ್ವರ ದೇಹವನ್ನು ತುಂಡರಿಸಿ ಗೋಣಿಚೀಲದಲ್ಲಿ ತುಂಬಿಸಿದ ಸ್ಥಿತಿಯಲ್ಲಿ ನಗರದ ಹೊರವಲಯದ ಸುರತ್ಕಲ್ ನಲ್ಲಿ ಶನಿವಾರದಂದು ಪತ್ತೆಯಾಗಿದೆ‌. ಸುಮಾರು ಐವತ್ತರಿಂದ ಐವತ್ತೈದು ವರ್ಷ ಪ್ರಾಯದ ಗಂಡಸನ್ನು ಕೊಲೆ ಮಾಡಿ, ಮೃತದೇಹವನ್ನು ಗೋಣಿಚೀಲದಲ್ಲಿ ತುಂಬಿಸಿ ಸುರತ್ಕಲ್ ಸಮೀಪದ ಚೊಕ್ಕಬೆಟ್ಟು ಎಂಬಲ್ಲಿನ ಮೋರಿಯೊಂದರ ಕೆಳಗೆ ಎಸೆದಿರಬಹುದೆಂದು ಶಂಕಿಸಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಸುರತ್ಕಲ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚೊಕ್ಕಬೆಟ್ಟು: ವ್ಯಕ್ತಿಯನ್ನು ತುಂಡರಿಸಿ ಗೋಣಿಚೀಲದಲ್ಲಿ ತುಂಬಿಸಿಟ್ಟ ಸ್ಥಿತಿಯಲ್ಲಿ ಪತ್ತೆ Read More »

ಕರಾವಳಿ

ಸಂಘಟನೆಯೇ ನನ್ನ ತಾಯಿ-ತಂದೆ: ಸುಳ್ಯ ಶಾಸಕ ಎಸ್.ಅಂಗಾರ ► ಆಲಂಕಾರು: ಬಿಜೆಪಿ ಕಾರ್ಯಕರ್ತರಿಗೆ, ಮತದಾರರಿಗೆ ಅಭಿನಂದನಾ ಸಭೆ

(ನ್ಯೂಸ್ ಕಡಬ) newskadaba.com ಕಡಬ, ಜೂ.02. ನನಗೆ ನನ್ನ ತಂದೆ ತಾಯಿ ವಿದ್ಯಾಭ್ಯಾಸ ನೀಡಿದರೆ, ಸಂಘಟನೆ ನನಗೆ ಸ್ಥಾನಮಾನವನ್ನು ಕಲ್ಪಿಸಿದೆ. ಆದ್ದರಿಂದ ನನಗೆ ಸಂಘ ಹಾಗೂ ಸಂಘಟನೆ ತಂದೆ ತಾಯಿಗೆ ಸಮಾನ ಎಂದು ಸುಳ್ಯ ಶಾಸಕ ಎಸ್.ಅಂಗಾರ ಹೇಳಿದರು. ಅವರು ಶುಕ್ರವಾರ ಆಲಂಕಾರು ರಾಣಿಮಹಲ್‍ನಲ್ಲಿ ನೆಲ್ಯಾಡಿ, ಬೆಳಂದೂರು ಹಾಗೂ ಕಡಬ ಶಕ್ತಿ ಕೇಂದ್ರದ ಬಿಜೆಪಿ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಅಭಿನಂದನಾ ಸಭೆಯಲ್ಲಿ ಕೃತಜ್ಞತೆ ಸಲ್ಲಿಸಿ ಮಾತನಾಡುತ್ತಿದ್ದರು. ನಾನು ಆರು ಬಾರಿ ಶಾಸಕನಾಗಿ ಆಯ್ಕೆ ಯಾಗಬೇಕಾದರೆ ನನ್ನ ಹಿಂದೆ

ಸಂಘಟನೆಯೇ ನನ್ನ ತಾಯಿ-ತಂದೆ: ಸುಳ್ಯ ಶಾಸಕ ಎಸ್.ಅಂಗಾರ ► ಆಲಂಕಾರು: ಬಿಜೆಪಿ ಕಾರ್ಯಕರ್ತರಿಗೆ, ಮತದಾರರಿಗೆ ಅಭಿನಂದನಾ ಸಭೆ Read More »

ಕರಾವಳಿ

ಆಲಂಕಾರು: ಬೈಕ್ ಗಳ ನಡುವೆ ಮುಖಾಮುಖಿ ಢಿಕ್ಕಿ ► ಮೂವರಿಗೆ ಗಾಯ

(ನ್ಯೂಸ್ ಕಡಬ) newskadaba.com ಆಲಂಕಾರು, ಜೂ.02. ಶಾಂತಿಮೊಗರು – ಆಲಂಕಾರು ರಸ್ತೆಯ ಕಜೆ ಎಂಬಲ್ಲಿ ಬೈಕ್‍ಗಳು ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಮೂವರು ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ಸಂಜೆ ನಡೆದಿದೆ. ಶರವೂರು ಕಡೆಯಿಂದ ಮರ್ಧಾಳ ನಿವಾಸಿ ವಿನಯ್.ಬಿ.ಕೆ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಬೈಕ್ ಮತ್ತು ಆಲಂಕಾರಿನಿಂದ ಶರವೂರು ಕಡೆಗೆ ಸಹ ಸವಾರ ಶೇಖರರವರೊಂದಿಗೆ ರಘುನಾಥರವರು ಚಲಾಯಿಸಿಕೊಂಡು ಹೋಗುತ್ತಿದ್ದ ಬೈಕ್‍ಗಳ ಮದ್ಯೆ ಢಿಕ್ಕಿ ಸಂಭವಿಸಿ ಮೂವರು ಗಂಭೀರ ಗಾಯಗೊಂಡಿದ್ದಾರೆ. ಢಿಕ್ಕಿಯ ರಭಸಕ್ಕೆ ಎರಡು ಬೈಕ್‍ಗಳು ಪರಸ್ಪರ ವಿರುದ್ಧ

ಆಲಂಕಾರು: ಬೈಕ್ ಗಳ ನಡುವೆ ಮುಖಾಮುಖಿ ಢಿಕ್ಕಿ ► ಮೂವರಿಗೆ ಗಾಯ Read More »

ಕರಾವಳಿ

ಸಮಸ್ತ ಪಬ್ಲಿಕ್ ಪರೀಕ್ಷಾ ಫಲಿತಾಂಶ ಪ್ರಕಟ ► ಬೆಳ್ಳಾರೆ ಹಿದಾಯತುಲ್ ಇಸ್ಲಾಂ ಮದರಸ – ಶೇ.100 ಫಲಿತಾಂಶ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜೂ.02. ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ನಡೆಸಿದ 2018 ನೇ ಸಾಲಿನ ಪಬ್ಲಿಕ್ ಪರೀಕ್ಷಾ ಫಲಿತಾಂಶವು ಪ್ರಕಟ ಗೊಂಡಿದ್ದು, ಪರೀಕ್ಷೆ ಬರೆದ ಬೆಳ್ಳಾರೆ ಹಿದಾಯತುಲ್ ಇಸ್ಲಾಂ ಮದರಸದ 5, 7, 10 ನೇ ತರಗತಿಗಳ ಎಲ್ಲಾ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈದು ಉತ್ತೀರ್ಣರಾಗಿ ಶೇಕಡಾ ನೂರು ಫಲಿತಾಂಶ ದಾಖಲಾಗಿರುತ್ತದೆ. 5 ನೇ ತರಗತಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಅಸ್ನಝಿಯಾ (500 ರಲ್ಲಿ 492 )ತೇರ್ಗಡೆ ಹೊಂದಿದ್ದು , 4 ಮಂದಿ ವಿದ್ಯಾರ್ಥಿಗಳು

ಸಮಸ್ತ ಪಬ್ಲಿಕ್ ಪರೀಕ್ಷಾ ಫಲಿತಾಂಶ ಪ್ರಕಟ ► ಬೆಳ್ಳಾರೆ ಹಿದಾಯತುಲ್ ಇಸ್ಲಾಂ ಮದರಸ – ಶೇ.100 ಫಲಿತಾಂಶ Read More »

ಕರಾವಳಿ

ಕಾವೂರು: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರು ಹಠಾತ್ತನೆ ಬೆಂಕಿಯುಂಟಾಗಿ ಸುಟ್ಟು ಭಸ್ಮ ► ಶಾರ್ಟ್ ಸರ್ಕ್ಯೂಟ್ ಶಂಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.01. ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಕಾರೊಂದು ಹಠಾತ್ತನೆ ಉಂಟಾದ ಬೆಂಕಿಯಿಂದ ಉರಿದು ಭಸ್ಮವಾದ ಘಟನೆ ನಗರದ ಹೊರವಲಯದ ಕಾವೂರಿನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ. ಬಜ್ಪೆ ನಿವಾಸಿ ಜಯರಾಜ್ ಎಂಬವರು ತನ್ನ ಹ್ಯುಂಡೈ ಐ20 ಕಾರನ್ನು ಕಾವೂರಿನಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿ ಹೊರಗಡೆ ತೆರಳಿದ್ದ ಸಂದರ್ಭದಲ್ಲಿ ಹಠಾತ್ತನೆ ಕಾರಿನಲ್ಲಿ ಬೆಂಕಿಯುಂಟಾಗಿದ್ದು, ಕ್ಷಣಾರ್ಧದಲ್ಲಿ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಘಟನೆ ಸಂಭವಿಸಿರಬಹುದೆಂದು ಶಂಕಿಸಲಾಗಿದ್ದು, ಕಾರಿನಲ್ಲಿ ಯಾರೂ ಇಲ್ಲದೆ ಇದ್ದುದರಿಂದ ಪ್ರಾಣಾಪಾಯ ತಪ್ಪಿದೆ.

ಕಾವೂರು: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರು ಹಠಾತ್ತನೆ ಬೆಂಕಿಯುಂಟಾಗಿ ಸುಟ್ಟು ಭಸ್ಮ ► ಶಾರ್ಟ್ ಸರ್ಕ್ಯೂಟ್ ಶಂಕೆ Read More »

ಕರಾವಳಿ

ಅಕ್ರಮ‌ ಗಾಂಜಾ ಮಾರಾಟ ಯತ್ನ ► ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.01. ಅಕ್ರಮ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸಿರುವ ಉಳ್ಳಾಲ ಪೊಲೀಸರು 1 ಕೆಜಿ 50 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಕಾಸರಗೋಡಿನ ಉಪ್ಪಳ‌ ಕುಂಟುಪುಣಿ ನಿವಾಸಿ ಎ.ಕೆ.ಮಹಮ್ಮದ್ ಎಂಬವರ ಪುತ್ರ ಅಬೂಬಕ್ಕರ್ ಸಿದ್ದಿಕ್ (32) ಎಂದು ಗುರುತಿಸಲಾಗಿದೆ. ಈತ ಉಳ್ಳಾಲ ಠಾಣಾ ವ್ಯಾಪ್ತಿಯ ತಲಪಾಡಿಯಲ್ಲಿ ಅಕ್ರಮ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದಾನೆ ಎಂಬ ಖಚಿತ ಮಾಹಿತಿ ಆಧರಿಸಿ ಉಳ್ಳಾಲ ಠಾಣಾ ಪೊಲೀಸ್ ನಿರೀಕ್ಷಕರಾದ ಗೋಪಿಕೃಷ್ಣ ಕೆ.ಆರ್ ಮತ್ತು ಉಪ ನಿರೀಕ್ಷಕರಾದ

ಅಕ್ರಮ‌ ಗಾಂಜಾ ಮಾರಾಟ ಯತ್ನ ► ಆರೋಪಿಯ ಬಂಧನ Read More »

ಕರಾವಳಿ
Scroll to Top