ಕಡಬ: ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಜೀಪ್ ಢಿಕ್ಕಿ ► ಮಹಿಳೆ ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಫೆ.15. ಜೀಪೊಂದು ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೋರ್ವರು ಗಂಭೀರ ಗಾಯಗೊಂಡ ಘಟನೆ ಕಡಬದ ಹಳೇಸ್ಟೇಷನ್ ಎಚ್.ಪಿ‌. ಪೆಟ್ರೋಲ್ ಬಂಕ್ ಸಮೀಪ ಗುರುವಾರದಂದು ನಡೆದಿದೆ.

ಕಡಬದಿಂದ ಮರ್ಧಾಳ ಕಡೆಗೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂಭಾಗದಿಂದ ಜೀಪ್ ಢಿಕ್ಕಿ ಹೊಡೆದುದರಿಂದ ಸವಾರ ಲಿಂಗಪ್ಪ ಪೂಜಾರಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಗಂಭೀರ ಗಾಯಗೊಂಡಿರುವ ಸಹ ಸವಾರೆ ಲಿಂಗಪ್ಪ ಪೂಜಾರಿಯವರ ಪತ್ನಿ ಸುಜಾತಾ(43) ರವರನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

Scroll to Top