ಕರಾವಳಿ

ಅಕ್ರಮ ಮರಳು ಅಡ್ಡೆಗೆ ದಾಳಿ ► ಭಾರೀ ಪ್ರಮಾಣದ 850 ಲೋಡ್ ಮರಳು ವಶ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.05. ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಮರಳನ್ನು ಪತ್ತೆ ಹಚ್ಚಿರುವ ಪೊಲೀಸರು ಸುಮಾರು 850 ಲೋಡು ಅಕ್ರಮ ಮರಳನ್ನು ವಶಪಡಿಸಿಕೊಂಡಿದ್ದಾರೆ. ಠಾಣಾ ವ್ಯಾಪ್ತಿಯ ಬಡಗುಳಿಪಾಡಿ, ಮೂಡುಪೆರಾರ್ ಗ್ರಾಮದ ಚರ್ಚ್ ಬಳಿ ಹಾಗೂ ಮೊಗರು ಗ್ರಾಮದ ನಾರ್ಲಪದವು ಎಂಬಲ್ಲಿ ಅಕ್ರಮವಾಗಿ ಮರಳನ್ನು ಸಂಗ್ರಹಿಸಿ ಗೌಪ್ಯವಾಗಿ ಬಚ್ಚಿಡಲಾಗಿದ್ದುದನ್ನು ಪತ್ತೆಹಚ್ಚಿದ ಪೊಲೀಸರು ಸುಮಾರು 35 ಲಕ್ಷ ಮೌಲ್ಯದ ಅಕ್ರಮ ಮರಳನ್ನು ವಶಪಡಿಸಿಕೊಂಡರು. ಕಾರ್ಯಾಚರಣೆಯಲ್ಲಿ ಮಂಗಳೂರು ನಗರದ ಪೊಲೀಸ್ ಆಯುಕ್ತರಾದ […]

ಅಕ್ರಮ ಮರಳು ಅಡ್ಡೆಗೆ ದಾಳಿ ► ಭಾರೀ ಪ್ರಮಾಣದ 850 ಲೋಡ್ ಮರಳು ವಶ Read More »

ಕರಾವಳಿ

ಕಾರ್ಕಳದಲ್ಲಿ ರಸ್ತೆ ಅಪಘಾತ ► ಕಡಬದ ಯುವಕ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಜೂ.05. ಲಾರಿ ಹಾಗೂ ಬೈಕ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್‌ ಸವಾರ ಕಡಬ ನಿವಾಸಿ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಕಾರ್ಕಳದಲ್ಲಿ ಮಂಗಳವಾರದಂದು ನಡೆದಿದೆ.   ಮೃತ ಯುವಕನನ್ನು ಕಡಬ ತಾಲೂಕಿನ ಬಂಟ್ರ ಗ್ರಾಮದ ನೀರಾಜೆ ನಿವಾಸಿ ಪ್ರಕಾಶ್ ಭಟ್ ಎಂಬವರ ಪುತ್ರ ಅಕ್ಷತ್ ಭಟ್(21) ಎಂದು ಗುರುತಿಸಲಾಗಿದೆ. ಅಕ್ಷತ್ ತನ್ನ ಬೈಕಿನಲ್ಲಿ ಕಾರ್ಕಳ ಕಡೆಗೆ ತೆರಳುತ್ತಿದ್ದಾಗ ಕಾರ್ಕಳದ ನೆಲ್ಲಿಕಾರು ಬಳಿ ಲಾರಿ ಢಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಮೂಡುಬಿದಿರೆ

ಕಾರ್ಕಳದಲ್ಲಿ ರಸ್ತೆ ಅಪಘಾತ ► ಕಡಬದ ಯುವಕ ಸ್ಥಳದಲ್ಲೇ ಮೃತ್ಯು Read More »

ಕರಾವಳಿ

ಇನ್ನೆರಡು ದಿನದಲ್ಲಿ ಭಾರೀ ಮಳೆಯ ಮುನ್ನೆಚ್ಚರಿಕೆ ನೀಡಿದ ಹವಾಮಾನ ಇಲಾಖೆ ► ಮತ್ತೊಮ್ಮೆ ಪ್ರವಾಹದ ಭೀತಿಯಲ್ಲಿ ಕರಾವಳಿ

ಸಾಂದರ್ಭಿಕ ಚಿತ್ರ (ನ್ಯೂಸ್ ಕಡಬ) newskadaba.com ನವದೆಹಲಿ, ಜೂ.05. ಭಾರೀ ಮಳೆಗೆ ಕರಾವಳಿಯು ತತ್ತರಿಸಿ ವಾರವಾಗುವುದರೊಳಗೆ ಇದೀಗ ಮುಂಗಾರಿನ ಪ್ರಭಾವದಿಂದ ಜೂನ್‌ 10 ರ ಬಳಿಕ ಕರಾವಳಿಯು ಮತ್ತೊಮ್ಮೆ ಪ್ರವಾಹದ ಭೀತಿಯನ್ನು ಎದುರಿಸುತ್ತಿದೆ. ಈ ಬಗ್ಗೆ ಮುನ್ನೆಚ್ಚರಿಕೆ ನೀಡಿರುವ ಭಾರತೀಯ ಹವಾಮಾನ ಇಲಾಖೆ (ಐಎಂಡಿ), ಜೂನ್‌ 7 ರ ಬಳಿಕ ಕೇರಳ, ಕರಾವಳಿ ಕರ್ನಾಟಕ ಸೇರಿದಂತೆ ಗೋವಾದಲ್ಲಿ ಭಾರೀ ಮಳೆಯಾಗಲಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುವ ಮಾಹಿತಿ ನೀಡಿದೆ. ಮುಂಬಯಿಯಲ್ಲಿ ಜೂನ್‌ ಆರರಿಂದ ಮಳೆಯಾಗಲಿದ್ದು, 8/9/10ರಂದು ಅದು ಜಡಿ

ಇನ್ನೆರಡು ದಿನದಲ್ಲಿ ಭಾರೀ ಮಳೆಯ ಮುನ್ನೆಚ್ಚರಿಕೆ ನೀಡಿದ ಹವಾಮಾನ ಇಲಾಖೆ ► ಮತ್ತೊಮ್ಮೆ ಪ್ರವಾಹದ ಭೀತಿಯಲ್ಲಿ ಕರಾವಳಿ Read More »

ಕರಾವಳಿ

ಜೂನ್ 07 ರಿಂದ ಕೆಎಸ್ಸಾರ್ಟಿಸಿ ಉಚಿತ ಬಸ್ ಪಾಸ್ ವಿತರಣೆ

(ನ್ಯೂಸ್ ಕಡಬ) newskadaba.com ಕಡಬ, ಜೂ.05. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ 2018 -19 ನೆ ಸಾಲಿನ ಜೂ.7 ರಿಂದ ರಿಯಾಯಿತಿ ಬಸ್ ಪಾಸ್‌ಗಳನ್ನು ವಿತರಿಸಲಿದೆ. ವಿದ್ಯಾರ್ಥಿಗಳು ಉಚಿತ ಬಸ್‌ಪಾಸ್ ಪಡೆಯಲು ಅರ್ಜಿಯೊಂದಿಗೆ ಜಾತಿ ಪ್ರಮಾಣ ಪತ್ರದ ಪ್ರತಿಯನ್ನು ಲಗತ್ತಿಸಿ ಸಂಸ್ಕರಣಾ ಶುಲ್ಕ ಹಾಗೂ ಅಪಘಾತ ಪರಿಹಾರ ನಿಧಿಯ ಒಟ್ಟು 150 ರೂ. ಮೊತ್ತವನ್ನು ಪಾವತಿಸಬೇಕಿದೆ. ನಿಗಮದ ಎಲ್ಲ ಬಸ್ ನಿಲ್ದಾಣಗಳಲ್ಲಿ ಹಾಗೂ ನಿಗಮದ ವೆಬ್‌ಸೈಟ್‌ನಲ್ಲಿ (www.ksrtc.in)

ಜೂನ್ 07 ರಿಂದ ಕೆಎಸ್ಸಾರ್ಟಿಸಿ ಉಚಿತ ಬಸ್ ಪಾಸ್ ವಿತರಣೆ Read More »

ಕರಾವಳಿ

ಎಡಕುಮೇರಿ: ರೈಲು ಢಿಕ್ಕಿ ► ತಾಯಿ ಆನೆ ಹಾಗೂ ಮರಿಯಾನೆ ಸಾವು

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜೂ.04. ಆನೆ ಹಾಗೂ ಮರಿ ಆನೆಯೊಂದು ರೈಲಿಗೆ ಸಿಲುಕಿ ಮೃತಪಟ್ಟ ಘಟನೆ ಹಾಸನ ಜಿಲ್ಲೆಯ ಎಡಕುಮೇರಿ ಸಮೀಪ ಸೋಮವಾರದಂದು ನಡೆದಿದೆ. ಮಂಗಳೂರು – ಬೆಂಗಳೂರು ರೈಲು ಮಾರ್ಗದ ಹಾಸನದಿಂದ ಸುಮಾರು 72 ಕಿಲೋಮೀಟರ್ ದೂರದಲ್ಲಿ ಎಡಕುಮೇರಿ ಹಾಗೂ ಅರೆ ಘಟ್ಟ ಪ್ರದೇಶದ ನಡುವೆ ರೈಲ್ವೇ ಸೇತುವೆಯಲ್ಲಿ ಭಾನುವಾರ ರಾತ್ರಿ ರೈಲಿಗೆ ಆನೆಗಳು ಅಡ್ಡ ಬಂದಿದೆ ಎನ್ನಲಾಗಿದೆ. ಢಿಕ್ಕಿಯ ರಭಸಕ್ಕೆ ಮರಿಯಾನೆ ಸ್ಥಳದಲ್ಲೇ ಮೃತಪಟ್ಟಿದ್ದು, ತಾಯಿ ಆನೆ ಗಂಭೀರ ಗಾಯಗೊಂಡು ಸೋಮವಾರದಂದು ಅಸುನೀಗಿದೆ.

ಎಡಕುಮೇರಿ: ರೈಲು ಢಿಕ್ಕಿ ► ತಾಯಿ ಆನೆ ಹಾಗೂ ಮರಿಯಾನೆ ಸಾವು Read More »

ಕರಾವಳಿ

ಸುಳ್ಯ: ಟ್ಯಾಂಕರ್ ಢಿಕ್ಕಿಯಾಗುವುದನ್ನು ತಪ್ಪಿಸಿದ ಕೆಎಸ್ಸಾರ್ಟಿಸಿ ಚಾಲಕ ► ಬಸ್ ಚಾಲಕನ ಸಮಯಪ್ರಜ್ಞೆಗೆ ವ್ಯಾಪಕ ಪ್ರಶಂಸೆ

(ನ್ಯೂಸ್ ಕಡಬ) newskadaba.com ಸುಳ್ಯ, ಜೂ.04. ಟ್ಯಾಂಕರೊಂದು ವಿರುದ್ಧ ದಿಕ್ಕಿನಲ್ಲಿ ಬಂದು ಢಿಕ್ಕಿಯಾಗುತ್ತದೆ ಎನ್ನುವುದನ್ನು ಅರಿತ ಕೆಎಸ್ಸಾರ್ಟಿಸಿ ಚಾಲಕನೋರ್ವ ತನ್ನ ಸಮಯ ಪ್ರಜ್ಞೆಯಿಂದಾಗಿ ಸಂಭಾವ್ಯ ಅಪಾಯವನ್ನು ತಪ್ಪಿಸಿದ ಘಟನೆ ಸೋಮವಾರದಂದು ಮಾಣಿ – ಮೈಸೂರು ರಾಜ್ಯ ಹೆದ್ದಾರಿಯ ಕೊಯನಾಡು ಸಮೀಪ ನಡೆದಿದೆ. ಕುಕ್ಕೇ ಸುಬ್ರಹ್ಮಣ್ಯದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಗೆ ಕೊಯನಾಡು ಸಮೀಪ ರಾಂಗ್ ಬಂದು ಢಿಕ್ಕಿಯಾಗುವುದರಲ್ಲಿತ್ತು. ಅಪಾಯವನ್ನು ಅರಿತ ಬಸ್ ಚಾಲಕ ಬಸ್ಸನ್ನು ರಸ್ತೆಯ ಎಡಬದಿಗೆ ಚಲಾಯಿಸಿ ಸಂಭಾವ್ಯ ಅಪಾಯವನ್ನು ತಪ್ಪಿಸಿದರಾದರೂ ಬಸ್ ರಸ್ತೆ

ಸುಳ್ಯ: ಟ್ಯಾಂಕರ್ ಢಿಕ್ಕಿಯಾಗುವುದನ್ನು ತಪ್ಪಿಸಿದ ಕೆಎಸ್ಸಾರ್ಟಿಸಿ ಚಾಲಕ ► ಬಸ್ ಚಾಲಕನ ಸಮಯಪ್ರಜ್ಞೆಗೆ ವ್ಯಾಪಕ ಪ್ರಶಂಸೆ Read More »

ಕರಾವಳಿ

ಅಲ್-ಫತಹ್ ಟ್ರಸ್ಟ್ ವತಿಯಿಂದ ನೆಕ್ಕಿತ್ತಡ್ಕ ದರ್ಗಾ ವಠಾರದಲ್ಲಿ ಇಫ್ತಾರ್ ಕೂಟ

(ನ್ಯೂಸ್ ಕಡಬ) newskadaba.com ಕಡಬ, ಜೂ.03. ಅಲ್ ಫತಹ್ ಟ್ರಸ್ಟ್ (ರಿ) ನೆಕ್ಕಿತ್ತಡ್ಕ ಇದರ ವತಿಯಿಂದ ಇಫ್ತಾರ್ ಕೂಟವು ನೆಕ್ಕಿತ್ತಡ್ಕ ದರ್ಗಾ ವಠಾರದಲ್ಲಿ ಭಾನುವಾರದಂದು ನಡೆಯಿತು. ಈ ಸಂದರ್ಭದಲ್ಲಿ ಮರ್ಧಾಳ ತಕ್ವೀಯತ್ತುಲ್ ಇಸ್ಲಾಂ ಜುಮಾ‌ ಮಸೀದಿಯ ಖತೀಬರಾದ ಹನೀಫ್ ಸಖಾಫಿ ಎಮ್ಮೆಮಾಡು ನೇತೃತ್ವದಲ್ಲಿ ಬದರ್ ಮೌಲಿದ್ ನಡೆಯಿತು. ಇಫ್ತಾರ್ ಕೂಟದಲ್ಲಿ ಹಲವರು ಉಪಸ್ಥಿತರಿದ್ದರು.

ಅಲ್-ಫತಹ್ ಟ್ರಸ್ಟ್ ವತಿಯಿಂದ ನೆಕ್ಕಿತ್ತಡ್ಕ ದರ್ಗಾ ವಠಾರದಲ್ಲಿ ಇಫ್ತಾರ್ ಕೂಟ Read More »

ಕರಾವಳಿ

ಕಾಂಪೋಸ್ಟ್ ಪೈಪ್ ಖರೀದಿಯಲ್ಲಿ ಅವ್ಯವಹಾರ ನಡೆಸಿರುವ ಹಿನ್ನೆಲೆ ► ಬಿಳಿನೆಲೆ ಗ್ರಾ.ಪಂ. ಅಧ್ಯಕ್ಷರನ್ನು ತಕ್ಷಣವೇ ಬಂಧಿಸಿ: ಬಿಳಿನೆಲೆ ಬಿಜೆಪಿ ಆಗ್ರಹ

(ನ್ಯೂಸ್ ಕಡಬ) newskadaba.com ಕಡಬ, ಜೂ.03. ಸ್ವಚ್ಚತಾ ಆಂದೋಲನದ ಕಾಂಪೋಸ್ಟ್ ಪೈಪು ಖರೀದಿಯಲ್ಲಿ ಅವ್ಯವಹಾರದ ಆರೋಪದಲ್ಲಿ ಬಿಳಿನೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದಾ ಅವರ ಮೇಲೆ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಪ್ರಕರಣ ದಾಖಲಾಗಿದ್ದು, ಅಧ್ಯಕ್ಷರನ್ನು ತಕ್ಷಣವೇ ಬಂಧಿಸಬೇಕು ಎಂದು ಬಿಳಿನೆಲೆ ಬಿಜೆಪಿ ಸಮಿತಿ ಅಗ್ರಹಿಸಿದೆ. ಬಿಳಿನೆಲೆ ಬಿಜೆಪಿ ಗ್ರಾಮ ಸಮಿತಿಯ ಅಧ್ಯಕ್ಷ ವಿಜಯ ಕುಮಾರ್ ಎರ್ಕ ಶನಿವಾರ ಕಡಬ ಪ್ರೆಸ್ ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅವ್ಯವಹಾರ ಆರೋಪದಲ್ಲಿ ಸಿಲುಕಿರುವ ಅಧ್ಯಕ್ಷರು ನಿರೀಕ್ಷಣಾ ಜಾಮೀನಿಗಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ

ಕಾಂಪೋಸ್ಟ್ ಪೈಪ್ ಖರೀದಿಯಲ್ಲಿ ಅವ್ಯವಹಾರ ನಡೆಸಿರುವ ಹಿನ್ನೆಲೆ ► ಬಿಳಿನೆಲೆ ಗ್ರಾ.ಪಂ. ಅಧ್ಯಕ್ಷರನ್ನು ತಕ್ಷಣವೇ ಬಂಧಿಸಿ: ಬಿಳಿನೆಲೆ ಬಿಜೆಪಿ ಆಗ್ರಹ Read More »

ಕರಾವಳಿ

ಗೋಳಿಯಡ್ಕ: ಕಾರುಗಳ ಮಧ್ಯೆ ಮುಖಾಮುಖಿ ಢಿಕ್ಕಿ ► ನಾಲ್ವರಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಜೂ.02. ಕಾರುಗಳೆರಡರ ಮಧ್ಯೆ ಢಿಕ್ಕಿ ಸಂಭವಿಸಿದ ಪರಿಣಾಮ ನಾಲ್ವರು ಗಾಯಗೊಂಡ ಘಟನೆ ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಗೋಳಿಯಡ್ಕ ಎಂಬಲ್ಲಿ ಶನಿವಾರ ಸಂಜೆ‌ ನಡೆದಿದೆ. ಹೈದರಾಬಾದ್ ಮೂಲದ ಕುಟುಂಬವೊಂದು ಮಂಗಳೂರಿನಿಂದ ಟೊಯೋಟಾ ಎಟಿಯೋಸ್ ಕಾರನ್ನು ಬಾಡಿಗೆಗೆ ಗೊತ್ತುಪಡಿಸಿ ಧರ್ಮಸ್ಥಳ ದೇವರ ದರ್ಶನ ಮುಗಿಸಿಕೊಂಡು ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದಾಗ ಗೋಳಿಯಡ್ಕ ಎಂಬಲ್ಲಿ ಮಡಿಕೇರಿ ಮೂಲದವರಿದ್ದ ಸ್ವಿಫ್ಟ್ ಕಾರು ವಾಹನವೊಂದನ್ನು ಓವರ್ಟೇಕ್ ಮಾಡುವ ಭರದಲ್ಲಿ ಮುಖಾಮುಖಿ ಢಿಕ್ಕಿಯಾಗಿದೆ. ಘಟನೆಯಲ್ಲಿ ಎರಡೂ ಕಾರಿನಲ್ಲಿದ್ದವರು ಸಣ್ಣಪುಟ್ಟದಾಗಿ ಗಾಯಗೊಂಡಿದ್ದು,

ಗೋಳಿಯಡ್ಕ: ಕಾರುಗಳ ಮಧ್ಯೆ ಮುಖಾಮುಖಿ ಢಿಕ್ಕಿ ► ನಾಲ್ವರಿಗೆ ಗಾಯ Read More »

ಕರಾವಳಿ

ಕೋಡಿಂಬಾಳ: ಕೆಲಸಕ್ಕೆಂದು ತೆರಳಿದ ಯುವಕ‌ ನಾಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಜೂ.02. ಕೆಲಸಕ್ಕೆಂದು ಮನೆಯಿಂದ ಹೊರಟು ಹೋದ ಯುವಕನೋರ್ವ ಮನೆಗೆ ಬಾರದೆ ನಾಪತ್ತೆಯಾಗಿರುವುದಾಗಿ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಠಾಣಾ ವ್ಯಾಪ್ತಿಯ ಕೋಡಿಂಬಾಳ ಗ್ರಾಮದ ಕಜೆಮೂಲೆ ನಿವಾಸಿ ಶರೀಫ್ ಕೆ.ಎಸ್‌. ಎಂಬವರ ಪುತ್ರ ಅನೀಶ್‌ ರಹಿಮಾನ್‌‌ ಎಂಬಾತ ಸುಮಾರು ಮೂರು ತಿಂಗಳ ಹಿಂದೆ ವಿದೇಶದಿಂದ ಊರಿಗೆ ಬಂದಿದ್ದು, ಕೆಲಸದ ನಿಮಿತ್ತ ಮೇ 26 ರಂದು ಕನ್ಯಾಕುಮಾರಿಗೆಂದು ಹೇಳಿ ಮನೆಯಿಂದ ಹೊರಟು ಹೋದವರು ಈ ತನಕ ಯಾವುದೇ ದೂರವಾಣಿ ಕರೆ ಮಾಡದೇ ಇರುವುದಲ್ಲದೆ, ಮನೆಯವರ

ಕೋಡಿಂಬಾಳ: ಕೆಲಸಕ್ಕೆಂದು ತೆರಳಿದ ಯುವಕ‌ ನಾಪತ್ತೆ Read More »

ಕರಾವಳಿ
Scroll to Top