ಕರಾವಳಿ

ಸಾರಕೆರೆ ಸೇತುವೆ ಮೇಲೆ ನಿಂತಿರುವ ನೀರು

(ನ್ಯೂಸ್ ಕಡಬ) newskadaba.com ಕಡಬ,ಜೂ.13. ಕಡಬ – ಪಂಜ ರಸ್ತೆಯ ಕೋಡಿಂಬಾಳ ಸಮೀಪದ ಸಾರಕೆರೆ ಕಿರು ಸೇತುವೆಯಲ್ಲಿ ಮಳೆ ನೀರು ಸರಗವಾಗಿ ಹರಿಯಲು ಅಡಚಣೆಯಾಗಿ ರಸ್ತೆ ಸಂಚಾರಿಗಳಿಗೆ ತೊಂದರೆಯಾಗುತ್ತಿದೆ. ಸೇತುವೆಯ ಎರಡು ಬದಿಗಳು ಏರು ರಸ್ತೆಯಾಗಿದ್ದು ರಸ್ತೆ ಮೇಲೆ ಬಿದ್ದ ನೀರು ಸೇತುವೆಗೆ ಹರಿದುಬರುತ್ತದೆ. ಸೇತುವೆಯಲ್ಲಿನ ನೀರು ಹರಿಯುವಿಕೆಗೆ ಅಳವಡಿಸಿದ ರಂದ್ರದಲ್ಲಿ ಹೂಳು ತುಂಬಿದ್ದು ಪರಿಣಾಮ ಸೇತುವೆ ಮೇಲೆ ನೀರು ಸಂಗ್ರವಾಗಿ ವಾಹನ ಸವಾರರೂ ಪಾದಚಾರಿಗಳು ತೊಂದರೆಗೊಳಗಾಗಿದ್ದಾರೆ. ಇತ್ತೀಚಿನ ಕೆಲವು ದಿನಗಳಲ್ಲಿ ನಿರಂತರ ಮಳೆಯಾಗುತ್ತಿದ್ದು ಸೇತುವೆ ಮೇಲೆ […]

ಸಾರಕೆರೆ ಸೇತುವೆ ಮೇಲೆ ನಿಂತಿರುವ ನೀರು Read More »

ಕರಾವಳಿ

ಆಲಂಕಾರು: ಆಹಾರ ಬೆಳೆ ಪ್ರಧಾನವಾಗಲಿ: ಪ್ರಮೀಳಾ ಜನಾರ್ಧನ್

ಆಲಂಕಾರಿನಲ್ಲಿ ಕಡಬ ಹೋಬಳಿ ಮಟ್ಟದ ಸಮಗ್ರ ಕೃಷಿ ಅಭಿಯಾನ ಉದ್ಘಾಟನೆ: (ನ್ಯೂಸ್ ಕಡಬ) newskadaba.com ಆಲಂಕಾರು,ಜೂ13. ನಾವಿಂದು ಸ್ವಾರ್ಥಕ್ಕೆ ಬಿದ್ದು ವಾಣಿಜ್ಯ ಬೆಳೆಗಳಿಗೆ ಮಾರು ಹೋಗುತ್ತಿದ್ದೇವೆ ಹೀಗೆ ಮುಂದುವರಿದರೆ ಮುಂದೆ ಎಲ್ಲಾ ಆಹಾರ ಬೆಳೆಗಳನ್ನು ವಿದೇಶದಿಂದಲೇ ಆಮದು ಮಾಡಿಕೊಳ್ಳಬೇಕಾದ ಅನಿವಾರ್ಯತೆ ನಿರ್ಮಾಣವಾಗುತ್ತದೆ, ಈ ಹಿನ್ನೆಯಲ್ಲಿ ರೈತ ಬಾಂಧವರು ನಮ್ಮಲ್ಲೇ ಹೆಚ್ಚು ಹೆಚ್ಚು ಆಹಾರ ಬೆಳೆಗಳನ್ನು ಬೆಳೆಯುವುದಕ್ಕೆ ಒತ್ತು ನೀಡಬೇಕು ಎಂದು ಬೆಳಂದೂರು ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ ಪ್ರಮಿಳಾ ಜನಾರ್ಧನ್ ಹೇಳಿದರು. ಅವರು ಶುಕ್ರವಾರ ಆಲಂಕಾರು ಗ್ರಾಮ

ಆಲಂಕಾರು: ಆಹಾರ ಬೆಳೆ ಪ್ರಧಾನವಾಗಲಿ: ಪ್ರಮೀಳಾ ಜನಾರ್ಧನ್ Read More »

ಕರಾವಳಿ

ಬೆಳಂದೂರು: ಮೆಸ್ಕಾಂ ವತಿಯಿಂದ ಸಾರ್ವಜನಿಕ ಸಭೆ ► ಆಲಂಕಾರಿನಲ್ಲಿ 110 ಕೆ.ವಿ. ಉಪಕೇಂದ್ರದ ಸ್ಥಾಪನೆಯ ಸಾಧಕ – ಬಾಧಕಗಳ ಚರ್ಚೆ

(ನ್ಯೂಸ್ ಕಡಬ) newskadaba.com ಬೆಳಂದೂರು, ಜೂ.13. 110 ಕೆ.ವಿ. ವಿದ್ಯುತ್ ಪ್ರಸರಣಾ ಲೈನ್ ಎಳೆಯಲು ನಮ್ಮದೇನು ಆಕ್ಷೇಪವಿಲ್ಲ. ಆದರೆ, ಈ ಯೋಜನೆಯಿಂದ ಕೃಷಿಕರಿಗೆ ತೊಂದರೆಯಾಗಬಾರದು. ಯೋಜನೆಗೆ ಭೂಮಿ ನೀಡುವ ಕೃಷಿಕರಿಗೆ ಸೂಕ್ತ ಪ್ರಮಾಣದ ಪರಿಹಾರ ಮೊತ್ತವನ್ನು ಸಕಾಲಕ್ಕೆ ಪಾವತಿಸಬೇಕೆಂದು ಬೆಳಂದೂರಿನಲ್ಲಿ ನಡೆದ ಕವಿಪ್ರನಿನಿ ಸಭೆಯಲ್ಲಿ ಆಗ್ರಹ ಕೇಳಿಬಂತು. ಬೆಳಂದೂರಿನ ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತ ವತಿಯಿಂದ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಕೃಷಿಕರು, ರೈತರ ಮೂಲಭೂತ ಬೇಡಿಕೆಗಳಲ್ಲಿ ಒಂದಾದ ವಿದ್ಯುತ್

ಬೆಳಂದೂರು: ಮೆಸ್ಕಾಂ ವತಿಯಿಂದ ಸಾರ್ವಜನಿಕ ಸಭೆ ► ಆಲಂಕಾರಿನಲ್ಲಿ 110 ಕೆ.ವಿ. ಉಪಕೇಂದ್ರದ ಸ್ಥಾಪನೆಯ ಸಾಧಕ – ಬಾಧಕಗಳ ಚರ್ಚೆ Read More »

ಕರಾವಳಿ

ಮಂಗಳೂರು: ಅಂಬ್ಲಮೊಗರು ಗ್ರಾಮಸಭೆ

(ನ್ಯೂಸ್ ಕಡಬ)newskadaba.com ಮಂಗಳೂರು,ಜುಲೈ.13. ಮಂಗಳೂರು ತಾಲೂಕು ಅಂಬ್ಲಮೊಗರು ಗ್ರಾಮ ಪಂಚಾಯತಿನ 2018-19ನೇ ಸಾಲಿನ, ಪ್ರಥಮ ಸುತ್ತಿನ ಗ್ರಾಮಸಭೆ ಜುಲೈ 16 ರಂದು ಪೂರ್ವಾಹ್ನ 11 ಗಂಟೆಗೆ ಗ್ರಾಮಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ.  

ಮಂಗಳೂರು: ಅಂಬ್ಲಮೊಗರು ಗ್ರಾಮಸಭೆ Read More »

ಕರಾವಳಿ

ಲಘು ರಕ್ಷಣೆ ಮತ್ತು ಪ್ರವಾಹ ರಕ್ಷಣಾ ತರಬೇತಿ

(ನ್ಯೂಸ್ ಕಡಬ)newskadaba.com ಮಂಗಳೂರು,ಜುಲೈ.13. ಗೃಹರಕ್ಷಕ ಮತ್ತು ಪೌರರಕ್ಷಣಾ ಅಕಾಡೆಮಿ, ಬೆಂಗಳೂರಿನಲ್ಲಿ ಜುಲೈ 24 ರಿಂದ ಆಗಸ್ಟ್ 18 ರವರೆಗೆ 26 ದಿನಗಳು ನಡೆದ ಲಘು ರಕ್ಷಣೆ ಮತ್ತು ಪ್ರವಾಹ ರಕ್ಷಣಾ ತರಬೇತಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಕಡಬ ಘಟಕದ ಯೋಗೀಶ ವೈ ಟಿ, ಮೆಟಲ್ ನಂ. 969 ಮತ್ತು ಚೇತನ್ ಕುಮಾರ್ .ಕೆ, ಮೆಟಲ್ ನಂ. 966ರವರು ಯಶಸ್ವಿಯಾಗಿ ಪೂರೈಸಿರುತ್ತಾರೆ ಎಂದು ಸಮಾದೇಷ್ಟ ಡಾ: ಮುರಲೀ ಮೋಹನ್ ಚೂಂತಾರುರವರು ತಿಳಿಸಿದ್ದಾರೆ.  

ಲಘು ರಕ್ಷಣೆ ಮತ್ತು ಪ್ರವಾಹ ರಕ್ಷಣಾ ತರಬೇತಿ Read More »

ಕರಾವಳಿ

ಇಂದ್ರಧನುಷ್ ಗುರಿ ಸಾಧನೆಗೆ ಸಮನ್ವಯದಿಂದ ಕರ್ತವ್ಯ ನಿರ್ವಹಿಸಲು ಅಪರ ಜಿಲ್ಲಾಧಿಕಾರಿ ಸೂಚನೆ

(ನ್ಯೂಸ್ ಕಡಬ)newskadaba.com ಮಂಗಳೂರು,ಜುಲೈ.13. ಮಕ್ಕಳು ಮತ್ತು ಗರ್ಭಿಣಿಯರು ಯಾವುದೇ ಲಸಿಕಾ ಕಾರ್ಯಕ್ರಮದಿಂದ ಹೊರಗುಳಿಯದಂತೆ 2018ರ ವೇಳೆಗೆ ಶೇಕಡ 90ರಷ್ಟು ಸಾಧನೆ ದಾಖಲಿಸಲು ಇಲಾಖೆ ಸೂಕ್ಷ್ಮ ಯೋಜನಾ ವರದಿಯನ್ನು ತಯಾರಿಸಿ ಅನುಷ್ಠಾನಕ್ಕೆ ಸಜ್ಜಾಗಿದೆ ಎಂದು ಆರ್ಸಿಎಚ್ ಡಾಕ್ಟರ್ ಅಶೋಕ್ ಅವರು ಹೇಳಿದರು. ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಇಂದ್ರಧನುಷ್ ನಗರ ಲಸಿಕಾ ಅಭಿಯಾನ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ 2018 ಜೂನ್ 16ರಿಂದ ನಾಲ್ಕು ದಿವಸಗಳವರೆಗೆ ನಡೆಯಲಿದೆ ಎಂದರು. ಕಾರ್ಯಕ್ರಮದ ಮೊದಲನೇ

ಇಂದ್ರಧನುಷ್ ಗುರಿ ಸಾಧನೆಗೆ ಸಮನ್ವಯದಿಂದ ಕರ್ತವ್ಯ ನಿರ್ವಹಿಸಲು ಅಪರ ಜಿಲ್ಲಾಧಿಕಾರಿ ಸೂಚನೆ Read More »

ಕರಾವಳಿ

ಮಂಗಳೂರು: ಸ್ವಾತಂತ್ರ್ಯೋತ್ಸವ ಪೂರ್ವಸಿದ್ಧತಾ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು,ಜುಲೈ.13. ಅರ್ಥಪೂರ್ಣ ಹಾಗೂ ಸಂಭ್ರಮದ ಸ್ವಾತಂತ್ರ್ಯೋತ್ಸವವನ್ನು ನೆಹರು ಮೈದಾನದಲ್ಲಿ ಆಯೋಜಿಸುವ ಸಂಬಂಧ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಎಂ ಆರ್ ರವಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಕುಮಾರ್, ವಿವಿಧ ಇಲಾಖೆ ಅಧಿಕಾರಿಗಳಿಗೆ ಕಾರ್ಯಕ್ರಮದ ಹೊಣೆ ವಹಿಸಿದರು. ನೆಹರು ಮೈದಾನದಲ್ಲಿ ವೇದಿಕೆ ಸಿದ್ಧತೆಯನ್ನೊಳಗೊಂಡಂತೆ, ಉಪಹಾರ, ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ಸವಿವರ ಚರ್ಚೆ ನಡೆಯಿತು. ಖಾದಿ ಭಂಡಾರದಿಂದ ತಯಾರಿಸಿದ ಧ್ವಜಗಳನ್ನು ಉಪಯೋಗಿಸಿ;

ಮಂಗಳೂರು: ಸ್ವಾತಂತ್ರ್ಯೋತ್ಸವ ಪೂರ್ವಸಿದ್ಧತಾ ಸಭೆ Read More »

ಕರಾವಳಿ

ಬೆಳ್ಳಾರೆ ಪೊಲೀಸ್ ಠಾಣಾ ಉಪನಿರೀಕ್ಷಕ, ಪ್ರವೃತ್ತಿಯಲ್ಲಿ ಲೇಖಕ ► ಲಿಟರೇಚರ್ ಆದರೂ ಖಡಕ್ ಆಫೀಸರ್ ಆಗಿರುವ ಈರಯ್ಯ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜೂ.13. ಲಾಠಿ, ಗನ್ ಹಿಡಿಯುವ ಕೈಯಲ್ಲಿ ಪೆನ್ ಹಿಡಿದು ಅಕ್ಷರ ಪೋಣಿಸುವ ಅಭ್ಯಾಸ. ಗಂಭೀರತೆ, ಒತ್ತಡದ ವೃತ್ತಿ ಬದುಕಿನ ಜೊತೆಗೂ ಸಾಹಿತ್ಯ ರಚಿಸುವ ಹವ್ಯಾಸ. ವೃತ್ತಿಯೊಂದಿಗೆ ಸಾಹಿತ್ಯದ ಅಭಿರುಚಿ ಹೊಂದಿರುವವರೇ ಬೆಳ್ಳಾರೆ ಪೊಲೀಸ್ ಠಾಣೆಯ ಉಪನಿರೀಕ್ಷಕ ಈರಯ್ಯ ಡಿ.ಎನ್. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪದವಿ ಓದುತ್ತಿರುವಾಗಲೇ ಸಾಹಿತ್ಯದ ಮೇಲೆ ಆಸಕ್ತಿ ಬೆಳೆಸಿಕೊಂಡವರು. ಶಿಕ್ಷಣ ಪೂರೈಸಿದ ಬಳಿಕ ಪೊಲೀಸ್ ಇಲಾಖೆಯಲ್ಲಿ ನೌಕರಿ ಪಡೆದ ಈರಯ್ಯರು 2014ರ

ಬೆಳ್ಳಾರೆ ಪೊಲೀಸ್ ಠಾಣಾ ಉಪನಿರೀಕ್ಷಕ, ಪ್ರವೃತ್ತಿಯಲ್ಲಿ ಲೇಖಕ ► ಲಿಟರೇಚರ್ ಆದರೂ ಖಡಕ್ ಆಫೀಸರ್ ಆಗಿರುವ ಈರಯ್ಯ Read More »

ಕರಾವಳಿ

ಗದ್ದಲ, ಮಾತಿನ ಚಕಮಕಿಯಲ್ಲಿ ನಡೆದ ಕುಟ್ರುಪಾಡಿ ಗ್ರಾಮ ಸಭೆ ► ಗ್ರಾ.ಪಂ. ಸದಸ್ಯರು V/S ಪಿ.ಡಿ.ಒ

(ನ್ಯೂಸ್ ಕಡಬ) newskadaba.com ಕಡಬ, ಜೂ.13. ಗ್ರಾ.ಪಂ. ಸದಸ್ಯರ ಗಮನಕ್ಕೆ ತಾರದೆ ಪಂಚಾಯತ್ ಅಭಿವೃದ್ದಿ ಅಧಿಕಾರಿಯವರು ಸರಕಾರಿ ಸ್ಥಳದಲ್ಲಿ ಚುನಾವಣಾ ಸಂದರ್ಭದಲ್ಲಿ ರಾತೋ ರಾತ್ರಿ ವಾಹನ ಪಾರ್ಕಿಂಗ್ ಶೆಡ್ ನಿರ್ಮಿಸಿದ್ದಾರೆ ಎನ್ನುವ ಆರೋಪ, ಹೊಸಮಠ ಸಹಕಾರಿ ಸಂಘದವರು ಪಂಚಾಯತ್ಗೆ ನೀರಿನ ಬಿಲ್ ಬಾಕಿ ಇರಿಸಿಕೊಂಡಿದ್ದಾರೆ ಎನ್ನುವ ಕಾರಣ ನೀಡಿ ಸಹಕಾರಿ ಸಂಘದ ಗೋಡಾನ್ ಪರವಾನಿಗೆ ನವೀಕರಿಸಲು ಪಿಡಿಒ ರವರು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಸಹಕಾರಿ ಸಂಘದ ಅಧ್ಯಕ್ಷರ ಆರೋಪ, ಹೊಸಮಠ ಬಸ್ ತಂಗುದಾನದಲ್ಲಿರುವ ಅಂಗಡಿ ಕೊಠಡಿಯೊಂದು

ಗದ್ದಲ, ಮಾತಿನ ಚಕಮಕಿಯಲ್ಲಿ ನಡೆದ ಕುಟ್ರುಪಾಡಿ ಗ್ರಾಮ ಸಭೆ ► ಗ್ರಾ.ಪಂ. ಸದಸ್ಯರು V/S ಪಿ.ಡಿ.ಒ Read More »

ಕರಾವಳಿ

ಕಡಬ: ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆ ► ಕೃಷಿ ತೋಟಗಳನ್ನು ಆವರಿಸಿದ ನೆರೆ ನೀರು

(ನ್ಯೂಸ್ ಕಡಬ) newskadaba.com ಕಡಬ. ಜೂ.12. ಕಳೆದ ಕೆಲವು ದಿನಗಳಿಂದ ಕಡಬ ಭಾಗದಲ್ಲಿ ಸುರಿಯುತ್ತಿರುವ ನಿರಂತ ಮಳೆಯಿಂದ ಗುಂಡ್ಯ ಹೊಳೆ ಕುಮಾದಾರ ನದಿ ತುಂಬಿ ಹರಿಯುತ್ತಿದ್ದು ನದಿ ತಟದ ಕೃಷಿ ತೋಟಗಳಿಗೆ ನೆರೆ ನೀರು ಆವರಿಸಿದೆ. ಎರಡೂ ಹೊಳೆಗಳ ಇಕ್ಕಡೆಗಳಲ್ಲಿರುವ ನಾಡೋಳಿ, ಏಣಿತಡ್ಕ , ಕೊಲ್ಯ ಪರಂಗಾಜೆ, ಕೊಂಡಾಡಿ, ಪಜ್ಜಡ್ಕ, ಕಕ್ವೆ ಮೊದಾದೆಡೆ ರೈತರ ಕೃಷಿ ತೋಟಗಳಿಗೆ ನೀರು ನುಗ್ಗಿ ದಿನಗಳೇ ಕಳೆದರೂ ಇನ್ನೂ ಇಳಿಮುಖವಾಗಿಲ್ಲ.

ಕಡಬ: ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆ ► ಕೃಷಿ ತೋಟಗಳನ್ನು ಆವರಿಸಿದ ನೆರೆ ನೀರು Read More »

ಕರಾವಳಿ
Scroll to Top