ಕರಾವಳಿ

ದಿವಂಗತ ರೆ|ಫಾ| ಅಬ್ರಹಾಂ ಕಲಪ್ಪಾಟ್ ಸ್ಮರಣಾರ್ಥ ಎವರ್ರೋಲಿಂಗ್ ಟ್ರೋಫಿ ► ಕೋಡಿಂಬಾಳ ಸೈಂಟ್ ಜಾರ್ಜ್ ಮಲಂಕರ ಕ್ಯಾಥೋಲಿಕ್ ಪ್ರಥಮ

(ನ್ಯೂಸ್ ಕಡಬ) newskadaba.com ಕಡಬ, ಅ.20. ಮಲಂಕರ ಕ್ಯಾಥೋಲಿಕ್ ಧರ್ಮಸಭೆ ಪುತ್ತೂರು ಧರ್ಮಪ್ರಾಂತ್ಯದ ಯೂತ್ ಮೂವ್ ಮೆಂಟ್ ನ ಮಾಜಿ ಡ್ಯೆರೆಕ್ಟರ್ ದಿವಂಗತ ರೆವರೆಂಡ್ ಫಾದರ್ ಅಬ್ರಹಾಂ ಕಲಪ್ಪಾಟ್ ಅವರ ಹೆಸರಿನಲ್ಲಿ ಆರಂಭಿಸಿದ ಅಬ್ರಹಾಂ ಕಲಪ್ಪಾಟ್ ಎವರ್ರೋಲಿಂಗ್ ಟ್ರೋಫಿ ಹಗ್ಗ ಜಗ್ಗಾಟದಲ್ಲಿ ಸಂತ ಜಾರ್ಜ್ ಮಲಂಕರ ಕ್ಯಾಥೋಲಿಕ್ ಕೋಡಿಂಬಾಳ ಯುವಕರ ಘಟಕ ಪ್ರಥಮ ಸ್ಥಾನ ಪಡೆದಿದೆ. ಮಹಿಳೆಯರಿಗಾಗಿ ನಡೆಸಿದ ಹಗ್ಗಜಗ್ಗಾಟದಲ್ಲಿ ಇದೇ ಚರ್ಚ್ ನ ಯುವತಿಯರ ತಂಡವು ದ್ವಿತೀಯ ಸ್ಥಾನವನ್ನು ಪಡೆದಿದೆ. ಸಂತ ಮೇರೀಸ್ ಪ್ರೋ- ಕಥೇಟ್ರಲ್ […]

ದಿವಂಗತ ರೆ|ಫಾ| ಅಬ್ರಹಾಂ ಕಲಪ್ಪಾಟ್ ಸ್ಮರಣಾರ್ಥ ಎವರ್ರೋಲಿಂಗ್ ಟ್ರೋಫಿ ► ಕೋಡಿಂಬಾಳ ಸೈಂಟ್ ಜಾರ್ಜ್ ಮಲಂಕರ ಕ್ಯಾಥೋಲಿಕ್ ಪ್ರಥಮ Read More »

ಕರಾವಳಿ

ಡಿವೈಎಫ್ಐ ಮುಖಂಡನ ಮೇಲೆ ಹಲ್ಲೆ ಪ್ರಕರಣ ► ವೇಣೂರು ಠಾಣಾ ಹೆಡ್ ಕಾನ್ಸ್‌ಟೇಬಲ್ ಅಮಾನತು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಅ.20. ವಾಹನ ತಪಾಸಣೆಯ ನೆಪದಲ್ಲಿ ಡಿವೈಎಫ್‍ಐ ಮುಖಂಡ ರಿಯಾಝ್ ಮೇಲೆ ಹಲ್ಲೆ ನಡೆಸಿ ಅಮಾನವೀಯವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವೇಣೂರು ಠಾಣೆಯ ಹೆಡ್ ಕಾನ್ಟೇಬಲ್ ತಾರಾನಾಥ್ ಅವರನ್ನು ಕೆಲಸದಿಂದ ಅಮಾನತುಗೊಳಿಸಿ ಆದೇಶಿಸಲಾಗಿದೆ. ಡಿವೈಎಫ್‍ಐ ಸಂಘಟನೆಯ ಮುಖಂಡ ರಿಯಾಝ್ ಅಕ್ಟೋಬರ್ 02 ರಂದು ರಾತ್ರಿ ಮೂಡುಬಿದಿರೆಯಿಂದ ವೇಣೂರು ಮಾರ್ಗವಾಗಿ ತನ್ನ ಸಹೋದರನೊಂದಿಗೆ ಬೆಳ್ತಂಗಡಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ವಾಹನ ತಪಾಸಣೆಯ ನೆಪದಲ್ಲಿ ವೇಣೂರು ಪೊಲೀಸರು ರಿಯಾಝ್ ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಠಾಣೆಗೆ ಕರೆದೊಯ್ದು

ಡಿವೈಎಫ್ಐ ಮುಖಂಡನ ಮೇಲೆ ಹಲ್ಲೆ ಪ್ರಕರಣ ► ವೇಣೂರು ಠಾಣಾ ಹೆಡ್ ಕಾನ್ಸ್‌ಟೇಬಲ್ ಅಮಾನತು Read More »

ಕರಾವಳಿ

ಕೊನೆಗೂ ಬಗೆಹರಿದ ಕಡಬದ ಮೀನು ಮಾರುಕಟ್ಟೆ ಹರಾಜು ವಿವಾದ ► ಪಂಚಾಯತ್ ಗೆ 6 ಲಕ್ಷ ನಷ್ಟದೊಂದಿಗೆ ಮೀನು ಮಾರಾಟ ಆರಂಭ

(ನ್ಯೂಸ್ ಕಡಬ) newskadaba.com ಕಡಬ, ಅ.17. ಹಸಿ ಮೀನು ಮಾರುಕಟ್ಟೆಯ ಹರಾಜು ಮೊತ್ತದ ವಿಚಾರದಲ್ಲಿ ಕಡಬ ಗ್ರಾಮ ಪಂಚಾಯತ್ ಮತ್ತು ಹಸಿಮೀನು ಮಾರಾಟಗಾರರ ನಡುವಿನ ಹಗ್ಗ ಜಗ್ಗಾಟಕ್ಕೆ ಕೊನೆಗೂ ತೆರೆಬಿದ್ದಿದೆ. ಹರಾಜಿನ ಆರಂಭಿಕ ಮೊತ್ತವನ್ನು ಕಡಿಮೆಗೊಳಿಸಿ 3ನೇ  ಬಾರಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಕಡಬ ಪೇಟೆಯ 2 ಕಡೆ ಹಸಿಮೀನು ಮಾರಾಟದ ಹಕ್ಕು ಖಾಯಂಗೊಂಡಿದ್ದು, ಅ. 17 ರಿಂದ ಕಡಬ ಪೇಟೆಯಲ್ಲಿ ಹಸಿಮೀನು ಮಾರುಕಟ್ಟೆ ಮತ್ತೆ ತೆರೆದುಕೊಂಡಿದೆ. ಕಡಬ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಸಿ ಮೀನು ಮಾರಾಟ ನಡೆಸುವುದಕ್ಕಾಗಿ

ಕೊನೆಗೂ ಬಗೆಹರಿದ ಕಡಬದ ಮೀನು ಮಾರುಕಟ್ಟೆ ಹರಾಜು ವಿವಾದ ► ಪಂಚಾಯತ್ ಗೆ 6 ಲಕ್ಷ ನಷ್ಟದೊಂದಿಗೆ ಮೀನು ಮಾರಾಟ ಆರಂಭ Read More »

ಕರಾವಳಿ

ಕಡಬ: ಚಾಲಕನಿಲ್ಲದೆ ಹಿಂದಕ್ಕೆ ಚಲಿಸಿದ ನಿಲ್ಲಿಸಿದ್ದ ಕಾರು ► ಯುವಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

(ನ್ಯೂಸ್ ಕಡಬ) newskadaba.com ಕಡಬ, ಅ.17. ನಿಲ್ಲಿಸಿದ್ದ ಕಾರೊಂದು ಹಠಾತ್ತನೆ ಹಿಂದಕ್ಕೆ ಚಲಿಸಿದ್ದು, ಯುವಕನೋರ್ವನ ಸಮಯ ಪ್ರಜ್ಞೆಯಿಂದ ಪ್ರಾಣಾಪಾಯ ತಪ್ಪಿದ ಘಟನೆ ಬುಧವಾರ ಸಂಜೆ ಕಡಬ ಪೇಟೆಯಲ್ಲಿ ನಡೆದಿದೆ. ಇಲ್ಲಿನ ಪಂಚಾಯತ್ ಕಟ್ಟಡದ ಮುಂಭಾಗದಲ್ಲಿ ನಿಲ್ಲಿಸಿದ್ದ ಮಾರುತಿ ಆಲ್ಟೋ ಕಾರು ಹಠಾತ್ತನೆ ಹಿಂದಕ್ಕೆ ಚಲಿಸಲು‌ ಆರಂಭಿಸಿದೆ. ಚಾಲಕನಿಲ್ಲದೆ ಕಾರು ಹಿಂದಕ್ಕೆ ಬರುತ್ತಿರುವುದನ್ನು ಗಮನಿಸಿದ ಅಲ್ಲೇ ಪಕ್ಕದಲ್ಲಿ ನಿಂತಿದ್ದ ಕಡಬದ ಪೊರಂತು ನಿವಾಸಿ ಇಲ್ಯಾಸ್ ಜೆ.ಕೆ. ಕಾರನ್ನು ನಿಲ್ಲಿಸಲೆಂದು ಡೋರ್ ತೆರೆಯಲು ಯತ್ನಿಸಿದರಾದರೂ ಲಾಕ್ ಆಗಿದ್ದ ಹಿನ್ನೆಲೆಯಲ್ಲಿ ಬೊಬ್ಬೆ

ಕಡಬ: ಚಾಲಕನಿಲ್ಲದೆ ಹಿಂದಕ್ಕೆ ಚಲಿಸಿದ ನಿಲ್ಲಿಸಿದ್ದ ಕಾರು ► ಯುವಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ Read More »

ಕರಾವಳಿ

ಮರ್ಧಾಳ: ಸ್ಕಿಡ್ ಆಗಿ ರಸ್ತೆಗುರುಳಿದ ಬೈಕ್ ► ಇಬ್ಬರಿಗೆ ಗಾಯ, ಓರ್ವ ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಅ.16. ಬೈಕೊಂಡು ಸ್ಕಿಡ್ ಆಗಿ ಬಿದ್ದ ಪರಿಣಾಮ ಓರ್ವ ಗಂಭೀರ ಗಾಯಗೊಂಡ ಘಟನೆ ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ಮೀನಾಡಿ ಎಂಬಲ್ಲಿ ಮಂಗಳವಾರದಂದು ನಡೆದಿದೆ. ಗಾಯಾಳುಗಳನ್ನು ಕೊಂಬಾರು ಕೆಂಜಾಳ ನಿವಾಸಿ ಲೋಕೇಶ್ ಹಾಗೂ ಸಕಲೇಶಪುರದ ಮಾರನಹಳ್ಳಿ ಹೆಗ್ಗದ್ದೆ ನಿವಾಸಿ ದಿನೇಶ್ ಎಂದು ಗುರುತಿಸಲಾಗಿದೆ. ಮರ್ಧಾಳದಿಂದ ಇಚಿಲಂಪಾಡಿ ಕಡೆಗೆ ತೆರಳುತ್ತಿದ್ದಾಗ ಮೀನಾಡಿ ತಿರುವಿನಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದು ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ದಿನೇಶ್ ಗಂಭೀರ ಗಾಯಗೊಂಡಿದ್ದು,

ಮರ್ಧಾಳ: ಸ್ಕಿಡ್ ಆಗಿ ರಸ್ತೆಗುರುಳಿದ ಬೈಕ್ ► ಇಬ್ಬರಿಗೆ ಗಾಯ, ಓರ್ವ ಗಂಭೀರ Read More »

ಕರಾವಳಿ

►► Shocking News ಪುತ್ತೂರು: ಮನೆಮಂದಿ ಮಲಗಿದ್ದ ವೇಳೆ ಮನೆಗೆ ಸ್ಫೋಟಕ ಇಟ್ಟ ದುಷ್ಕರ್ಮಿಗಳು ► ಸ್ಫೋಟಕ ಸಿಡಿದು ಇಬ್ಬರು ಗಂಭೀರ

(ನ್ಯೂಸ್ ಕಡಬ) newskadaba.com ಪುತ್ತೂರು, ಅ.16. ಜಿಲೆಟಿನ್ ಸ್ಫೋಟಕ ಬಳಸಿ ಮನೆಯನ್ನು ಸ್ಫೋಟಿಸಿದ ಪರಿಣಾಮ ಮನೆ ಮಂದಿ ಗಂಭೀರ ಗಾಯಗೊಂಡ ಘಟನೆ ಕಬಕ ಸಮೀಪದ ಪೋಳ್ಯದಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ಸೋಮವಾರ ತಡರಾತ್ರಿ ಪೋಳ್ಯ ನಿವಾಸಿ ನಾರಾಯಣ ಪ್ರಸಾದ್ ಎಂಬವರ ಮನೆಯ ಹೊರಗಡೆ ಯಾರೋ ನಡೆದಾಡುತ್ತಿರುವ ಶಬ್ದ ಕೇಳಿ ಮನೆಮಂದಿ ಎಚ್ಚರಗೊಂಡಿದ್ದು, ಲೈಟ್ ಹಾಕಿ ಬಾಗಿಲು ತೆರೆಯುವಷ್ಟರಲ್ಲಿ ಅಪರಿಚಿತ ವ್ಯಕ್ತಿಯೋರ್ವರು ಸ್ಫೋಟಕಕ್ಕೆ ಬೆಂಕಿ ಕೊಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ವೇಳೆ ಸ್ಫೋಟಕ ಸಿಡಿದಿದ್ದು, ಘಟನೆಯಲ್ಲಿ ನಾರಾಯಣ ಪ್ರಸಾದ್

►► Shocking News ಪುತ್ತೂರು: ಮನೆಮಂದಿ ಮಲಗಿದ್ದ ವೇಳೆ ಮನೆಗೆ ಸ್ಫೋಟಕ ಇಟ್ಟ ದುಷ್ಕರ್ಮಿಗಳು ► ಸ್ಫೋಟಕ ಸಿಡಿದು ಇಬ್ಬರು ಗಂಭೀರ Read More »

ಕರಾವಳಿ

ಆಲಂಕಾರು: ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ, ಅ.15. ಠಾಣಾ ವ್ಯಾಪ್ತಿಯ ಶರವೂರು ಕರಂದ್ಲಾಜೆ ಎಂಬಲ್ಲಿನ ಸರಕಾರಿ ಗೇರು ತೋಟದಲ್ಲಿ ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರದಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಆಲಂಕಾರು ಗ್ರಾಮದ ನಗ್ರಿ ನಿವಾಸಿ ಕುಶಾಲಪ್ಪ ದೇವಾಡಿಗ ಎಂಬವರ ಪುತ್ರ ವಿನಯ ದೇವಾಡಿಗ(32) ಎಂದು ಗುರುತಿಸಲಾಗಿದೆ. ವಿಪರೀತ ಮದ್ಯ ವ್ಯಸನಿಯಾಗಿದ್ದ ವಿನಯ್ ಅವಿವಾಹಿತರಾಗಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ಶರವೂರು ಸರಕಾರಿ ಗೇರು ತೋಟದಲ್ಲಿ ಗೇರು ಮರದ ಗೆಲ್ಲಿಗೆ ನೈಲಾನ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ

ಆಲಂಕಾರು: ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ Read More »

ಕರಾವಳಿ

ಮುಂದೊಂದು ದಿನ ಕುಮಾರಸ್ವಾಮಿ ಭಾರತದ ರಾಷ್ಟ್ರಪತಿ ಆಗಲಿದ್ದಾರೆ ► ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಭವಿಷ್ಯ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.15. ಮುಂದೊಂದು ದಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರು ದೇಶದ ರಾಷ್ಟ್ರಪತಿ ಆಗಲಿದ್ದು, ಆ ಸಮಯದಲ್ಲಿ ತಾನು ಇರಲಾರೆ ಎಂದು ಕಾಂಗ್ರೆಸ್​ನ ಹಿರಿಯ ಮುಖಂಡ ಜನಾರ್ದನ ಪೂಜಾರಿ ಭವಿಷ್ಯ ನುಡಿದಿದ್ದಾರೆ. ಭಾನುವಾರದಂದು ಮಂಗಳೂರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಕುಮಾರಸ್ವಾಮಿ ಸಮ್ಮುಖದಲ್ಲಿ ಮಾತನಾಡಿದ ಅವರು, ದೇವೇಗೌಡರು ದೇಶದ ಪ್ರಧಾನಿಯಾಗಿದ್ದರು. ಆದರೆ ಎಲ್ಲರಿಗೂ ಪ್ರಧಾನಿಯಾಗಲು ಸಾಧ್ಯವಿಲ್ಲ. ಪೂರ್ವಜರ ಪುಣ್ಯವಿದ್ದಲ್ಲಿ ಮಾತ್ರ ಅದು ಸಾಧ್ಯ‌ ಇದೀಗ ದೇವೇಗೌಡರ ಸುಪುತ್ರ ರಾಜ್ಯದ ಮುಖ್ಯಮಂತ್ರಿಯಾಗಿದ್ದು, ಮುಂದೊಂದು ದಿನ ಕುಮಾರಸ್ವಾಮಿ ಭಾರತದ

ಮುಂದೊಂದು ದಿನ ಕುಮಾರಸ್ವಾಮಿ ಭಾರತದ ರಾಷ್ಟ್ರಪತಿ ಆಗಲಿದ್ದಾರೆ ► ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಭವಿಷ್ಯ Read More »

ಕರಾವಳಿ

ದ್ವಿಚಕ್ರ ವಾಹನಕ್ಕೆ ಸ್ವಿಫ್ಟ್ ಕಾರು ಢಿಕ್ಕಿ ಹೊಡೆದು ಪರಾರಿ ► ಪುಣಚ ಗ್ರಾಮ ಲೆಕ್ಕಾಧಿಕಾರಿ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಅ.14. ದ್ವಿಚಕ್ರ ವಾಹನ ಮತ್ತು ಸ್ವಿಫ್ಟ್ ಕಾರು‌‌ ನಡುವೆ ಢಿಕ್ಕಿ ಉಂಟಾದ ಪರಿಣಾಮ ಗ್ರಾಮ ಲೆಕ್ಕಾಧಿಕಾರಿಯೋರ್ವರು ಮೃತಪಟ್ಟ ದಾರುಣ ಘಟನೆ ಭಾನುವಾರ ರಾತ್ರಿ ತಿಂಗಳಾಡಿಯಲ್ಲಿ ನಡೆದಿದೆ. ಮೃತರನ್ನು ಪುತ್ತೂರು ತಾಲೂಕು ಪುಣಚ ಗ್ರಾಮ ಲೆಕ್ಕಾಧಿಕಾರಿ ಸುದೇಶ್ ಎಂದು ಗುರುತಿಸಲಾಗಿದೆ. ಇವರು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಸ್ವಿಫ್ಟ್ ಕಾರು ಢಿಕ್ಕಿ ಹೊಡೆದು ಪರಾರಿಯಾಗಿದೆ.ಘಟನೆಯಲ್ಲಿ ಗಂಭೀರ ಗಾಯಗೊಂಡ ಸುದೇಶ್ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪುತ್ತೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ಕಾರು ಚಾಲಕನ

ದ್ವಿಚಕ್ರ ವಾಹನಕ್ಕೆ ಸ್ವಿಫ್ಟ್ ಕಾರು ಢಿಕ್ಕಿ ಹೊಡೆದು ಪರಾರಿ ► ಪುಣಚ ಗ್ರಾಮ ಲೆಕ್ಕಾಧಿಕಾರಿ ಮೃತ್ಯು Read More »

ಕರಾವಳಿ

ಕುಂತೂರು ಸಿಡಿಲು ಬಡಿದು ಮನೆಗೆ ಹಾನಿ ►ಲಕ್ಷಾಂತರ ರೂ. ನಷ್ಟ

(ನ್ಯೂಸ್ ಕಡಬ) newskadaba.com ಕಡಬ, ಅ.14. ಮನೆಯೊಂದಕ್ಕೆ ಸಿಡಿಲು ಬಡಿದ ಪರಿಣಾಮ ಗೋಡೆ ಕುಸಿದು ಮೇಲ್ಛಾವಣಿ ಹಾನಿಗೀಡಾಗಿದ್ದು, ಇಲೆಕ್ಟ್ರಾನಿಕ್ ವಸ್ತುಗಳು ಸ್ಫೋಟಗೊಂಡು ಲಕ್ಷಾಂತರ ರೂ. ನಷ್ಟ ಸಂಭವಿಸಿದ ಘಟನೆ ಕುಂತೂರು ಸಮೀಪದ ಪೆರಾಬೆಯಲ್ಲಿ ಶನಿವಾರ ರಾತ್ರಿ ನಡೆದಿದೆ. ಪೆರಾಬೆ ಗ್ರಾಮದ ತೋಟ ಮನೆ ಎಂ.ಎಂ. ಮಹಮ್ಮದ್ ಎಂಬವರಿಗೆ ಸೇರಿದ ಮನೆಗೆ ಶನಿವಾರ ರಾತ್ರಿ ಸಿಡಿಲು ಬಡಿದಿದ್ದು, ಮನೆಯಲ್ಲಿದ್ದ ಟಿವಿ, ಇನ್ವರ್ಟರ್ ಸ್ಫೋಟಗೊಂಡಿದ್ದು, ವಯರಿಂಗ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಮನೆಯ ಒಂದು ಪಾರ್ಶ್ವದ ಗೋಡೆಯು ಕುಸಿದಿದ್ದು, ಮೇಲ್ಛಾವಣಿ ಹಾನಿಗೀಡಾಗಿದೆ.

ಕುಂತೂರು ಸಿಡಿಲು ಬಡಿದು ಮನೆಗೆ ಹಾನಿ ►ಲಕ್ಷಾಂತರ ರೂ. ನಷ್ಟ Read More »

ಕರಾವಳಿ
Scroll to Top