ಕರಾವಳಿ

ಕಡಬ ಪಿಲತ್ತೋಡಿಯಲ್ಲಿ ವಿದ್ಯುತ್ ಪರಿವರ್ತಕ ಉದ್ಘಾಟನೆ

(ನ್ಯೂ ಸ್ ಕಡಬ) newskadaba.com ಕಡಬ,ಅ.14. ಕಡಬ ಮೆಸ್ಕಾಂ ವತಿಯಿಂದ ಕಳಾರ ಪಿಲತ್ತೋಡಿ ಎಂಬಲ್ಲಿ ಹೊಸ ಟಿ.ಸಿ.ಯೊಂದನ್ನು ಶನಿವಾರದಂದು ಅಳವಡಿಸುವ ಮೂಲಕ ಆ ಭಾಗದ ಸುಮಾರು 20 ಕುಟುಂಬಗಳ ವಿದ್ಯುತ್ ಪಂಪು ಹಾಗೂ ಕಟ್ಟಡಗಳ ವಿದ್ಯುತ್ ಸಮಸ್ಯೆಯನ್ನು ನಿವಾರಿಸಲಾಯಿತು. ಈ ಭಾಗದ ರೈತರು ಹಾಗೂ ವಿದ್ಯುತ್ ಫಲಾನುಭವಿಗಳು ನಿರಂತರ ವಿದ್ಯುತ್ ಸಮಸ್ಯೆಯಿಂದ ತೊಂದರೆ ಅನಿಭವಿಸುತ್ತಿದ್ದು, ಚಿಮಿಣಿಯಂತೆ ಉರಿಯುತ್ತಿದ್ದ ಬಲ್ಬುಗಳಿಂದ ಮಕ್ಕಳಿಗಂತೂ ಓದಲೂ ಸಾಧ್ಯವಾಗದೆ ಸಮಸ್ಯೆಯಾಗಿದ್ದರೆ, ಕೃಷಿಕರಿಗೆ ಪಂಪುಗಳು ರನ್ ಆಗದೆ ರೈತರು ಕಂಗಾಲಾಗಿದ್ದರು. ಗ್ರಾಮಸ್ಥರ ಬೇಡಿಕೆ ಹಾಗೂ […]

ಕಡಬ ಪಿಲತ್ತೋಡಿಯಲ್ಲಿ ವಿದ್ಯುತ್ ಪರಿವರ್ತಕ ಉದ್ಘಾಟನೆ Read More »

ಕರಾವಳಿ

ಕದ್ರಿ ಉದ್ಯಾನವನದ ಸಂಗೀತ ಕಾರಂಜಿ, ಲೇಸರ್ ಶೋ ದರ ಪರಿಷ್ಕರಣೆ ► ಅ.15ರಿಂದ ಹೊಸ ದರ ಚಾಲ್ತಿಗೆ

(ನ್ಯೂಸ್ ಕಡಬ) newskadaba.com ಮಂಗಳೂರು ಅ.13. ಕದ್ರಿ ಉದ್ಯಾನವನದಲ್ಲಿ ನಿರ್ಮಿಸಲಾಗಿದ್ದ ಸಂಗೀತ ಕಾರಂಜಿ, ಲೇಶರ್ ಶೋ ಕಾರ್ಯಕ್ರಮದ ಪ್ರವೇಶ ದರವನ್ನು ಈ ಕೆಳಗಿನಂತೆ ಪರಿಷ್ಕರಿಸಲಾಗಿದೆ. ಕದ್ರಿ ಉದ್ಯಾನವನದ ಅಭಿವೃದ್ದಿ ಸಮಿತಿಯ ನಿರ್ಣಯದಂತೆ ಅಕ್ಟೋಬರ್ 15 ರಿಂದ ವಯಸ್ಕರಿಗೆ ರೂ.50/- ಇದ್ದ ಟಿಕೇಟ್ ಶುಲ್ಕವನ್ನು ರೂ. 30/- ಕ್ಕೆ ಹಾಗೂ ಮಕ್ಕಳಿಗೆ  ರೂ. 25/- ಇದ್ದ ಟಿಕೇಟ್ ಶುಲ್ಕವನ್ನು  ರೂ. 15/- ಕ್ಕೆ ಪರಿಷ್ಕರಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಪ್ರಕಟಣೆ ತಿಳಿಸಿದೆ.

ಕದ್ರಿ ಉದ್ಯಾನವನದ ಸಂಗೀತ ಕಾರಂಜಿ, ಲೇಸರ್ ಶೋ ದರ ಪರಿಷ್ಕರಣೆ ► ಅ.15ರಿಂದ ಹೊಸ ದರ ಚಾಲ್ತಿಗೆ Read More »

ಕರಾವಳಿ

ವಿವಾದದಿಂದಾಗಿ 2 ಬಾರಿ ರದ್ದಾದ ಕಡಬದ ಹಸಿಮೀನು ಮಾರುಕಟ್ಟೆ ಹರಾಜು ► ಮೊತ್ತ ಇಳಿಕೆಯೊಂದಿಗೆ ಅ.16 ರಂದು ಮತ್ತೆ ಹರಾಜು

(ನ್ಯೂಸ್ ಕಡಬ) newskadaba.com ಕಡಬ,‌ ಅ.13. ಹಸಿ ಮೀನು ಮಾರುಕಟ್ಟೆಯ ಹರಾಜು ಮೊತ್ತದ ವಿಚಾರದಲ್ಲಿ ಕಡಬ ಗ್ರಾಮ ಪಂಚಾಯತ್ ಮತ್ತು ಹಸಿಮೀನು ಮಾರಾಟಗಾರರ ನಡುವಿನ ಹಗ್ಗ ಜಗ್ಗಾಟದಿಂದಾಗಿ 2 ಬಾರಿ ಹರಾಜು ಪ್ರಕ್ರಿಯೆ ರದ್ದಾದ ಹಿನ್ನೆಲೆಯಲ್ಲಿ ವಿಶೇಷ ಸಭೆ ನಡೆಸಿದ ಪಂಚಾಯತ್ ಆಡಳಿತವು ಅ.16 ರಂದು ಮತ್ತೆ ಹರಾಜು ನಡೆಸಲು ತೀರ್ಮಾನಿಸಿದೆ. ಕಡಬ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಸಿ ಮೀನು ಮಾರಾಟ ನಡೆಸುವುದಕ್ಕಾಗಿ 1 ವರ್ಷದ ಅವಧಿಗಾಗಿ ನೀಡಲಾಗಿದ್ದ ಹರಾಜು ಹಕ್ಕು ಸೆ. 6 ಕ್ಕೆ ಕೊನೆಯಾಗಿತ್ತು.

ವಿವಾದದಿಂದಾಗಿ 2 ಬಾರಿ ರದ್ದಾದ ಕಡಬದ ಹಸಿಮೀನು ಮಾರುಕಟ್ಟೆ ಹರಾಜು ► ಮೊತ್ತ ಇಳಿಕೆಯೊಂದಿಗೆ ಅ.16 ರಂದು ಮತ್ತೆ ಹರಾಜು Read More »

ಕರಾವಳಿ

ಮಂಗಳೂರು – ಸುಬ್ರಹ್ಮಣ್ಯ ರೋಡ್ ರೈಲ್ವೇ ಹಳಿಯಲ್ಲಿ ಗಂಡಸಿನ ಮೃತದೇಹ ಪತ್ತೆ ► ರೈಲು ಢಿಕ್ಕಿಯಾಗಿ ಛಿದ್ರಗೊಂಡ ಅಪರಿಚಿತ ಮೃತದೇಹ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಅ.13. ಸುಬ್ರಹ್ಮಣ್ಯ ರೋಡ್ – ಮಂಗಳೂರು ರೈಲ್ವೇ ಮಾರ್ಗದಲ್ಲಿ ರೈಲಿನಡಿಗೆ ಸಿಲುಕಿ ಮೃತಪಟ್ಟ ಸ್ಥಿತಿಯಲ್ಲಿ ಗಂಡಸಿನ ಮೃತದೇಹವೊಂದು ಬಂಟ್ವಾಳ ಸಮೀಪದ ಮಾರ್ನಬೈಲು ಎಂಬಲ್ಲಿ ಶನಿವಾರದಂದು ಕಂಡುಬಂದಿದೆ. ಮೆಲ್ಕಾರ್ ಸಮೀಪದ ಮಾರ್ನಬೈಲು ಬಳಿ ರೈಲ್ವೇ ಹಳಿಯಲ್ಲಿ ಅಪರಿಚಿತ ಗಂಡಸಿನ ರುಂಡ ಮತ್ತು ದೇಹ ಛಿದ್ರಗೊಂಡು ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಂಗಳೂರಿನಿಂದ ಸುಬ್ರಹ್ಮಣ್ಯ ರೋಡ್ ಗೆ ತೆರಳುವ ಲೋಕಲ್ ಢಿಕ್ಕಿ ಹೊಡೆದು ಈ ಘಟನೆ ಸಂಭವಿಸಿರಬಹುದೆಂದು ಶಂಕಿಸಲಾಗಿದೆ‌. ಮೃತ ವ್ಯಕ್ತಿಗೆ 35 ವರ್ಷ ಪ್ರಾಯವಾಗಿರಬಹುದೆಂದು

ಮಂಗಳೂರು – ಸುಬ್ರಹ್ಮಣ್ಯ ರೋಡ್ ರೈಲ್ವೇ ಹಳಿಯಲ್ಲಿ ಗಂಡಸಿನ ಮೃತದೇಹ ಪತ್ತೆ ► ರೈಲು ಢಿಕ್ಕಿಯಾಗಿ ಛಿದ್ರಗೊಂಡ ಅಪರಿಚಿತ ಮೃತದೇಹ Read More »

ಕರಾವಳಿ

ನೆಕ್ಕಿಲಾಡಿ ಪಿಡಿಒ ಚಂದ್ರಾವತಿಯವರ ವರ್ಗಾವಣೆಗೆ ಹುನ್ನಾರ ► ಕೆಲ ಗ್ರಾ.ಪಂ. ಸದಸ್ಯರ ನಡೆಗೆ ಗ್ರಾಮಸ್ಥರ ಆಕ್ರೋಶ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಅ.13. ಕಾನೂನು ಉಲ್ಲಂಘಿಸಿ ತಮ್ಮ ಕೆಲಸ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ 34ನೇ ನೆಕ್ಕಿಲಾಡಿ ಗ್ರಾ.ಪಂ. ಪ್ರಭಾರ ಪಿಡಿಒ ಚಂದ್ರಾವತಿಯವರನ್ನು ಇಲ್ಲಿಂದ ಎತ್ತಂಗಡಿ ನಡೆಸುವ ಪ್ರಯತ್ನ ಪಂಚಾಯತ್‍ನ ಕೆಲ ಸದಸ್ಯರಿಂದಲೇ ನಡೆಯುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದ್ದು, ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. 34ನೇ ನೆಕ್ಕಿಲಾಡಿ ಗ್ರಾ.ಪಂ. ಕಾರ್ಯದರ್ಶಿಯಾಗಿದ್ದ ರಾಮಣ್ಣರವರು ಅನಾರೋಗ್ಯದ ಮೇಲೆ ರಜೆಯಲ್ಲಿ ತೆರಳಿದ್ದರು. ಬಳಿಕ ಅವರನ್ನು ನೆಟ್ಟಣಿಗೆ ಮುಡ್ನೂರು ಗ್ರಾ.ಪಂ.ನ ಕಾರ್ಯದರ್ಶಿಯಾಗಿ ನಿಯೋಜಿಸಲಾಗಿತ್ತು. 34ನೇ ನೆಕ್ಕಿಲಾಡಿ ಗ್ರಾ.ಪಂ.ನ

ನೆಕ್ಕಿಲಾಡಿ ಪಿಡಿಒ ಚಂದ್ರಾವತಿಯವರ ವರ್ಗಾವಣೆಗೆ ಹುನ್ನಾರ ► ಕೆಲ ಗ್ರಾ.ಪಂ. ಸದಸ್ಯರ ನಡೆಗೆ ಗ್ರಾಮಸ್ಥರ ಆಕ್ರೋಶ Read More »

ಕರಾವಳಿ

ಕುಂತೂರು: ಎಂಡೋ ಪೀಡಿತೆ ನಾಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಅ.12. ಎಂಡೋಸಲ್ಫಾನ್ ಪೀಡಿತ ಮಹಿಳೆಯೋರ್ವರು ನಾಪತ್ತೆಯಾಗಿರುವ ಘಟನೆ ಠಾಣಾ ವ್ಯಾಪ್ತಿಯ ಪೆರಾಬೆಯಲ್ಲಿ ನಡೆದಿದೆ. ನಾಪತ್ತೆಯಾದವರನ್ನು ಕುಂತೂರು ಪೆರಾಬೆ ಗ್ರಾಮದ ಅಗತ್ತಾಡಿ ನಿವಾಸಿ ವೇದಾವತಿ(41) ಬುಧವಾರ ಸಂಜೆಯಿಂದ ನಾಪತ್ತೆಯಾಗಿದ್ದಾರೆ. ಸಂಬಂಧಿಕರಲ್ಲಿ ಹಾಗೂ ಪರಿಚಿತರಲ್ಲಿ ವಿಚಾರಿಸಿ ಪತ್ತೆಯಾಗದೆ ಇದ್ದುದರಿಂದ ವೇದಾವತಿಯವರ ಸಹೋದರ ಉದಯಕುಮಾರ್ ನೀಡಿದ ದೂರಿ‌ನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರನ್ನು ಕಂಡವರು ಕಡಬ ಪೊಲೀಸ್ ಠಾಣೆ 9480805364 ಅಥವಾ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.

ಕುಂತೂರು: ಎಂಡೋ ಪೀಡಿತೆ ನಾಪತ್ತೆ Read More »

ಕರಾವಳಿ

ಉಪ್ಪಿನಂಗಡಿ: ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಸರಬರಾಜು ► ಲಕ್ಷಾಂತರ ರೂ. ಮೌಲ್ಯದ ಸ್ವತ್ತುಗಳೊಂದಿಗೆ ಮೂವರ ಬಂಧನ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಅ.12. ಸಾರ್ವಜನಿಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಸುತ್ತಿದ್ದ ಪ್ರಕರಣವನ್ನು ಭೇದಿಸಿರುವ ಉಪ್ಪಿನಂಗಡಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ವಿಟ್ಲ ಕಡೆಯಿಂದ ಉಪ್ಪಿನಂಗಡಿಯ ಸಾರ್ವಜನಿಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಸರಬರಾಜು ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಆಧಾರದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣಾ ಪಿಎಸ್‌‌‌ಐ ನಂದಕುಮಾರ್‌ ಹಾಗೂ ಠಾಣಾ ಸಿಬ್ಬಂದಿಗಳು ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜಿನ ಮೈದಾನದ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಅಪರಾಹ್ನ

ಉಪ್ಪಿನಂಗಡಿ: ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಸರಬರಾಜು ► ಲಕ್ಷಾಂತರ ರೂ. ಮೌಲ್ಯದ ಸ್ವತ್ತುಗಳೊಂದಿಗೆ ಮೂವರ ಬಂಧನ Read More »

ಕರಾವಳಿ

ಕಡಬ: ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆ ► ಮೋದಿ ದುರಾಡಳಿತದ ವಿರುದ್ಧ ಮತದಾರರನ್ನು ಜಾಗೃತಗೊಳಿಸಿ – ರಮಾನಾಥ ರೈ

(ನ್ಯೂಸ್ ಕಡಬ) newskadaba.com ಕಡಬ, ಅ.11. ಕೇಂದ್ರ ಸರಕಾರದ ನರೇಂದ್ರ ಮೋದಿ ಸರಕಾರದ ದುರಾಡಳಿತ ಬಗ್ಗೆ ಪ್ರತೀ ಬೂತ್ ಮಟ್ಟದಲ್ಲಿ ಮತದಾರನನನು ಜಾಗೃತಗೊಳಿಸುವ ಕೆಲಸವನ್ನು ಬೂತ್ ಮಟ್ಟದ ಅಧ್ಯಕ್ಷ, ಪದಾಧಿಕಾರಿಗಳು, ಕಾರ್ಯಕರ್ತರು ಒಟ್ಟಾಗಿ ಹತ್ತು ಜನ ಸೇವಾಯೋಗಿಗಳ ತಂಡವನ್ನು ರಚಿಸುವ ಮೂಲಕ ಪ್ರತೀ ಮನೆ ಮನೆಗೆ ಪ್ರಚಾರ ಮಾಡುವ ಮೂಲಕ ಜಾಗೃತಿ ಮೂಡಿಸುವ ಕೆಸವನ್ನು ಮಾಡಬೇಕಾಗಿದೆ ಎಂದು ಮಾಜಿ ಜಿಲ್ಲಾ ಸಚಿವ ರಮಾನಾಥ ರೈ ಯವರು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಅವರು ಅ.10ರಂದು ಕಡಬ ಅನುಗ್ರಹ ಸಭಾಭವನದಲ್ಲಿ

ಕಡಬ: ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆ ► ಮೋದಿ ದುರಾಡಳಿತದ ವಿರುದ್ಧ ಮತದಾರರನ್ನು ಜಾಗೃತಗೊಳಿಸಿ – ರಮಾನಾಥ ರೈ Read More »

ಕರಾವಳಿ

ಸಮಾವೇಶದ ಫ್ಲೆಕ್ಸ್ ಕಟ್ಟುತ್ತಿದ್ದ ವೇಳೆ ವಿದ್ಯುತ್ ತಂತಿಗೆ ತಗುಲಿ ವಿದ್ಯುತ್ ಶಾಕ್ ► ಎಸ್ಡಿಪಿಐ ಪುತ್ತೂರು ನಗರ ಅಧ್ಯಕ್ಷ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಅ.11. ಎಸ್ಡಿಪಿಐ ಪಕ್ಷದ ಕಾರ್ಯಕರ್ತರ ಸಮಾವೇಶದ ಫ್ಲೆಕ್ಸ್ ಕಟ್ಟುತ್ತಿದ್ದಾಗ ವಿದ್ಯುತ್ ಆಘಾತಕ್ಕೊಳಗಾಗಿ ಪುತ್ತೂರು ನಗರ ಅಧ್ಯಕ್ಷ ಮೃತಪಟ್ಟ ಘಟನೆ ಬುಧವಾರ ತಡರಾತ್ರಿ ದರ್ಬೆಯಲ್ಲಿ ನಡೆದಿದೆ‌. ಶುಕ್ರವಾರದಂದು ಎಸ್ಡಿಪಿಐ ಪಕ್ಷದ ಕಾರ್ಯಕರ್ತರ ಜಾಥಾ ಸಮಾವೇಶವು ನಡೆಯಲಿದ್ದ ಹಿನ್ನೆಲೆಯಲ್ಲಿ ಪುತ್ತೂರಿನ ದರ್ಬೆ ಪೆಟ್ರೋಲ್ ಬಂಕ್ ಬಳಿ ಕಬ್ಬಿಣದ ಚೌಕಟ್ಟು ಹಾಕಿದ್ದ ಫ್ಲೆಕ್ಸನ್ನು ಕಟ್ಟುತ್ತಿರುವ ಸಂದರ್ಭದಲ್ಲಿ ಫ್ಲೆಕ್ಸ್ ವಿದ್ಯುತ್‌ ತಂತಿಗೆ ತಗುಲಿ ಶಾಕ್ ಹೊಡೆದ ಕಾರಣ ಫ್ಲೆಕ್ಸ್ ಕಟ್ಟುತ್ತಿದ್ದ ಪುತ್ತೂರು ನಗರ ಅಧ್ಯಕ್ಷ ಹಂಝ ಅಫ್ನಾನ್

ಸಮಾವೇಶದ ಫ್ಲೆಕ್ಸ್ ಕಟ್ಟುತ್ತಿದ್ದ ವೇಳೆ ವಿದ್ಯುತ್ ತಂತಿಗೆ ತಗುಲಿ ವಿದ್ಯುತ್ ಶಾಕ್ ► ಎಸ್ಡಿಪಿಐ ಪುತ್ತೂರು ನಗರ ಅಧ್ಯಕ್ಷ ಮೃತ್ಯು Read More »

ಕರಾವಳಿ

ಬಲ್ಯ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಪ್ರಾರಂಭ

(ನ್ಯೂಸ್ ಕಡಬ) newskadaba.com ಕಡಬ, ಅ.10. ಬಲ್ಯ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಪ್ರಾರಂಭಗೊಂಡಿದ್ದು,ಅ.10ರಂದು ತೆನೆ ಕಟ್ಟುವ ಕಾರ್ಯಕ್ರಮ ನಡೆಯಿತು. ಅ.10ರಂದು ಬೆಳಿಗ್ಗೆ ತೆನೆ ಕಟ್ಟುವುದು ಬಳಿಕ ದೇವತಾ ಪ್ರಾರ್ಥನೆ, ಗಣಪತಿ ಹೋಮ, ಪಂಚಾಮೃತ ಅಭಿಷೇಕ, ನವ ಕಲಶಾಭಿಷೇಕ ಮಧ್ಯಾಹ್ನ ಮಹಾಪೂಜೆ ನಡೆಯಿತು. ಸಂಜೆ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ ರಂಗಪೂಜೆ ನಡೆದು ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಬಟ್ಟಲು, ಚಯರ್ ಕೊಡುಗೆ: ಈ ಸಂದರ್ಭದಲ್ಲಿ ಹೊಸ್ಮಠ ರಾಜರಾಂ ಭಟ್ ಮತ್ತು ಮನೆಯವರು 100 ಊಟದ

ಬಲ್ಯ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಪ್ರಾರಂಭ Read More »

ಕರಾವಳಿ
Scroll to Top