ಕರಾವಳಿ

ಕಡಬ: ಕೆಎಸ್ಸಾರ್ಟಿಸಿ ಬಸ್ ಗೆ ಬೈಕ್ ಢಿಕ್ಕಿ

(ನ್ಯೂಸ್ ಕಡಬ) newskadaba.com ಕಡಬ, ಡಿ.21. ಬೈಕೊಂದು ಓವರ್ ಟೇಕ್ ಮಾಡುವ ಭರಾಟೆಯಲ್ಲಿ ಕೆಎಸ್ಸಾರ್ಟಿಸಿ ಬಸ್ಸಿಗೆ ಢಿಕ್ಕಿ ಹೊಡೆದ ಘಟನೆ ಶುಕ್ರವಾರ ಸಂಜೆ ಕಡಬದ ಕಳಾರ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಬಳಿಯ ತಿರುವಿನಲ್ಲಿ ನಡೆದಿದೆ. ಉಪ್ಪಿನಂಗಡಿಯಿಂದ ಕಡಬ ಕಡೆಗೆ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಗೆ ಬಲ್ಯ ಕಡೆಗೆ ತೆರಳುತ್ತಿದ್ದ ಬೈಕೊಂದು ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬೈಕ್‌ ಸವಾರ ಬಲ್ಯ ನಿವಾಸಿ ವೆಂಕಟರಮಣ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಢಿಕ್ಕಿಯ ರಭಸಕ್ಕೆ ಬೈಕ್ ನಜ್ಜುಗುಜ್ಜಾಗಿದ್ದು, ಬಸ್ ಚಾಲಕ ಬಸ್ಸನ್ನು […]

ಕಡಬ: ಕೆಎಸ್ಸಾರ್ಟಿಸಿ ಬಸ್ ಗೆ ಬೈಕ್ ಢಿಕ್ಕಿ Read More »

ಕರಾವಳಿ

ಬೆಳ್ಳಾರೆ ಪೊಲೀಸ್ ಠಾಣಾ ಅಪರಾಧ ತಡೆ ಮಾಸಾಚರಣೆಯ ಹಿನ್ನೆಲೆ ► ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವಾಕಥಾನ್

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಡಿ.21. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಹಾಗೂ ಬೆಳ್ಳಾರೆ ಪೊಲೀಸ್ ಠಾಣೆಯ ವತಿಯಿಂದ ನಿಂತಿಕಲ್ಲು ಕೆ.ಎಸ್.ಗೌಡ ಕಾಲೇಜಿನ ಸಹಯೋಗದೊಂದಿಗೆ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಶುಕ್ರವಾರದಂದು ಬೆಳ್ಳಾರೆಯಲ್ಲಿ ವಾಕಥಾನ್ ನಡೆಯಿತು. ಕಾರ್ಯಕ್ರಮವನ್ನು ಪುತ್ತೂರು ಉಪವಿಭಾಗದ ಡಿವೈಎಸ್ಪಿ ಶ್ರೀನಿವಾಸ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸುಳ್ಯ ವೃತ್ತ ನಿರೀಕ್ಷಕ ಸತೀಶ್ ಕುಮಾರ್, ನಿಂತಿಕಲ್ಲು ಕೆ.ಎಸ್. ಗೌಡ ಶಿಕ್ಷಣ ಸಂಸ್ಥೆಯ ಅಶೋಕ್ ಕುಮಾರ್, ಬೆಳ್ಳಾರೆ ಪೊಲೀಸ್ ಠಾಣಾ ಎಸ್ಐ ಈರಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಬೆಳ್ಳಾರೆಯ

ಬೆಳ್ಳಾರೆ ಪೊಲೀಸ್ ಠಾಣಾ ಅಪರಾಧ ತಡೆ ಮಾಸಾಚರಣೆಯ ಹಿನ್ನೆಲೆ ► ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವಾಕಥಾನ್ Read More »

ಕರಾವಳಿ

ಬ್ಯಾರಿ ಭಾಷೆ ಉಳಿಸಿ – ಬೆಳೆಸಿ ► ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಮಿತ್ತೂರಿನಲ್ಲಿ ಸಾಹಿತ್ಯ ಕಮ್ಮಟ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಡಿ. 21.  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಮಾಣಿ ದಾರಲ್ ಇರ್ಶಾದ್ ಎಜುಕೇಶನ್ ಸೆಂಟರ್  ಸಹಯೋಗದಲ್ಲಿ ಬ್ಯಾರಿ ಸಾಹಿತ್ಯ ಕಮ್ಮಟ ಮತ್ತು ಬ್ಯಾರಿ ಪ್ರತಿಭಾ ಸ್ಪರ್ಧೆ ಮಿತ್ತೂರಿನ ಕೆಜಿಎನ್ ಕ್ಯಾಂಪಸ್‍ನಲ್ಲಿ ಗುರುವಾರ ಜರುಗಿತು.ಬಂಟ್ವಾಳ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ ಕಾರ್ಯಕ್ರಮ ಉದ್ಘಾಟಿಸಿ, ಯುವ ಮನಸ್ಸಿನಲ್ಲಿ ಬ್ಯಾರಿ ಭಾಷೆಯ ಬಗ್ಗೆ ಅಭಿಮಾನ ಮೂಡಿಸುವ ಕೆಲಸ ನಡೆಯಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯಕ್ರಮ ಆಯೋಜಿಸುವುದು ಉತ್ತಮ ಬೆಳವಣಿಗೆ. ಮನಸ್ಸಿನೊಳಗೆ ಭಾಷೆ ಬಗ್ಗೆ ಅಭಿಮಾನ ಮೂಡಿಸಿ,

ಬ್ಯಾರಿ ಭಾಷೆ ಉಳಿಸಿ – ಬೆಳೆಸಿ ► ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಮಿತ್ತೂರಿನಲ್ಲಿ ಸಾಹಿತ್ಯ ಕಮ್ಮಟ Read More »

ಕರಾವಳಿ

► Breaking News ಪಂಜ: ಮರ ಕಡಿಯುತ್ತಿದ್ದ ವೇಳೆ ಅಡಿಕೆ ಮರ ಮೈಮೇಲೆ ಬಿದ್ದು ಓರ್ವ ಮೃತ್ಯು ► ಕಾಯಂಬಾಡಿ ದೇವಸ್ಥಾನದ ಜೀರ್ಣೋದ್ಧಾರದ ಶ್ರಮದಾನದ ವೇಳೆ ದುರ್ಘಟನೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಡಿ.21. ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಶ್ರಮದಾನ ಮಾಡುತ್ತಿದ್ದಾಗ ಅಡಿಕೆ‌ ಮರ ಬಿದ್ದ ಪರಿಣಾಮ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಠಾಣಾ ವ್ಯಾಪ್ತಿಯ ಪಂಜ ಸಮೀಪದ ಕಾಯಂಬಾಡಿ ಎಂಬಲ್ಲಿ ಶುಕ್ರವಾರದಂದು ಸಂಭವಿಸಿದೆ. ಮೃತ ವ್ಯಕ್ತಿಯನ್ನು ಕೇನ್ಯ ಗ್ರಾಮದ ಕಾಯಂಬಾಡಿ ನಿವಾಸಿ ಚೆನ್ನಪ್ಪ ಗೌಡ(60) ಎಂದು ಗುರುತಿಸಲಾಗಿದೆ. ಕಾಯಂಬಾಡಿ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕಾಗಿ ಮರ ಕಡಿಯುತ್ತಿದ್ದ ವೇಳೆ ಮರ ಅಡಿಕೆ ಮರಕ್ಕೆ ಬಿದ್ದು, ಅಡಿಕೆ ಮರ ಚೆನ್ನಪ್ಪ ಗೌಡ ಎಂಬವರ ಮೇಲೆ

► Breaking News ಪಂಜ: ಮರ ಕಡಿಯುತ್ತಿದ್ದ ವೇಳೆ ಅಡಿಕೆ ಮರ ಮೈಮೇಲೆ ಬಿದ್ದು ಓರ್ವ ಮೃತ್ಯು ► ಕಾಯಂಬಾಡಿ ದೇವಸ್ಥಾನದ ಜೀರ್ಣೋದ್ಧಾರದ ಶ್ರಮದಾನದ ವೇಳೆ ದುರ್ಘಟನೆ Read More »

ಕರಾವಳಿ

ಬಜಪೆ: ಕುಖ್ಯಾತ ಸರಗಳ್ಳನ ಬಂಧನ ► ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರೇ ಈತನ ಟಾರ್ಗೆಟ್

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.22. ಕುಖ್ಯಾತ ಸಸರ ಕಳ್ಳನನ್ನು ಬಂಧಿಸಿರುವ ಬಜಪೆ ಠಾಣಾ ಪೊಲೀಸರು ಆರೋಪಿಯಿಂದ ಕಳವು ಮಾಡಲಾಗಿದ್ದ ಎರಡು ಚಿನ್ನದ ಸರ ಹಾಗೂ ದ್ವಿಚಕ್ರ ವಾಹನವೊಂದನ್ನು ವಶಪಡಿಸಿಕೊಂಡಿದ್ದಾರೆ.   ಬಂಧಿತ ಆರೋಪಿಯನ್ನು ಪಡೀಲ್ ಕತ್ತಲ್ ಸಾರ್ ನಿವಾಸಿ ರುಕ್ಮಯ್ಯ ಗೌಡ ಎಂಬವರ ಪುತ್ರ ತಿಲಕ್(27) ಎಂದು ಗುರುತಿಸಲಾಗಿದೆ. ಡಿಸೆಂಬರ್ 11 ರಂದು ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಪೆರಾರ ಗ್ರಾಮದ ಎರಮೆ ಎಂಬಲ್ಲಿ ಶ್ರೀಮತಿ ಪುಷ್ಪಾ ಎಂಬವರು ನಡೆದುಕೊಂಡು ಹೋಗುತ್ತಿದ್ದಾಗ ಕಪ್ಪು ಬಣ್ಣದ ಸ್ಕೂಟರಿನಲ್ಲಿ

ಬಜಪೆ: ಕುಖ್ಯಾತ ಸರಗಳ್ಳನ ಬಂಧನ ► ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರೇ ಈತನ ಟಾರ್ಗೆಟ್ Read More »

ಕರಾವಳಿ

ನಾಳೆ (ಡಿ .22) ಮಂಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳ.

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 21.    ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಮಂಗಳೂರು ಇದರ ವತಿಯಿಂದ ಉದ್ಯೋಗ ಮೇಳ ಕಾರ್ಯಕ್ರಮವನ್ನು ಡಿಸೆಂಬರ್ 22 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮಹಾನಗರಪಾಲಿಕೆ ಕಟ್ಟಡ, ಲಾಲ್‍ಭಾಗ್, ಮಂಗಳೂರು ಇಲ್ಲಿ ಹಮ್ಮಿಕೊಳ್ಳಲಾಗಿದೆ.   ಕಾರ್ಯಕ್ರಮದಲ್ಲಿ Mandovi Motors Pvt Ltd, Matrix Honda, Saggraha Management Pvt Ltd, Eurekha Forbes Ltd., BSL India Pvt Ltd, Arena. Animation ಕಂಪೆನಿಗಳು ಭಾಗವಹಿಸಲಿದ್ದು,

ನಾಳೆ (ಡಿ .22) ಮಂಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳ. Read More »

ಕರಾವಳಿ

ಜಿಲ್ಲೆಯ ಚರಿತ್ರೆ ಹೇಳುವ ಛಾಯಾಚಿತ್ರ ನಿಮ್ಮಲ್ಲಿದೆಯೇ ? ► ಛಾಯಾಚಿತ್ರ ಪ್ರದರ್ಶನಕ್ಕೆ ಸುವರ್ಣಾವಕಾಶ

(ನ್ಯೂಸ್ ಕಡಬ) newskadaba.com  ಮಂಗಳೂರು, ಡಿ . 21 .  ದ.ಕ ಜಿಲ್ಲಾ ಕರಾವಳಿ ಉತ್ಸವದ ಪ್ರಯುಕ್ತ ಪ್ರವಾಸೋದ್ಯಮ ಇಲಾಖೆ ಮಂಗಳೂರು ವತಿಯಿಂದ ‘ಚರಿತ್ರೆ ಹೇಳುವ ಚಿತ್ರಗಳು’ ಶೀರ್ಷಿಕೆಯ ಹಳೆಯ ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ. ಸದ್ರಿ ಪ್ರದರ್ಶನ ಡಿಸೆಂಬರ್ 22, 23, 24 ರಂದು ಕದ್ರಿ ಉದ್ಯಾನವನದಲ್ಲಿ ಸಂಜೆ ಗಂಟೆ 4 ರಿಂದ 9ರವರೆಗೆ ನಡೆಯಲಿದ್ದು, ಸಂಗ್ರಹಗಳಲ್ಲಿರುವ ತಮ್ಮ ಛಾಯಾಚಿತ್ರಗಳನ್ನು ಪ್ರದರ್ಶಿಸಲು ಅವಕಾಶವಿದೆ. ಆಸಕ್ತರು ತಮ್ಮ ಹೆಸರು ಮತ್ತು ವಿಳಾಸದೊಂದಿಗೆ ಛಾಯಾಚಿತ್ರವನ್ನು ಮೇಲ್ ಮಾಡಬಹುದು. ಅಥವಾ ವೈಯಕ್ತಿಕವಾಗಿ

ಜಿಲ್ಲೆಯ ಚರಿತ್ರೆ ಹೇಳುವ ಛಾಯಾಚಿತ್ರ ನಿಮ್ಮಲ್ಲಿದೆಯೇ ? ► ಛಾಯಾಚಿತ್ರ ಪ್ರದರ್ಶನಕ್ಕೆ ಸುವರ್ಣಾವಕಾಶ Read More »

ಕರಾವಳಿ

ಯಶ್ ಅಭಿನಯದ ‘ಕೆಜಿಎಫ್’ ಬಿಡುಗಡೆಗೆ ಕೋರ್ಟ್ ತಡೆಯಾಜ್ಞೆ ► ಯಶ್ ಹೆಲಿಕಾಪ್ಟರ್ ನಲ್ಲಿ ಕುಕ್ಕೇಗೆ ಆಗಮಿಸಿದ್ದು ಮುಳುವಾಯಿತೇ..? ► ಸ್ಥಳೀಯರ ಮಾತು – ಅಭಿಮಾನಿಗಳ ನಿರಾಶೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.21. ಕನ್ನಡ ಸೇರಿದಂತೆ ಪಂಚ ಭಾಷೆಗಳಲ್ಲಿ ದೇಶಾದ್ಯಂತ ಇಂದು ತೆರೆಕಾಣಬೇಕಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಬಹು ನಿರೀಕ್ಷಿತ ‘ಕೆಜಿಎಫ್’ ಚಿತ್ರ ಬಿಡುಗಡೆಗೆ ಕೋರ್ಟ್ ಗುರುವಾರದಂದು ಮಧ್ಯಂತರ ತಡೆಯಾಜ್ಞೆ ನೀಡಿದೆ. ‘ಕೆಜಿಎಫ್’ ರೌಡಿ ತಂಗಂ ಜೀವನಾಧರಿತ ಸಿನಿಮಾ ಆಗಿದ್ದು, ಈ ಹಿಂದೆಯೇ ತಂಗಂ ಜೀವನಾಧಾರಿತ ಕತೆಯನ್ನು ಚಿತ್ರೀಕರಿಸಲು ತಾನು ಹಕ್ಕು ಪಡೆದಿದ್ದೇ‌ನೆ ಎಂದು ಆರೋಪಿಸಿ ವೆಂಕಟೇಶ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ 10ನೇ ಸಿಟಿ ಸಿವಿಲ್ ಕೋರ್ಟ್, 2019, ಜನವರಿ

ಯಶ್ ಅಭಿನಯದ ‘ಕೆಜಿಎಫ್’ ಬಿಡುಗಡೆಗೆ ಕೋರ್ಟ್ ತಡೆಯಾಜ್ಞೆ ► ಯಶ್ ಹೆಲಿಕಾಪ್ಟರ್ ನಲ್ಲಿ ಕುಕ್ಕೇಗೆ ಆಗಮಿಸಿದ್ದು ಮುಳುವಾಯಿತೇ..? ► ಸ್ಥಳೀಯರ ಮಾತು – ಅಭಿಮಾನಿಗಳ ನಿರಾಶೆ Read More »

ಕರಾವಳಿ

ಮಂಗಳೂರು: ಅಕ್ರಮ ಪಿಸ್ತೂಲ್, ಮಾರಕಾಯುಧ ಪತ್ತೆ ► ಭೂಗತ ಪಾತಕಿಯ ಸಹಚರನ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.20. ಅಕ್ರಮವಾಗಿ ಪಿಸ್ತೂಲ್ ಹಾಗೂ ಇತರ ಮಾರಕಾಯುಧಗಳನ್ನು ಹೊಂದಿದ್ದ ಆರೋಪದಲ್ಲಿ ಭೂಗತ ಪಾತಕಿಯ ಸಹಚರನೋರ್ವನನ್ನು ಮಂಗಳೂರು ಸಿಸಿಬಿ ಪೊಲೀಸರು ಗುರುವಾರದಂದು ಬಂಧಿಸಿ ಪಿಸ್ತೂಲ್, ತಲವಾರು ಹಾಗೂ ಇತರ ಮಾರಕಾಯುಧಗಳನ್ನು ವಶಪಡಿಸಿಕೊಂಡಿದ್ದಾರೆ. ನಗರದ ಹೊಯಿಗೆ ಬಝಾರ್ ಪರಿಸರದ ಅನೀಷ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಯೋರ್ವನು ಯಾವುದೋ ಕೃತ್ಯ ನಡೆಸುವ ಉದ್ದೇಶದಿಂದ ಅಕ್ರಮವಾಗಿ ಪಿಸ್ತೂಲ್ ಹಾಗೂ ಸಜೀವ ಮದ್ದುಗುಂಡುಗಳು, ತಲವಾರುಗಳನ್ನು ಇಟ್ಟುಕೊಂಡಿದ್ದಾನೆ ಎಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಮಂಗಳೂರು ಸಿಸಿಬಿ

ಮಂಗಳೂರು: ಅಕ್ರಮ ಪಿಸ್ತೂಲ್, ಮಾರಕಾಯುಧ ಪತ್ತೆ ► ಭೂಗತ ಪಾತಕಿಯ ಸಹಚರನ ಬಂಧನ Read More »

ಕರಾವಳಿ

ಉಪ್ಪಿನಂಗಡಿ: ಬಾಲಕ ನಾಪತ್ತೆ ► ಅಪಹರಣ ಶಂಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.20. ಮಂಜನಾಡಿ ಅಲ್ ಮದೀನಾ ವಿದ್ಯಾರ್ಥಿನಿಲಯದಲ್ಲಿದ್ದ ಬಾಲಕ ನಾಪತ್ತೆಯಾಗಿರುವ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಉಪ್ಪಿನಂಗಡಿ ಮೂಲದ ಜಾಫರ್ ಸಾಧೀಕ್ (15) ಎಂಬಾತನು ಡಿ. 5ರಂದು ಸ್ಥಳೀಯ ಮಸೀದಿಯಲ್ಲಿ ವಿದ್ಯಾರ್ಥಿಗಳು ಪ್ರಾರ್ಥನೆಯಲ್ಲಿದ್ದಾಗ ಹೊರಗಡೆ ಹೋದವನು ವಾಪಾಸು ಬಂದಿಲ್ಲ. ಬಾಲಕನು ಅಪ್ರಾಪ್ತ ವಯಸ್ಕನಾಗಿದ್ದು, ಯಾರೋ ಪುಸಲಾಯಿಸಿ ಅಪಹರಿಸಿರುವ ಬಗ್ಗೆ ದೂರು ನೀಡಲಾಗಿದೆ. ಅಪಹರಕ್ಕೊಳಗಾದ ಬಾಲಕನ ಚಹರೆ ಇಂತಿವೆ: ಪ್ರಾಯ-15 ವರ್ಷ, ಎತ್ತರ-152 ಸೆಂ.ಮೀ, ಮೈಬಣ್ಣ-ಗೋಧಿ ಮೈಬಣ್ಣ, ಮುಖ-ಕೋಲು ಮುಖ, ಬಲಕಾಲು ಊನ(ಅಂಗವಿಕಲ) ಸಾಧಾರಣ ಮೈಕಟ್ಟು

ಉಪ್ಪಿನಂಗಡಿ: ಬಾಲಕ ನಾಪತ್ತೆ ► ಅಪಹರಣ ಶಂಕೆ Read More »

ಕರಾವಳಿ
Scroll to Top