ಮಂಗಳೂರಿಗೂ ಕಾಲಿಟ್ಟ ‘ನಿಪಾಹ್’ ಮಹಾಮಾರಿ ► ಇಬ್ಬರು ರೋಗಿಗಳಲ್ಲಿ ಶಂಕಿತ ಸೋಂಕು ಪತ್ತೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.22. ಕೇರಳ ರಾಜ್ಯವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ನಿಪಾಹ್ ವೈರಸ್ ಮಂಗಳೂರಿಗೂ ಕಾಲಿಟ್ಟಿದ್ದು, ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಹೈ ಅಲೆರ್ಟ್ ಘೋಷಿಸಲಾಗಿದೆ‌.

ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರಲ್ಲಿ ಶಂಕಿತ ನಿಪಾಹ್ ಸೋಂಕಿನ ಲಕ್ಷಣ ಕಂಡುಬಂದಿದ್ದು, ವೈರಸ್ ಪತ್ತೆಗೆ ರಕ್ತ ಮಾದರಿಯನ್ನು ಮಣಿಪಾಲ ಕೆಎಂಸಿ ಆಸ್ಪತ್ರೆ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಮಾಹಿತಿ ನೀಡಿದ್ದಾರೆ.

Scroll to Top