ಕರಾವಳಿ

ಬಲ್ಯ: ಕಾರು – ಬೈಕ್ ನಡುವೆ ಅಪಘಾತ ➤ ನಾಲ್ವರು ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಎ. 22. ಪಲ್ಸರ್ ಬೈಕ್ ಹಾಗೂ ಮಾರುತಿ 800 ಕಾರು ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ನಾಲ್ವರು ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಲ್ಯ ಸಮೀಪದ ದೇರಾಜೆ ಕ್ರಾಸ್ ಬಳಿ ಸೋಮವಾರ ಅಪರಾಹ್ನ ಸಂಭವಿಸಿದೆ. ಗಾಯಾಳುಗಳನ್ನು ಬೈಕ್ ಸವಾರ ಬಲ್ಯ ನಿವಾಸಿ ವಿಶ್ವಾಸ್ ಪ್ರಸಾದ್ ಹಾಗೂ ಕಾರಿನಲ್ಲಿದ್ದ ಕಡಬ ಸಮೀಪದ ಹಳೇಸ್ಟೇಶನ್ ನಿವಾಸಿಗಳಾದ ಅಬ್ರಹಾಂ(52), ಶಾಲಿ(50) ಮತ್ತು ಸಿಂಧು(40) ಎಂದು ಗುರುತಿಸಲಾಗಿದೆ. ಅಪಘಾತದ ತೀವ್ರತೆಗೆ ಬೈಕ್ […]

ಬಲ್ಯ: ಕಾರು – ಬೈಕ್ ನಡುವೆ ಅಪಘಾತ ➤ ನಾಲ್ವರು ಗಂಭೀರ Read More »

ಕರಾವಳಿ

ಜಿಲ್ಲೆಯಲ್ಲಿ ಶಾಂತಿಯುತ ಮತದಾನ

(ನ್ಯೂಸ್ ಕಡಬ) newskadaba.com:ಮಂಗಳೂರು ಏಪ್ರಿಲ್ 18, ಜಿಲ್ಲೆಯಲ್ಲಿ ಶಾಂತಿಯುತ ಮತದಾನವಾಗಿದ್ದು, ಇಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ನಡೆದ ಮತದಾನದಲ್ಲಿ ಶೇಕಡಾ 77.25 ರಷ್ಟು ಮತದಾನವಾಗಿದೆ.ಬೆಳಿಗ್ಗೆ 9 ಗಂಟೆಗೆ ಶೇ. 15.49 ಮತದಾನವಾಗಿದ್ದು ಬೆಳಗ್ಗೆ 7 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತ ಮತದಾರರು ಚುರುಕಿನ ಮತದಾನ ನಡೆಸಿದರು. ಪೂರ್ವಾಹ್ನ 11 ಗಂಟೆಗೆ ಶೇ.32.34, ಅಪರಾಹ್ನ 1 ಗಂಟೆಗೆ ಶೇ. 48.85, 3 ಗಂಟೆಗೆ ಶೇಕಡಾ 60.02, ಸಂಜೆ 5 ಗಂಟೆಗೆ ಶೇ. 72.3 ಅಂತಿಮ

ಜಿಲ್ಲೆಯಲ್ಲಿ ಶಾಂತಿಯುತ ಮತದಾನ Read More »

ಕರಾವಳಿ

ಬಂಟ್ವಾಳ: ನಕಲಿ ಮತ ಚಲಾಯಿಸುತ್ತಿದ್ದ ಪ್ರತ್ಯೇಕ ಪ್ರಕರಣ ಪತ್ತೆ ➤ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಮೂವರ ಬಂಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಎ.19. ಬೇರೆಯವರ ಹೆಸರಿನಲ್ಲಿ ನಕಲಿ ಮತದಾನ ಮಾಡಲು ಯತ್ನಿಸುತ್ತಿದ್ದ ಮೂರು ಪ್ರತ್ಯೇಕ ಪ್ರಕರಣಗಳನ್ನು ಪತ್ತೆ ಹಚ್ಚಿರುವ ಮತಗಟ್ಟೆ ಅಧಿಕಾರಿಗಳು ಮೂವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿರುವ ಘಟನೆ ಬಂಟ್ವಾಳದಲ್ಲಿ ಸಂಭವಿಸಿದೆ.   ಬಂಟ್ವಾಳ ವಿಧಾನಸಭಾ ಕ್ಷೇತ್ರದ 177 ನೇ ಮತಗಟ್ಟೆಯಲ್ಲಿ ಮಜೀದ್ ರಹಿಮಾನ್ ಎಂಬವರ ಹೆಸರಿನಲ್ಲಿ ಮತ ಚಲಾಯಿಸಲು ಯತ್ನಿಸಿದ ಆರೋಪಿ ಕಲ್ಲಡ್ಕ ರಾಮನಗರ ನಿವಾಸಿ ಜಿ.ಕೆ.ಅಬ್ದುಲ್ಲಾ ಎಂಬವರ ಪುತ್ರ ಮಹಮ್ಮದ್ ಶಾಫಿ(23)ಯನ್ನು ಬಂಧಿಸಲಾಗಿದೆ. 123ನೇ ಮತಗಟ್ಟೆಯಲ್ಲಿ ಆಸಿಫ್ ಅಲಿ ಎಂಬವರ ಹೆಸರಿನಲ್ಲಿ

ಬಂಟ್ವಾಳ: ನಕಲಿ ಮತ ಚಲಾಯಿಸುತ್ತಿದ್ದ ಪ್ರತ್ಯೇಕ ಪ್ರಕರಣ ಪತ್ತೆ ➤ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಮೂವರ ಬಂಧನ Read More »

ಕರಾವಳಿ

ಕೊಯಿಲ: ಹಸೆಮಣೆ ಏರಿದ ಬಳಿಕ ಮತ ಚಲಾಯಿಸಿದ ಮದುಮಗ ➤ ಪತ್ನಿಯೊಂದಿಗೆ ಸಬಳೂರು ಮತಗಟ್ಟೆಗೆ ಆಗಮಿಸಿದ ಗಿರೀಶ್

(ನ್ಯೂಸ್ ಕಡಬ) newskadaba.com ಕಡಬ, ಎ.18. ಲೋಕಸಭಾ ಚುನಾವಣೆಯಂದೇ ಹಸೆಮಣೆ ಏರಿದ ಯುವಕನೋರ್ವ ಸಂಜೆ ವೇಳೆಗೆ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ ಘಟನೆ ಕಡಬ ತಾಲೂಕಿನ ಕೊಯಿಲದಲ್ಲಿ ನಡೆದಿದೆ. ಖಂಡಿಗ ನಿವಾಸಿ ಗಿರೀಶ್ ಗುರುವಾರದಂದು ಬೆಳ್ತಂಗಡಿ ಮೂಲದ ಅಶ್ವಿನಿಯವರೊಂದಿಗೆ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಹಸೆಮಣೆ ಏರಿದ್ದು, ಸಂಜೆ ವೇಳೆಗೆ ಕೊಯಿಲ ಗ್ರಾಮದ ಸಬಳೂರು ಬೂತ್ ನಲ್ಲಿ ತನ್ನ ಹಕ್ಕನ್ನು ಚಲಾಯಿಸಿದರು. ನವವಧು ಅಶ್ವಿನಿ ಬೆಳ್ತಂಗಡಿಯಲ್ಲೇ ಗುರುವಾರ ಬೆಳಿಗ್ಗೆ ಮತ ಹಾಕಿ ಮದುವೆ ಮಂಟಪಕ್ಕೆ ಆಗಮಿಸಿದ್ದರು.

ಕೊಯಿಲ: ಹಸೆಮಣೆ ಏರಿದ ಬಳಿಕ ಮತ ಚಲಾಯಿಸಿದ ಮದುಮಗ ➤ ಪತ್ನಿಯೊಂದಿಗೆ ಸಬಳೂರು ಮತಗಟ್ಟೆಗೆ ಆಗಮಿಸಿದ ಗಿರೀಶ್ Read More »

ಕರಾವಳಿ

ಬಿಳಿನೆಲೆ ಮತಗಟ್ಟೆಯ ಸಿಬ್ಬಂದಿಗಳ ಉಪಾಹಾರಾದ ತಟ್ಟೆಯಲ್ಲಿ ಹಲ್ಲಿ ಪತ್ತೆ ➤ ಅಸ್ವಸ್ಥಗೊಂಡ ಸಿಬ್ಬಂದಿಗಳು ಪುತ್ತೂರು ಆಸ್ಪತ್ರೆಗೆ ➤ ಸತ್ತ ಹಲ್ಲಿಯ ಸುತ್ತ ಸಂಶಯದ ಹುತ್ತ..!!

(ನ್ಯೂಸ್ ಕಡಬ) newskadaba.com ಕಡಬ, ಎ.18. ಇಲ್ಲಿನ ಬಿಳಿನೆಲೆ ಮತಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗಳ ಬೆಳಗ್ಗಿನ ಉಪಹಾರದಲ್ಲಿ ಸತ್ತ ಹಲ್ಲಿಯೊಂದು ಪತ್ತೆಯಾಗಿದ್ದು, ಆಹಾರವನ್ನು ಸೇವಿಸಿದ ಹಲವರ ಪೈಕಿ ಇಬ್ಬರು ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಐವರ್ನಾಡು ನಿವಾಸಿ ಜಯಪ್ರಕಾಶ್ ಗೌಡ(35), ಬೆಳ್ಳಾರೆ ನಿವಾಸಿ ರಾಜೇಂದ್ರ(45) ಅಸ್ವಸ್ಥಗೊಂಡವರು. ಬೆಳಗ್ಗಿನ ಉಪಹಾರದ ವ್ಯವಸ್ಥೆಯನ್ನು ಹೊಟೇಲಿನಿಂದ ತರಿಸಲಾಗಿದ್ದು, ಹಲವು ಅಧಿಕಾರಿಗಳು ಇದೇ ಆಹಾರವನ್ನು ಸೇವಿಸಿದ್ದಾರೆ‌. ಆದರೆ ಸ್ಥಳೀಯರ ಮಾಹಿತಿ ಪ್ರಕಾರ ಅಸ್ವಸ್ಥಗೊಂಡ ಇಬ್ಬರೂ ಹೊಟೇಲಿನಲ್ಲಿ ಉಪಾಹಾರ ಸೇವಿಸಿ ಆಗಮಿಸಿದ್ದಾರೆ

ಬಿಳಿನೆಲೆ ಮತಗಟ್ಟೆಯ ಸಿಬ್ಬಂದಿಗಳ ಉಪಾಹಾರಾದ ತಟ್ಟೆಯಲ್ಲಿ ಹಲ್ಲಿ ಪತ್ತೆ ➤ ಅಸ್ವಸ್ಥಗೊಂಡ ಸಿಬ್ಬಂದಿಗಳು ಪುತ್ತೂರು ಆಸ್ಪತ್ರೆಗೆ ➤ ಸತ್ತ ಹಲ್ಲಿಯ ಸುತ್ತ ಸಂಶಯದ ಹುತ್ತ..!! Read More »

ಕರಾವಳಿ

ಕಡಬ ಪರಿಸರದಲ್ಲಿ ಬಿರುಸಿನ ಮತದಾನ ➤ ಬಿಳಿನೆಲೆಯಲ್ಲಿ ಆಹಾರ ಸೇವಿಸಿ ಅಸ್ವಸ್ಥಗೊಂಡ ಕರ್ತವ್ಯ ನಿರತ ಅಧಿಕಾರಿಗಳು ➤ ಕೊಂಬಾರಿನಲ್ಲಿ ರಕ್ತದೊತ್ತಡ ಕಡಿಮೆಯಾಗಿ ಕುಸಿದು ಬಿದ್ದ ಪೊಲೀಸ್ ಸಿಬ್ಬಂದಿ ಗಂಭೀರ ➤ ಓಂತ್ರಡ್ಕದಲ್ಲಿ ಕೆಲಕಾಲ ಕೈಕೊಟ್ಟ ಮತಯಂತ್ರ

(ನ್ಯೂಸ್ ಕಡಬ) newskadaba.com ಕಡಬ, ಎ.18. ಲೋಕಸಭಾ ಚುನಾವಣೆಗೆ ಮತದಾನ ಆರಂಭಗೊಂಡಿದ್ದು, ಎಲ್ಲಡೆ ಬಿರುಸಿನ ಮತದಾನ ನಡೆಯುತ್ತಿದೆ. ಕೋಡಿಂಬಾಳ ಗ್ರಾಮದ ಓಂತ್ರಡ್ಕ ಬೂತ್ ನಲ್ಲಿ ಬಿರುಸಿನ ಮತದಾನ ನಡೆಯುತ್ತಿದ್ದು, ಮತಯಂತ್ರ ಕೈಕೊಟ್ಟು ಸುಮಾರು 20 ನಿಮಿಷಗಳ ಕಾಲ ಮತದಾನ ಸ್ಥಗಿತಗೊಂಡಿತು‌. ಕಡಬ ಗ್ರಾಮದ ಬೂತ್ ಸಂಖ್ಯೆ 90 ರಲ್ಲಿ ಮಹಿಳೆಯರಿಂದಲೇ ನಿರ್ವಹಿಸಲ್ಪಡುವ ‘ಸಖಿ’ ಮತಗಟ್ಟೆಯನ್ನು ನಿರ್ಮಿಸಲಾಗಿತ್ತು. ರಕ್ತದೊತ್ತಡ ಕಡಿಮೆಯಾಗಿ ಕೊಂಬಾರು ಗ್ರಾಮದ ಮುಗೇರು ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಡಿಕೇರಿ ಮೂಲದ ಪೊಲೀಸ್ ಸಿಬ್ಬಂದಿ ಶ್ರೀನಿವಾಸ್ (42) ಕುಸಿದು

ಕಡಬ ಪರಿಸರದಲ್ಲಿ ಬಿರುಸಿನ ಮತದಾನ ➤ ಬಿಳಿನೆಲೆಯಲ್ಲಿ ಆಹಾರ ಸೇವಿಸಿ ಅಸ್ವಸ್ಥಗೊಂಡ ಕರ್ತವ್ಯ ನಿರತ ಅಧಿಕಾರಿಗಳು ➤ ಕೊಂಬಾರಿನಲ್ಲಿ ರಕ್ತದೊತ್ತಡ ಕಡಿಮೆಯಾಗಿ ಕುಸಿದು ಬಿದ್ದ ಪೊಲೀಸ್ ಸಿಬ್ಬಂದಿ ಗಂಭೀರ ➤ ಓಂತ್ರಡ್ಕದಲ್ಲಿ ಕೆಲಕಾಲ ಕೈಕೊಟ್ಟ ಮತಯಂತ್ರ Read More »

ಕರಾವಳಿ

ಕಡಬ: ದಲಿತ ಸಂಘರ್ಷ ಸಮಿತಿಯಿಂದ ಅಂಬೇಡ್ಕರ್ ರವರ 178 ನೇ ಜನ್ಮ ದಿನಾಚರಣೆ.

(ನ್ಯೂಸ್ ಕಡಬ) newskadaba.com ಕಡಬ, ಎ.17. ಕರ್ನಾಟಕ ದಲಿತ ಸಂಘರ್ಷ ಸಮಿತಿ( ಬಿ ಕೃಷ್ಣಪ್ಪ ಸ್ಥಾಪಿತ 47-74/75). ತಾಲ್ಲೂಕು ಶಾಖೆ ಕಡಬ ಹಾಗೂ ಪುತ್ತೂರು ಇವುಗಳ ಜಂಟಿ ಆಶ್ರಯದಲ್ಲಿ ಕಡಬದ ಅಂಬೇಡ್ಕರ್ ಭವನದಲ್ಲಿ “ಸಂವಿಧಾನ ಶಿಲ್ಪಿ ಪರಮಪೂಜ್ಯ ಡಾ||ಬಾಬಾಸಾಹೇಬ್ ಅಂಬೇಡ್ಕರ್ ರವರ 128ನೇ ಜನ್ಮ ದಿನಾಚರಣೆಯನ್ನುಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡಬ ತಾಲ್ಲೂಕು ಸಂಚಾಲಕರಾದ ಉಮೇಶ್ ಕೋಡಿಂಬಾಳ ಇವರು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ ಪ್ರಬುದ್ಧ ಭಾರತ ಸಂಘದ ಅಣ್ಣು ಸಾಧನ್ ಅವರು

ಕಡಬ: ದಲಿತ ಸಂಘರ್ಷ ಸಮಿತಿಯಿಂದ ಅಂಬೇಡ್ಕರ್ ರವರ 178 ನೇ ಜನ್ಮ ದಿನಾಚರಣೆ. Read More »

ಕರಾವಳಿ

ಜಿಲ್ಲೆಯಲ್ಲಿ ಮತದಾರರನ್ನು ಆಕರ್ಷಿಸುತ್ತಿದೆ ಪಾರಂಪರಿಕ ಮತಗಟ್ಟೆಗಳು

(ನ್ಯೂಸ್ ಕಡಬ) newskadaba.com ಮಂಗಳೂರು, ಎ.17 ;- ಜಿಲ್ಲೆಯಲ್ಲಿ ಬೆಳ್ತಂಗಡಿ, ಸುಳ್ಯ, ಪುತ್ತೂರು, ಬಂಟ್ವಾಳ ತಾಲೂಕಿಗೊಂದರಂತೆ ಪಾರಂಪರಿಕ ಮತಗಟ್ಟೆಗಳನ್ನು ರಚಿಸಲಾಗಿದ್ದು, ಮತಗಟ್ಟೆಗಳನ್ನು ಸ್ಥಳೀಯ ಸಂಸ್ಕೃತಿ ಮತ್ತು ಕಲೆ ಹಾಗೂ ಸಂಪನ್ಮೂಲಗಳನ್ನು ಬಳಸಿ ರಚಿಸಲಾಗಿದ್ದು, ಮತದಾರರನ್ನು ಮತದಾನದ ದಿನದಂದು ಆಕರ್ಷಿಸಲಿದೆ. ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಅಧಿಕಾರಿ ಹೇಮಲತಾ ಅವರ ನಿರ್ದೇಶನದಲ್ಲಿ ಈ ರಚನೆಗಳು ಸಿದ್ಧಗೊಂಡಿದ್ದು, ಪಾರಂಪರಿಕ ಬುಡಕಟ್ಟು ವರ್ಗದವರ ಕಲೆ, ಸಂಸ್ಕೃತಿ ಇಲ್ಲಿ ಅನಾವರಣಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಳ್ತಂಗಡಿಯ ಕನ್ಯಾನ ಜಿಲ್ಲಾ ಪಂಚಾಯತ್ ಸರ್ಕಾರಿ ಮಾದರಿ ಉನ್ನತ

ಜಿಲ್ಲೆಯಲ್ಲಿ ಮತದಾರರನ್ನು ಆಕರ್ಷಿಸುತ್ತಿದೆ ಪಾರಂಪರಿಕ ಮತಗಟ್ಟೆಗಳು Read More »

ಕರಾವಳಿ

ಕೊಯಿಲ: ಎಂಡೋಪೀಡಿತ ಅಭಿಷೇಕ್ ದ್ವಿತೀಯ ಪಿ.ಯು.ಸಿ.ಯಲ್ಲಿ ಪ್ರಥಮ ಸ್ಥಾನದಲ್ಲಿ ತೇರ್ಗಡೆ

(ನ್ಯೂಸ್ ಕಡಬ) newskadaba.com ಮಂಗಳೂರು, ಎ.15. ಎಂಡೋಪಾಲನಾ ಕೇಂದ್ರ, ಕೊಯಿಲದ ವಿದ್ಯಾರ್ಥಿ ಅಭಿಷೇಕ್ ದ್ವಿತೀಯ ಪಿ.ಯು.ಸಿ. ಕಲಾವಿಭಾಗದಲ್ಲಿ 63 ಶೇಕಡಾ ಅಂಕ ಪಡೆದು ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾಗಿರುತ್ತಾನೆ. ಶ್ರೀ ವಸಂತ ಮತ್ತು ಶ್ರೀಮತಿ ಗಂಗರತ್ನ ಇವರ ಪುತ್ರನಾದ ಅಭಿಷೇಕ್ ಕಳೆದ ವರ್ಷ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 76% ಅಂಕ ಪಡೆದು ತೇರ್ಗಡೆಯಾಗಿರುವನು.  ಸೇವಾ ಭಾರತಿ (ರಿ) ಮಂಗಳೂರು ಅಭಿಷೇಕ್‍ನ ಸಾಧನೆಗೆ ಅಭಿನಂದಿಸಿದೆ.  ಹಾಗೂ ಈ ಸಾಧನೆಗೈಯಲು ಸಹಕರಿಸಿದ ದ.ಕ. ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ

ಕೊಯಿಲ: ಎಂಡೋಪೀಡಿತ ಅಭಿಷೇಕ್ ದ್ವಿತೀಯ ಪಿ.ಯು.ಸಿ.ಯಲ್ಲಿ ಪ್ರಥಮ ಸ್ಥಾನದಲ್ಲಿ ತೇರ್ಗಡೆ Read More »

ಕರಾವಳಿ

ಕಡಬ ಜಿ.ಪಂ.ಸದಸ್ಯರ ಬೂತ್ ನ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ

(ನ್ಯೂಸ್ ಕಡಬ) newskadaba.com ಕಡಬ, ಎ.12. ಲೋಕಸಭಾ ಚುನಾವಣಾ ಕಾವು ಜೋರಾಗಿರುವಂತೆಯೇ ಪಕ್ಷಾಂತರ ಪರ್ವವೂ ಜೋರಾಗತೊಡಗಿದೆ. ವಿವಿಧ ಪಕ್ಷಗಳ ಮುಖಂಡರಲ್ಲದೆ ಕಾರ್ಯಕರ್ತರೂ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಕಡಬ ಜಿಲ್ಲಾ ಪಂಚಾಯತ್ ಸದಸ್ಯ ಪಿ.ಪಿ. ವರ್ಗೀಸ್ ರವರ ಬೂತ್ ನ ಹಲವು ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರದಂದು ಬಿಜೆಪಿಗೆ ಸೇರ್ಪಡೆಗೊಂಡರು. ಕಾಂಗ್ರೆಸ್ ಪಕ್ಷವು ಜನತೆಗೆ ಮೋಸ ಮಾಡುತ್ತಿದ್ದು, ದೇಶ ರಕ್ಷಣೆ ಮಾಡುವ ನರೇಂದ್ರ ಮೋದಿಯವರ ನಾಯಕತ್ವವನ್ನು ಮೆಚ್ಚಿ ಕಡಬ ಪರಿಸರದ ಮೂವತ್ತಕ್ಕೂ ಅಧಿಕ ಕಾರ್ಯಕರ್ತರು ಬಿಜೆಪಿಗೆ ಅಧಿಕೃತವಾಗಿ

ಕಡಬ ಜಿ.ಪಂ.ಸದಸ್ಯರ ಬೂತ್ ನ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ Read More »

ಕರಾವಳಿ
Scroll to Top