ಬಲ್ಯ: ಕಾರು – ಬೈಕ್ ನಡುವೆ ಅಪಘಾತ ➤ ನಾಲ್ವರು ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಎ. 22. ಪಲ್ಸರ್ ಬೈಕ್ ಹಾಗೂ ಮಾರುತಿ 800 ಕಾರು ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ನಾಲ್ವರು ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಲ್ಯ ಸಮೀಪದ ದೇರಾಜೆ ಕ್ರಾಸ್ ಬಳಿ ಸೋಮವಾರ ಅಪರಾಹ್ನ ಸಂಭವಿಸಿದೆ.

ಗಾಯಾಳುಗಳನ್ನು ಬೈಕ್ ಸವಾರ ಬಲ್ಯ ನಿವಾಸಿ ವಿಶ್ವಾಸ್ ಪ್ರಸಾದ್ ಹಾಗೂ ಕಾರಿನಲ್ಲಿದ್ದ ಕಡಬ ಸಮೀಪದ ಹಳೇಸ್ಟೇಶನ್ ನಿವಾಸಿಗಳಾದ ಅಬ್ರಹಾಂ(52), ಶಾಲಿ(50) ಮತ್ತು ಸಿಂಧು(40) ಎಂದು ಗುರುತಿಸಲಾಗಿದೆ. ಅಪಘಾತದ ತೀವ್ರತೆಗೆ ಬೈಕ್ ಇಬ್ಭಾಗವಾಗಿದ್ದು, ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಗಾಯಾಳುಗಳನ್ನು ಕಡಬ ಸಮುದಾಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕಡಬ ಮತ್ತು ಆಲಂಕಾರಿನ 108 ಆಂಬ್ಯುಲೆನ್ಸ್ ವಾಹನದ ಮೂಲಕ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Scroll to Top