ಕಡಬ ಪೊಲೀಸ್ ಠಾಣೆಯಲ್ಲಿ ದಲಿತರಿಗೆ ಮರೀಚಿಕೆಯಾದ ನ್ಯಾಯ..!! ➤ ಠಾಣೆಯಲ್ಲಿ ನಡೆದ ಸ್ಫೋಟದ ತನಿಖೆ ನಡೆಸದವರು ಹೇಗೆ ನ್ಯಾಯ ಒದಗಿಸುತ್ತಾರೆ..? ➤ ಕಡಬ ಪೊಲೀಸ್ ಅವ್ಯವಸ್ಥೆಯ ವಿರುದ್ದ ಉಗ್ರ ಹೋರಾಟ – ಸುಗುಣ ದೇವಯ್ಯ
(ನ್ಯೂಸ್ ಕಡಬ) newskadaba.com ಕಡಬ, ಎ.26. ಕಡಬ ಪೋಲಿಸ್ ಠಾಣೆಯಲ್ಲಿ ದಲಿತರಿಗೆ ಯಾವುದೇ ನ್ಯಾಯ ಸಿಗುತ್ತಿಲ್ಲ, ತಿಂಗಳಿಗೊಮ್ಮೆ ನಡೆಯಬೇಕಿದ್ದ ದಲಿತ ಕುಂದು ಕೊರತೆ ಸಭೆ ನಡೆಯುತ್ತಿಲ್ಲ. ಇದರಿಂದ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗದೆ ನಮಗೆ ತೊಂದರೆ ಉಂಟಾಗಿದೆ. ಈ ಬಗ್ಗೆ ನಮಗೆ ನ್ಯಾಯ ಬೇಕಾಗಿದೆ ಎಂದು ದ.ಸಂ.ಸ ಸದಸ್ಯೆ ಸುಗುಣಾ ದೇವಯ್ಯ ಹೇಳಿದ್ದಾರೆ. ಗುರುವಾರದಂದು ಕಡಬದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಕಡಬ ಪೋಲಿಸ್ ಠಾಣೆಯಲ್ಲಿ ಇತ್ತೀಚೆಗೆ ಪರಿಶಿಷ್ಟ ಜಾತಿ, ಪಂಗಡದ ಸಭೆಗಳನ್ನು ನಡೆಸುತ್ತಿಲ್ಲ. ಇದರಿಂದ ದಲಿತರಿಗಿರುವ ಯಾವುದೇ […]



