ಕರಾವಳಿ

ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ ➤ ಜಿಲ್ಲೆಯಾದ್ಯಂತ ನಾಳೆ (ಅ.25) ಶಾಲಾ ಕಾಲೇಜುಗಳಿಗೆ ರಜೆ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.24. ಕರಾವಳಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ರೆಡ್ ಅಲೆರ್ಟ್ ಘೋಷಿಸಲಾಗಿದ್ದು, ನಾಳೆ (ಅ.25) ದಕ್ಷಿಣ ಕನ್ನಡ ಜಿಲ್ಲಾದ್ಯಂತ ಶಾಲೆ ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಅರಬ್ಬೀ ಸಮುದ್ರ ಹಾಗೂ ಲಕ್ಷ ದ್ವೀಪಗಳಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಕರಾವಳಿಯಲ್ಲಿ ಬುಧವಾರ ರಾತ್ರಿಯಿಂದ ಭಾರೀ ಮಳೆ ಸುರಿಯುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ರಜೆ ಘೋಷಿಸಲಾಗಿದೆ. ಈ ಸಂದರ್ಭದಲ್ಲಿ ಪ್ರವಾಸಿಗರು/ಸಾರ್ವಜನಿಕರು ನದಿ ತೀರಕ್ಕೆ ತೆರಳದಂತೆ ಎಚ್ಚರಿಕೆ ವಹಿಸಬೇಕು. ಪ್ರಾಕೃತಿಕ ವಿಕೋಪ […]

ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ ➤ ಜಿಲ್ಲೆಯಾದ್ಯಂತ ನಾಳೆ (ಅ.25) ಶಾಲಾ ಕಾಲೇಜುಗಳಿಗೆ ರಜೆ Read More »

ಕರಾವಳಿ

ಆಲಂಕಾರು. ಶ್ರೀ ನಿವಾಸ ಕಲ್ಯಾಣೋತ್ಸವ ಪೂರ್ವ ಭಾವಿ ಸಭೆ

(ನ್ಯೂಸ್ ಕಡಬ) newskadaba.com ಕಡಬ. ಅ.24. ಆಲಂಕಾರು ಗ್ರಾಮದ ಶ್ರೀ ಭಾರತೀ ಶಾಲೆಯ ರಜತ ಸಂಭ್ರಮ ಸಮಾರೋಪ ಕಾರ್ಯಕ್ರಮದಲ್ಲಿ ನಡೆಯಲಿರುವ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಶಾಲಾ ಸಭಾಂಗಣದಲ್ಲಿ ಬುಧವಾರ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಮಾತನಾಡಿ, ಶಿಕ್ಷಣದಲ್ಲಿ ಅಂಕವೊಂದೆ ಮಾನದಂಡವಾದಾಗ ಸಂಸ್ಕಾರ ಸಂಸ್ಕೃತಿ ಮುಂದಿನ ಪೀಳಿಗೆಗೆ ಪಸರಿಸುವುದಿಲ್ಲ. ಪಂಚಮುಖಿ ಶಿಕ್ಷಣ, ಧರ್ಮಾಧರಿತ ಶಿಕ್ಷಣದಿಂದ ನಮ್ಮ ದೇಶದ ಪರಂಪರಾಗತ ಪದ್ದತಿಗಳು ಉಳಿಯುತ್ತವೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಡಿಯಲಿ ನಡೆಯುತ್ತಿರುವ ವಿದ್ಯಾ

ಆಲಂಕಾರು. ಶ್ರೀ ನಿವಾಸ ಕಲ್ಯಾಣೋತ್ಸವ ಪೂರ್ವ ಭಾವಿ ಸಭೆ Read More »

ಕರಾವಳಿ

ಪ್ರತಿಭಾ ಕಾರಂಜಿ ➤ ಜ್ಞಾನೋದಯ ಬೆಥನಿ ವಿದ್ಯಾರ್ಥಿನಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಅ.24. ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಪುತ್ತೂರು ಸರಕಾರಿ ಪದವಿ ಪೂರ್ವ ಕಾಲೇಜು ಉಪ್ಪಿನಂಗಡಿ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಜ್ಞಾನೋದಯ ಬೆಥನಿ ಪಿ ಯು ಕಾಲೇಜಿನ 10ನೇ ತರಗತಿ ವಿದ್ಯಾರ್ಥಿನಿ ಕು. ರಕ್ಷಾರವರು ಜಾನಪದ ಗೀತೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕೆ ಆಯ್ಕೆಯಾಗಿದ್ದಾರೆ. ಇವರು ರಮೇಶ್ ಶೆಟ್ಟಿ ಹಾಗೂ ಸುನೀತಾ ದಂಪತಿಗಳ ಪುತ್ರಿ. ಇವರಿಗೆ ಸಂಸ್ಥೆಯ ಪ್ರಾಂಶುಪಾಲರಾದ ರೆ|ಫಾ| ಮ್ಯಾಥ್ಯು

ಪ್ರತಿಭಾ ಕಾರಂಜಿ ➤ ಜ್ಞಾನೋದಯ ಬೆಥನಿ ವಿದ್ಯಾರ್ಥಿನಿ ಜಿಲ್ಲಾ ಮಟ್ಟಕ್ಕೆ ಆಯ್ಕೆ Read More »

ಕರಾವಳಿ

ಪ್ರಾಥಮಿಕ ಶಾಲಾ ವಿಭಾಗದ ತಾಲೂಕು ಮಟ್ಟದ ಕ್ರೀಡಾ ಕೂಟ ಜ್ಞಾನೋದಯ ಬೆಥನಿಗೆ ಅವಳಿ ಸಮಗ್ರ  ಪ್ರಶಸ್ತಿ

  (ನ್ಯೂಸ್ ಕಡಬ) newskadaba.com ನೆಲ್ಯಾಡಿ ಅ.24. ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ  , ವಿವೇಕಾನಂದ ಕಾಲೇಜು ತೆಂಕಿಲ  ಪುತ್ತೂರು ಇಲ್ಲಿ ಗುರುವಾರ ಮತ್ತು ಶುಕ್ರವಾರ ನಡೆದ  ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಜ್ಞಾನೋದಯ ಬೆಥನಿ ಪಿ ಯು ಕಾಲೇಜಿನ ವಿದ್ಯಾರ್ಥೀಗಳಿಗೆ ಪ್ರಾಥಮಿಕ ಶಾಲಾ ಬಾಲಕರ ವಿಭಾಗ ಮತ್ತು 8ನೇ ತರಗತಿ ಬಾಲಕರ ವಿಭಾಗದಲ್ಲಿ ಅವಳಿ ಸಮಗ್ರ  ಪ್ರಶಸಿಯನ್ನು  ಪಡೆದುಕೊಂಡಿದೆ. ಪ್ರಾಥಮಿಕ ಬಾಲಕರ ವಿಭಾಗದಲ್ಲಿ  7ನೇ ತರಗತಿ ವಿದ್ಯಾರ್ಥಿ ಸಚಿನ್ ಸಂತೋಷ್ 100ಮೀಟರ್, 200ಮೀಟರ್, ಓಟದಲ್ಲಿ ಪ್ರಥಮ ಸ್ಥಾನ

ಪ್ರಾಥಮಿಕ ಶಾಲಾ ವಿಭಾಗದ ತಾಲೂಕು ಮಟ್ಟದ ಕ್ರೀಡಾ ಕೂಟ ಜ್ಞಾನೋದಯ ಬೆಥನಿಗೆ ಅವಳಿ ಸಮಗ್ರ  ಪ್ರಶಸ್ತಿ Read More »

ಕರಾವಳಿ

ನೆಟ್ಟಣ: ರೈಲಿನಲ್ಲಿ ಮಹಿಳೆಗೆ ಕೀಟಲೆ ನೀಡಿದ ಗುಮಾನಿ ➤ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಕಡಬ, ಅ.23. ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಆರೋಪಿಯನ್ನು ಹಾಗೂ ಆತನ ಜೊತೆಗಿದ್ದ ಎನ್ನಲಾದ ಮತ್ತೋರ್ವನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಬುಧವಾರದಂದು ಸುಬ್ರಹ್ಮಣ್ಯ ರೋಡ್ – ಮಂಗಳೂರು ರೈಲಿನಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ಬೆಂಗಳೂರಿನ ಕೆಂಗೇರಿ ನಿವಾಸಿ ಮಂಜು(27) ಎಂದು ಗುರುತಿಸಲಾಗಿದೆ. ನೆಟ್ಟಣದಿಂದ ಮಂಗಳೂರಿಗೆ ತೆರಳುತ್ತಿದ್ದ ರೈಲಿನ ಮಹಿಳಾ ಬೋಗಿಗೆ ಹತ್ತಿದ ಆರೋಪಿಯು ಮಹಿಳೆ ಒಬ್ಬರೇ ಇರುವುದನ್ನು ಕಂಡು ಮಾನಭಂಗಕ್ಕೆ ಯತ್ನಿಸಿದ್ದು, ಈ ವೇಳೆ ಮಹಿಳೆಯು ಚೈನ್ ಎಳೆದು

ನೆಟ್ಟಣ: ರೈಲಿನಲ್ಲಿ ಮಹಿಳೆಗೆ ಕೀಟಲೆ ನೀಡಿದ ಗುಮಾನಿ ➤ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಪೊಲೀಸ್ ವಶಕ್ಕೆ Read More »

ಕರಾವಳಿ

ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯ ಮಾನಭಂಗಕ್ಕೆ ಯತ್ನ ➤ ಆರೋಪಿಯನ್ನು ಬಂಧಿಸಿದ ಸಾರ್ವಜನಿಕರು

(ನ್ಯೂಸ್ ಕಡಬ) newskadaba.com ಕಡಬ, ಅ.23. ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಆರೋಪಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಬುಧವಾರದಂದು ಸುಬ್ರಹ್ಮಣ್ಯ ರೋಡ್ – ಮಂಗಳೂರು ರೈಲಿನಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ಬೆಂಗಳೂರಿನ ಕೆಂಗೇರಿ ನಿವಾಸಿ ಮಂಜು(27) ಎಂದು ಗುರುತಿಸಲಾಗಿದೆ. ನೆಟ್ಟಣದಿಂದ ಮಂಗಳೂರಿಗೆ ತೆರಳುತ್ತಿದ್ದ ರೈಲಿನ ಮಹಿಳಾ ಬೋಗಿಗೆ ಹತ್ತಿದ ಆರೋಪಿಯು ಮಹಿಳೆ ಒಬ್ಬರೇ ಇರುವುದನ್ನು ಕಂಡು ಮಾನಭಂಗಕ್ಕೆ ಯತ್ನಿಸಿದ್ದು, ಈ ವೇಳೆ ಮಹಿಳೆಯು ಚೈನ್ ಎಳೆದು ರೈಲನ್ನು ನಿಲ್ಲಿಸಿದ್ದಾರೆ. ತಕ್ಷಣವೇ ಹಾರಿ ಪರಾರಿಯಾದ

ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯ ಮಾನಭಂಗಕ್ಕೆ ಯತ್ನ ➤ ಆರೋಪಿಯನ್ನು ಬಂಧಿಸಿದ ಸಾರ್ವಜನಿಕರು Read More »

ಕರಾವಳಿ

ಕರಾವಳಿಯಾದ್ಯಂತ ಎರಡು ದಿನಗಳ ಕಾಲ ರೆಡ್ ಅಲರ್ಟ್ ಘೋಷಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.23. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅಕ್ಟೋಬರ್ 25ರ ವರೆಗೆ ಕರಾವಳಿ ಜಿಲ್ಲೆಯಾದ್ಯಂತ ಹವಾಮಾನ ಇಲಾಖೆಯು ರೆಡ್‌ ಅಲರ್ಟ್‌ ಘೋಷಿಸಿದ್ದು, ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ ಎರಡು ದಿವಸಗಳ ಕಾಲ ಬಿರುಸಿನಿಂದ ಕೂಡಿದ ಮಳೆ ಗುಡುಗು, ಸಿಡಿಲು ಸಹಿತ ಜೋರಾಗಿ ಗಾಳಿ ಬೀಸಲಿದ್ದು, ಸಮುದ್ರದಲ್ಲಿ ಅಲೆಗಳ  ಅಬ್ಬರ ಹೆಚ್ಚಾಗಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮಂಗಳವಾರದಂದು ಭಾರೀ ಮಳೆಯಾಗಬಹುದೆಂದು ಆರೆಂಜ್

ಕರಾವಳಿಯಾದ್ಯಂತ ಎರಡು ದಿನಗಳ ಕಾಲ ರೆಡ್ ಅಲರ್ಟ್ ಘೋಷಣೆ Read More »

ಕರಾವಳಿ

ಸುಳ್ಯ: ವ್ಯಕ್ತಿ ನಾಪತ್ತೆ

(ನ್ಯೂಸ್ ಕಡಬ) newskadaba.com ಸುಳ್ಯ, ಅ.23. ಸುಳ್ಯಕ್ಕೆಂದು ಹೋದ ವ್ಯಕ್ತಿ ವಾಪಾಸ್ ಮನೆಗೆ ಬಾರದೆ ನಾಪತ್ತೆಯಾದ ಘಟನೆ ಸುಳ್ಯದಿಂದ ವರದಿಯಾಗಿದೆ. ನಾಪತ್ತೆಯಾದವರನ್ನು ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರು ಗ್ರಾಮದ ಕುತ್ತಮೊಟ್ಟೆ ನಿವಾಸಿ ನಾರಾಯಣ ಪಾಟಾಳಿ (59) ಎಂದು ಗುರುತಿಸಲಾಗಿದೆ. ಮಾಜಿ ಸೈನಿಕರಾಗಿದ್ದ  ಇವರು, ಪ್ರತಿದಿನ ಮನೆಯಿಂದ ಸುಳ್ಯ ಪೇಟೆಗೆ ಹೋಗುತ್ತಿದ್ದು ದಿನಾಂಕ 19 –10 – 2019ರಂದು ಬೆಳಿಗ್ಗೆ 9 ಗಂಟೆಗೆ ಮನೆಯಿಂದ ಸುಳ್ಯಕ್ಕೆಂದು ಹೋದವರು ವಾಪಾಸು ಮನೆಗೆ ಬಾರದೇ ಇದ್ದುದರಿಂದ ಇವರ ಪತ್ನಿ ಪರಿಚಯಸ್ಥರಲ್ಲಿ ಹಾಗೂ

ಸುಳ್ಯ: ವ್ಯಕ್ತಿ ನಾಪತ್ತೆ Read More »

ಕರಾವಳಿ

ದ್ವಿಚಕ್ರ ವಾಹನಕ್ಕೆ ಅಡ್ಡ ಬಂದ ದನ ➤ ಸಹ ಸವಾರನಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಅ.23. ದನವೊಂದು ಅಡ್ಡ ಬಂದ ಪರಿಣಾಮ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಸಹಸವಾರನೋರ್ವ ಬಿದ್ದು ಗಾಯಗೊಂಡ ಘಟನೆ ಉಪ್ಪಿನಂಗಡಿ – ಕಡಬ ರಾಜ್ಯ ಹೆದ್ದಾರಿಯಲ್ಲಿ ಮಂಗಳವಾರದಂದು ನಡೆದಿದೆ. ಗಾಯಗೊಂಡವರನ್ನು ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಬದಿಬಾಗಿಲು ನಿವಾಸಿ ವಿಶ್ವನಾಥ ಗೌಡ ಎಂದು ಗುರುತಿಸಲಾಗಿದೆ. ಇವರು ಮೋಹನ್ ಎಂಬವರೊಂದಿಗೆ ಮೋಟಾರ್ ಸೈಕಲ್ ನಲ್ಲಿ ಪುತ್ತೂರಿನಿಂದ ಉಪ್ಪಿನಂಗಡಿ ಮಾರ್ಗವಾಗಿ ಉಪ್ಪಿನಂಗಡಿ – ಕಡಬ ರಾಜ್ಯ ರಸ್ತೆಯಲ್ಲಿ ಬರುತ್ತಿರುವಾಗ ದನವೊಂದು ಅಡ್ಡ ಬಂದ ಪರಿಣಾಮ ಮೋಹನ್ ರವರು

ದ್ವಿಚಕ್ರ ವಾಹನಕ್ಕೆ ಅಡ್ಡ ಬಂದ ದನ ➤ ಸಹ ಸವಾರನಿಗೆ ಗಾಯ Read More »

ಕರಾವಳಿ

ಪೇರಡ್ಕ: ರಾಜ್ಯ ಹೆದ್ದಾರಿಯಲ್ಲೊಂದು ಅಗಲ ಕಿರಿದಾದ ಸೇತುವೆ ! ➤ ಅಪಾಯಕ್ಕೆ ಆಹ್ವಾನ! ಅಗಲೀಕರಣಕ್ಕೆ ಸಾರ್ವಜನಿಕರ ಆಗ್ರಹ

(ನ್ಯೂಸ್ ಕಡಬ) newskadaba.com ಕಡಬ ಅ.23: ನೂಜಿಬಾಳ್ತಿಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಾದು ಹೋಗುತ್ತಿರುವ ಸುಬ್ರಹ್ಮಣ್ಯ-ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ರೆಂಜಿಲಾಡಿ ಗ್ರಾಮದ ಪೇರಡ್ಕ ಬಳಿಯ ಕಾಜರಕಟ್ಟೆ ಸೇತುವೆ ಅಗಲ ಕಿರಿದಾಗಿದ್ದು, ಅಪಘಾತವಾಗುವ ಸಂಭವವಿರುವುದರಿಂದ ಸೇತುವೆಯನ್ನು ಅಗಲೀಕರಣ ಅಥವಾ ಬೃಹತ್ ಸೇತುವೆ ನಿರ್ಮಾಣ ಮಾಡುವಂತೆ ಆಗ್ರಹ ವ್ಯಕ್ತವಾಗಿದೆ. ರಾಜ್ಯದ ಪ್ರಸಿದ್ಧ ಪುಣ್ಯ ಕ್ಷೇತ್ರಗಳಾದ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳ ದೇವಸ್ಥಾನಗಳನ್ನು ಸಂಪರ್ಕಿಸುವ ಸುಬ್ರಹ್ಮಣ್ಯ-ಮರ್ದಾಳ-ಪೆರಿಯಶಾಂತಿ-ಧರ್ಮಸ್ಥಳ ರಾಜ್ಯ ಹೆದ್ದಾರಿ ಡಾಮರೀಕರಣಗೊಂಡು ಅಭಿವೃದ್ಧಿ ಹೊಂದಿದ್ದು, ಪೇರಡ್ಕ ಬಳಿಯ ಕಾಜರಕಟ್ಟೆ ಸೇತುವೆ ಅಗಲ ಕಿರಿದಾಗಿದ್ದು, ತಡೆಗೋಡೆಗಳೂ ಶಿಥಿಲಾವಸ್ಥೆಯಿಂದ

ಪೇರಡ್ಕ: ರಾಜ್ಯ ಹೆದ್ದಾರಿಯಲ್ಲೊಂದು ಅಗಲ ಕಿರಿದಾದ ಸೇತುವೆ ! ➤ ಅಪಾಯಕ್ಕೆ ಆಹ್ವಾನ! ಅಗಲೀಕರಣಕ್ಕೆ ಸಾರ್ವಜನಿಕರ ಆಗ್ರಹ Read More »

ಕರಾವಳಿ
Scroll to Top