ಹೊಸ್ಮಠ: ಕಡಬದ ಖಾಸಗಿ ಆಂಬ್ಯುಲೆನ್ಸ್ ಪಲ್ಟಿ ➤ ಚಾಲಕನಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಜು.30. ಆಂಬ್ಯುಲೆನ್ಸ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದುದರಿಂದ ಚಾಲಕ ಗಾಯಗೊಂಡ ಘಟನೆ ಕಡಬ ಸಮೀಪದ ಹೊಸ್ಮಠ ಎಂಬಲ್ಲಿ ಮಂಗಳವಾರದಂದು ನಡೆದಿದೆ.

ಗಾಯಾಳು ಚಾಲಕನನ್ನು ಕಡಬದ ಅನುಗ್ರಹ ಆಂಬ್ಯುಲೆನ್ಸ್ ಮಾಲಕ ರಂಜಿತ್ ಎಂದು ಗುರುತಿಸಲಾಗಿದೆ. ಹೊಸ್ಮಠದಿಂದ ಕಡಬ ಕಡೆಗೆ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಪಲ್ಟಿಯಾಗಿದ್ದು, ಚಾಲಕ ರಂಜಿತ್ ನನ್ನು ಕಡಬ ಸಮುದಾಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಆಂಬ್ಯುಲೆನ್ಸ್ ಸಂಪೂರ್ಣ ನಜ್ಜುಗುಜ್ಜಾಗಿದೆ.

Scroll to Top