ಕರಾವಳಿ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ► ಇಂದು ಮಂಗಳೂರಿಗೆ ಭೇಟಿ

 (ನ್ಯೂಸ್ ಕಡಬ) newskadaba.com  ಮಂಗಳೂರು,ಅ.02. ದಕ್ಷಿಣ ಕನ್ನಡ ಜಿಲ್ಲೆಯ 8 ಕ್ಷೇತ್ರಗಳ ಪೈಕಿ 7 ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆ. ಹೀಗಾಗಿ ಈ ಕ್ಷೇತ್ರಗಳನ್ನು ಹೊಡೆದುರುಳಿಸಲು ಬಿಜೆಪಿ ಚಾಣಾಕ್ಷ ಅಮಿತ್ ಶಾ ಇಂದು ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿಯ ಭದ್ರಕೋಟೆ ಮಾತ್ರವಲ್ಲ, ಆರ್‍ಎಸ್‍ಎಸ್, ಹಿಂದೂ ಸಂಘಟನೆಗಳಿಂದ ಬಲಶಾಲಿಯಾಗಿದೆ. ಜಿಲ್ಲೆಯ 8 ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಬಿಜೆಪಿಯು ಅತೀ ಹೆಚ್ಚು ಶಾಸಕ ಸ್ಥಾನಗಳನ್ನು ಪಡೆಯಬೇಕೆಂದು ಬಿಜೆಪಿ […]

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ► ಇಂದು ಮಂಗಳೂರಿಗೆ ಭೇಟಿ Read More »

ಕರಾವಳಿ

ಡ್ರಗ್ಸ್ ಹಾವಳಿ ನಿಯಂತ್ರಣಕ್ಕೆ ವಿಶೇಷ ಕಾರ್ಯಾಚರಣೆ ► ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ್

(ನ್ಯೂಸ್ ಕಡಬ) newskadaba.com ಮಂಗಳೂರು, ಅ.02. ದಕ್ಷಿಣಕ್ಕೆ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಡ್ರಗ್ಸ್ ಹಾವಳಿ ಯುವ ಜನತೆಯನ್ನು ತಪ್ಪುದಾರಿಗೆ ಎಳೆಯುತ್ತಿದೆ. ಇದನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಅಬಕಾರಿ ಇಲಾಖೆ ಮುಂದಾಗಿದೆ. ಅಬಕಾರಿ ಇಲಾಖೆ ವತಿಯಿಂದ ಶಾಲಾ ಕಾಲೇಜುಗಳಲ್ಲಿ ಮಾದಕ ದ್ರವ್ಯಗಳ ನಿಯಂತ್ರಣಕ್ಕೆ ವಿಶೇಷ ಒತ್ತು ನೀಡಿ ಕಾರ್ಯಾಚರಿಸಲು ಸೂಚಿಸಲಾಗಿದೆ ಎಂದು ರಾಜ್ಯದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ತಿಳಿಸಿದ್ದಾರೆ. ಅಬಕಾರಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ಮಂಗಳೂರಿಗೆ ಆಗಮಿಸಿ ಅಧಿಕಾರಿಗಳ ಜತೆ

ಡ್ರಗ್ಸ್ ಹಾವಳಿ ನಿಯಂತ್ರಣಕ್ಕೆ ವಿಶೇಷ ಕಾರ್ಯಾಚರಣೆ ► ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ್ Read More »

ಕರಾವಳಿ

ತುಳುನಾಡಿನ ಕಾರಣಿಕ ದೈವ ಕೊರಗಜ್ಜನ ಅವಹೇಳನ ► ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ದೂರು

(ನ್ಯೂಸ್ ಕಡಬ) newskadabacom ಪುತ್ತೂರು, ಅ.01. ಸಾಮಾಜಿಕ ಜಾಲತಾಣಗಳಲ್ಲಿ ತುಳುನಾಡಿನ ಕಾರಣಿಕ ದೈವ ಕೊರಗಜ್ಜನ ಬಗ್ಗೆ ಅವಹೇಳನಕಾರಿಯಾಗಿ ಸಂದೇಶ ಕಳುಹಿಸಿದ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪುತ್ತೂರು ನಗರ ಠಾಣೆಗೆ ದೂರು ನೀಡಲಾಗಿದೆ. ಸಂತೋಷ್ ಉಪ್ಪುರ್ ಎನ್ನುವ ವ್ಯಕ್ತಿ ಕೊರಗಜ್ಜನ ಬಗ್ಗೆ ತನ್ನ ಫೇಸ್‌ಬುಕ್‌ ವಾಲ್ ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದು, ಅದನ್ನು ಏಂಜೆಲ್ ನಯನ ಪ್ರಜ್ವಲ್ ಮತ್ತು ಕುಂಜತ್ತುಮೊಯಿದಿನ್ ಕುಂಜತ್ತೂರು ಎಂಬವರು ಶೇರ್ ಮಾಡಿ ಕಮೆಂಟ್ಸ್ ಮಾಡಿರುತ್ತಾರೆ. ಕೊರಗಜ್ಜನನ್ನು ನಿಂದಿಸಿದ ಇವರ ಮೇಲೆ

ತುಳುನಾಡಿನ ಕಾರಣಿಕ ದೈವ ಕೊರಗಜ್ಜನ ಅವಹೇಳನ ► ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ದೂರು Read More »

ಕರಾವಳಿ

ಸುಳ್ಯ: ಕಟ್ಟಡದಿಂದ ಬಿದ್ದು ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಸುಳ್ಯ, ಅ.01. ಇಲ್ಲಿನ ಮುಖ್ಯರಸ್ತೆಯ ಗಾಂಧಿನಗರದಲ್ಲಿರುವ ಜೆ.ಜೆ. ಕಾಂಪ್ಲೆಕ್ಸ್‌ನ ಮಹಡಿಯಿಂದ ಯುವಕನೊಬ್ಬ ಕೆಳಕ್ಕೆ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರದಂದು ನಡೆದಿದೆ. ಮೃತ ಯುವಕನನ್ನು ಕೋಲ್ಚಾರಿನ ಯತೀಶ್ ಎಂದು ಗುರುತಿಸಲಾಗಿದೆ. ಸೆಂಟ್ರಿಂಗ್ ಕೆಲಸ ನಿರ್ವಹಿಸುತ್ತಿದ್ದ ಈತ ಈ ಕಟ್ಟಡದಲ್ಲಿ ಬಾಡಿಗೆ ಕೊಟ್ಟಡಿಯಲ್ಲಿದ್ದು, ಘಟನೆಯ ಸಂದರ್ಭದಲ್ಲಿ ಪಾನಮತ್ತನಾಗಿದ್ದ ಎನ್ನಲಾಗಿದೆ. ಇದರಿಂದಾಗಿ ಆಯತಪ್ಪಿ ಕೆಳಕ್ಕೆ ಬಿದ್ದಿರಬಹುದೆಂದು ಶಂಕಿಸಲಾಗಿದೆ. ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸುಳ್ಯ: ಕಟ್ಟಡದಿಂದ ಬಿದ್ದು ಯುವಕ ಮೃತ್ಯು Read More »

ಕರಾವಳಿ

ಜೇಸಿಐ ಕಡಬ ಕದಂಬ ► ಜೇಸಿ ಸಪ್ತಾಹ – 2017 ‘ಕದಂಬೋತ್ಸವ’ಕ್ಕೆ ಚಾಲನೆ

(ನ್ಯೂಸ್ ಕಡಬ) newskadaba.com ಕಡಬ, ಅ.01. ಜೇಸಿಐ ಕಡಬ ಕದಂಬ ಘಟಕದ ಜೇಸಿ ಸಪ್ತಾಹ – 2017 ‘ಕದಂಬೋತ್ಸವ’ ದ ಉದ್ಘಾಟನೆಯು ಕಡಬ ಸೌರಭ ಟವರ್ಸ್ ನ ಎರಡನೇ ಮಹಡಿಯ ಜೇಸಿ ಕಛೇರಿಯಲ್ಲಿ ನಡೆಯಿತು. ಜೇಸಿಐ ಭಾರತದ ವಲಯ 15 ರ ಪ್ರಾಂತ್ಯ ‘ಇ’ಯ ಉಪಾಧ್ಯಕ್ಷರಾದ ಜೇಸಿ ಮೋಹನ್ ಎ. ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿ, ಜೇಸಿಐ ಕಡಬ ಕದಂಬ ಘಟಕವು ಯಶಸ್ವಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಪರಿಸರದಲ್ಲಿ ಹೆಸರುವಾಸಿಯಾಗಿದೆ. ಸಾಮಾಜಿಕ ಕಳಕಳಿಯೊಂದಿಗೆ ಜೇಸಿ ಸಪ್ತಾಹದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳು

ಜೇಸಿಐ ಕಡಬ ಕದಂಬ ► ಜೇಸಿ ಸಪ್ತಾಹ – 2017 ‘ಕದಂಬೋತ್ಸವ’ಕ್ಕೆ ಚಾಲನೆ Read More »

ಕರಾವಳಿ

ಕಡಬ: ಬೈಕ್ ಗಳೆರಡರ ಮಧ್ಯೆ ಢಿಕ್ಕಿ ► ಕೆಸರಲ್ಲಿ ಹೂತುಹೋದ ಬೈಕ್, ಸವಾರರಿಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಸೆ.30. ಇಲ್ಲಿಗೆ ಸಮೀಪದ ಹಳೇ ಸ್ಟೇಷನ್ ಎಂಬಲ್ಲಿ ಬೈಕ್ ಗಳೆರಡರ ಮಧ್ಯೆ ಢಿಕ್ಕಿ ಸಂಭವಿಸಿ ಸವಾರರಿಬ್ಬರು ಗಾಯಗೊಂಡ ಘಟನೆ ಶನಿವಾರ ಅಪರಾಹ್ನ ನಡೆದಿದೆ. ಕಡಬದಿಂದ ಮರ್ಧಾಳ ಕಡೆಗೆ ತೆರಳುತ್ತಿದ್ದ ಬೈಕಿನಲ್ಲಿದ್ದ ಬ್ಯಾಗೊಂದು ಕೆಳಕ್ಕೆ ಬಿದ್ದಿದ್ದು, ಬ್ಯಾಗನ್ನು ತೆಗೆದು ಕೊಳ್ಳಲು ಹಿಂತಿರುಗಿದಾಗ ಕಲ್ಲುಗುಡ್ಡೆ ರಸ್ತೆಯಿಂದ ಬಂದ ಬೈಕ್ ನಡುವೆ ಢಿಕ್ಕಿ ಉಂಟಾಗಿದೆ. ಕಲ್ಲುಗುಡ್ಡೆ ಕಡೆಯಿಂದ ಬಂದ ಬೈಕ್ ಚರಂಡಿಗೆ ಬಿದ್ದು ಕೆಸರಲ್ಲಿ ಹೂತು ಹೋಗಿದೆ. ಘಟನೆಯಲ್ಲಿ ಬೈಕ್ ಸವಾರರಿಬ್ಬರು ಗಾಯಗೊಂಡಿದ್ದು, ಗಾಯಾಳುಗಳಲ್ಲಿ ಓರ್ವನನ್ನು

ಕಡಬ: ಬೈಕ್ ಗಳೆರಡರ ಮಧ್ಯೆ ಢಿಕ್ಕಿ ► ಕೆಸರಲ್ಲಿ ಹೂತುಹೋದ ಬೈಕ್, ಸವಾರರಿಬ್ಬರಿಗೆ ಗಾಯ Read More »

ಕರಾವಳಿ

ಇಚ್ಲಂಪಾಡಿ: ಅಪ್ರಾಪ್ತ ಬಾಲಕಿಗೆ ಮಾನಸಿಕ ಕಿರುಕುಳ ► ಪೊಲೀಸ್ ದೂರು ನೀಡಿದ್ದಕ್ಕೆ ತಂದೆ ಮಗನಿಗೆ ಹಲ್ಲೆ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಸೆ.30. ತನ್ನ ಅಪ್ರಾಪ್ತ ವಯಸ್ಸಿನ ಬಾಲಕಿಗೆ ನಿರಂತರ ಮಾನಸಿಕ ಹಾಗೂ ದೈಹಿಕ ಕಿರುಕುಳ‌ ನೀಡುವ ಕಾರಣ ಠಾಣೆಗೆ ದೂರು ನೀಡಿದ್ದಕ್ಕೆ ಗಂಡ ಹಾಗೂ ಮಗನಿಗೆ ವ್ಯಕ್ತಿಯೋರ್ವ ಹಲ್ಲೆ ನಡೆಸಿದ್ದಾನೆ ಎಂದು ಮಹಿಳೆಯೋರ್ವರು ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ಇಚ್ಲಂಪಾಡಿ ಗ್ರಾಮದ ಬಿಜೇರು ನಿವಾಸಿ ಸಜೀವ ಎಂಬಾತನು ಸ್ಥಳೀಯ ಬಾಲಕಿಗೆ ನಿರಂತರ ಕಿರುಕುಳ ನೀಡುತ್ತಿರುವುದನ್ನು ಆಕ್ಷೇಪಿಸಿ ಪೊಲೀಸರಿಗೆ ದೂರು ನೀಡಿದ್ದರು. ಆತನ ಕಿರುಕುಳ ತಾಳಲಾರದೆ ಬಾಲಕಿಯು ಈ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದಳೆನ್ನಲಾಗಿದೆ.

ಇಚ್ಲಂಪಾಡಿ: ಅಪ್ರಾಪ್ತ ಬಾಲಕಿಗೆ ಮಾನಸಿಕ ಕಿರುಕುಳ ► ಪೊಲೀಸ್ ದೂರು ನೀಡಿದ್ದಕ್ಕೆ ತಂದೆ ಮಗನಿಗೆ ಹಲ್ಲೆ Read More »

ಕರಾವಳಿ

ಜಗದೀಶ್ ಕಾರಂತ್ ಗೆ ಜಾಮೀನು

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ.30. ಸಂಪ್ಯ ಎಸ್.ಐ ವಿರುದ್ಧ ಅವಹೇಳನಕಾರಿ ಹೇಳಿಕೆ ಹಾಗೂ ಸಾರ್ವಜನಿಕ ಬೆದರಿಕೆ ಹಿನ್ನೆಲೆಯಲ್ಲಿ ಬಂಧಿಸಲ್ಪಟ್ಟಿದ್ದ ಹಿಂದೂ ಜಾಗರಣ ವೇದಿಕೆಯ ಮುಖಂಡ ಜಗದೀಶ್ ಕಾರಂತರಿಗೆ ಪುತ್ತೂರು ನ್ಯಾಯಾಲಯವು ಮಧ್ಯಂತರ ಜಾಮೀನು ನೀಡಿ ಆದೇಶ ಹೊರಡಿಸಿದೆ. ಸೆಪ್ಟೆಂಬರ್ 15 ರಂದು ಪುತ್ತೂರಿನಲ್ಲಿ ನಡೆದಿದ್ದ ಪ್ರತಿಭಟನಾ ಸಭೆಯಲ್ಲಿ ಜಗದೀಶ್ ಕಾರಂತ್ ಸಂಪ್ಯ ಠಾಣೆಯ ಎಸ್.ಐ. ಹಾಗೂ ಸಿಬ್ಬಂದಿಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದರು ಮತ್ತು ಸಾರ್ವಜನಿಕ ಬೆದರಿಕೆ ಹಾಕಿದ್ದರು. ಈ ಸಂಬಂಧ ಪುತ್ತೂರು ನಗರ ಪೋಲೀಸರು ಕಾರಂತ್

ಜಗದೀಶ್ ಕಾರಂತ್ ಗೆ ಜಾಮೀನು Read More »

ಕರಾವಳಿ

ಜಗದೀಶ್ ಕಾರಂತ ಶೀಘ್ರ ಬಿಡುಗಡೆಗೆ ಆಗ್ರಹ ► ಹಿಂಜಾವೇಯಿಂದ ರಾತ್ರಿ ಪುತ್ತೂರಿನಲ್ಲಿ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ.30. ಇತ್ತೀಚೆಗೆ ಹಿಂಜಾವೇ ಪುತ್ತೂರಿನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕೋಮು ಪ್ರಚೋದನಾತ್ಮಕವಾಗಿ ಮಾತನಾಡಿದ ಜಗದೀಶ್ ಕಾರಂತರ ಬಂಧನವನ್ನು ವಿರೋಧಿಸಿ ಪುತ್ತೂರಿನ ಬಸ್ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಬಿಜೆಪಿ ಮತ್ತು ಸಂಘ ಪರಿವಾರದಿಂದ ಪ್ರತಿಭಟನೆ ನಡೆಯಿತು. ಈ ಸಂದರ್ಭ ಮಾತನಾಡಿದ ಹಿಂದೂ ಜಾಗರಣ ವೇದಿಕೆಯ ರಾಜ್ಯ ಕಾರ್ಯದರ್ಶಿ ರಾಧಾ ಕೃಷ್ಣ ಅಡ್ಯಂತಾಯ, ಹಿಂದೂಗಳ ಪವಿತ್ರ ಗ್ರಂಥವಾದ ರಾಮಾಯಣ, ಮಹಾಭಾರತವನ್ನು ನಿಂದನೆ ಮಾಡಿದ ವೈದೇಹಿ, ಭಗವಾನ್ ಅಂತಹವರನ್ನು ಬಂಧಿಸುವ ತಾಕತ್ತಿಲ್ಲದ ಪೊಲೀಸರು ಹಿಂದೂಗಳ ಮತ್ತು ರಾಷ್ಟದ

ಜಗದೀಶ್ ಕಾರಂತ ಶೀಘ್ರ ಬಿಡುಗಡೆಗೆ ಆಗ್ರಹ ► ಹಿಂಜಾವೇಯಿಂದ ರಾತ್ರಿ ಪುತ್ತೂರಿನಲ್ಲಿ ಪ್ರತಿಭಟನೆ Read More »

ಕರಾವಳಿ

ಗೋಳಿತೊಟ್ಟು: ಸೈಡ್ ಕೊಡುವ ವಿಚಾರದಲ್ಲಿ ಲಾರಿ ಚಾಲಕನಿಗೆ ಹಲ್ಲೆ ► 11 ಬೈಕ್ ಗಳ ಸಹಿತ ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ.29. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗೋಳಿತೊಟ್ಟು ಎಂಬಲ್ಲಿ ಸೈಡ್ ಕೊಡುವ ವಿಚಾರದಲ್ಲಿ ಗುಂಪೊಂದು ಲಾರಿ ಚಾಲಕನಿಗೆ ಹಲ್ಲೆಗೆ ಯತ್ನಿಸಿದ್ದು, ಉಪ್ಪಿನಂಗಡಿ ಪೊಲೀಸರ ಮಿಂಚಿನ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ‌. ರಸ್ತೆ ಬಿಟ್ಟು ಸೈಡ್ ಕೊಡಲಿಲ್ಲ ಎಂಬ ಕಾರಣಕ್ಕೆ ಲಾರಿ ಚಾಲಕನನ್ನು ಬೆನ್ನಟ್ಟಿದ್ದು, ಹಲ್ಲೆಗೆ ಯತ್ನಿಸಲಾಗಿದೆ. ವಿಷಯ ತಿಳಿದ ಗಸ್ತು ನಿರತರಾಗಿದ್ದ ಉಪ್ಪಿನಂಗಡಿ ಠಾಣಾ ಸಬ್ ಇನ್ಸ್‌ಪೆಕ್ಟರ್ ನಂದಕುಮಾರ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ

ಗೋಳಿತೊಟ್ಟು: ಸೈಡ್ ಕೊಡುವ ವಿಚಾರದಲ್ಲಿ ಲಾರಿ ಚಾಲಕನಿಗೆ ಹಲ್ಲೆ ► 11 ಬೈಕ್ ಗಳ ಸಹಿತ ಆರೋಪಿಗಳ ಬಂಧನ Read More »

ಕರಾವಳಿ
Scroll to Top