ಕರಾವಳಿ

ಕುಮಾರಧಾರ ಯುವಕ ಮಂಡಲ ► ಪಿಜಕ್ಕಳ ರಸ್ತೆಯ ಸ್ವಚ್ಛತಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ,ಅ.3. ಗಾಂಧಿ ಜಯಂತಿ ಪ್ರಯುಕ್ತ ಪಿಜಕ್ಕಳ ಕುಮಾರಧಾರ ಯುವಕ ಮಂಡಲ ವತಿಯಿಂದ ಸ್ವಚ್ಛತಾ ಕಾರ್ಯಕ್ರಮವನ್ನು ಸೋಮವಾರ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಪಿಜಕ್ಕಳ  ರಸ್ತೆ ಬದಿಯನ್ನು ಸ್ವಚ್ಚಗೊಳಿಸಲಾಯಿತು.  ಕುಮಾರಧಾರ ಯುವಕ ಮಂಡಲದ ಗೌರವಾಧ್ಯಕ್ಷ ಶ್ಯಾಮ್ ತೋಮಸ್, ಸ್ಥಾಪಕಾಧ್ಯಕ್ಷ ಸುಂದರ ಗೌಡ, ಅಧ್ಯಕ್ಷ ರಂಜೀವ್, ಕಾರ್ಯದರ್ಶಿ ಅಶ್ವತ್ ಪಿ.ಕೆ. ಸದಸ್ಯರಾದ ಕಾರ್ತಿಕ್ ಎಸ್. ಯೋಗೀಶ್, ಸುರೇಶ್, ಸಚಿನ್ ಪಿ.ಆರ್., ಕಿರಣ್ ಕುಮಾರ್ ಕೋಡಿ, ನವನಿತ್ ಪಿ.ಯಸ್., ಯತೀಂದ್ರ ಗೌಡ ಮೊದಲಾದವರು ಉಪಸ್ಥಿತರಿದ್ದರು.

ಕುಮಾರಧಾರ ಯುವಕ ಮಂಡಲ ► ಪಿಜಕ್ಕಳ ರಸ್ತೆಯ ಸ್ವಚ್ಛತಾ ಕಾರ್ಯಕ್ರಮ Read More »

ಕರಾವಳಿ

ಕಡಬ: ಗಾಂಧೀ ಜಯಂತಿ ಆಚರಣೆ ► ಪಂಚಾಯತ್ ವಠಾರದಲ್ಲಿ ಸ್ವಚ್ಛತೆ

(ನ್ಯೂಸ್ ಕಡಬ) newskadaba.com ಕಡಬ,ಅ.3. ಇಲ್ಲಿನ ಗ್ರಾ.ಪಂ. ವತಿಯಿಂದ ಗಾಂಧೀ ಜಯಂತಿ ಆಚರಣೆಯನ್ನು ಪಂಚಾಯತ್ ಸಭಾಭವನದಲ್ಲಿ ಸೋಮವಾರ ಆಚರಿಸಿದರು. ಗ್ರಾ.ಪಂ. ಅಧ್ಯಕ್ಷರಾದ ಬಾಬು ಮುಗೇರರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಗ್ರಾಮ ಸಮೃದ್ಧಿ ಸ್ವಚ್ಛತಾ ಪಾಕ್ಷಿಕ ಕಾರ್ಯಕ್ರಮವಾಗಿ ಪಂಚಾಯತ್ ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಈ ಸಂಧರ್ಭದಲ್ಲಿ ತಾ.ಪಂ.ಸದಸ್ಯ ಪಝಲ್ ಕೋಡಿಂಬಾಳ, ಗ್ರಾ.ಪಂ. ಉಪಾಧ್ಯಕ್ಷೆ ಜ್ಯೋತಿ ಡಿ.ಕೋಲ್ಪೆ, ಗ್ರಾ.ಪಂ.ಸದಸ್ಯರಾದ ಅಶ್ರಫ್ ಶೇಡಿಗುಂಡಿ, ಹಾಜಿ ಕೆ.ಎಂ. ಹನೀಫ್, ನಾರಾಯಣ ಪುಜಾರಿ, ಶೆರೀಫ್ ಎ.ಎಸ್., ಶಾಲಿನಿ ಸತೀಶ್ ನಾೖಕ್, ಹರ್ಷ ಕೋಡಿ, ಜಯಂತಿ, ಸರೋಜಿನಿ

ಕಡಬ: ಗಾಂಧೀ ಜಯಂತಿ ಆಚರಣೆ ► ಪಂಚಾಯತ್ ವಠಾರದಲ್ಲಿ ಸ್ವಚ್ಛತೆ Read More »

ಕರಾವಳಿ

ಕೊಂಬಾರು: ಬಾವಿಗೆ ಬಿದ್ದು ಬಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಅ.03. ತಮ್ಮ ತೋಟದಲ್ಲಿನ ಕೆರೆಗೆ ಶಾಲಾ ಬಾಲಕನೋರ್ವ ಕಾಲು ಜಾರಿ ಮೃತಪಟ್ಟ ಘಟನೆ ಕೊಂಬಾರು ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ. ಇಲ್ಲಿನ ಕೊಂಬಾರು ಗ್ರಾಮದ ಕೊಡೆಂಕೀರಿ ನಿವಾಸಿ ನಾಗೇಶ್ ಎಂಬವರ ಪುತ್ರ ರಕ್ಷಿತ್(8) ಮೃತಪಟ್ಟ ದುರ್ದೈವಿ. ತಮ್ಮ ಮಗನನ್ನು ಮನೆಯಲ್ಲಿ ಬಿಟ್ಟು ತಂದೆ ತಾಯಿ ಪೇಟೆ ಕಡೆ ಹೋಗಿದ್ದು, ಮನೆಗೆ ಹಿಂತಿರುಗಿ ಬಂದಾಗ ರಕ್ಷಿತ್ ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಪಕ್ಕದಲ್ಲೆಲ್ಲಾ ಹುಡುಕಾಡಿದಾಗ ರಕ್ಷಿತ್ ನ ಮೃತದೇಹ ಕೆರೆಯಲ್ಲಿ ಕಂಡುಬಂದಿದೆ. ಸ್ಥಳಕ್ಕೆ ಕಡಬ

ಕೊಂಬಾರು: ಬಾವಿಗೆ ಬಿದ್ದು ಬಾಲಕ ಮೃತ್ಯು Read More »

ಕರಾವಳಿ

ಕಡಬ: ಮಾತೃಪೂರ್ಣ ಯೋಜನೆಗೆ ಚಾಲನೆ ► ತಲೆಗೆ ಹೂ ಮುಡಿಸಿ, ಕೈಗೆ ಬಳೆತೊಡಿಸಿ, ಹಣೆಗೆ ಕುಂಕುಮ ಇಟ್ಟು ಗರ್ಭಿಣಿ- ಭಾಣಂತಿಯರಿಗೆ ಗೌರವ

(ನ್ಯೂಸ್ ಕಡಬ) newskadaba.com ಕಡಬ,ಅ.3. ಕರ್ನಾಟಕ ಸರ್ಕಾರವು ಜಾರಿಗೆ ತಂದ ಮಾತೃಪೂರ್ಣ ಯೋಜನೆಯ ಉದ್ಘಾಟನೆಯು ಸೋಮವಾರ ಕಡಬ ಚರ್ಚು ಅಂಗನವಾಡಿಯಲ್ಲಿ ನಡೆಯಿತು. ಜಿ.ಪಂ.ಸದಸ್ಯ ಪಿ.ಪಿ. ವರ್ಗೀಸ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಮಾತೃಪೂರ್ಣ ಯೋಜನೆಯು ಗರ್ಭಿಣಿಯರು ಹಾಗೂ ಬಾಣಂತಿಯರ ಆರೋಗ್ಯದ ದೃಷ್ಟಿಯಿಂದ ರೂಪಿಸಿರುವ ಉತ್ತಮ ಯೋಜನೆಯಾಗಿದೆ ಈ ಯೋಜನೆ ನಮ್ಮ ದ.ಕ.ಹಾಗೂ ಉಡುಪಿ ಜಿಲ್ಲೆಗೆ ಔಚಿತ್ಯವಾಲ್ಲವಾದರೂ ಉತ್ತರ ಕರ್ನಾಟಕದ ಭಾಗಗಳಲ್ಲಿ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಪೌಷ್ಠಿಕ ಆಹಾರ ಸರಿಯಾಗಿ ದೊರಕುವುದಿಲ್ಲ ಇದನ್ನು ಗಮನದಲ್ಲಿಟ್ಟು ಸರ್ಕಾರ ಯೋಜನೆ ರೂಪಿಸಿದೆ. ಇಂತಹ

ಕಡಬ: ಮಾತೃಪೂರ್ಣ ಯೋಜನೆಗೆ ಚಾಲನೆ ► ತಲೆಗೆ ಹೂ ಮುಡಿಸಿ, ಕೈಗೆ ಬಳೆತೊಡಿಸಿ, ಹಣೆಗೆ ಕುಂಕುಮ ಇಟ್ಟು ಗರ್ಭಿಣಿ- ಭಾಣಂತಿಯರಿಗೆ ಗೌರವ Read More »

ಕರಾವಳಿ

ರೆಂಜಿಲಾಡಿ: ಕಾಡಾನೆ ಹಾವಳಿ ► ಅಪಾರ ಪ್ರಮಾಣದ ಕೃಷಿ ನಾಶ..!!!

(ನ್ಯೂಸ್ ಕಡಬ) newskadaba.com ಕಡಬ,ಅ.3. ರೆಂಜಿಲಾಡಿ ಗ್ರಾಮದ ಎಳುವಾಲೆ ನಿವಾಸಿ ಬಾಬು ಗೌಡ ಅವರ ಅಡಿಕೆ ತೋಟಕ್ಕೆ ಕಾಡಾನೆ ಹಿಂಡು ಕಳೆದ ಮೂರು ದಿನಗಳಿಂದ ಲಗ್ಗೆ ಇಟ್ಟಿದ್ದು ಅಪಾರ ಪ್ರಮಾಣದ ಅಡಿಕೆ, ತೆಂಗು, ಬಾಳೆ ಕೃಷಿಯನ್ನು ನಾಶ ಮಾಡಿದೆ. ಕಾಡಾನೆ ದಾಳಿಯಿಂದಾಗಿ ಸುಮಾರು 25000ರೂ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೆ ಈ ಪರಿಸರದ ಜರ್ನಾಧನ ಗೌಡ ಹಾಗೂ ರಾಮಚಂದ್ರ ಗೌಡ ಎಳುವಾಲೆ ಅವರ ಕೃಷಿ ತೋಟಕ್ಕೆ ಕೂಡ ದಾಳಿ ಮಾಡಿದ್ದು ಕೃಷಿಗೆ ಹಾನಿ ಮಾಡಿದೆ. ಈ ಬಗ್ಗೆ

ರೆಂಜಿಲಾಡಿ: ಕಾಡಾನೆ ಹಾವಳಿ ► ಅಪಾರ ಪ್ರಮಾಣದ ಕೃಷಿ ನಾಶ..!!! Read More »

ಕರಾವಳಿ

ನೂಜಿಬಾಳ್ತಿಲ: ಗಾಂಧಿಜಯಂತಿ ದಿನಾಚರಣೆ ► ಸ್ವಚ್ಚತಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ,ಅ.3. ಇಲ್ಲಿನ ನೂಜಿಬಾಳ್ತಿಲ ಗ್ರಾ.ಪಂ.ನಲ್ಲಿ ಗಾಂಧಿಜಯಂತಿ ದಿನಾಚರಣೆ ಹಾಗೂ ಸ್ವಚ್ಚತಾ ಕಾರ್ಯಕ್ರಮವನ್ನು ಸೋಮವಾರ ನಡೆಸಲಾಯಿತು. ಜಿ.ಪಂ.ಸದಸ್ಯರಾದ ಪಿ.ಪಿ ವರ್ಗೀಸ್ರವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಳಿಕ ಸ್ವಚ್ಚತಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿ ಮಹಾತ್ಮ ಗಾಂಧೀಜಿಯವರ ಕನಸನ್ನು ನನಸಾಗಿಸುವುದರೊಂದಿಗೆ ದೇಶಾದ್ಯಂತ ಗಾಂಧಿ ಜಯಂತಿಯನ್ನು ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ನಮ್ಮ ಕಡಬ ತಾಲೂಕಿನಾದ್ಯಂತ ಎಲ್ಲಾ ಗ್ರಾ.ಪಂ.ನಲ್ಲಿ ಸಂಘಸಂಸ್ಥೆಗಳಲ್ಲಿ, ಶಾಲಾ ಕಾಲೇಜುಗಳು, ಪ್ರಾರ್ಥನಾ ಮಂದಿರಗಳು ಸೇರಿದಂತೆ ಪರಿಸರದಲ್ಲಿ ಸಂಪೂರ್ಣ ಸ್ವಚ್ಚತೆಯನ್ನು

ನೂಜಿಬಾಳ್ತಿಲ: ಗಾಂಧಿಜಯಂತಿ ದಿನಾಚರಣೆ ► ಸ್ವಚ್ಚತಾ ಕಾರ್ಯಕ್ರಮ Read More »

ಕರಾವಳಿ

ಸಮುದ್ರದ ಅಲೆಗೆ ಸಿಳುಕಿ ► ಇಬ್ಬರು ಬಾಲಕರು ನೀರುಪಾಲು

(ನ್ಯೂಸ್ ಕಡಬ) newskadaba.com ಕಾರವಾರ,ಅ.03. ಸಮುದ್ರಕ್ಕೆ ಆಟವಾಡಲು ತೆರಳಿದ್ದ ಬಾಲಕರಿಬ್ಬರು ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರದ ಸಣ್ಣಬಾವಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ. ಗಣೇಶ ನಾಯ್ಕ(10) ಮತ್ತು ವಿನಾಯಕ ನಾಯ್ಕ(09) ಮೃತ ದುರ್ದೈವಿಗಳು. ಸೋಮವಾರ ಸಂಜೆ ನೀರಲ್ಲಿ ಆಟವಾಡುತ್ತಿದ್ದ ವೇಳೆ ಇಬ್ಬರು ಬಾಲಕರು ಸಮುದ್ರದ ಅಲೆಗಳಿಗೆ ಸಿಳುಕಿ ಕೊಚ್ಚಿ ಹೋಗಿದ್ದರು. ತಡರಾತ್ರಿ ಹುಡುಕಾಟ ನಡೆಸಿದರೂ ಇಬ್ಬರು ಬಾಲಕರ ಸುಳಿವು ಸಿಕ್ಕಿರಲಿಲ್ಲ. ಇಂದು ಬೆಳಿಗ್ಗೆ ಗ್ರಾಮದ ಕಡಲತೀರದಲ್ಲಿ ಬಾಲಕರ ಶವ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು

ಸಮುದ್ರದ ಅಲೆಗೆ ಸಿಳುಕಿ ► ಇಬ್ಬರು ಬಾಲಕರು ನೀರುಪಾಲು Read More »

ಕರಾವಳಿ

ಸಬಳೂರು: ಶ್ರೀರಾಮ ಗೆಳೆಯರ ಬಳಗದಿಂದ ಶ್ರಮದಾನ ► ಶ್ರೀರಾಮ ಭಜನಾ ಮಂದಿರದ ವಠಾರ ಸ್ವಚ್ಚತೆ

(ನ್ಯೂಸ್ ಕಡಬ) newskadaba.com ಕಡಬ, ಅ.03. ಪುತ್ತೂರು ತಾಲೂಕು ಕೊಯಿಲ ಗ್ರಾಮದ ಸಬಳೂರು ಅಯೋಧ್ಯಾ ನಗರ ಶ್ರೀ ರಾಮ ಗೆಳೆಯರ ಬಳಗದ ವತಿಯಿಂದ ಶ್ರೀ ರಾಮ ಭಜನಾ ಮಂದಿರದ ವಠಾರವನ್ನು ಸ್ವಚ್ಛಗೊಳಿಸುವ ಕಾರ್ಯ ಸೋಮವಾರದಂದು ನಡೆಯಿತು. ಆಲಂಕಾರು ಸಿ.ಎ. ಬ್ಯಾಂಕ್ ಉದ್ಯೋಗಿ ರಾಧಾಕೃಷ್ಣ ತುಂಬೆತಡ್ಕ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸ್ವಚ್ಛ ಕಾರ್ಯ ದಿನವೊಂದಕ್ಕೆ ಮೀಸಲಾಗದೆ ಪ್ರತಿ ದಿನ ಮನೆ ಮನದಿಂದ ಆರಂಭವಾಗಬೇಕು. ಆ ಮೂಲಕ ನರೇಂದ್ರ ಮೋದಿಯವರ ಸ್ವಚ್ಛ ಭಾರತದ ಕನಸನ್ನು ನನಸು ಮಾಡಬೇಕು

ಸಬಳೂರು: ಶ್ರೀರಾಮ ಗೆಳೆಯರ ಬಳಗದಿಂದ ಶ್ರಮದಾನ ► ಶ್ರೀರಾಮ ಭಜನಾ ಮಂದಿರದ ವಠಾರ ಸ್ವಚ್ಚತೆ Read More »

ಕರಾವಳಿ

ಅ.05: ಬಿಜೆಪಿ ಎಸ್ಸಿ ಮೋರ್ಛಾ ವತಿಯಿಂದ ಬೃಹತ್ ಸಮರ್ಥನಾ ಸಮಾವೇಶ ► ಮರ್ಧಾಳ ಅಂಬೇಡ್ಕರ್ ಭವನದಲ್ಲಿ ಪೂರ್ವಭಾವಿ ಸಭೆ

(ನ್ಯೂಸ್ ಕಡಬ) newskadaba.com ಕಡಬ, ಅ.03. ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಎಸ್ಸಿ ಮೋರ್ಚಾ ವತಿಯಿಂದ ಅಕ್ಟೋಬರ್ 05 ರಂದು ಆಲಂಕಾರು ರೈತ ಭವನದಲ್ಲಿ ನಡೆಯಲಿರುವ ಬೃಹತ್ ಸಮರ್ಥನಾ ಸಮಾವೇಶದ ಪೂರ್ವ ಭಾವಿ ಸಭೆಯು ಮರ್ಧಾಳ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಈ ಸಭೆಯಲ್ಲಿ ಬಿಜೆಪಿ ಜಿಲ್ಲಾ ಸಮಿತಿ ಸದಸ್ಯರಾದ ಶ್ರೀಕೃಷ್ಣ ಶೆಟ್ಟಿ, ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ಕಿಶೋರ್ ಶಿರಾಡಿ, ಸುಳ್ಯ ಮಂಡಲದ ಉಪಾಧ್ಯಕ್ಷರಾದ ಪುಲಸ್ತ್ಯಾ ರೈ, ಕಡಬ ಶಕ್ತಿ ಕೇಂದ್ರದ ಅಧ್ಯಕ್ಷರಾದ ವಾಡ್ಯಪ್ಪ ಗೌಡ

ಅ.05: ಬಿಜೆಪಿ ಎಸ್ಸಿ ಮೋರ್ಛಾ ವತಿಯಿಂದ ಬೃಹತ್ ಸಮರ್ಥನಾ ಸಮಾವೇಶ ► ಮರ್ಧಾಳ ಅಂಬೇಡ್ಕರ್ ಭವನದಲ್ಲಿ ಪೂರ್ವಭಾವಿ ಸಭೆ Read More »

ಕರಾವಳಿ

ಹುಲಿಗಳೊಂದಿಗೆ ಹೆಜ್ಜೆ ಹಾಕಿದ ರಮಾನಾಥ ರೈ ► ಹುಲಿಗಳ ತಾಳಕ್ಕೆ ತಕ್ಕಂತೆ ಕುಣಿದ ವೀಡಿಯೋ ನೋಡಬೇಕೆ…?

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.02. ಹುಲಿವೇಷದಾರಿಗಳೊಂದಿಗೆ ಅರಣ್ಯ ಸಚಿವರು ಹೆಜ್ಜೆ ಹಾಕಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವನ್ಯಜೀವಿ ಸಪ್ತಾಹದ ಅಂಗವಾಗಿ ಬೆಂಗಳೂರಿನ ಲಾಲ್‍ಬಾಗ್‍ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಹುಲಿವೇಷ ಕುಣಿತವನ್ನು ಆಯೋಜಿಸಲಾಗಿತ್ತು. ಸ್ಥಳಕ್ಕೆ ಆಗಮಿಸಿದ ರಾಜ್ಯ ಪರಿಸರ, ಜೀವಶಾಸ್ತ್ರ ಮತ್ತು ಅರಣ್ಯ ಸಚಿವರೂ, ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರೂ ಆದ ರಮಾನಾಥ ರೈ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದ ಹುಲಿವೇಷಧಾರಿಗಳೊಂದಿಗೆ ತಾನೂ ಹೆಜ್ಜೆ ಹಾಕಿದರು. ಹುಲಿವೇಷ ಕುಣಿತದೊಂದಿಗೆ ತಾನೂ ಕುಣಿಯುವುದರ ಮೂಲಕ ತನಗೆ ಕುಣಿತ ಎನ್ನುವುದು

ಹುಲಿಗಳೊಂದಿಗೆ ಹೆಜ್ಜೆ ಹಾಕಿದ ರಮಾನಾಥ ರೈ ► ಹುಲಿಗಳ ತಾಳಕ್ಕೆ ತಕ್ಕಂತೆ ಕುಣಿದ ವೀಡಿಯೋ ನೋಡಬೇಕೆ…? Read More »

ಕರಾವಳಿ
Scroll to Top