ಕರಾವಳಿ

ಕಾಸರಗೋಡು: ಟೆಂಪೊ-ಬೈಕ್ ಢಿಕ್ಕಿ; ಯುವಕ ಮೃತ್ಯು

ಕಾಸರಗೋಡು, ಡಿ.7: ಟೆಂಪೊ ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿ ಸವಾರ ಮೃತಪಟ್ಟ ಘಟನೆ ಶನಿವಾರ ಸಂಜೆ ನಗರದ ಹೊರವಲಯದ ನಾಯಮ್ಮರ್ ಮೂಲೆಯಲ್ಲಿ ನಡೆದಿದೆ. ಮೃತರನ್ನು ಚೆರ್ಕಳದ ಬೇರ್ಕದ ನಿವಾಸಿ ಶಮ್ಮಾಸ್ (20) ಎಂದು ಗುರುತಿಸಲಾಗಿದೆ. ಅಪಘಾತದ ತೀವ್ರತೆಗೆ ಗಂಭೀರ ಗಾಯಗೊಂಡಿದ್ದ ಶಮ್ಮಾಸ್‌ನನ್ನು ಕೂಡಲೇ ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ವಿದ್ಯಾನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾಸರಗೋಡು: ಟೆಂಪೊ-ಬೈಕ್ ಢಿಕ್ಕಿ; ಯುವಕ ಮೃತ್ಯು Read More »

ಕರಾವಳಿ

ಬೈಕ್ ಮತ್ತು ಸ್ಕೂಟರ್ ನಡುವೆ ಢಿಕ್ಕಿ

(ನ್ಯೂಸ್ ಕಡಬ) newskadaba.com, ಬಂಟ್ವಾಳ, ಡಿ.7  ಸ್ಕೂಟರ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರನಿಗೆ ಗಾಯಗೊಂಡ ಘಟನೆ ಬಂಟ್ವಾಳ ತಾಲೂಕು ತೆಂಕಬೆಳ್ಳೂರು ಗ್ರಾಮದ ಕರ್ಗಲ್ಲು ಎಂಬಲ್ಲಿ ನಿನ್ನೆ ನಡೆದಿದೆ. ಬೈಕ್ ಸವಾರ ದಾಮೋದರ ಎಂಬವರ ತಲೆ ಹಾಗೂ ಕೈ ಕಾಲುಗಳಿಗೆ ಗಾಯವಾಗಿರುತ್ತದೆ. ಗಾಯಾಳು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಲಾಗಿದೆ ಎಂದು ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಮತ್ತು ಸ್ಕೂಟರ್ ನಡುವೆ ಢಿಕ್ಕಿ Read More »

ಕರಾವಳಿ

ಪುತ್ತೂರು: ಬೈಕ್ ಢಿಕ್ಕಿ ಹೊಡೆದು ಪಾದಚಾರಿ ಸಾವು

ಪುತ್ತೂರು, ಡಿ.7: ಬೈಕ್‌  ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಮೃತಪಟ್ಟ ಘಟನೆ ಇಲ್ಲಿನ ಮುಕ್ರಂಪಾಡಿಯ ಕಮ್ಮಾಡಿ ಮಿಲ್ ಬಳಿ ನಡೆದಿದೆ. ಮೃತ ವ್ಯಕ್ತಿ ಪುತ್ತೂರು ಆರ್ಯಾಪು ಗ್ರಾಮದ ನಿವಾಸಿ ಲೋರೆನ್ಸ್ ಡಿ ಸೋಜಾ (69 ವರ್ಷ) ಎಂದು ಗುರುತಿಸಲಾಗಿದೆ. ಇವರು ಪುತ್ತೂರು ಮಾದೆ ದೇವುಸ್ ಚರ್ಚ್‌ನಲ್ಲಿ ವಾಚ್‌ಮ್ಯಾನ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಮಿಥುನ್ ಎಂಬಾತ ತನ್ನ ಬೈಕ್ ನ್ನು ಅಜಾಗರೂಕತೆಯಿಂದ ಚಲಾಯಿಸಿದ್ದೆ ಅಪಘಾತಕ್ಕೆ ಕಾರಣವೆನ್ನಲಾಗಿದೆ. ಈತ ಇಂಜಿನಿಯರಿಂಗ್‌ ವಿದ್ಯಾರ್ಥಿಯಾಗಿದ್ದು ಶುಕ್ರವಾರ ರಾತ್ರಿ 9.45 ಗಂಟೆ ಸುಮಾರಿಗೆ ಮಾಣಿ- ಮೈಸೂರು

ಪುತ್ತೂರು: ಬೈಕ್ ಢಿಕ್ಕಿ ಹೊಡೆದು ಪಾದಚಾರಿ ಸಾವು Read More »

ಕರಾವಳಿ

ಕೆನರಾ ಹೈಸ್ಕೂಲ್‍ನಲ್ಲಿ ಫಿಲಾಟೆಲಿ ಕ್ಲಬ್ ಉದ್ಘಾಟನೆ

(ನ್ಯೂಸ್ ಕಡಬ) newskadaba.com, ಮಂಗಳೂರು , ಡಿ.7   ಶಾಲಾ ಮಕ್ಕಳಲ್ಲಿ ಅಂಚೆ ಚೀಟಿ ಸಂಗ್ರಹಣಾ ಹವ್ಯಾಸವನ್ನು ಬೆಳೆಸುವ ಆಶಯದೊಂದಿಗೆ ಡಿಸೆಂಬರ್ 6 ರಂದು ಕೆನರಾ ಹೈಸ್ಕೂಲ್, ಸಿ.ಬಿ.ಎಸ್.ಇ, ಡೊಂಗರ್ ಕೇರಿ ಶಾಲೆಯಲ್ಲಿ ಫಿಲಾಟೆಲಿ ಕ್ಲಬ್ ನ ಉದ್ಘಾಟನೆಯನ್ನು ಮಂಗಳೂರಿನ ಹಿರಿಯ ಅಂಚೆ ಅಧೀಕ್ಷಕ ಹರ್ಷ ಉದ್ಘಾಟಿಸಿದರು. ಫಿಲಾಟೆಲಿಸ್ಟ್ ಲಕ್ಷ್ಮಣ್ ಪ್ರಭು ಅವರು ಮಕ್ಕಳಿಗೆ ಸ್ಟಾಂಪ್ ಸಂಗ್ರಹಣೆಯ ಹವ್ಯಾಸದ ಕುರಿತು ಅರಿವು ಮೂಡಿಸಿದರು ಹಾಗೂ ತಮ್ಮ ಅಂಚೆ ಚೀಟಿ ಸಂಗ್ರಹಣೆಯ ಪ್ರದರ್ಶನವನ್ನು ಮಾಡಿದರು. ಶಾಲೆಯ ಪ್ರಿನ್ಸಿಪಾಲ್ ಜೋಯ್ ಜೆ ರೈ,

ಕೆನರಾ ಹೈಸ್ಕೂಲ್‍ನಲ್ಲಿ ಫಿಲಾಟೆಲಿ ಕ್ಲಬ್ ಉದ್ಘಾಟನೆ Read More »

ಕರಾವಳಿ

ಕೆಎಸ್‍ಆರ್ ಟಿಸಿಯಲ್ಲಿ ತಾಂತ್ರಿಕ ತರಬೇತಿ- ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.7  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಪುತ್ತೂರು ವಿಭಾಗ ಶಿಶಿಕ್ಷು ಅಧಿನಿಯಮ 1961ರ ಅನ್ವಯ ಪೂರ್ಣ ಅವಧಿಯ ತಾಂತ್ರಿಕ, ಪಾಸಾ ವೃತ್ತಿಯಲ್ಲಿ ತರಬೇತಿ ಪಡೆಯಲು ಇಚ್ಚಿಸುವ ಅಭ್ಯರ್ಥಿಗಳಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಪುತ್ತೂರು ವಿಭಾಗದಿಂದ ಶಿಶಿಕ್ಷು ವೃತ್ತಿಗಳಲ್ಲಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಜನವರಿ 4. ಐ.ಟಿ.ಐ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಶಿಶಿಕ್ಷು ವೃತ್ತಿಯ ಹೆಸರು- ಪಾಸಾ- ಒಟ್ಟು ಸ್ಥಾನಗಳ ಸಂಖ್ಯೆ-20,

ಕೆಎಸ್‍ಆರ್ ಟಿಸಿಯಲ್ಲಿ ತಾಂತ್ರಿಕ ತರಬೇತಿ- ಅರ್ಜಿ ಆಹ್ವಾನ Read More »

ಕರಾವಳಿ

ಡಿ. 27, 28, 29 ರಂದು ಕಾವ, ಜಾಣ ಮತ್ತು ರತ್ನ ಪರೀಕ್ಷೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.7  ಕನ್ನಡ ಸಾಹಿತ್ಯ ಪರಿಷತ್ತಿನ 2019-20 ನೇ ಸಾಲಿನ ಪ್ರವೇಶ, ಕಾವ, ಜಾಣ ಮತ್ತು ರತ್ನ ಪರೀಕ್ಷೆಗಳು ಡಿಸೆಂಬರ್ 27, 28, 29 ರಂದು ಒಟ್ಟು ಮೂರು ದಿನಗಳ ಕಾಲ ರಾಜ್ಯದ 19 ಕೇಂದ್ರಗಳಲ್ಲಿ ನಡೆಯಲಿದೆ. ಪರೀಕ್ಷಾ ಪ್ರವೇಶ ಪತ್ರಗಳನ್ನು ವಿದ್ಯಾರ್ಥಿಗಳಿಗೆ ಅಂಚೆ ಮೂಲಕ ಕಳುಹಿಸಲಾಗಿದೆ. ಡಿಸೆಂಬರ್ 18 ರ ನಂತರವು ಪ್ರವೇಶ ಪತ್ರ ತಲುಪದಿರುವ ಬಗ್ಗೆ ವಿದ್ಯಾರ್ಥಿಗಳು ಗೌರವ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜಪೇಟೆ ಬೆಂಗಳೂರು ಇವರಲ್ಲಿ ವಿಚಾರಿಸಬೇಕು,

ಡಿ. 27, 28, 29 ರಂದು ಕಾವ, ಜಾಣ ಮತ್ತು ರತ್ನ ಪರೀಕ್ಷೆ Read More »

ಕರಾವಳಿ

ಉಚಿತ ಕಂಪ್ಯೂಟರ್ ತರಬೇತಿ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.7  ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಮಂಗಳೂರು, ಇಲ್ಲಿ ಬೇಸಿಕ್ ಕಂಪ್ಯೂಟರ್ ತರಬೇತಿ ನಿರಂತರ ನಡೆಯುತ್ತಿದ್ದು, ತರಬೇತಿ ಪಡೆಯಲು ಇಚ್ಚಿಸುವ ಆಸಕ್ತ ಅಭ್ಯರ್ಥಿಗಳು ನೋಂದಣಿ ಮಾಡಬಹುದಾಗಿದೆ, ತರಬೇತಿಯು ಉಚಿತವಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮಹಾನಗರ ಪಾಲಿಕೆ ಕಟ್ಟಡ ಲಾಲ್ ಭಾಗ್ ಮಂಗಳೂರು ಇಲ್ಲಿಗೆ ಸಂಪರ್ಕಿಸಲು ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ದಕ್ಷಿಣಕನ್ನಡ ಜಿಲ್ಲೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

ಉಚಿತ ಕಂಪ್ಯೂಟರ್ ತರಬೇತಿ Read More »

ಕರಾವಳಿ

ಪ್ರಜ್ಞಾ ಸಲಹಾ ಕೇಂದ್ರ – ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.7   ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಾಯೋಜಿತ ಪ್ರಜ್ಞಾ ಸ್ವಾಧಾರ ಗೃಹಕ್ಕೆ ಮಾಸಿಕ ರೂ. 5,000 ಗೌರವಧನ ನೆಲೆಯಲ್ಲಿ ಕಾರ್ಯ ನಿರ್ವಹಿಸಲು ಎಂಟನೇ ತರಗತಿ ವಿದ್ಯಾರ್ಹತೆ ಹೊಂದಿರುವ 18 ರಿಂದ 38 ವರ್ಷ ವಯೋಮಿತಿಯುಳ್ಳ ಅರ್ಹ ಮಹಿಳಾ ಅಭ್ಯರ್ಥಿಯಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರಜ್ಞಾ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ ಇಲ್ಲಿ ತೆರವಾಗಿರುವ ಸಮಾಜ ಕಾರ್ಯಕರ್ತರ ರಾತ್ರಿ ಪಾಳಿ ಹುದ್ದೆಗೆ ಮಾಸಿಕ ರೂ. 10,000 ಗೌರವಧನ ನೆಲೆಯಲ್ಲಿ ಕಾರ್ಯ ನಿರ್ವಹಿಸಲು ಬಿ.ಎ

ಪ್ರಜ್ಞಾ ಸಲಹಾ ಕೇಂದ್ರ – ಅರ್ಜಿ ಆಹ್ವಾನ Read More »

ಕರಾವಳಿ

ಫಲಪುಷ್ಪ ಪ್ರದರ್ಶನದ ಅಂಗವಾಗಿ ವಿವಿಧ ಸ್ಪರ್ಧೆಗಳು

(ನ್ಯೂಸ್ ಕಡಬ) newskadaba.com, ಮಂಗಳೂರು , ಡಿ.7   2019-20 ನೇ ಸಾಲಿನ ತೋಟಗಾರಿಕೆ ಇಲಾಖೆಯ ಫಲಪುಷ್ಪ ಪ್ರದರ್ಶನದ ಅಂಗವಾಗಿ ಜನವರಿ 1 ರಂದು ಕದ್ರಿ ಉದ್ಯಾನವನದಲ್ಲಿ ವಿವಿಧ ಸ್ವರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಮಕ್ಕಳಿಗೆ ತರಕಾರಿ, ಹೂ, ಹಣ್ಣು ಬೀಜಗಳನ್ನು ಗುರುತಿಸುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಯನ್ನು 3 ವಿಭಾಗಗಲ್ಲಿ ನಡೆಸಲಾಗುವುದು. ಮೊದಲನೆ ವಿಭಾಗ- 1 ನೇ ತರಗತಿಯಿಂದ 4ನೇ ತರಗತಿ ಮಕ್ಕಳಿಗೆ, 2 ನೇ ವಿಭಾಗ – 5 ನೇ ತರಗತಿಯಿಂದ 7 ನೇ ತರಗತಿಯವರೆಗೆ, 3 ನೇ ವಿಭಾಗ- 8ನೇ

ಫಲಪುಷ್ಪ ಪ್ರದರ್ಶನದ ಅಂಗವಾಗಿ ವಿವಿಧ ಸ್ಪರ್ಧೆಗಳು Read More »

ಕರಾವಳಿ
Scroll to Top