ಕರಾವಳಿ

ಉಪ್ಪಿನಂಗಡಿ: ಸರಣಿ ಕಳ್ಳತನ ►14 ಸಾವಿರ ನಗದು, ಕಾಲೇಜಿನ ಸಿಸಿ ಕ್ಯಾಮರದ ಡಿವಿಆರ್ ಕಳ್ಳತನ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ,ಸೆ.27. ಇಲ್ಲಿನ ಹಲವು ಅಂಗಡಿ ಸೇರಿದಂತೆ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ನುಗ್ಗಿದ ಕಳ್ಳರು ಸುಮಾರು 14 ಸಾವಿರ ನಗದು ದೋಚಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ಬ್ಯಾಂಕ್ ರಸ್ತೆಯ ಜೆರಾಕ್ಸ್ ಅಂಗಡಿ, ದೊಡ್ಡಣ್ಣ ಕಿಣಿ ಅಂಗಡಿ, ಸಫಾ ಫರ್ನಿಚರ್, ಯಮ್ ಯಮ್ ಎಸ್ ಟ್ರೇಡರ್ಸ್ ಗೆ ನುಗ್ಗಿದ ಕಳ್ಳರು ಎಲ್ಲಾ ಕಡೆಯಿಂದ ಒಟ್ಟು ಸುಮಾರು 14 ಸಾವಿರ ನಗದು ಹಾಗು ಕಾಲೇಜಿನಿಂದ ಸಿಸಿ […]

ಉಪ್ಪಿನಂಗಡಿ: ಸರಣಿ ಕಳ್ಳತನ ►14 ಸಾವಿರ ನಗದು, ಕಾಲೇಜಿನ ಸಿಸಿ ಕ್ಯಾಮರದ ಡಿವಿಆರ್ ಕಳ್ಳತನ Read More »

ಕರಾವಳಿ

ಪುತ್ತೂರು: ಅನ್ನಭಾಗ್ಯ ಅಕ್ಕಿಯಲ್ಲಿ ಹುಳುಗಳು ಪತ್ತೆ..!!! ► ಆಕ್ರೋಶಿತರಾದ ನೇಲ್ಯಡ್ಕ ಗ್ರಾಮಸ್ಥರು

(ನ್ಯೂಸ್ ಕಡಬ) newskadaba.com ಪುತ್ತೂರು,ಸೆ.27. ಇಲ್ಲಿನ ಐತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಚಾರಿ ನ್ಯಾಯಬೆಲೆ ಅಂಗಡಿಯಲ್ಲಿ ವಿತರಣೆಯಾಗುವ ಅನ್ನಭಾಗ್ಯ ಅಕ್ಕಿಯಲ್ಲಿ ಹುಳುಗಳು ಹೆಚ್ಚಾಗಿದ್ದು, ಅನ್ನಭಾಗ್ಯ ಜೊತೆಗೆ ಹುಳುಭಾಗ್ಯ ವಿತರಣೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಐತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನೇಲ್ಯಡ್ಕ ಗ್ರಾಮಸ್ಥರು ಆಕ್ರೋಶಿತರಾಗಿದ್ದಾರೆ. ಮಂಗಳವಾರ ಸಂಚಾರಿ ನ್ಯಾಯಬೆಲೆ ಅಂಗಡಿಗೆ ಅಕ್ಕಿ ತುಂಬಿಸಿಕೊಂಡು ಬಂದಿದ್ದ ಲಾರಿಯನ್ನು ತಡೆದ ನೇಲ್ಯಡ್ಕ ಗ್ರಾಮಸ್ಥರು, ಬಳಿಕ ಅಕ್ಕಿಚೀಲವನ್ನು ಪರಿಶೀಲಿಸಿದಾಗ ಅಕ್ಕಿಯಲ್ಲಿ ಹುಳಗಳಿರುವುದು ಗಮನಕ್ಕೆ ಬಂದಿದೆ. ಐತ್ತೂರು ಗ್ರಾಮ ಪಂಚಾಯಿತಿ ಸತೀಶ್ ಕೆ ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ

ಪುತ್ತೂರು: ಅನ್ನಭಾಗ್ಯ ಅಕ್ಕಿಯಲ್ಲಿ ಹುಳುಗಳು ಪತ್ತೆ..!!! ► ಆಕ್ರೋಶಿತರಾದ ನೇಲ್ಯಡ್ಕ ಗ್ರಾಮಸ್ಥರು Read More »

ಕರಾವಳಿ

ಮಂಗಳೂರು: ಗಾಂಜಾ ಮಾರಾಟ ಆರೋಪಿಯ ಸೆರೆ ► 7,000 ರೂ. ಮೌಲ್ಯದ ಗಾಂಜಾ ವಶಕ್ಕೆ ಪಡೆದ ಪೊಲೀಸರು..!!!

(ನ್ಯೂಸ್ ಕಡಬ) newskadaba.com ಮಂಗಳೂರು,ಸೆ.26. ತಲಪಾಡಿ ಗ್ರಾಮದ ತಚ್ಚಾಣಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಶೇಖರ್‌ ಯಾನೆ ಕ್ಯಾಮು (32) ನನ್ನು  ಸೋಮವಾರ ಇಕೊನಮಿಕ್ ಅಂಡ್‌‌ ನಾರ್ಕೊಟಿಕ್ ಕ್ರೈಂ ಪೊಲೀಸ್ ಠಾಣಾ ಪೊಲೀಸರು ಬಂಧಿಸಿ 7,000 ರೂ. ಮೌಲ್ಯದ 433 ಗ್ರಾಂ ಗಾಂಜಾ, ವಶಪಡಿಸಿಕೊಂಡಿದ್ದಾರೆ. ಈತನನ್ನು ಕೇರಳ ಮೂಲದ ಮಂಜೇಶ್ವರ ತೂಮಿನಾಡು ಸಮೀಪದ ಕಣ್ವತೀರ್ಥದ ಶೇಖರ್‌ ಯಾನೆ ಕ್ಯಾಮು (32) ಎಂದು ಗುರುತಿಸಲಾಗಿದೆ. ಈತ ತಲಪಾಡಿ ಗ್ರಾಮದ ತಚ್ಚಾಣಿ ಎಂಬಲ್ಲಿ ಗಾಂಜಾದೊಂದಿಗೆ ಇರುವ ಮಾಹಿತಿ ತಿಳಿದ ಪೊಲೀಸರು ದಾಳಿ ನಡೆಸಿ

ಮಂಗಳೂರು: ಗಾಂಜಾ ಮಾರಾಟ ಆರೋಪಿಯ ಸೆರೆ ► 7,000 ರೂ. ಮೌಲ್ಯದ ಗಾಂಜಾ ವಶಕ್ಕೆ ಪಡೆದ ಪೊಲೀಸರು..!!! Read More »

ಕರಾವಳಿ

ಬೆಳ್ತಂಗಡಿ: ಮಕ್ಕಳಾಗುವ ಔಷಧಿ ನೀಡಿ ದಂಪತಿಗಳ ಪ್ರಜ್ಞೆ ತಪ್ಪಿಸಿ ►ಮನೆ ದರೋಡೆ..!!!

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ,ಸೆ.26. ದೇವಸ್ಥಾನಕ್ಕೆಂದು ಹೊರಟ ದಂಪತಿಗಳು ರಸ್ತೆ ಬದಿ ನಿಂತಿರುವುದನ್ನು ಗಮನಿಸಿದ ಅಪರಿಚಿತರು ನಿಮಗೆ ಮಕ್ಕಳಾಗುವ ಕಷಾಯ ನೀಡುತ್ತೇವೆಂದು ಹೇಳಿ ಮನೆಯಲ್ಲಿದ್ದ ಹಣ ದೋಚಿ ಪರಾರಿಯಾಗಿರುವ ಪ್ರಕರಣ ಬೆಳ್ತಂಗಡಿ ತಾಲೂಕಿನ ಬಳಂಜದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಸೆ. 16 ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬಳಂಜದ ಪುರುಷೋತ್ತಮ ದಂಪತಿಗಳು ದೇವಸ್ಥಾನಕ್ಕೆ ಹೋಗುವ ಸಲುವಾಗಿ ತೆಂಕ ಕಾರಂದುರು ಬಳಿಯ ಕಾಪಿನಡ್ಕದಲ್ಲಿ ನಿಂತಿದ್ದರು. ಈ ವೇಳೆ  ಕಾರಿನಲ್ಲಿ ಆಗಮಿಸಿದ ಅಪರಿಚಿತರು ಇವರ ಮುಂದೆ ಕಾರು

ಬೆಳ್ತಂಗಡಿ: ಮಕ್ಕಳಾಗುವ ಔಷಧಿ ನೀಡಿ ದಂಪತಿಗಳ ಪ್ರಜ್ಞೆ ತಪ್ಪಿಸಿ ►ಮನೆ ದರೋಡೆ..!!! Read More »

ಕರಾವಳಿ

ಉಡುಪಿ: ರೈಲ್ವೆ ಹಳಿಯಲ್ಲಿ ವ್ಯಕ್ತಿಯ ಶವ ಪತ್ತೆ

(ನ್ಯೂಸ್ ಕಡಬ) newskadaba.com ಉಡುಪಿ,ಸೆ.26. ರೈಲು ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಎರ್ಮಾಳು ಗ್ರಾಮದ ಸಮೀಪ ಸೋಮವಾರ ನಡೆದಿದೆ. ಪಡುಬಿದ್ರೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರ ಮಾಹಿತಿ ಪ್ರಕಾರ ಅದಮಾರು ಗ್ರಾಮದ ರವಿ ದೇವಾಡಿಗ ಎಂಬ ವ್ಯಕ್ತಿಯ ಶವ ಎಂದು ಗುರುತಿಸಲಾಗಿದೆ. ರವಿ ದೇವಾಡಿಗ ಸೋಮವಾರ ಮಧ್ಯಾಹ್ನ ಮನೆಯಿಂದ ಕೆಲಸಕ್ಕೆಂದು ತೆರಳಿದ್ದರು. ರಾತ್ರಿಯಾದರು ಮನೆಗೆ ವಾಪಸ್ ಬಂದಿರಲಿಲ್ಲ. ಪೊಲೀಸರು ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಉಡುಪಿಯ ಆರ್‍ಪಿಎಫ್ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆಯನ್ನು ನಡೆಸಿದ್ದಾರೆ. ರವಿ

ಉಡುಪಿ: ರೈಲ್ವೆ ಹಳಿಯಲ್ಲಿ ವ್ಯಕ್ತಿಯ ಶವ ಪತ್ತೆ Read More »

ಕರಾವಳಿ

ಸುಬ್ರಹ್ಮಣ್ಯ: ಇಂಧನ ಸಚಿವ ಡಿ.ಕೆ. ಶಿವಕುಮಾರ್ ► ಕುಕ್ಕೆ ಸುಬ್ರಹ್ಮಣ್ಯದಲ್ಲಿ ತುಲಾಭಾರ ಸೇವೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ,ಸೆ.26. ಇತ್ತೀಚೆಗೆ ಐಟಿ ದಾಳಿಗೆ ಒಳಗಾಗಿದ್ದ ರಾಜ್ಯದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು ಕುಟುಂಬ ಸಮೇತರಾಗಿ ಭಾನುವಾರ ಆಗಮಿಸಿ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ತುಲಾಭಾರ ಸೇವೆ ನೆರವೇರಿಸಿದರು. ತಮ್ಮ ಮನೆಯ ಮೇಲೆ ಇತ್ತೀಚೆಗೆ ಐಟಿ ದಾಳಿ ನಡೆದ ಬಳಿಕ ಸ್ವಲ್ಪಮಟ್ಟಿಗೆ ಕುಗ್ಗಿ ಹೋಗಿದ್ದ ಡಿಕೆಶಿ ಅವರು ಇದೀಗ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡಿ ಮನ ಶಾಂತಿಗಾಗಿ ದೇವರ ಮೊರೆ ಹೋಗುತ್ತಿದ್ದಾರೆ. ಶ್ರೀ ಕ್ಷೇತ್ರ ಸುಬ್ರಹ್ಮಣ್ಯಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ ಡಿಕೆಶಿ ಶ್ರೀ ದೇವಳದಲ್ಲಿ ವಿಶೇಷ ಪೂಜೆ

ಸುಬ್ರಹ್ಮಣ್ಯ: ಇಂಧನ ಸಚಿವ ಡಿ.ಕೆ. ಶಿವಕುಮಾರ್ ► ಕುಕ್ಕೆ ಸುಬ್ರಹ್ಮಣ್ಯದಲ್ಲಿ ತುಲಾಭಾರ ಸೇವೆ Read More »

ಕರಾವಳಿ

ಫರಂಗಿಪೇಟೆ: ತಲವಾರು ದಾಳಿಗೆ ಇಬ್ಬರು ಬಲಿ ► ಮೂವರು ಗಂಭೀರ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಸೆ.26. ತಂಡವೊಂದು ನಡೆಸಿದ ತಲವಾರು ದಾಳಿಯಲ್ಲಿ ಇಬ್ಬರು ಮೃತಪಟ್ಟು, ಮೂವರು ಗಂಭೀರ ಗಾಯಗೊಂಡ ಘಟನೆ ಫರಂಗಿಪೇಟೆಯ ಪೊಲೀಸ್ ಹೊರ ಠಾಣೆಯ ಎದುರಿನ ರಿಕ್ಷಾ ನಿಲ್ದಾಣದ ಬಳಿ ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ನಡೆದಿದೆ. ಮೃತರನ್ನು ಅಡ್ಯಾರ್-ಕಣ್ಣೂರು ನಿವಾಸಿ ಫಯಾಝ್ ಹಾಗೂ ಝಿಯಾ ಎಂದು ಗುರುತಿಸಲಾಗಿದೆ. ಮಂಗಳೂರು ಹೊರವಲಯದ ಅಡ್ಯಾರ್ ನಿವಾಸಿ ಹನೀಸ್, ಮುಸ್ತಫಾ ಹಾಗೂ ನಜ್ಮಾನ್ ಎಂಬವರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ವಿಫ್ಟ್

ಫರಂಗಿಪೇಟೆ: ತಲವಾರು ದಾಳಿಗೆ ಇಬ್ಬರು ಬಲಿ ► ಮೂವರು ಗಂಭೀರ Read More »

ಕರಾವಳಿ

ಕುಂಡಾಜೆ: ಕೋಮು ಘರ್ಷಣೆ ಪ್ರಕರಣ ► ಮೂವರ ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಸೆ.25. ಕಡಬ ಠಾಣಾ ವ್ಯಾಪ್ತಿಯ ಕುಂಡಾಜೆ ಎಂಬಲ್ಲಿ ಭಾನುವಾರ ಸಂಜೆ ನಡೆದ ಕೋಮು ಘರ್ಷಣೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳ ವಿರುದ್ಧ ಸೆಕ್ಷನ್ 307ರ ಪ್ರಕಾರ ಕೊಲೆ ಯತ್ನ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಘಟನೆ ಸಂಬಂದಿಸಿದಂತೆ ಕುಂಡಾಜೆ ನಿವಾಸಿ ಝಕರಿಯಾ ಮತ್ತು ಅವರ ತಂಗಿ ಜಮೀಳಾ ಎಂಬವರಿಗೆ ಹಲ್ಲೆ ನಡೆಸಿದ ಆರೋಪದಡಿಯಲ್ಲಿ ರಾಮಕುಂಜ ನಿವಾಸಿಗಳಾದ ಅಶ್ವತ್, ರಿತೇಶ್ ಹಾಗೂ ಕೃಷ್ಣ ಎಂಬವರನ್ನು ಬಂಧಿಸಲಾಗಿದ್ದು, ಝಕರಿಯಾ ಅವರು ಭಾನುವಾರ ಸಂಜೆ ಉಪ್ಪಿನಂಗಡಿಯಿಂದ ಜೀಪಿನಲ್ಲಿ ಬಂದು ಕುಂಡಾಜೆಯಲ್ಲಿ

ಕುಂಡಾಜೆ: ಕೋಮು ಘರ್ಷಣೆ ಪ್ರಕರಣ ► ಮೂವರ ಆರೋಪಿಗಳ ಬಂಧನ Read More »

ಕರಾವಳಿ

ವಿವಿಧ ಕಡೆ ಆಯೋಜಿಸಿದ್ದ ಮುದ್ದುಕೃಷ್ಣ ಸ್ಪರ್ಧೆಯಲ್ಲಿ ಹಲವು ಪ್ರಶಸ್ತಿ ► ಆಲಂಕಾರು ಸ.ಹಿ.ಪ್ರಾ. ಶಾಲಾ ವಿದ್ಯಾರ್ಥಿ ಆಶ್ಲೇಷ್ ಬಾಕಿಲ

(ನ್ಯೂಸ್ ಕಡಬ) newskadaba.com ಕಡಬ,ಸೆ.25, ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಹಲವು ಕಡೆಗಳಲ್ಲಿ ಆಯೋಜಿಸಿದ್ದ ಮುದ್ದುಕೃಷ್ಣ ಸ್ಪರ್ಧೆಯಲ್ಲಿ ಆಲಂಕಾರು ಹಿರಿಯ ಪ್ರಾಥಮಿಕ ಶಾಲೆಯ ಎಲ್.ಕೆ.ಜಿ ವಿದ್ಯಾರ್ಥಿ ಆಶ್ಲೇಷ್ ಬಾಕಿಲ ಭಾಗವಹಿಸಿ ಪ್ರಥಮ ಸ್ಥಾನವನ್ನು ತನ್ನ ಮುಡಿಗೇರಿಸಿಕೊಂಡಿದ್ದಾನೆ. ಪುತ್ತೂರು ಕಲ್ಲೇಗ ಶಿವಾಜಿ ಯುವಕ ಮಂಡಲ ಆಯೋಜಿಸಿದ್ದ ಕೃಷ್ಣ ಸ್ಪರ್ಧೆಯಲ್ಲಿ ಪ್ರಥಮ, ಶ್ರೀದೇವಿ ತುಳುನಾಡ ಬಳಗ ನಗ್ರಿ ಶರವೂರು ಸಂಘಟಿಸಿದ ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ಪ್ರಥಮ, ಆಲಂಕಾರು ಹಿಂದೂ ಜಾಗರಣ ವೇದಿಕೆ ನಡೆಸಿದ ಕೃಷ್ಣ ಸ್ಫರ್ಧೆಯಲ್ಲಿ ಪ್ರಥಮ, ಹಿಂದೂ ಜಾಗರಣ ವೇದಿಕೆ ಮತ್ತು

ವಿವಿಧ ಕಡೆ ಆಯೋಜಿಸಿದ್ದ ಮುದ್ದುಕೃಷ್ಣ ಸ್ಪರ್ಧೆಯಲ್ಲಿ ಹಲವು ಪ್ರಶಸ್ತಿ ► ಆಲಂಕಾರು ಸ.ಹಿ.ಪ್ರಾ. ಶಾಲಾ ವಿದ್ಯಾರ್ಥಿ ಆಶ್ಲೇಷ್ ಬಾಕಿಲ Read More »

ಕರಾವಳಿ

ಸವಣೂರು: ಸ್ವಚ್ಛತಾ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ► ಮನೆಮನೆಗೆ ಬೇಟಿ ನೀಡಿ ಮನವಿ

(ನ್ಯೂಸ್ ಕಡಬ) newskadaba.com ಸವಣೂರು,ಸೆ.25, ಇಲ್ಲಿನ ಗ್ರಾಮ ಪಂಚಾಯತ್, ಗ್ರಾಮ ವಿಕಾಸ ಸಮಿತಿ ಪಾಲ್ತಾಡಿ, ಶ್ರೀ ಸಿದ್ಧಿವಿನಾಯಕ ಸೇವಾ ಸಂಘ, ಅರುಂಧತಿ ಮಾತೃ ಮಂಡಳಿ, ಮಂಜುನಾಥನಗರ, ವಿವೇಕಾನಂದ ಯುವಕ ಮಂಡಲ ಮತ್ತು ಶ್ರೀಗೌರಿ ಯುವತಿ ಮಂಡಲ, ಮಂಜುನಾಥನಗರ ಇವುಗಳ ಜಂಟಿ ಆಶ್ರಯದಲ್ಲಿ ಅ.2ರಂದು ಬಂಬಿಲದಲ್ಲಿ ನಡೆಯುವ ಸ್ವಚ್ಚತಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನೆಮನೆ ಬೇಟಿ ನೀಡಿ ಮನವಿ ಮಾಡಲಾಯಿತು. ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಬಂಬಿಲ ಕ್ರಾಸ್ನಿಂದ ಗೌರಿ ಹೊಳೆಯ ತನಕದ ರಸ್ತೆಗಳ ರಿಪೇರಿ, ಹೊಂಡಗಳಿಗೆ ಕಾಂಕ್ರೀಟಿಕರಣ, ಪೊದರು ಸವರುವುದು ಮತ್ತು

ಸವಣೂರು: ಸ್ವಚ್ಛತಾ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ► ಮನೆಮನೆಗೆ ಬೇಟಿ ನೀಡಿ ಮನವಿ Read More »

ಕರಾವಳಿ
Scroll to Top