ಕರಾವಳಿ

ಅಖಿಲ ಭಾರತ ಗೃಹರಕ್ಷಕದಳ ದಿನಾಚರಣೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.14    ಜಿಲ್ಲಾ ಗೃಹರಕ್ಷಕದಳ ದ.ಕ ಜಿಲ್ಲೆ, ಮಂಗಳೂರು ಇವರ ವತಿಯಿಂದ ಅಖಿಲ ಭಾರತ ಗೃಹರಕ್ಷಕದಳ ದಿನಾಚರಣೆ ಡಿಸೆಂಬರ್ 15 ರಂದು ಬೆಳಿಗ್ಗೆ 11.30 ಗಂಟೆಗೆ ಜಿಲ್ಲಾ ಗೃಹರಕ್ಷಕದಳ ಆವರಣ, ಮೇರಿಹಿಲ್‍ನಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾಧಿಕಾರಿ ಸಿಂಧು ರೂಪೇಶ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಪೊಲೀಸ್ ಉಪ ಆಯುಕ್ತರು, ಕಾನೂನು ಮತ್ತು ಸುವ್ಯವಸ್ಥೆ ಮಂಗಳೂರು ನಗರದವರು ಉಪಸ್ಥಿತರಿರುವರು.

ಅಖಿಲ ಭಾರತ ಗೃಹರಕ್ಷಕದಳ ದಿನಾಚರಣೆ Read More »

ಕರಾವಳಿ

ಮಕ್ಕಳು ನಿರಾಳವಾಗಿ ಬಾಳಬೇಕು – ಗಾಯತ್ರಿ ಎನ್ ನಾಯಕ್

(ನ್ಯೂಸ್ ಕಡಬ) newskadaba.com, ಪುತ್ತೂರು, ಡಿ.14  ಮಕ್ಕಳ ಹಕ್ಕುಗಳ ರಕ್ಷಣೆಗೆ, ಸಮಾಜದ ಹೊಣೆ ಹಾಗೂ ಸರ್ಕಾರದ ಪರಿಣಾಮಕಾರಿ ಕಾನೂನಿನ ಅಗತ್ಯವಿದೆ. ಮಕ್ಕಳು ಯಾವುದೇ ತೊಂದರೆಗಳಿಗೆ ಒಳಪಡದಂತೆ ಆನಂದದಿಂದ, ಯಾವುದೇ ಭಯ, ಕೊರತೆ ಇಲ್ಲದೇ ಬದುಕಿ ಬೆಳೆಯಬೇಕು ಎಂದು ಮಂಗಳೂರು ಮಹಾನಗರಪಾಲಿಕೆ ಉಪ ಆಯುಕ್ತೆ ಗಾಯತ್ರಿ ಎನ್ ನಾಯಕ್ ಹೇಳಿದರು.ಶುಕ್ರವಾರ ಮಿನಿವಿಧಾನಸೌಧ ಆವರಣದಲ್ಲಿರುವ ಎನ್.ಜಿ.ಒ ಹಾಲ್‍ನಲ್ಲಿ ನಡೆದ ಮಂಗಳೂರು ಮಹಾನಗರಪಾಲಿಕೆ ನೇತೃತ್ವದಲ್ಲಿ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಸಹಯೋಗದಲ್ಲಿ ಆಯೋಜಿಸಲಾದ ಅಧಿಕಾರಿಗಳ ಜತೆಗಿನ ಮಕ್ಕಳ ಮುಖಾಮುಖಿ ಸಂವಾದವನ್ನು ಹೂವಿನ

ಮಕ್ಕಳು ನಿರಾಳವಾಗಿ ಬಾಳಬೇಕು – ಗಾಯತ್ರಿ ಎನ್ ನಾಯಕ್ Read More »

ಕರಾವಳಿ

ಕಾಸರಗೋಡು: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ; ಆರೋಪಿಗೆ ಹತ್ತು ವರ್ಷ ಕಠಿಣ ಸಜೆ

ಕಾಸರಗೋಡು, ಡಿ.13: ಹದಿನಾಲ್ಕರ ಹರೆಯದ ಅಪ್ರಾಪ್ತೆ ಬಾಲಕಿಗೆ ವಿವಾಹ ಭರವಸೆ ನೀಡಿ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗೆ ಪೊಕ್ಸೊ  ಕಾಯ್ದೆಯಂತೆ ಹತ್ತು ವರ್ಷ ಕಠಿಣ ಸಜೆ ಮತ್ತು 25 ಸಾವಿರ ರೂ. ದಂಡ ವಿಧಿಸಿ ಕಾಸರಗೋಡು ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ತೀರ್ಫು ನೀಡಿದೆ.   ಬಂದ್ಯೋಡು ಕುಬಣೂರಿನ ಯಶವಂತ ಯಾನೆ ಅಪ್ಪು (35) ಶಿಕ್ಷೆಗೊಳಗಾದ ಆರೋಪಿ. ಈತ 2014 ರ ಡಿಸಂಬರ್ ನಿಂದ 2015 ರ ಜನವರಿ 19ರ ತನಕ ಹಲವು ದಿನಗಳ

ಕಾಸರಗೋಡು: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ; ಆರೋಪಿಗೆ ಹತ್ತು ವರ್ಷ ಕಠಿಣ ಸಜೆ Read More »

ಕರಾವಳಿ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ : ಪ್ರತಿನಿಧಿ  ನೋಂದಣಿ ಆರಂಭ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.14   85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಫೆಬ್ರವರಿ 5, 6 ಮತ್ತು 7 ರಂದು ಕಲಬುರಗಿಯಲ್ಲಿ ನಡೆಯಲಿದೆ. ಈ ನುಡಿ ಜಾತ್ರೆಯಲ್ಲಿ ಭಾಗವಹಿಸಲು ಇಚ್ಛಿಸುವ ಅಭಿಮಾನಿಗಳು ಪ್ರತಿನಿಧಿಯಾಗಿ ತಮ್ಮ ಹೆಸರುಗಳನ್ನು ಆಯಾಯಾ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಲ್ಲಿ ಅಥವಾ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ರೂ.250 ಪ್ರತಿನಿಧಿ ಶುಲ್ಕ ನೀಡಿ ಡಿಸೆಂಬರ್ 12 ರಿಂದ ಜನವರಿ 14 ರೊಳಗೆ ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದೆ. ಅಖಿಲ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ : ಪ್ರತಿನಿಧಿ  ನೋಂದಣಿ ಆರಂಭ Read More »

ಕರಾವಳಿ

ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕರಾಗಿ ಉಸ್ಮಾನ್ ಆಯ್ಕೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.14   ದ.ಕ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾಗಿ ಉಸ್ಮಾನ್ .ವಿ ನೇಮಕಗೊಂಡಿದ್ದಾರೆ. ಇಲಾಖೆಯಲ್ಲಿ ಹಿರಿಯ ಸಹಾಯಕ ನಿರ್ದೇಶಕರಾಗಿದ್ದ ಉಸ್ಮಾನ್ ಅವರು ಇದುವರೆಗೆ ಉಪನಿರ್ದೇಶಕ ಹುದ್ದೆಯ ಪ್ರಭಾರದಲ್ಲಿದ್ದು, ಇದೀಗ ಅವರಿಗೆ ಬಡ್ತಿ ನೀಡಿ ಪೂರ್ಣಕಾಲಿಕವಾಗಿ ಮಂಗಳೂರಿಗೆ ನೇಮಿಸಲಾಗಿದೆ. ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ಹಾಗೂ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಯಾಗಿಯೂ ಅವರು ಸೇವೆ ಸಲ್ಲಿಸಿದ್ದರು.

ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕರಾಗಿ ಉಸ್ಮಾನ್ ಆಯ್ಕೆ Read More »

ಕರಾವಳಿ

ಮಂಗಳೂರು ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡ ಶ್ರೀ ಕೆ. ರಮೇಶ್ ಗೆ ಅಭಿನಂದನೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.14   ಶಕ್ತಿನಗರದ ಶಕ್ತಿ ಶಿಕ್ಷಣ ಸಂಸ್ಥೆಯಲ್ಲಿ ಪ್ರಧಾನ ಸಲಹೆಗಾರರಾಗಿರುವ ಕೆ ರಮೇಶ್‍ ಇವರನ್ನು ಕರ್ನಾಟಕ ಸರಕಾರ ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರನ್ನಾಗಿ ಆಯ್ಕೆ ಮಾಡಿದ ಸಂದರ್ಭದಲ್ಲಿ ಅವರನ್ನು ಅಭಿನಂದಿಸಲಾಯಿತು. ಶಕ್ತಿ ಪಿ.ಯುಕಾಲೇಜು, ಶಕ್ತಿ ವಸತಿ ಶಾಲೆ, ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆಯ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ಶಕ್ತಿ ಎಜ್ಯುಕೇಶನ್‍ ಟ್ರಸ್ಟ್ ನ ಸದಸ್ಯರು ಈ ಕಾರ್ಯಕ್ರಮವನ್ನು ಜಂಟಿಯಾಗಿ ಹಮ್ಮಿಕೊಂಡಿದ್ದರು. ಶಕ್ತಿ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್‍ ಅಭಿನಂದನೆಯ

ಮಂಗಳೂರು ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡ ಶ್ರೀ ಕೆ. ರಮೇಶ್ ಗೆ ಅಭಿನಂದನೆ Read More »

ಕರಾವಳಿ

ಜಾನುವಾರು ಕಳವು ಆರೋಪ: ಇಬ್ಬರ ಬಂಧನ

ಬಂಟ್ವಾಳ, ಡಿ.14: ಜಾನುವಾರುಗಳ ಕಳವು ಪ್ರಕರಣದ ಆರೋಪದ ಮೇರೆಗೆ ಪೊಲೀಸರು ವಾಹನ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಂಧಿತ ಆರೋಪಿಗಳನ್ನು  ಬೋಳಂತೂರು ಗ್ರಾಮದ ನಿವಾಸಿ ನಝಾದುದ್ದೀನ್ ಹಾಗೂ ಅರ್ಕುಳ ಗ್ರಾಮದ ಅಬ್ದುಲ್ ಸಲಾಂ ಎಂದು ಗುರುತಿಸಲಾಗಿದೆ. ಅವರಿಂದ ಕಾರು, ದನವೊಂದನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ನ. 28ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಜೀಪನಡುವಿನಲ್ಲಿ ಸಜೀಪದಿಂದ ಕಂಚಿನಡ್ಕಕ್ಕೆ ತೆರಳುವ ರಸ್ತೆಯಲ್ಲಿ ದನಗಳ ಕಳವಾಗಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಜಾನುವಾರು ಕಳವು ಆರೋಪ: ಇಬ್ಬರ ಬಂಧನ Read More »

ಕರಾವಳಿ

ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ತಂದೆಯಿಂದ ಅತ್ಯಾಚಾರ ಪ್ರಕರಣ: ಆರೋಪ ಸಾಬೀತು, ಶಿಕ್ಷೆ ಕಾಯ್ದಿರಿಸಿದ ಕೋಟ್೯

ಮಂಗಳೂರು, ಡಿ.14: ತನ್ನ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ತಂದೆಯೇ ನಿರಂತರ ಅತ್ಯಾಚಾರ ಮಾಡಿ ಆಕೆ ಗರ್ಭಿಣಿಯಾದ ಪ್ರಕರಣವು ಮಂಗಳೂರಿನ 2 ನೇ ಹೆಚ್ಚುವರಿ ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿದೆ.   ಉತ್ತರ ಭಾರತ ಮೂಲದ ನಿವಾಸಿ, ಪ್ರಸ್ತುತ ನಗರದಲ್ಲಿ ವಾಸವಾಗಿರುವ ಕಿಶೋರ್‌ ಭಯ್ಯಾ (36) ತನ್ನ 13 ವರ್ಷದ ಪುತ್ರಿಯ ಮೇಲೆ ಅತ್ಯಾಚಾರ ಎಸಗಿದ್ದ. 2016ರಲ್ಲಿ ಕಿಶೋರ್‌ ಭಯ್ಯಾನ ಪತ್ನಿ ಹೆರಿಗೆಗೆಂದು ಆಸ್ಪತ್ರಗೆ ದಾಖಲಾಗಿದ್ದ ಸಂದರ್ಭದಲ್ಲಿ ಕಿಶೋರ್‌ ಭಯ್ಯಾ ತನ್ನ ಪುತ್ರಿಯನ್ನು ಅತ್ಯಚಾರ

ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ತಂದೆಯಿಂದ ಅತ್ಯಾಚಾರ ಪ್ರಕರಣ: ಆರೋಪ ಸಾಬೀತು, ಶಿಕ್ಷೆ ಕಾಯ್ದಿರಿಸಿದ ಕೋಟ್೯ Read More »

ಕರಾವಳಿ

ಕಡಬ ತಾಲೂಕು ಸಮಸ್ತ ಸುನ್ನಿ ಮಹಲ್ಲಾ ಪೆಡರೇಶನ್ ರೂಪೀಕರಣ ಸಮಿತಿ ರಚನೆ

(ನ್ಯೂಸ್ ಕಡಬ) newskadaba.com, ಕಡಬ, ಡಿ.14   ನೂತನ ಕಡಬ ತಾಲೂಕು ಸಮಸ್ತ ಸುನ್ನೀ ಮಹಲ್ ಪೆಡರೇಶನ್ ಸಮಿತಿ ರಚಿಸಿ ಡಿ 13ರಂದು ಪದಾಧಿಕಾರಿಗಳನ್ನು ಹಾಗು ಕಾರ್ಯಕಾರಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಮಂಗಳೂರು ಖಾಝೀ ತ್ವಾಖಾ ಅಹಮ್ಮದ್ ಮುಸ್ಲಿಯಾರ್ ನೂತನ ಸಮತಿಯನ್ನು ರಚಿಸಿ ಉತ್ತಮ ರೀತಿಯಲ್ಲಿ ಕಾರ್ಯಾಚರಿಸುವಂತೆ ಆಶಿರ್ವದಿಸಿದರು. ಕಡಬ ರಹಮ್ಮಾನಿಯ ಟೌನ್ ಜುಮ್ಮಾ ಮಸೀದಿಯ ಮುದರ್ರಿಸ್ ಹಾಜೀ ಪಿ.ಎಮ್ ಇಬ್ರಾಹಿಂ ದಾರಿಮೀ ಉದ್ಘಾಟಿಸಿದರು. ಅಡ್ ರೆಂಜಿಲಾಡಿ ಹುಸೈನ್ ದಾರಿಮಿ ಮಾತನಾಡಿ ಸಂಘಟಾತ್ಮಕವಾಗಿ ದೀನೀ ಪ್ರವರ್ತಣೆ ಗೈವ ಮೂಲಕ

ಕಡಬ ತಾಲೂಕು ಸಮಸ್ತ ಸುನ್ನಿ ಮಹಲ್ಲಾ ಪೆಡರೇಶನ್ ರೂಪೀಕರಣ ಸಮಿತಿ ರಚನೆ Read More »

ಕರಾವಳಿ

ಶಿಬಾಜೆ: ಶಾಲಾ ಬಾವಿಯ ನೀರಿಗೆ ವಿಷ ಬೆರೆಸಿದ ಪ್ರಕರಣ ➤ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ. ಡಿ.13. ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಪೆರ್ಲ ಶಾಲೆಯ ಮಕ್ಕಳು ಕುಡಿಯುವ ಬಾವಿಯ ನೀರಿಗೆ ವಿಷ ಬೆರೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ತನಕ ಆರೋಪಿಗಳನ್ನು ಬಂಧಿಸದ ಹಿನ್ನೆಲೆಯಲ್ಲಿ ಮಕ್ಕಳ ಪೋಷಕರು ಹಾಗೂ ಮಕ್ಕಳು ಶಾಲಾ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಿದರು. ಡಿಸೆಂಬರ್ 2 ರಂದು ಈ ಘಟನೆ ನಡೆದಿದ್ದು, ಬೆಳಗ್ಗೆ ಶಾಲೆಗೆ ಬಂದ ಮಕ್ಕಳು ಶಾಲೆಯ ಮುಂಭಾಗದಲ್ಲಿರುವ ಬಾವಿಯಿಂದ ನೀರನ್ನು ಕುಡಿದಿದ್ದರು. ಇದರಲ್ಲಿ ಸುಮಾರು ಎಂಟು ವಿದ್ಯಾರ್ಥಿಗಳು ತಕ್ಷಣ ಅಸ್ವಸ್ಥರಾಗಿದ್ದು, ಇವರ

ಶಿಬಾಜೆ: ಶಾಲಾ ಬಾವಿಯ ನೀರಿಗೆ ವಿಷ ಬೆರೆಸಿದ ಪ್ರಕರಣ ➤ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ Read More »

ಕರಾವಳಿ
Scroll to Top