ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕರಾಗಿ ಉಸ್ಮಾನ್ ಆಯ್ಕೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.14   ದ.ಕ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾಗಿ ಉಸ್ಮಾನ್ .ವಿ ನೇಮಕಗೊಂಡಿದ್ದಾರೆ.

ಇಲಾಖೆಯಲ್ಲಿ ಹಿರಿಯ ಸಹಾಯಕ ನಿರ್ದೇಶಕರಾಗಿದ್ದ ಉಸ್ಮಾನ್ ಅವರು ಇದುವರೆಗೆ ಉಪನಿರ್ದೇಶಕ ಹುದ್ದೆಯ ಪ್ರಭಾರದಲ್ಲಿದ್ದು, ಇದೀಗ ಅವರಿಗೆ ಬಡ್ತಿ ನೀಡಿ ಪೂರ್ಣಕಾಲಿಕವಾಗಿ ಮಂಗಳೂರಿಗೆ ನೇಮಿಸಲಾಗಿದೆ. ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ಹಾಗೂ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಯಾಗಿಯೂ ಅವರು ಸೇವೆ ಸಲ್ಲಿಸಿದ್ದರು.

Scroll to Top