ಕರಾವಳಿ

ಚಿಕ್ಕಮ್ಮನ ಮದುವೆಗೆಂದು ಬಂದಿದ್ದ ಪುಟ್ಟ ಮಗು ಕೆರೆಗೆ ಬಿದ್ದು ಮೃತ್ಯು ➤ ಮದುವೆ ಮನೆಯಲ್ಲಿ ಆವರಿಸಿದ ಸೂತಕದ ಛಾಯೆ

(ನ್ಯೂಸ್ ಕಡಬ) newskadaba.com ಕಡಬ, ಡಿ.13. ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಮಗುವೊಂದು ಕೆರೆಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಕಡಬ ತಾಲೂಕಿನ ಆಲಂಕಾರು ಗ್ರಾಮದ ನಗ್ರಿ ಎಂಬಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ. ಮೃತ ಮಗುವನ್ನು ಪುತ್ತೂರು ತಾಲೂಕು ಆರ್ಲಪದವು ನಿವಾಸಿ ಗುರುರಾಜ್ ಹಾಗೂ ಗೀತಾ ದಂಪತಿಗಳ ಪುತ್ರಿ ಚಿಂತನಾ(3ವ) ಎಂದು ಗುರುತಿಸಲಾಗಿದೆ. ಮಗುವಿನ ತಾಯಿಯ ಸಹೋದರಿಯ ಮದುವೆಯು ಗುರುವಾರದಂದು ಆಲಂಕಾರು ಗ್ರಾಮದ ನಗ್ರಿಯಲ್ಲಿ ನಡೆದಿತ್ತು. ಮದುವೆ ಸಮಾರಂಭದಲ್ಲಿ ಕುಟುಂಬ ಸಮೇತರಾಗಿ ಗುರುರಾಜ್ ದಂಪತಿಗಳು ಆಗಮಿಸಿದ್ದರು. ಶನಿವಾರ ನಗ್ರಿಯಲ್ಲಿ […]

ಚಿಕ್ಕಮ್ಮನ ಮದುವೆಗೆಂದು ಬಂದಿದ್ದ ಪುಟ್ಟ ಮಗು ಕೆರೆಗೆ ಬಿದ್ದು ಮೃತ್ಯು ➤ ಮದುವೆ ಮನೆಯಲ್ಲಿ ಆವರಿಸಿದ ಸೂತಕದ ಛಾಯೆ Read More »

ಕರಾವಳಿ

ವೀಡಿಯೋ ನ್ಯೂಸ್ ➤ ಇಂದಿನ ಪ್ರಮುಖ ಸುದ್ದಿಗಳು (ಡಿಸೆಂಬರ್ 13)

➤➤ ವೀಡಿಯೋ ನ್ಯೂಸ್ ➤ ಇಂದಿನ ಪ್ರಮುಖ ಸುದ್ದಿಗಳು (ಡಿಸೆಂಬರ್ 13) ವೀಡಿಯೋ ಗಾಗಿ??ಕ್ಲಿಕ್ ಮಾಡಿ

ವೀಡಿಯೋ ನ್ಯೂಸ್ ➤ ಇಂದಿನ ಪ್ರಮುಖ ಸುದ್ದಿಗಳು (ಡಿಸೆಂಬರ್ 13) Read More »

ಕರಾವಳಿ

ಕಿಡ್ನಾಪ್: ಮಧ್ಯ ಪ್ರದೇಶದ ಬಾಲಕಿಯರಿಬ್ಬರು ಉಪ್ಪಿನಂಗಡಿಯಲ್ಲಿ ಪತ್ತೆ

ಉಪ್ಪಿನಂಗಡಿ, ಡಿ.13: ಅಪ್ರಾಪ್ತ ವಯಸ್ಸಿನ ಬಾಲಕಿಯರನ್ನು ಅಪಹರಣ ಮಾಡಿದ ಆರೋಪದಲ್ಲಿ ಯುವಕರಿಬ್ಬರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಮಧ್ಯಪ್ರದೇಶದ ಬಸಂತ್ ಸಿರ್ಸಾಗೆ(21) ಹಾಗೂ 17 ಹರೆಯದ ಯುವಕ (ಹೆಸರು ತಿಳಿದು ಬಂದಿಲ್ಲ)ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇವರು ತಮ್ಮ ಊರಿನ ಅಪ್ರಾಪ್ತ ವಯಸ್ಸಿನ ಇಬ್ಬರು ಬಾಲಕಿಯರನ್ನು ಅಪಹರಿಸಿ ಕಾರ್ಮಿಕರಾಗಿ ದುಡಿಸುತ್ತಿದ್ದರೆನ್ನಲಾಗಿದೆ. ಅಲ್ಲದೆ ತನ್ನ ಸ್ನೇಹಿತರ ಬಾಡಿಗೆ ಮನೆಯಲ್ಲಿ ಬಾಲಕಿಯರಿಗೆ ವಾಸಿಸಲು ಅವಕಾಶ ಕಲ್ಪಿಸಿದ್ದರು. ಪ್ರಕರಣದ ಜಾಡು ಹಿಡಿದಿದ್ದ ಮಧ್ಯಪ್ರದೇಶದ ಪೊಲೀಸರು ತಮಗೆ ಸಿಕ್ಕಿರುವ ಮಾಹಿತಿ

ಕಿಡ್ನಾಪ್: ಮಧ್ಯ ಪ್ರದೇಶದ ಬಾಲಕಿಯರಿಬ್ಬರು ಉಪ್ಪಿನಂಗಡಿಯಲ್ಲಿ ಪತ್ತೆ Read More »

ಕರಾವಳಿ

ನಿಲ್ಲಿಸಿದ್ದ ಕಾರಿನ ಗಾಜು ಒಡೆದು 15 ಲಕ್ಷ ಎಗರಿಸಿದ ಕಳ್ಳರು ➤ ಸಿಸಿ ಕ್ಯಾಮರಾದಲ್ಲಿ ಕಳ್ಳತನದ ದೃಶ್ಯ ಸೆರೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.13. ಬ್ಯಾಂಕ್ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಕಾರಿನ ಗಾಜು ಒಡೆದು 15 ಲಕ್ಷ ಹಣ ಎಗರಿಸಿ ಪರಾರಿಯಾದ ಘಟನೆ ಶುಕ್ರವಾರದಂದು ಮಂಗಳೂರಿನಲ್ಲಿ ನಡೆದಿದೆ. ನಗರದ ಚಿಲಿಂಬಿ ಸೌತ್ ಇಂಡಿಯನ್ ಬ್ಯಾಂಕ್ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಕಪ್ಪು ಬಣ್ಣದ ಹುಂಡೈ ಐ20 ಕಾರಿನಲ್ಲಿ 15 ಲಕ್ಷ ರೂ. ಹಣ ಇರಿಸಲಾಗಿತ್ತು ಎನ್ನಲಾಗಿದೆ. ಬೈಕಿನಲ್ಲಿ ಹೆಲ್ಮೆಟ್ ಧರಿಸಿ ಆಗಮಿಸಿದ ಇಬ್ಬರು ಆಗಂತುಕರು ಕಾರಿನ ಗಾಜು ಪುಡಿಗೈದು ದರೋಡೆ ನಡೆಸಿದ್ದಾರೆ. ಈ ಕೃತ್ಯ ಸಿ.ಸಿ. ಟಿವಿಯಲ್ಲಿ ಸೆರೆಯಾಗಿದ್ದು, ಬರ್ಕೆ

ನಿಲ್ಲಿಸಿದ್ದ ಕಾರಿನ ಗಾಜು ಒಡೆದು 15 ಲಕ್ಷ ಎಗರಿಸಿದ ಕಳ್ಳರು ➤ ಸಿಸಿ ಕ್ಯಾಮರಾದಲ್ಲಿ ಕಳ್ಳತನದ ದೃಶ್ಯ ಸೆರೆ Read More »

ಕರಾವಳಿ

ಸುನ್ನೀ ಆದರ್ಶ ಸಮ್ಮೇಳನದ ಪೋಸ್ಟರ್ ಬಿಡುಗಡೆ

(ನ್ಯೂಸ್ ಕಡಬ) newskadaba.com, ಆತೂರು, ಡಿ.13   ಕರ್ನಾಟಕ ರಾಜ್ಯ ಫೈಝೀಸ್ ಅಸೋಸಿಯೇಷನ್ ಇದರ ಆಶ್ರಯದಲ್ಲಿ ಮಡಿಕೇರಿ ಗಾಂಧಿ ಮೈದಾನ ದಲ್ಲಿ ಡಿಸೆಂಬರ್ 13 ರಂದು ಬೃಹತ್ ಸುನ್ನೀ ಆದರ್ಶ ಸಮ್ಮೇಳನದ ಪೋಸ್ಟರ್ ಬಿಡುಗಡೆಯನ್ನು ಆತೂರು ಮದ್ರಸ ಮೇನೇಜ್ಮೆಂಟ್ ಕೋಶಾಧಿಕಾರಿ ಮತ್ತು ಮುಹ್ಯುದ್ದೀನ್ ಜುಮಾ ಮಸೀದಿ ಆತೂರು ಅಧ್ಯಕ್ಷರಾದ ಹೈದರ್ ಕಲಾಯಿ ಜುಮಾ ನಮಾಜ್ ನಂತರ ಆತೂರು ಮುಹ್ಯುದ್ದೀನ್ ಜುಮಾ ಮಸೀದಿಯಲ್ಲಿ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಮುಹ್ಯುದ್ದೀನ್ ಜುಮಾ ಮಸೀದಿ ಆತೂರು ಇದರ ಖತೀಬರು ಅಬೂಹಫೀಝ ಕೆ.ಎಂ.ಎಚ್.ಫಾಝಿಲ್ ಹನೀಫಿ,

ಸುನ್ನೀ ಆದರ್ಶ ಸಮ್ಮೇಳನದ ಪೋಸ್ಟರ್ ಬಿಡುಗಡೆ Read More »

ಕರಾವಳಿ

ಮಂಗಳೂರು: ಚಲಿಸುತ್ತಿದ್ದ ಕಾರಿನಲ್ಲಿ ಪ್ರಜ್ಞೆ ತಪ್ಪಿದ ಯುವತಿ ➤ ಮುಂದೇನಾಯ್ತು ಗೊತ್ತೇ..?

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.13. ಚಲಿಸುತ್ತಿದ್ದ ಕಾರಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಯುವತಿಯೊರ್ವಳು ಪತ್ತೆಯಾದ ಘಟನೆ ಮಂಗಳೂರು ಹೊರ ವಲಯದ ಸುರತ್ಕಲ್ ಸಮೀಪದ ಕುಳಾಯಿ ಎಂಬಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ಯುವಕನೋರ್ವ ಕಾರನ್ನು ಚಲಾಯಿಸುತ್ತಿದ್ದು, ಕಾರಿನಲ್ಲಿ ಯುವತಿಯೊರ್ವಳು ಪ್ರಜ್ಞಾ ಹೀನ ಸ್ಥಿತಿಯಲ್ಲಿರುವುದನ್ನು ಬೇರೆ ವಾಹನದಲ್ಲಿ ತೆರಳುತ್ತಿರುವವರು ಗಮನಿಸಿದ್ದಾರೆ. ಅನುಮಾನಗೊಂಡು ವಾಹನ ಸವಾರರು ಕಾರನ್ನು ನಿಲ್ಲಿಸುವಂತೆ ಸೂಚಿಸಿದರೂ, ಕಾರನ್ನು ಚಲಾಯಿಸುತ್ತಿದ್ದ ಯುವಕ ಕಾರು ನಿಲ್ಲಿಸದೆ ಮುಂದಕ್ಕೆ ಹೋಗಿದ್ದಾನೆ. ಸ್ಥಳೀಯರು ಕಾರನ್ನು ಬೆನ್ನಟ್ಟಿ ತಡೆದು ಪ್ರಶ್ನಿಸಿದಾಗ ಯುವಕ ಪರಾರಿಯಾಗಿದ್ದಾನೆ. ಸ್ಥಳೀಯರು

ಮಂಗಳೂರು: ಚಲಿಸುತ್ತಿದ್ದ ಕಾರಿನಲ್ಲಿ ಪ್ರಜ್ಞೆ ತಪ್ಪಿದ ಯುವತಿ ➤ ಮುಂದೇನಾಯ್ತು ಗೊತ್ತೇ..? Read More »

ಕರಾವಳಿ

ಸಂಜೆ ಡಿಪ್ಲೋಮಾ ಪ್ರವೇಶ- ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.13  2019-20ನೇ ಸಾಲಿಗೆ 2 ವರ್ಷಗಳ ಐಟಿಐ/ ದ್ವಿತೀಯ ಪಿ.ಯು.ಸಿ (ವಿಜ್ಞಾನ)/ ದ್ವಿತೀಯ ಪಿಯುಸಿ (ತಾಂತ್ರಿಕ ವಿಷಯಗಳು) ಉತ್ತೀರ್ಣರಾಗಿರುವ ಅರ್ಹ ಅಭ್ಯರ್ಥಿಗಳಿಗೆ 2ನೇ ವರ್ಷ/3ನೇ ಸೆಮಿಸ್ಟರ್ ಡಿಪ್ಲೋಮಾಗೆ ಲ್ಯಾಟರಲ್ ಎಂಟ್ರಿ ಸ್ಕೀಂ  ಮುಖಾಂತರ ಸಂಜೆ ಡಿಪ್ಲೋಮಾಗೆ ಎಲೆಕ್ಟ್ರಿಕಲ್ ಎಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ಗೆ ಪ್ರವೇಶ ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ಡಿಸೆಂಬರ್ 28 ರ ಒಳಗೆ ಅರ್ಜಿಯನ್ನು ತಾಂತ್ರಿಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‍ಸೈಟ್ ನಿಂದ ಡೌನ್ ಲೋಡ್

ಸಂಜೆ ಡಿಪ್ಲೋಮಾ ಪ್ರವೇಶ- ಅರ್ಜಿ ಆಹ್ವಾನ Read More »

ಕರಾವಳಿ

ಸರಕಾರಿ ನಿವೃತ್ತ ಗ್ರೂಪ್ ‘ಡಿ’ ನೌಕರರ ಸಭೆ

  (ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.13   ಸರಕಾರಿ ನಿವೃತ್ತ ಗ್ರೂಫ್ ‘ಡಿ’ ನೌಕರರ ಸಭೆ ಹಾಗೂ ಸನ್ಮಾನ ಕಾರ್ಯಕ್ರಮ ಡಿಸೆಂಬರ್ 14 ರಂದು ಬೆಳಿಗ್ಗೆ 10.30 ಗಂಟೆಗೆ ಸರಕಾರಿ ನೌಕರರ ಸಂಘದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಡಿ ಗ್ರೂಪ್ ಸಂಘದ ಜಿಲ್ಲಾಧ್ಯಕ್ಷೆ ಶೋಭಾ ಶೆಟ್ಟಿ, ದ.ಕ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಪಿ.ಕೆ ಕೃಷ್ಣ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಎಲ್ಲಾ ನಿವೃತ್ತ ಡಿ ಗ್ರೂಪ್ ನೌಕರರು ಸಭೆಯಲ್ಲಿ ಭಾಗವಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಸರಕಾರಿ ನಿವೃತ್ತ ಗ್ರೂಪ್ ‘ಡಿ’ ನೌಕರರ ಸಭೆ Read More »

ಕರಾವಳಿ

ಮಂಗಳೂರು ವಿ.ವಿ 38ನೇ ವಾರ್ಷಿಕ ಘಟಿಕೋತ್ಸವ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.13   ಮಂಗಳೂರು ವಿಶ್ವ ವಿದ್ಯಾನಿಲಯದ 38ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮವನ್ನು 2020ನೇ ಜನವರಿ ತಿಂಗಳಿನಲ್ಲಿ ಏರ್ಪಡಿಸಲು ಉದ್ದೇಶಿಸಲಾಗಿದೆ. ಮಂಗಳೂರು ವಿವಿ ಯ ಸಂಯೋಜಿತ, ಘಟಕ ಮತ್ತು ಸ್ವಾಯತ್ತ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ 2019ನೇ ಅಕ್ಟೋಬರ್ 31 ರ ಒಳಗೆ ವಿವಿಧ ಪದವಿಗಳನ್ನು ಪಡೆಯಲು ಅರ್ಹರಾದ ಅಭ್ಯರ್ಥಿಗಳು ಈ ಘಟಿಕೋತ್ಸವದಂದು ಪದವಿ ಪಡೆಯಲು ಅರ್ಹರಾಗಿರುತ್ತಾರೆ. ಎಲ್ಲಾ ಸ್ನಾತ್ತಕೋತ್ತರ ಪದವಿ ಪಡೆಯಲು ಅರ್ಹರಾದ ಅಭ್ಯರ್ಥಿಗಳು, ಡಾಕ್ಟರೇಟ್ ಪದವಿ ಪಡೆಯಲು ಅರ್ಹರಾದ ಅಭ್ಯರ್ಥಿಗಳು, ಸ್ನಾತ್ತಕೋತ್ತರ ಮತ್ತು

ಮಂಗಳೂರು ವಿ.ವಿ 38ನೇ ವಾರ್ಷಿಕ ಘಟಿಕೋತ್ಸವ Read More »

ಕರಾವಳಿ

ಉಡುಪಿ: ಯುವ ಉದ್ಯಮಿ ಆತ್ಮಹತ್ಯೆ

ಉಡುಪಿ, ಡಿ.13: ಯುವ ಉದ್ಯಮಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ  ನಡೆದಿದೆ. ಆತ್ಯಹತ್ಯೆ ಮಾಡಿಕೊಂಡವರನ್ನು ಬೀಡಿನಗುಡ್ಡೆಯ ಹಂಸರಾಜ್ ನಾಯಕ್(35) ಎಂದು ಗುರುತಿಸಲಾಗಿದೆ. ಇವರು ಮಣಿಪಾಲದ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಪೈಂಟ್ ಫ್ಯಾಕ್ಟರಿಯ ಪಾಲುದಾರರಾಗಿದ್ದು, ಇದರಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟಿನಿಂದ ಖಿನ್ನತೆಗೆ ಒಳಗಾಗಿ ಮನೆಯಲ್ಲಿ ಯಾರು ಇಲ್ಲದ ವೇಳೆ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ: ಯುವ ಉದ್ಯಮಿ ಆತ್ಮಹತ್ಯೆ Read More »

ಕರಾವಳಿ
Scroll to Top