ಕರಾವಳಿ

ನೆಲ್ಯಾಡಿ: ಟಿಪ್ಪರ್ ಮೇಲೆ ಉರುಳಿ ಬಿದ್ದ ಕಂಟೇನರ್ ➤ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಚಾರದಲ್ಲಿ ತಡೆ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಮಾ.19. ಕಂಟೇನರ್ ಲಾರಿಯೊಂದು ಪಲ್ಟಿಯಾಗಿ ಟಿಪ್ಪರ್ ಮೇಲೆ ಬಿದ್ದ ಪರಿಣಾಮ ಟಿಪ್ಪರ್ ಜಖಂಗೊಂಡ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಗೋಳಿತೊಟ್ಟು ಎಂಬಲ್ಲಿ ಗುರುವಾರದಂದು ಸಂಭವಿಸಿದೆ. ಬೆಂಗಳೂರಿನಿಂದ ಮಂಗಳೂರು ಕಡರಗೆ ತೆರಳುತ್ತಿದ್ದ ಕಂಟೇನರ್ ಗೋಳಿತೊಟ್ಟು ಎಂಬಲ್ಲಿ ತಲುಪಿದಾಗ ಪಲ್ಟಿಯಾಗಿದ್ದು, ಪಕ್ಕದಿಂದ ತೆರಳುತ್ತಿದ್ದ ಟಿಪ್ಪರ್ ಮೇಲೆ ಬಿದ್ದಿದೆ. ಘಟನೆಯಲ್ಲಿ ರಸ್ತೆ ಸಂಚಾರದಲ್ಲಿ ತಡೆಯುಂಟಾಗಿದ್ದು, ಬಳಿಕ ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕಾಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ನೆಲ್ಯಾಡಿ: ಟಿಪ್ಪರ್ ಮೇಲೆ ಉರುಳಿ ಬಿದ್ದ ಕಂಟೇನರ್ ➤ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಚಾರದಲ್ಲಿ ತಡೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ದುಬೈಯಿಂದ ಮಂಗಳೂರಿಗೆ ಬರುವ ಪ್ರಯಾಣಿಕರಿಗೆ ಮೂರು ವಿಧದ ತಪಾಸಣೆ: ಅಪರ ಜಿಲ್ಲಾಧಿಕಾರಿ

ಮಂಗಳೂರು, ಮಾ.18: ದುಬೈನಿಂದ ಮಂಗಳೂರಿಗೆ ಬರುವ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ 3 ವಿಧದಲ್ಲಿ ತಪಾಸಣೆಗೊಳಪಡಿಸಲು ತೀರ್ಮಾನಿಸಿದೆ ಎಂದು ಅಪರ ಜಿಲ್ಲಾಧಿಕಾರಿ ಎಂ.ಜೆ.ರೂಪಾ ತಿಳಿಸಿದ್ದಾರೆ. ಸೋಂಕು ಲಕ್ಷಣಗಳು ಹೊಂದಿರುವ 60 ವರ್ಷದೊಳಗಿನವರು ‘ಎ’ ಕೆಟಗರಿಯಾಗಿದ್ದು, ಅವರನ್ನು ವಿಮಾನ ನಿಲ್ದಾಣದಲ್ಲಿ ನಿಗದಿ ಮಾಡಲಾಗಿರುವ ಆ್ಯಂಬುಲೆನ್ಸ್ ಮೂಲಕ ವೆನ್ಲಾಕ್ ಆಸ್ಪತ್ರೆಗೆ ಕರೆ ತಂದು ಆಸ್ಪತ್ರೆಗೆ ದಾಖಲಿಸಿ ತಪಾಸಣೆ ಮಾಡಲಾಗುತ್ತದೆ. 60 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ ಸೋಂಕು ಲಕ್ಷಣ ಹೊಂದಿರುವವರನ್ನು ‘ಬಿ’ ಕೆಟಗರಿಗೊಳಪಡುತ್ತಾರೆ. ಇಎಸ್‌ಐ ಆಸ್ಪತ್ರೆಯಲ್ಲಿ ಕೊರೋನ ಸೋಂಕಿತರ ನಿಗಾ ವಹಿಸಲು 80

ದುಬೈಯಿಂದ ಮಂಗಳೂರಿಗೆ ಬರುವ ಪ್ರಯಾಣಿಕರಿಗೆ ಮೂರು ವಿಧದ ತಪಾಸಣೆ: ಅಪರ ಜಿಲ್ಲಾಧಿಕಾರಿ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಶಂಕಿತ ಕೊರೋನ ಪುತ್ತೂರಿನ ವ್ಯಕ್ತಿ ವೆನ್ಲಾಕ್ ಆಸ್ಪತ್ರೆಗೆ

ಮಂಗಳೂರು, ಮಾ.18: ಪುತ್ತೂರಿನ ವ್ಯಕ್ತಿಯೋರ್ವನಲ್ಲಿ ಕೊರೋನ ವೈರಸ್ ಇರುವ ಶಂಕೆ ಉಂಟಾಗಿದ್ದು ವ್ಯಕ್ತಿಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಶಂಕಿತ ವ್ಯಕ್ತಿಯ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಮಂಗಳವಾರ ರಾತ್ರಿಯವರೆಗೆ 456 ಜನರ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಗಿದ್ದು, 7 ಜನರ ಮೇಲೆ ನಿಗಾ ವಹಿಸಲಾಗಿದೆ. 241 ಜನರಿಗೆ ಮನೆಯಲ್ಲಿ ನಿಗಾ ಇರಿಸಲಾಗಿದೆ. ಒಟ್ಟು 14 ಜನರ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 10 ಜನರ ವರದಿ ಬಂದಿದ್ದು, ಯಾರಲ್ಲೂ ಕೊರೋನ ದೃಢಪಟ್ಟಿಲ್ಲ.

ಶಂಕಿತ ಕೊರೋನ ಪುತ್ತೂರಿನ ವ್ಯಕ್ತಿ ವೆನ್ಲಾಕ್ ಆಸ್ಪತ್ರೆಗೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಬೆಳ್ಳಾರೆ: ರಬ್ಬರ್ ಕಾರ್ಮಿಕ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಮಾ.17. ಠಾಣಾ ವ್ಯಾಪ್ತಿಯ ಸವಣೂರು ಗ್ರಾಮದ ಇಡ್ಯಾಡಿ ಎಂಬಲ್ಲಿ ರಬ್ಬರ್ ಕಾರ್ಮಿಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ರಾತ್ರಿ ನಡೆದಿದ್ದು, ಮಂಗಳವಾರ ಪ್ರಕರಣ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡ ಕಾರ್ಮಿಕನನ್ನು ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಪಾನತ್ತಿಲ ಕಬ್ಬಿನಡ್ಕ ನಿವಾಸಿ ಉಮೇಶ್ (29) ಎಂದು ಗುರುತಿಸಲಾಗಿದೆ. ಈತ ಎರಡು ತಿಂಗಳ ಹಿಂದೆ ಇಡ್ಯಾಡಿಯ ಪದವು ಎಂಬಲ್ಲಿನ ಫಾರ್ಮ್ ಒಂದರ ರಬ್ಬರ್ ತೋಟದ ಟ್ಯಾಪರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದರು. ವಿವಾಹಿತರಾಗಿದ್ದ ಮೃತರು ಮದ್ಯಸೇವನೆಯ

ಬೆಳ್ಳಾರೆ: ರಬ್ಬರ್ ಕಾರ್ಮಿಕ ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ಕಾಸರಗೋಡು: ಕೊರೋನ ಸೋಂಕು ಪತ್ತೆಯಾದ ಯುವಕನ ರೋಟ್ ಮ್ಯಾಪ್ ಬಿಡುಗಡೆ

ಕಾಸರಗೋಡು, ಮಾ.17: ನಿನ್ನೆ ಕಾಸರಗೋಡಿನಲ್ಲಿ ಕೊರೋನ ಸೋಂಕು ಪಾಸಿಟಿವ್ ಆದ ಯುವಕನ ಓಡಾಡಿದ ಸ್ಥಳದ ಬಗ್ಗೆ ಜಿಲ್ಲಾಡಳಿತ ರೂಟ್ ಮ್ಯಾಪ್ ತಯಾರಿಸಿದ್ದು, ಯುವಕ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಳಿದು ಮನೆ ತನಕ ಬಂದಿರುವ ಮಾಹಿತಿಯನ್ನು ಜಿಲ್ಲಾಡಳಿತ ಬಿಡುಗಡೆಗೊಳಿಸಿದೆ. ಮಾರ್ಚ್ 14ರಂದು ಮುಂಜಾನೆ 5:20ಕ್ಕೆ ಸೋಂಕಿತ ಯುವಕ ದುಬೈನಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದು, ಅಲ್ಲಿಂದ 7 ಗಂಟೆ ಸುಮಾರಿಗೆ ಯುವಕನನ್ನು ಕರೆದೊಯ್ಯಲೂ ಕಾಸರಗೋಡಿನಿಂದ ತೆರಳಿದ ಸಂಬಂಧಿಕರು ನಿಲ್ದಾಣಕ್ಕೆ ತಲುಪಿದ್ದಾರೆ. ಬಳಿಕ ಖಾಸಗಿ ಕಾರಿನಲ್ಲಿ ಅಲ್ಲಿಂದ

ಕಾಸರಗೋಡು: ಕೊರೋನ ಸೋಂಕು ಪತ್ತೆಯಾದ ಯುವಕನ ರೋಟ್ ಮ್ಯಾಪ್ ಬಿಡುಗಡೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಮಂಗಳೂರಿನಲ್ಲಿ ಶೀಘ್ರ ಟೆಸ್ಟಿಂಗ್ ಲ್ಯಾಬ್: ಸಚಿವ ಶ್ರೀರಾಮುಲು

ಮಂಗಳೂರು, ಮಾ.17: ಕೊರೋನ ವೈರಸ್ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಗಂಟಲಿನ ದ್ರವದ ಮಾದರಿ ಪರೀಕ್ಷೆಗಾಗಿ ಟೆಸ್ಟಿಂಗ್ ಲ್ಯಾಬ್ ತೆರೆಯಲು ಇಲಾಖೆ ನಿರ್ಧರಿಸಿದ್ದು, ಮಂಗಳೂರಿನಲ್ಲಿ ಶೀಘ್ರದಲ್ಲಿ ಲ್ಯಾಬ್ ತೆರೆಯಲಾಗುವುದು ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ. ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾಹಿತಿ ನೀಡಿದ ಅವರು, ಮಂಗಳೂರಿನಲ್ಲಿ ಕೊರೋನ ಶಂಕಿತರ ಗಂಟಲು ದ್ರವ ಪರೀಕ್ಷಾ ಲ್ಯಾಬ್ ತೆರೆಯಲು ಸರಕಾರ ಒಪ್ಪಿಗೆ ನೀಡಿದೆ. ಶೀಘ್ರದಲ್ಲೇ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಒಂದು

ಮಂಗಳೂರಿನಲ್ಲಿ ಶೀಘ್ರ ಟೆಸ್ಟಿಂಗ್ ಲ್ಯಾಬ್: ಸಚಿವ ಶ್ರೀರಾಮುಲು Read More »

ಕರಾವಳಿ

ಕಡಬದ ಬೈಸಿಕಲ್ ಪ್ರಿಯರಿಗೆ ಸಂತಸದ ಸುದ್ದಿ ➤ ಮಾರಾಟ ಮತ್ತು ರಿಪೇರಿ ಸಂಸ್ಥೆ ‘ಸಾಯಿ ಸೈಕಲ್ಸ್’ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಮಾ.16. ಸೈಕಲ್ ಪ್ರಿಯರಿಗೆ ಸಂತಸದ ಸುದ್ದಿಯೊಂದಿದ್ದು, ಪ್ರಮುಖ ಬ್ರಾಂಡ್ ಗಳ ಸೈಕಲ್ ಮಾರಾಟ ಮಳಿಗೆ ‘ಸಾಯಿ ಸೈಕಲ್ಸ್’ ಕಡಬದಲ್ಲಿ ಶನಿವಾರದಂದು ಆರಂಭಗೊಂಡಿದೆ. ಕಡಬದ ಬಜಾಜ್ ಬೈಕ್ ಶೋರೂಂ ಬಳಿಯ ಶ್ರೀಹರಿ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡ ಸಾಯಿ ಸೈಕಲ್ಸ್ ನಲ್ಲಿ ಹರ್ಕ್ಯುಲಸ್, ಬಿಎಸ್ಎ, ಅಟ್ಲಾಸ್, ಹೀರೋ, ರೋಡಿಯೋ ಮೊದಲಾದ ಬ್ರ್ಯಾಂಡ್‌ಗಳ ಮಕ್ಕಳಿಂದ ಹಿಡಿದು ಮಹಿಳೆಯರು, ಪುರುಷರು ಬಳಸುಬಹುದಾದ ವಿವಿಧ ಮಾಡೆಲ್ ಗಳ ಸೈಕಲ್ ಗಳು, ಮಕ್ಕಳ ಟ್ರೈಸಿಕಲ್, ಬೇಬಿ ವಾಕರ್ ಮೊದಲಾದವು ಒಂದೇ

ಕಡಬದ ಬೈಸಿಕಲ್ ಪ್ರಿಯರಿಗೆ ಸಂತಸದ ಸುದ್ದಿ ➤ ಮಾರಾಟ ಮತ್ತು ರಿಪೇರಿ ಸಂಸ್ಥೆ ‘ಸಾಯಿ ಸೈಕಲ್ಸ್’ ಶುಭಾರಂಭ Read More »

ಕರಾವಳಿ, ತಂತ್ರಜ್ಞಾನ, ಲೈಫ್‍ಸ್ಟೈಲ್

ಕಡಬ: ರೈಲಿನಡಿಗೆ ಬಿದ್ದು ಓರ್ವ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಮಾ.16. ರೈಲಿನಡಿಗೆ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ವ್ಯಕ್ತಿಯೋರ್ವರ ಮೃತದೇಹವು ಮಂಗಳೂರು – ಸುಬ್ರಹ್ಮಣ್ಯ ರೋಡ್ ರೈಲ್ವೇ ಮಾರ್ಗದ ಕೋರಿಯಾರ್ ಗೇಟ್ ಬಳಿ ಸೋಮವಾರದಂದು ಕಂಡುಬಂದಿದೆ. ಮೃತ‌ ವ್ಯಕ್ತಿಯನ್ನು 102ನೇ ನೆಕ್ಕಿಲಾಡಿ ಗ್ರಾಮದ ದಂಡುಗಿರಿ ನಿವಾಸಿ ಮೊಡೆಂಕಿಲ ಎಂಬವರ ಪುತ್ರ ಸುಂದರ(35) ಎಂದು ಗುರುತಿಸಲಾಗಿದೆ. ಸುಂದರ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಅಥವಾ ಆಕಸ್ಮಿಕವಾಗಿ ರೈಲಿನಡಿಗೆ ಬಿದ್ದಿದ್ದಾರಾ ಎಂದು ತನಿಖೆಯ ನಂತರ ತಿಳಿದು ಬರಬೇಕಿದೆ. ಶನಿವಾರದಂದು ಸಮೀಪದಲ್ಲಿ ಆದಿ ಮೊಗೇರ್ಕಳ ದೈವದ ನೇಮೋತ್ಸವ ನಡೆದಿದ್ದು, ಭಾನುವಾರ

ಕಡಬ: ರೈಲಿನಡಿಗೆ ಬಿದ್ದು ಓರ್ವ ಮೃತ್ಯು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ನೆಲ್ಯಾಡಿ: ಅಕ್ರಮವಾಗಿ ಮದ್ಯ, ಜಿಲೆಟಿನ್ ಕಡ್ಡಿ, ಡೀಸೆಲ್‌ ಮಾರಾಟ ➤ ಆರೋಪಿ ಹೊಟೇಲ್ ಮಾಲಕನ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಮಾ.15. ಹೋಟೆಲ್‌ವೊಂದರಲ್ಲಿ ಡೀಸೆಲ್‌, ಜಿಲೆಟಿನ್ ಕಡ್ಡಿ ಹಾಗೂ ಮದ್ಯವನ್ನು ಅಕ್ರಮವಾಗಿ ಸಂಗ್ರಹಿಸಿದ್ದಾರೆಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಕಡಬ ಪೊಲೀಸರು ಅಕ್ರಮ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿರುವ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಎಂಜಿರ ಸಮೀಪದ ಲಾವತ್ತಡ್ಕ ಎಂಬಲ್ಲಿ ಭಾನುವಾರದಂದು ನಡೆದಿದೆ. ಬಂಧಿತ ಆರೋಪಿಯನ್ನು ಲಾವತ್ತಡ್ಕದ ಜನನಿ ಹೊಟೇಲ್ ಮಾಲಕ ಸತೀಶ್ ಎಂದು ಗುರುತಿಸಲಾಗಿದೆ. ಆರೋಪಿಯು ರಾಷ್ಟ್ರೀಯ ಹೆದ್ದಾರಿ 75ರ ಲಾವತ್ತಡ್ಕದಲ್ಲಿ ಗುಂಡ್ಯ ಹೊಳೆಯ ಬದಿಯಲ್ಲಿ

ನೆಲ್ಯಾಡಿ: ಅಕ್ರಮವಾಗಿ ಮದ್ಯ, ಜಿಲೆಟಿನ್ ಕಡ್ಡಿ, ಡೀಸೆಲ್‌ ಮಾರಾಟ ➤ ಆರೋಪಿ ಹೊಟೇಲ್ ಮಾಲಕನ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ನಿಯಂತ್ರಣ ತಪ್ಪಿ ಪಲ್ಟಿಯಾದ ಲಾರಿ; ಓರ್ವ ಮೃತ್ಯು, ಇಬ್ಬರು ಗಂಭೀರ

ಕಾಸರಗೋಡು, ಮಾ.15: ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ರಸ್ತೆ ಬದಿಯ ಟ್ರಾನ್ಸ್ ಫಾರ್ಮರ್‌ಗೆ ಢಿಕ್ಕಿ ಹೊಡೆದು ಮಗುಚಿ ಬಿದ್ದ ಪರಿಣಾಮ ಓರ್ವ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಪೆರಿಯ ಮೂನಂಕಡವು ಎಂಬಲ್ಲಿ ನಡೆದಿದೆ. ಮೃತಪಟ್ಟವರನ್ನು ತಮಿಳುನಾಡು ಪೊಳ್ಳಾಚ್ಚಿಯ ಮಣಿ (43) ಎಂದು ಗುರುತಿಸಲಾಗಿದೆ. ಚಾಲಕ ಶಕ್ತಿ ವೇಲು ಮತ್ತು ಕುಮಾರ್ ಎಂಬವರು ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗುಚಿ ಬಿದ್ದ ಲಾರಿಯಡಿಯಲ್ಲಿ ಸಿಲುಕಿದ್ದ ಮೂವರನ್ನು ಗಂಟೆಗಳ ಶ್ರಮದ ಬಳಿಕ ಅಗ್ನಿಶಾಮಕ ಮತ್ತು ಪೊಲೀಸರು ಹೊರತೆಗೆದರೂ ಮಣಿ

ನಿಯಂತ್ರಣ ತಪ್ಪಿ ಪಲ್ಟಿಯಾದ ಲಾರಿ; ಓರ್ವ ಮೃತ್ಯು, ಇಬ್ಬರು ಗಂಭೀರ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top