ಕರಾವಳಿ

ಸೋಮವಾರ ನಡೆಯಬೇಕಿದ್ದ ದ್ವಿತೀಯ ಪಿಯು ಪರೀಕ್ಷೆ ಮುಂದೂಡಿಕೆ

ಬೆಂಗಳೂರು, ಮಾ.22: ಸೋಮವಾರ ನಡೆಯಬೇಕಿದ್ದ ದ್ವಿತೀಯ ಪಿಯು ಪರೀಕ್ಷೆಯನ್ನು ರಾಜ್ಯ ಸರಕಾರ ಮುಂದೂಡಿದೆ ಎಂದು ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಪಿಯು ವಿದ್ಯಾರ್ಥಿಗಳಿಗೆ ಈ ವರ್ಷದ ಅಂತಿಮ ವಿಷಯವಾಗಿ ಸೋಮವಾರ ಇಂಗ್ಲಿಷ್ ಭಾಷಾ ಪರೀಕ್ಷೆ ನಡೆಯಬೇಕಿತ್ತು. ಇದೀಗ ಅದನ್ನು ಮುಂದೂಡಲಾಗಿದೆ ಮುಂದಿನ ದಿನಾಂಕವನ್ನು ಮಾರ್ಚ್ 31ರ ನಂತರ ನಿರ್ಧರಿಸಲಾಗುವುದು ಎಂದು ಶಿಕ್ಷಣ ಸಚಿವರು ತಮ್ಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.  

ಸೋಮವಾರ ನಡೆಯಬೇಕಿದ್ದ ದ್ವಿತೀಯ ಪಿಯು ಪರೀಕ್ಷೆ ಮುಂದೂಡಿಕೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಜನತಾ ಕರ್ಫ್ಯೂ: ಮಂಗಳೂರು ಸ್ತಬ್ಧ

ಮಂಗಳೂರು, ಮಾ.22: ಕೊರೋನ ವೈರಸ್ ತಡೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಜನತಾ ಕರ್ಫ್ಯೂಗೆ ಮಂಗಳೂರಿನಲ್ಲಿ ಭಾರೀ ಬೆಂಬಲ ದೊರೆತಿದೆ. ಎಂದಿಗೂ ಜನರ ಓಡಾಟದಿಂದ ಕೂಡಿರುವ ಮಂಗಳೂರು ಇಂದು ಮುಂಜಾನೆಯೇ ಮೌನದಿಂದ ಕೂಡಿದೆ. ರವಿವಾರ ಮನೆಯಲ್ಲೇ ಉಳಿದುಕೊಳ್ಳಲು ತೀರ್ಮಾನ ಮಾಡಿರುವ ನಾಗರಿಕರು ಶನಿವಾರವೇ ಪೇಟೆಗೆ ತೆರಳಿ ಬೇಕಾಗಿರುವ ಅಗತ್ಯ ವಸ್ತುಗಳ ಖರೀದಿ ಮಾಡಿದ್ದಾರೆ. ಎಲ್ಲಾ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣವಾಗಿ ಬಂದ್ ಆಗಿದ್ದು ಕೇವಲ ಬೆರಳೆಣಿಕೆಯ ಬೈಕ್‌ಗಳನ್ನು ಹೊರತುಪಡಿಸಿ ಬೇರಾವ ವಾಹನಗಳು ರಸ್ತೆಗೆ ಇಳಿದಿಲ್ಲ. ದೇವಾಲಯ, ಮಸೀದಿ,

ಜನತಾ ಕರ್ಫ್ಯೂ: ಮಂಗಳೂರು ಸ್ತಬ್ಧ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕಠಿಣ ನಿರ್ಧಾರ ಕೈಗೊಂಡಲ್ಲಿ ಸಹಕರಿಸಿ: ಸಚಿವ ಕೋಟ

ಕೊರೋನ ವೈರಸ್ ಹಿನ್ನೆಲೆ ಮಂಗಳೂರು, ಮಾ.21: ಕರೋನ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕೆಲವೊಂದು ಕಟು ನಿರ್ಧಾರಗಳನ್ನು ಜಿಲ್ಲಾಡಳಿತ ಕೈಗೊಳ್ಳುವ ಪರಿಸ್ಥಿತಿ ಬರಬಹುದು. ಅಂತಹ ಸಂದರ್ಭದಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಜಿಲ್ಲೆಯ ಎಲ್ಲ ಶಾಸಕರು ಹಾಗೂ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಉನ್ನತಮಟ್ಟದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಇದುವರೆಗೆ 89 ಜನರ ಸ್ಯಾಂಪಲ್ ಗಳನ್ನು ಕಳುಹಿಸಿ ಕೊಡಲಾಗಿದ್ದು

ಕಠಿಣ ನಿರ್ಧಾರ ಕೈಗೊಂಡಲ್ಲಿ ಸಹಕರಿಸಿ: ಸಚಿವ ಕೋಟ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕಡಬ: ಇಂಜಿನಿಯರಿಂಗ್ ಪದವೀಧರೆ ಯುವತಿ ಅಸೌಖ್ಯದಿಂದ ನಿಧನ

(ನ್ಯೂಸ್ ಕಡಬ) newskadaba.com ಕಡಬ, ಮಾ.21. ಅನಾರೋಗ್ಯದಿಂದ ಬಳಲುತ್ತಿದ್ದ ಇಂಜಿನಿಯರ್ ಪದವೀಧರೆ ಯುವತಿ ಶನಿವಾರದಂದು ಮೃತಪಟ್ಟಿದ್ದಾರೆ. ಮೃತ ಯುವತಿಯನ್ನು ಕಡಬ ತಾಲೂಕು ಪಿಜಕ್ಕಳದ ಕಲ್ಲರ್ಪೆ ನಿವಾಸಿ ಪುಟ್ಟಣ್ಣ ಗೌಡರ ಪುತ್ರಿ ವೀಕ್ಷಿತಾ(27) ಎಂದು ಗುರುತಿಸಲಾಗಿದೆ. ಇಂಜಿನಿಯರಿಂಗ್ ವ್ಯಾಸಂಗ ಮಾಡಿ ಇನ್ಫೋಸಿಸ್ ನಲ್ಲಿ ಅಮೇರಿಕಾ, ಬೆಂಗಳೂರು ನಲ್ಲಿ ಉದ್ಯೋಗ ಮಾಡುತ್ತಿದ್ದ ವೀಕ್ಷಿತಾ ಅನಾರೋಗ್ಯದ ಹಿನ್ನಲೆಯಲ್ಲಿ ಕಳೆದೆರಡು ವರ್ಷಗಳಿಂದ ಮನೆಯಲ್ಲಿದ್ದರು ಎನ್ನಲಾಗಿದೆ. ಮೃತರು ತಾಯಿ ಯಶೋಧಾ, ಸಹೋದರಿಯರಾದ ಅಕ್ಷತಾ, ರಕ್ಷಿತಾ ಅವರನ್ನು ಅಗಲಿದ್ದಾರೆ.

ಕಡಬ: ಇಂಜಿನಿಯರಿಂಗ್ ಪದವೀಧರೆ ಯುವತಿ ಅಸೌಖ್ಯದಿಂದ ನಿಧನ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

BEARING NEWS ಮಾ.21ರಿಂದ ಕೇರಳಕ್ಕೆ ವಾಹನ ಸಂಚಾರ ನಿಷೇಧ: ದ.ಕ ಡಿಸಿ ಆದೇಶ

ಮಂಗಳೂರು, ಮಾ.20: ಕೊರೋನ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಮಾ.21ರ ಅಪರಾಹ್ನ 2ರಿಂದ ಮಾ.31ರ ಮಧ್ಯರಾತ್ರಿ 12ರವರೆಗೆ ಕೇರಳದ ಗಡಿಭಾಗದಲ್ಲಿ ಎಲ್ಲ ರೀತಿಯ ವಾಹನಗಳ ಸಂಚಾರ ನಿಷೇಧಿಸಿ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಆದೇಶ ಹೊರಡಿಸಿದ್ದಾರೆ. ಈ ಮಧ್ಯೆ ತುರ್ತು ಸಂದರ್ಭ ತಲಪಾಡಿ ಚೆಕ್‌ಪೋಸ್ಟ್ ಮೂಲಕ ಮಾತ್ರ ಸಂಚರಿಸಲು ಅವಕಾಶ ನೀಡಲಾಗುವುದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

BEARING NEWS ಮಾ.21ರಿಂದ ಕೇರಳಕ್ಕೆ ವಾಹನ ಸಂಚಾರ ನಿಷೇಧ: ದ.ಕ ಡಿಸಿ ಆದೇಶ Read More »

ಕರಾವಳಿ

ಕಾಸರಗೋಡು: ಒಂದೇ ದಿನ 6 ಮಂದಿಗೆ ಕೊರೋನ ಪಾಸಿಟಿವ್

ಜಿಲ್ಲೆಯಲ್ಲಿ ಕೊರೋನ ಪೀಡಿತರ ಸಂಖ್ಯೆ 9ಕ್ಕೇರಿಕೆ ಕಾಸರಗೋಡು, ಮಾ.20: ಜಿಲ್ಲೆಯಲ್ಲಿ ಕೊರೋನ ಸೋಂಕು ಪೀಡಿತರ ಸಂಖ್ಯೆ 9ಕ್ಕೇರಿದೆ. ಶುಕ್ರವಾರ ಒಂದೇ ದಿನ 6 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಕೊರೋನ ಶಂಕಿತರು ಕಾಸರಗೋಡು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಈ ಪೈಕಿ 6 ಮಂದಿಯ ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅವರ ಪರೀಕ್ಷಾ ವರದಿ ಶುಕ್ರವಾರ ಬಂದಿದ್ದು, ಇದರಲ್ಲಿ 6 ಮಂದಿಯ ವರದಿ ಕೊರೋನ ಪಾಸಿಟಿವ್ ಆಗಿದೆ ಎಂದು ಜಿಲ್ಲಾ ಆರೋಗ್ಯಧಿಕಾರಿ ತಿಳಿಸಿದ್ದಾರೆ. ಮಾ.19ರಂದು ಕಾಸರಗೋಡು ನಗರದ ಹೊರವಲಯದ ವ್ಯಕ್ತಿಯೋರ್ವರಲ್ಲಿ

ಕಾಸರಗೋಡು: ಒಂದೇ ದಿನ 6 ಮಂದಿಗೆ ಕೊರೋನ ಪಾಸಿಟಿವ್ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕೊರೋನ ಭೀತಿ ಹಿನ್ನೆಲೆ: ಮನಪಾ ವ್ಯಾಪ್ತಿಯ ಎಲ್ಲ ಸೆಲೂನ್, ಬ್ಯೂಟಿ ಪಾರ್ಲರ್ ನಾಳೆಯಿಂದ ಬಂದ್

ಮಂಗಳೂರು, ಮಾ.20: ಕೊರೋನ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಈ ಮಾರಣಾಂತಿಕ ಸೋಂಕು ವೈರಾಣು ರಾಜ್ಯದಲ್ಲಿಯೂ ಕಾಣಿಸಿಕೊಂಡಿರುವುದರಿಂದ ಈ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯೊಳಗೆ ಕಾರ್ಯಚರಿಸುವ ಎಲ್ಲಾ ಸೆಲೂನ್, ಬ್ಯೂಟಿ ಪಾರ್ಲರ್‌ಗಳನ್ನು ಮಾ.21ರಿಂದ ಮುಂದಿನ ಆದೇಶದವರೆಗೂ ತಾತ್ಕಾಲಿಕವಾಗಿ ಮುಚ್ಚುವಂತೆ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ತಿಳಿಸಿದ್ದಾರೆ. ಈ ಕುರಿತು ಎಲ್ಲಾ ಸೆಲೂನ್, ಬ್ಯೂಟಿ ಪಾರ್ಲರ್ ಅಸೋಸಿಯೇಷನ್‌ಗಳು ಗಮನಹರಿಸಿ ಮಾ.21ರಿಂದ ಸೆಲೂನ್, ಬ್ಯೂಟಿ ಪಾರ್ಲರ್‌ಗಳನ್ನು ಮುಚ್ಚಿ ಪಾಲಿಕೆಯೊಂದಿಗೆ ಸಹಕರಿಸಬೇಕೆಂದು

ಕೊರೋನ ಭೀತಿ ಹಿನ್ನೆಲೆ: ಮನಪಾ ವ್ಯಾಪ್ತಿಯ ಎಲ್ಲ ಸೆಲೂನ್, ಬ್ಯೂಟಿ ಪಾರ್ಲರ್ ನಾಳೆಯಿಂದ ಬಂದ್ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಉಪ್ಪಿನಂಗಡಿಯಲ್ಲಿ 50 ಅಡಿ ಕಂದಕಕ್ಕೆ ಬಿದ್ದ ಕಾರು: ಅಪಾಯದಿಂದ ಪಾರು

ಉಪ್ಪಿನಂಗಡಿ, ಮಾ.20: ಚಾಲಕನ ನಿಯಂತ್ರಣ ತಪ್ಪಿ 50 ಅಡಿ ಆಳದ ಕಂದಕ್ಕೆ ಉರುಳಿ ಬಿದ್ದ ಘಟನೆ ಇಲ್ಲಿಗೆ ಸಮೀಪ ಪಂಜಾಳದಲ್ಲಿ ಶುಕ್ರವಾರ ನಡೆದಿದೆ. ಬೆಂಗಳೂರಿನಿಂದ ಉಡುಪಿ ಬರುತ್ತಿದ್ದ ಕಾರು ಉಪ್ಪಿನಂಗಡಿಯ ಪಂಜಾಳ ಸಮೀಪ ತಲುಪುತ್ತಿದ್ದಂತೆ 50 ಅಡಿ ಆಳದ ಕಂದಕ್ಕೆ ಉರುಳಿ ಬಿದ್ದಿದೆ. ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಉಡುಪಿಯ ಶಿರ್ವ ಮೂಲದ ನವೀನ್ ಮತ್ತವರ ಕುಟುಂಬ ಬೆಂಗಳೂರಿನಿಂದ ಊರಿಗೆ ಬರುತ್ತಿದ್ದರು. ನವೀನ್, ಇಬ್ಬರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಕಾರಿನಲ್ಲಿದ್ದು, ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಇವರನ್ನು

ಉಪ್ಪಿನಂಗಡಿಯಲ್ಲಿ 50 ಅಡಿ ಕಂದಕಕ್ಕೆ ಬಿದ್ದ ಕಾರು: ಅಪಾಯದಿಂದ ಪಾರು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕೊರೋನ ವೈರಸ್ ಹಿನ್ನೆಲೆ ಮಸೀದಿಗಳಲ್ಲಿ ಶುಕ್ರವಾರದ ನಮಾಝ್ ಸಮಯ ಮಾರ್ಪಾಡು

ಮಂಗಳೂರು, ಮಾ.20: ಕೊರೋನ ವೈರಸ್ ಭೀತಿಯಿಂದ ಸರಕಾರವು ನಿರ್ಬಂಧಕಾಜ್ಞೆ ವಿಧಿಸಿದ ಹಿನ್ನೆಲೆಯಲ್ಲಿ ಕರಾವಳಿಯ ಮಸೀದಿಗಳಲ್ಲಿ ಶುಕ್ರವಾರದ ನಮಾಝ್‌ನ ಸಮಯದಲ್ಲಿ ಮಾರ್ಪಾಡು ಮಾಡಲಾಗಿದೆ. ಆರೋಗ್ಯ ಸುರಕ್ಷತೆಯ ನಿಟ್ಟಿನಲ್ಲಿ ಮಂಗಳೂರು ನಗರ ಮತ್ತು ಹೊರವಲಯದ ಕೆಲವು ಮಸೀದಿಗಳಲ್ಲಿ ಶುಕ್ರವಾರದ ಜುಮಾ ನಮಾಝ್‌ನ ಸಮಯದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ. ಜಿಲ್ಲಾಧಿಕಾರಿ ಆದೇಶದ ಮೇರೆಗೆ ಶುಕ್ರವಾರ ನಡೆಯುವ ನಮಾಜಝ್ 15 ನಿಮಿಷದಲ್ಲಿ ಮುಗಿಸಲು ಉಭಯ ಜಿಲ್ಲೆಯ ಖಾಝಿಗಳು ಈಗಾಗಲೆ ಮನವಿ ಮಾಡಿದ್ದಾರೆ. ಮಂಗಳೂರಿನ ಮಸೀದಿಗಳಲ್ಲಿ ಲುಹರ್ ಅಝಾನ್ ಮುಳಗಿದ ತಕ್ಷಣವೇ ಖುತುಬಾ 12:55ಕ್ಕೆ

ಕೊರೋನ ವೈರಸ್ ಹಿನ್ನೆಲೆ ಮಸೀದಿಗಳಲ್ಲಿ ಶುಕ್ರವಾರದ ನಮಾಝ್ ಸಮಯ ಮಾರ್ಪಾಡು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಮಂಗಳೂರು: ಬುಲೆಟ್ – ಲಾರಿ ನಡುವೆ ಢಿಕ್ಕಿ ➤ ಪುತ್ತೂರಿನ ಇಂಜಿನಿಯರಿಂಗ್ ವಿದ್ಯಾರ್ಥಿ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.20. ಲಾರಿ ಹಾಗೂ ಬುಲ್ಲೆಟ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬುಲ್ಲೆಟ್ ಸವಾರ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮೃತ‌ ಸವಾರನನ್ನು ಪುತ್ತೂರು ತಾಲೂಕಿನ ಬಡಗನ್ನೂರು ಪೇರಾಲ್ ನಿವಾಸಿ ಚಂದ್ರಶೇಖರ್ ಆಳ್ವರ ಪುತ್ರ ಪ್ರಣ್ವಿತ್ ಆಳ್ವ (21) ಎಂದು ಗುರುತಿಸಲಾಗಿದೆ. ಮೂಡಬಿದಿರೆಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಪ್ರಣ್ವಿತ್ ಚಲಯಿಸುತ್ತಿದ್ದ ಹಿಮಾಲಯ ಬುಲ್ಲೆಟ್ ಮಂಗಳೂರಿನ ಮರೋಳಿ ಎಂಬಲ್ಲಿ ಲಾರಿಗೆ ಢಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.

ಮಂಗಳೂರು: ಬುಲೆಟ್ – ಲಾರಿ ನಡುವೆ ಢಿಕ್ಕಿ ➤ ಪುತ್ತೂರಿನ ಇಂಜಿನಿಯರಿಂಗ್ ವಿದ್ಯಾರ್ಥಿ ಮೃತ್ಯು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್
Scroll to Top