ಧಾರ್ಮಿಕ ಭಾವನೆಗೆ ದಕ್ಕೆ ಆರೋಪಿಸಿ ಕಲ್ಲಡ್ಕ ಶ್ರೀರಾಮ ಶಾಲೆಯ ವಿರುದ್ದ ದೂರು

ಬಂಟ್ವಾಳ, ಡಿ.17: ಆರೆಸ್ಸೆಸ್ ಮುಖಂಡ ಪ್ರಭಾಕರ ಭಟ್ ಮಾಲಕತ್ವದ ಕಲ್ಲಡ್ಕ ಶ್ರೀರಾಮ ವಿದ್ಯಾಲಯದಲ್ಲಿ ಡಿ.17ರಂದು ನಡೆದ ಶಾಲೆಯ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳಿಂದ ಬಾಬರಿ ಮಸೀದಿ ಧ್ವಂಸವನ್ನು ಮರುಸೃಷ್ಟಿ ಮಾಡಿಸಿದನ್ನು ಪ್ರಶ್ನಿಸಿ ಪಿಎಫ್ಐ ಕಲ್ಲಡ್ಕ ವಲಯದ ಅಬೂಬಕರ್ ಸಿದ್ದೀಕ್ ಬಂಟ್ವಾಳ ಪೊಲೀಸ್ ಠಾಣೆಗೆ ದಾಖಲಿಸಿದ್ದಾರೆ.

ಧಾರ್ಮಿಕ ಭಾವನೆಗೆ ದಕ್ಕೆ ಉಂಟಾಗಿದೆ ಎಂದು ಆರೋಪಿಸಿ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಆಡಳಿತ ಮಂಡಳಿ ವಿರುದ್ದ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

Scroll to Top